ಇತ್ತೀಚಿನ ಗ್ಯಾಲರಿ
ರಾಷ್ಟ್ರಪತಿ ಭವನದ ಮುಂದೆ ಶನಿವಾರ ನಡೆದ ಯೋಗ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. –ಪಿಟಿಐ ಚಿತ್ರ

ಯೋಗ ಶಿಬಿರ

ಒಡಿಶಾದ ಭುವನೇಶ್ವರದಿಂದ 140 ಕಿ.ಮೀ ದೂರದ ರುಷಿಕುಲ್ಯಾ ಕಡಲ ಕಿನಾರೆಯ ಮರಳಿನಲ್ಲಿ ಮೊಟ್ಟೆಗಳನ್ನಿಟ್ಟ ಕಡಲಾಮೆಗಳು ಸಮುದ್ರಕ್ಕೆ ಮರಳುತ್ತಿರುವ ದೃಶ್ಯ. ಆಲಿವ್‌ ರಿಡ್ಲಿ ಜಾತಿಗೆ ಸೇರಿದ ಈ ಆಮೆಗಳು ವರ್ಷಕ್ಕೊಮ್ಮೆ ಒಡಿಶಾ ಕಡಲ ತೀರಕ್ಕೆ ಬಂದು ಮೊಟ್ಟೆಗಳನ್ನಿಡುತ್ತವೆ.

ಕಿನಾರೆಗೆ ಕಡಲಾಮೆ

ಆಕರ್ಷಕ ಪ್ರದರ್ಶನ ನೀಡಿದ ಸೂರ್ಯಕಿರಣ್ ತಂಡ   ಪ್ರಜಾವಾಣಿ ಚಿತ್ರ/ ಪಿ.ಎಸ್.ಕೃಷ್ಣಕುಮಾರ್‌

ಏರೊ ಇಂಡಿಯಾ

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಮಂಗಳವಾರ ಆರಂಭಗೊಂಡ ‘ಏರೊ ಇಂಡಿಯಾ–2017’ ವೈಮಾನಿಕ ಪ್ರದರ್ಶನದಲ್ಲಿ ಸ್ಕ್ಯಾಂಡಿನೇವಿಯಾದ ಏರೋಬ್ಯಾಟಿಕ್ಸ್‌ ತಂಡ ಬಾನಂಗಳದಲ್ಲಿ ತಿರಂಗದ ರಂಗವಲ್ಲಿ ಬಿಡಿಸಿತು –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್‌

ಏರೊ ಇಂಡಿಯಾ–2017

ಪ್ರೇಮಿಗಳ ದಿನದ ಮುನ್ನಾ ದಿನವಾದ ಸೋಮವಾರ ಕಬ್ಬನ್‌ ಪಾರ್ಕ್‌ನಲ್ಲಿ ಫ್ರಾನ್ಸ್‌ ಜೋಡಿಯ ವಿಹಾರದ ಕ್ಷಣ –ಪ್ರಜಾವಾಣಿ ಚಿತ್ರ

ಜೋಡಿಹಕ್ಕಿ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ವೈಮಾನಿಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಬ್ರಿಟನ್ನಿನ ಇವಾಲ್ವೊಕೊಸ್‌ ಏರೋಬ್ಯಾಟಿಕ್‌ ತಂಡವು ಸೋಮವಾರ ತಾಲೀಮು ನಡೆಸಿತು. – ಪ್ರಜಾವಾಣಿ ಚಿತ್ರ

ವೈಮಾನಿಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ನೃತ್ಯಾದಿತ್ಯ ಕಾರ್ಯಕ್ರಮದಲ್ಲಿ ಬೆಂಗಳೂರು ಒಡಿಸ್ಸಿ ನೃತ್ಯ ಕೇಂದ್ರದ ಕಲಾವಿದೆಯರು ನೃತ್ಯ ಪ್ರದರ್ಶಿಸಿದರು. –ಪ್ರಜಾವಾಣಿ ಚಿತ್ರ

ನೃತ್ಯ ಬೆರಗು

ನ್ಯೂಜಿಲ್ಯಾಂಡ್‌ನ ದಕ್ಷಿಣ ದ್ವೀಪದಲ್ಲಿರುವ ‘ಫೆರವೆಲ್‌ ಸ್ಪಿಟ್‌’ ಎಂಬ ಕಡಲತೀರಕ್ಕೆ 650 ಪೈಲಟ್‌ ತಿಮಿಂಗಿಲಗಳು ಬಂದಿವೆ. ಈ ಪೈಕಿ ಆಳ ಸಮುದ್ರಕ್ಕೆ ಮರಳಲು ಸಾಧ್ಯವಾಗದೆ 300ಕ್ಕೂ ಹೆಚ್ಚು ತಿಮಿಂಗಿಲಗಳು ಮೃತಪಟ್ಟಿವೆ. ನೂರಕ್ಕೂ ಹೆಚ್ಚು ತಿಮಿಂಗಿಲಗಳು ಸಮುದ್ರಕ್ಕೆ ಮರಳಿವೆ. 200ಕ್ಕೂ ಹೆಚ್ಚು ತಿಮಿಂಗಿಲಗಳು ಸಾವು–ಬದುಕಿನ ನಡುವೆ ಹೋರಾಟ ನಡೆಸಿವೆ. –ಪಿಟಿಐ ಚಿತ್ರ

ಸಾವು–ಬದುಕಿನ ನಡುವೆ ಹೋರಾಟ

ಮೈಲಾರ ಜಾತ್ರೆಗಾಗಿ ಭಕ್ತರು ಪರಿವಾರ ಸಮೇತ ಚಕ್ಕಡಿಯಲ್ಲಿ ತೆರಳುತ್ತಿದ್ದ ದೃಶ್ಯ ಶನಿವಾರ ಮುಸ್ಸಂಜೆ ಹಾವೇರಿಯಲ್ಲಿ ಕಂಡು ಬಂತು. –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ

ಮೈಲಾರ ಜಾತ್ರೆಯ ಬಂಡಿ...

‘ಅಡಕೇಶ್ವರ.. ಮಡಕೇಶ್ವರ.. ಉಳವಿ ಚನ್ನಬಸವೇಶ್ವರ ಬಹುಪರಾಕ್‌...’ ಎಂಬ ಘೋಷದೊಂದಿಗೆ ಸಹಸ್ರಾರು ಭಕ್ತರು ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ಶನಿವಾರ ನಡೆದ ಚನ್ನಬಸವಣ್ಣನ ತೇರನೆಳೆದು ಸಂಭ್ರಮಿಸಿದರು. – ಪ್ರಜಾವಾಣಿ ಚಿತ್ರ

ಬಹುಪರಾಕ್‌

ಉತ್ತರ ಪ್ರದೇಶ ವಿಧಾನಸಭೆಯ ಮೊದಲ ಹಂತದ ಮತದಾನ ಶನಿವಾರ ನಡೆಯಲಿದ್ದು, ಮಥುರಾದ ವಿದ್ಯುನ್ಮಾನ ಮತಯಂತ್ರ ಸಂಗ್ರಹ ಕೇಂದ್ರದಿಂದ ಚುನಾವಣಾ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿದರು. -ಪಿಟಿಐ ಚಿತ್ರ

ಮತದಾನಕ್ಕೆ ಸಿದ್ಧತೆ

ವಲಸಿಗರನ್ನು ನಿಷೇಧಿಸುವ ಡೊನಾಲ್ಡ್‌ ಟ್ರಂಪ್‌ ಅವರ ನೀತಿಯನ್ನು ವಿರೋಧಿಸಿ ಫಿಲಿಪೀನ್ಸ್‌ ರಾಜಧಾನಿ ಮನಿಲಾದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನಾಗರಿಕರು ಅಮೆರಿಕದ ಧ್ವಜವನ್ನು ಸುಟ್ಟು ಅಸಮಾಧಾನ ವ್ಯಕ್ತಪಡಿಸಿದರು.– ಎಎಫ್‌ಪಿ ಚಿತ್ರ

ಟ್ರಂಪ್‌ ವಿರುದ್ಧ ಪ್ರತಿಭಟನೆ

ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರು ‘ಕಾನ್‌ ಚಿತ್ರೋತ್ಸವ’ದಲ್ಲಿ ಕಾಣಿಸಿಕೊಂಡಿದ್ದು ಹೀಗೆ –ಎಎಫ್‌ಪಿ ಚಿತ್ರ.

'ಸೋನಮ್ ವೈಯ್ಯಾರ'

ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಕಂಗನಾ ರನೋಟ್‌ ಪದಕದೊಂದಿಗೆ ಸಂಭ್ರಮಿಸಿದ್ದು ಹೀಗೆ.

ಪ್ರಶಸ್ತಿ ಪುಳಕ...

ಈ ವರ್ಷದ ಫಿಲಂ ಫೇರ್‌ ಪ್ರಶಸ್ತಿ ದಿನಾಂಕವನ್ನು ಘೋಷಿಸುವ ಸಲುವಾಗಿ ನವದೆಹಲಿಯಲ್ಲಿ ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಅವರು ಭಾಗವಹಿಸಿದ್ದರು.             -ಪಿಟಿಐ ಚಿತ್ರ

ಜೋಡಿ ಹಕ್ಕಿ

ಮುಂಬೈನಲ್ಲಿ ಗುರುವಾರ ನಡೆದ ನೃತ್ಯ ಕಾರ್ಯಕ್ರಮದ ಪ್ರಚಾರದಲ್ಲಿ ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್ ಭಾಗವಹಿಸಿದ್ದರು ಎಎಫ್‌ಪಿ ಚಿತ್ರ

ಮಾಧುರಿ ದೀಕ್ಷಿತ್

ರಾಷ್ಟ್ರಪತಿ ಭವನದ ಮುಂದೆ ಶನಿವಾರ ನಡೆದ ಯೋಗ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. –ಪಿಟಿಐ ಚಿತ್ರ

ಯೋಗ ಶಿಬಿರ

ಒಡಿಶಾದ ಭುವನೇಶ್ವರದಿಂದ 140 ಕಿ.ಮೀ ದೂರದ ರುಷಿಕುಲ್ಯಾ ಕಡಲ ಕಿನಾರೆಯ ಮರಳಿನಲ್ಲಿ ಮೊಟ್ಟೆಗಳನ್ನಿಟ್ಟ ಕಡಲಾಮೆಗಳು ಸಮುದ್ರಕ್ಕೆ ಮರಳುತ್ತಿರುವ ದೃಶ್ಯ. ಆಲಿವ್‌ ರಿಡ್ಲಿ ಜಾತಿಗೆ ಸೇರಿದ ಈ ಆಮೆಗಳು ವರ್ಷಕ್ಕೊಮ್ಮೆ ಒಡಿಶಾ ಕಡಲ ತೀರಕ್ಕೆ ಬಂದು ಮೊಟ್ಟೆಗಳನ್ನಿಡುತ್ತವೆ.

ಕಿನಾರೆಗೆ ಕಡಲಾಮೆ

ಆಕರ್ಷಕ ಪ್ರದರ್ಶನ ನೀಡಿದ ಸೂರ್ಯಕಿರಣ್ ತಂಡ   ಪ್ರಜಾವಾಣಿ ಚಿತ್ರ/ ಪಿ.ಎಸ್.ಕೃಷ್ಣಕುಮಾರ್‌

ಏರೊ ಇಂಡಿಯಾ

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಮಂಗಳವಾರ ಆರಂಭಗೊಂಡ ‘ಏರೊ ಇಂಡಿಯಾ–2017’ ವೈಮಾನಿಕ ಪ್ರದರ್ಶನದಲ್ಲಿ ಸ್ಕ್ಯಾಂಡಿನೇವಿಯಾದ ಏರೋಬ್ಯಾಟಿಕ್ಸ್‌ ತಂಡ ಬಾನಂಗಳದಲ್ಲಿ ತಿರಂಗದ ರಂಗವಲ್ಲಿ ಬಿಡಿಸಿತು –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್‌

ಏರೊ ಇಂಡಿಯಾ–2017

‘ಟಾಟಾ ಹೆಕ್ಸಾ’ ಸಂಸ್ಥೆ ವತಿಯಿಂದ ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕಲಾವಿದೆ ಅನೌಷ್ಕಾ ಶಂಕರ್ ಸಿತಾರ್‌ ನುಡಿಸಿದರು –ಪ್ರಜಾವಾಣಿ ಚಿತ್ರ

ಸಿತಾರ್‌ ನಿನಾದ

ಭಾರತೀಯ ವಿದ್ಯಾಭವನದಲ್ಲಿ ‘ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ’ ವತಿಯಿಂದ ಶನಿವಾರ ಆಯೋಜಿಸಿದ್ದ ‘ಹಾರಿಜನ್‌ ಸಿರೀಸ್‌’ ಕಾರ್ಯಕ್ರಮದಲ್ಲಿ ಕಲಾವಿದೆ ವೀಣಾ ಸಿ.ಎಸ್‌ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ  

ಭರತನಾಟ್ಯ

ಮೈ ಡೊಂಕಿನ ವಯ್ಯಾರಿ...ಕೋಲ್ಕತ್ತದಲ್ಲಿ ನಡೆದ ‘ಫ್ಯಾಷನ್‌ ಟೂರ್‌ 2016’ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಬಿಪಾಶಾ ಬಸು ಆಕರ್ಷಕ ಉಡುಗೆ ತೊಟ್ಟು ರ್‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು -ಪಿಟಿಐ ಚಿತ್ರ

ಬಿಂಕದ ಸಿಂಗಾರಿ

ಖ್ಯಾತ ವಸ್ತ್ರ ವಿನ್ಯಾಸಕರಾದ ಅಬು ಜಾನಿ ಮತ್ತು ಸಂದೀಪ್‌ ಖೋಸ್ಲಾ ವಿನ್ಯಾಸ ಮಾಡಿದ ಉಡುಪನ್ನು ತೊಟ್ಟ ರೂಪದರ್ಶಿ ಮುಂಬೈನಲ್ಲಿ ನಡೆದ ಫ್ಯಾಷನ್‌ ಷೋನಲ್ಲಿ ಹೆಜ್ಜೆ ಹಾಕಿದರು. -ಎಎಎಫ್‌ಪಿ ಚಿತ್ರ

ಬೆಡಗು ಬಿನ್ನಾಣ

ಕುರ್ಚಿಗಾಗಿ ಸಚಿವ ರೈ ಪರದಾಟ... ರಾಜ್ಯಪಾಲರ ಭಾಷಣದ ವೇಳೆ ಸಚಿವರಿಗಾಗಿ ಮೀಸಲಾಗಿದ್ದ ಸ್ಥಾನದಲ್ಲಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಜಮೀರ್‌ ಅಹಮದ್‌ ಕುಳಿತಿದ್ದರು. ಸದನಕ್ಕೆ ಬಂದ ಸಚಿವ ರಮಾನಾಥರೈ ಆಸನ ಬಿಟ್ಟುಕೊಡುವಂತೆ ಕೋರಿದರು(ಚಿತ್ರ 1). ಆಸನ ಬಿಟ್ಟುಕೊಡದೇ ಇದ್ದಾಗ, ನನಗೆ ಮೀಸಲಾದ ಆಸನವೇ ಎಂದು ರೈ ಪರೀಕ್ಷಿಸಿದರು(ಚಿತ್ರ 2). ಜಮೀರ್‌ ಮತ್ತೆ ಮಾತಿನಲ್ಲಿ ತಲ್ಲೀನರಾದಾಗ, ನಿಂತು ಪ್ರಯೋಜನವಿಲ್ಲ ಎಂದು ಗೊತ್ತಾದ ರೈ, ಹಿಂದಿನ ಸಾಲಿನ ಆಸನವನ್ನೇ ಆಯ್ದುಕೊಂಡರು –-ಚಿತ್ರ: ವಿಶ್ವನಾಥ ಸುವರ್ಣ

ಕಲಾಪ...

ಭೂಪಾಲದಲ್ಲಿ ಬುಧವಾರ ನಡೆದ ರೈತರ ರಾಷ್ಟ್ರೀಯ ಸಮಾವೇಶದಲ್ಲಿ ರಾಷ್ಟ್ರೀಯ ಮಜ್ದೂರ್‌ ಸಂಘದ ಅಧ್ಯಕ್ಷ ಶಿವಕುಮಾರ್‌್ ಶರ್ಮಾ ಅವರು ಮಹಿಳಾ ರೈತ ಮುಖಂಡರೊಬ್ಬರೊಂದಿಗೆ ಸಂಭ್ರಮಿಸಿದರು -ಪಿಟಿಐ ಚಿತ್ರ

ರೈತ ಮೇಳ

ರಾಜಕೀಯ ದೌರ್ಜನ್ಯ

ನವದೆಹಲಿಯಲ್ಲಿ ಸೋಮವಾರ ನಡೆದ ಸಶಸ್ತ್ರ ಸೀಮಾ ಬಲದ 53 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಹಾ ನಿರ್ದೇಶಕಿ ಅರ್ಚನಾ ರಾಮಸುಂದರಂ ಅವರು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರಿಗೆ ಸ್ಮರಣಿಕೆಯನ್ನು ನೀಡಿದರು -–ಪಿಟಿಐ ಚಿತ್ರ

ಸೀಮಾ ಬಲ ವಾರ್ಷಿಕೋತ್ಸವ

ಮೈಸೂರು ಜಿಲ್ಲೆಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜಾಂಬೂರಿ ಪ್ರಯುಕ್ತ ಶುಕ್ರವಾರ ನಡೆದ ಸಾಹಸ ಕ್ರೀಡಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಗ್ಗದ ನೆರವಿನಿಂದ ಮೇಲೇರಲು ಕಸರತ್ತು ನಡೆಸಿದರು – ಪ್ರಜಾವಾಣಿ ಚಿತ್ರ

ಜಾಂಬೂರಿ

ಕೊಹ್ಲಿ ಶತಕದ ಮಿಂಚು

ರಿಯೊ ಒಲಿಂಪಿಕ್ಸ್‌ನ ವನಿತೆಯರ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿದ್ದ ಸಾಕ್ಷಿ ಮಲಿಕ್ ಅವರು ಬುಧವಾರ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದಾಗ ಅವರ ತಂದೆ ಸುಬೀರ್ ಮಲಿಕ್ (ಎಡ) ಮತ್ತು ತಾಯಿ ಸುದೇಶ ಮಲಿಕ್ ಅವರು ಸಂತಸದಿಂದ ಬರಮಾಡಿಕೊಂಡರು –ಪಿಟಿಐ ಚಿತ್ರ

ಸಂತಸದ ಸ್ವಾಗತ

ಮಹಿಳಾ ಶಕ್ತಿ