ವಿಶೇಷ
ಹರಿಯಾಣದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕುಸ್ತಿಪಟು ಯೋಗೀಶ್ವರ್ ದತ್‌ ಈ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ

ಯೋಗೀಶ್ವರ್ ಪ್ರತಿರೋಧ

ಜಮ್ಮುವಿನ ಅಂತರರಾಷ್ಟ್ರೀಯ ಗಡಿಯ ಆರ್.ಎಸ್‌. ಪುರ ವಲಯದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು ಶುಕ್ರವಾರ ಮೃತಪಟ್ಟ ನಂತರ ಆತಂಕೊಂಡ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ಹೋದರು.            ಪಿಟಿಐ ಚಿತ್ರ

ಸುರಕ್ಷಿತ ಸ್ಥಳಗಳತ್ತ...

ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಕ್ಷರ ದಾಸೋಹ ಮತ್ತು ಎನ್.ಆರ್.ಎಚ್.ಎಂ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಮನೆ ಮುಂದೆ ಧರಣಿ ಕುಳಿತಿರುವ ಕಾರ್ಯಕರ್ತೆಯರು. –ಪ್ರಜಾವಾಣಿ ಚಿತ್ರ

ಅಂಗನವಾಡಿ , ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಯಾದಗಿರಿ ಜಿಲ್ಲೆಯ ಮೈಲಾಪುರದಲ್ಲಿ ಭಾನುವಾರ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ದೇಗುಲದಿಂದ ಗಂಗಾಸ್ನಾನಕ್ಕಾಗಿ ಹೊನ್ನಕೆರೆಯತ್ತ ಮಲ್ಲಯ್ಯನ ಪಲ್ಲಕ್ಕಿ ಸಾಗುವಾಗ ಸೇರಿದ್ದ ಭಕ್ತಸಮೂಹ –ಪ್ರಜಾವಾಣಿ ಚಿತ್ರ/ರಾಜಕುಮಾರ

ಮೈಲಾರಲಿಂಗೇಶ್ವರ ಜಾತ್ರೆ

ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಸಿದ್ದಲಿಂಗಪುರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ಸೂರ್ಯಾಸ್ತವಾಗುತ್ತಿದ್ದಂತೆ ರೈತರು ರಾಸುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌

ಸಂಕ್ರಮಣದ ಕಿಚ್ಚು..

ಸ್ವಿಟ್ಜರ್ಲೆಂಡ್‌ ಭದ್ರತಾ ಪಡೆಯ ಯುದ್ಧ ವಿಮಾನಗಳು ಹಾಗೂ ವಾಣಿಜ್ಯ ವಿಮಾನವು ಪರ್ವತದ ಇಳಿಜಾರಿನಲ್ಲಿ ಶನಿವಾರ ಹಾರಾಟ ನಡೆಸಿದವು. ಅಂತರರಾಷ್ಟ್ರೀಯ ಸ್ಕೀ ಫೆಡರೇಶನ್‌ ವತಿಯಿಂದ ವೆಂಗೆನ್‌ನಲ್ಲಿ ನಡೆಯುವ ಶಿಖರದ ತುದಿಯಲ್ಲಿನ ಸ್ಕೀಯಿಂಗ್ ವಿಶ್ವಕಪ್‌ಗೂ ಮುನ್ನ ನಡೆದ ಹಾರಾಟವನ್ನು ಜನರು ಕುತೂಹಲದಿಂದ ಕಣ್ತುಂಬಿಕೊಂಡರ

ಲೋಹದ ಹಕ್ಕಿಗಳ ಕಲರವ

ಉಡಾವಣಾ ವೇದಿಕೆಯಲ್ಲಿ ಸಿದ್ಧವಾಗಿರುವ ‍ಪಿಎಸ್‌ಎಲ್‌ವಿ–ಸಿ40 -ಪಿಟಿಐ ಚಿತ್ರ  .....   ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ನೂರನೇ ಉಪಗ್ರಹದ ಉಡಾವಣೆಗೆ ಗುರುವಾರ ಕ್ಷಣಗಣನೆ ಆರಂಭಿಸಿದೆ. ಶುಕ್ರವಾರ ಬೆಳಿಗ್ಗೆ 9.28ಕ್ಕೆ ಕಾರ್ಟೊಸ್ಯಾಟ್–2 ಉಪಗ್ರಹವನ್ನು ಹೊತ್ತು ಧ್ರುವೀಯ ಉಪಗ್ರಹ ಉಡಾವಣಾ ವಾಹನ–‍ಪಿಎಸ್‌ಎಲ್‌ವಿ–ಸಿ40 ನಭದತ್ತ ಜಿಗಿಯಲಿದೆ. ಇದಕ್ಕಾಗಿ ಗುರುವಾರ ಬೆಳಿಗ್ಗೆ 5.29ರಿಂದ 28 ಗಂಟೆಗಳ ಕ್ಷಣಗಣನೆ ಆರಂಭಿಸಲಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ನಡೆಯಲಿದೆ. ಕಾರ್ಟೊಸ್ಯಾಟ್–2 ಈ ಕಾರ್ಯಾಚರಣೆಯ ಮುಖ್ಯ ಉಪಗ್ರಹವಾಗಿದೆ. ಇದರ ಜತೆಯಲ್ಲೇ ಇನ್ನೂ 30 ಉಪಗ್ರಹಗಳನ್ನು ಪಿಎಸ್‌ಎಲ್‌ವಿ–ಸಿ40 ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಆ 30ರಲ್ಲಿ 28 ವಿದೇಶಿ ಉಪಗ್ರಹಗಳಾಗಿವೆ.

ಉಡಾವಣೆಗೆ ಕ್ಷಣಗಣನೆ

ಕೊಯಮತ್ತೂರಿನಲ್ಲಿ ಶನಿವಾರ ಆಯೋಜಿಸಿದ್ದ ಕೋವೈ ಉತ್ಸವಕ್ಕಾಗಿ ಬಣ್ಣಬಣ್ಣದ ಛತ್ರಿಗಳಿಂದ ಸಿಂಗರಿಸಿದ್ದ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನ ಸಾಗಿದಾಗ ಕಂಡ ದೃಶ್ಯ –ಪಿಟಿಐ ಚಿತ್ರ

ಕೋವೈ ಉತ್ಸವ

ಸಿಖ್ಖರ ಧರ್ಮಗುರು ಗುರು ಗೋವಿಂದ್ ಸಿಂಗ್‌ ಅವರ 351ನೇ ಜನ್ಮದಿನದ ಅಂಗವಾಗಿ ಜಮ್ಮುವಿನ ಗುರುದ್ವಾರವೊಂದರಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. –ಪಿಟಿಐ ಚಿತ್ರ

ನಮನ

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪುಲಿಗೆರೆ ಉತ್ಸವದ ಅಂಗವಾಗಿ ಶುಕ್ರವಾರ ನಡೆದ ಉದಯರಾಗ ಸಂಗೀತ ಕಾರ್ಯಕ್ರಮದಲ್ಲಿ ಬಸವರಾಜ ಭಜಂತ್ರಿ ಶಹನಾಯಿ ನುಡಿಸಿದರು. ಅವರಿಗೆ ಶಶಿಧರ ಭಜಂತ್ರಿ ಮತ್ತು ಮಂಜುನಾಥ ಭಜಂತ್ರಿ ಸಾಥ್ ನೀಡಿದರು. ಶಶಿಕಾಂತ ಕುಲಕರ್ಣಿ ತಬಲಾ ಸಾಥ್‌ ನೀಡಿದರು.

ಪುಲಿಗೆರೆ ಉತ್ಸವ...

ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಗಡಿ ಭದ್ರತಾ ಪಡೆ ಹೆಡ್‌ ಕಾನ್‌ಸ್ಟೆಬಲ್‌ ಆರ್‌.ಪಿ ಹಜರಾ ಅವರ ಅಂತ್ಯಕ್ರಿಯೆಗೆ ಮುನ್ನ ಅಧಿಕಾರಿಗಳು ಶವಪೆಟ್ಟಿಗೆ ಹೊತ್ತು ಸಾಂಬದಲ್ಲಿ ಗುರುವಾರ ಮೆರವಣಿಗೆಯಲ್ಲಿ ಸಾಗಿದರು. –ಪಿಟಿಐ ಚಿತ್ರ

ಅಂತಿಮ ನಮನ

ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರಿಗೆ ಸುವರ್ಣ ಆಚರಣೆ ಸಂಭ್ರಮದ ಅಂಗವಾಗಿ ಬೆಂಗಳೂರು ಪ್ರೆಸ್‌ ಕ್ಲಬ್‌ ವತಿಯಿಂದ ಬುಧವಾರ ’ಶತಮಾನದ ಶ್ರೀಗಳು’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಸ್ಮರಣಿಕೆ, ಫಲಕ ಒಳಗೊಂಡಿದೆ. ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್‌.ಜಿ.ವಿರೂಪಾಕ್ಷಯ್ಯ, ಮೋಹನ್ ಕುಮಾರ್ ಸಾವಂತ್‌, ಕಾರ್ಯದರ್ಶಿ ಎಚ್‌.ವಿ.ಕಿರಣ್‌, ಉಪಾಧ್ಯಕ್ಷ ದೊಡ್ಡಬೊಮ್ಮಯ್ಯ, ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯಕಾರಿಣಿ ಸದಸ್ಯ ಬಿ.ನಾರಾಯಣ ಇದ್ದಾರೆ.

ಸಿದ್ದಗಂಗಾ ಶ್ರೀಗಳಿಗೆ ಶತಮಾನದ ಶ್ರೀ ಪ್ರಶಸ್ತಿ

ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ದಿ ಕ್ಯುನರಿ ಷೋ’ ಚಿತ್ರಕಲಾ ಪ್ರದರ್ಶನದಲ್ಲಿ ಕಲಾವಿದರಾದ ಶ್ಯಾಮಲಾ ಗುರುಪ್ರಸಾದ್, ದಿವ್ಯಾ ಎಂ.ಗೋಪಾಲಕೃಷ್ಣ, ಮನಸ್ವಿನಿ ಎಲ್. ಭಟ್ ಅವರು ಚಿತ್ರಗಳನ್ನು ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ

‘ದಿ ಕ್ಯುನರಿ ಷೋ’ ಚಿತ್ರಕಲಾ ಪ್ರದರ್ಶನ

 ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ನೆರೆದ ಲಕ್ಷಾಂತರ ಭಕ್ತರು, ದೇವಿಗೆ ಮೀಸಲು ಅಡುಗೆ ಮಾಡಿ ಅರ್ಪಿಸಿ ದರ್ಶನ ಪಡೆದರು.

ಯಲ್ಲಮ್ಮನ ಗುಡ್ಡದಲ್ಲಿ ಮೀಸಲು ಅಡುಗೆ

 ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಬನಶಂಕರಿಯಲ್ಲಿ ಬನದ ಹುಣ್ಣಿಮೆ ದಿನವಾದ ಮಂಗಳವಾರ ಭಕ್ತರ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಬನಶಂಕರಿ ದೇವಿ ರಥೋತ್ಸವ.

ಬನದ ಹುಣ್ಣಿಮೆಯಂದು ಬನಶಂಕರಿ ತೇರು...

ಸೋಮವಾರ ಅಹಮದಾಬಾದ್‌ನ ಗುರುಕುಲವೊಂದರ ವಿದ್ಯಾರ್ಥಿಗಳು ಮೇಘ ಮಾಲಾ ಹಬ್ಬದ ಅಂಗವಾಗಿ ಪವಿತ್ರ ‘ಮಾಘ ಸ್ನಾನ’ ಮಾಡಿದರು. –ಪಿಟಿಐ ಚಿತ್ರ

ಮಾಘ ಸ್ನಾನ

2017ರ ಕೊನೆಯ ಸೂರ್ಯಾಸ್ತದ ವೇಳೆ, ಬಳ್ಳಾರಿ ಹೊರವಲಯದ ಬೆಳಗಲ್‌ ತಾಂಡಾ ಸಮೀಪ ಕಂಡುಬಂದ ಬಾಲಕಿಯರ ಹಗ್ಗದಾಟದ ಸಂಭ್ರಮ    ಚಿತ್ರ: ಟಿ.ರಾಜನ್

2017ರ ಕೊನೆಯ ಸೂರ್ಯಾಸ್ತ

2017ರ ಕೊನೆಯ ಸೂರ್ಯಾಸ್ತದ ವೇಳೆ ಬಳ್ಳಾರಿ ಹೊರವಲಯದ ಬೆಳಗಲ್‌ ತಾಂಡಾ ಸಮೀಪ ಅಣ್ಣನ ಜೊತೆ ಸೈಕಲ್‌ ಏರಿದ ಚಿಣ್ಣನೊಬ್ಬ ಗಾಳಿಯಲ್ಲಿ ದಾರವನ್ನು ಆಡಿಸುತ್ತಿದ್ದರೆ, ಉಳಿದವರು ಸೈಕಲ್‌ ಹಿಂದೆ –ಮುಂದೆ ಸಾಗಿದ್ದರು.

2017ರ ಕೊನೆಯ ಸೂರ್ಯಾಸ್ತ

ಕೊಚ್ಚಿಯ ಪುಥುಕ್ಕಲವಟ್ಟಂನಲ್ಲಿ ಭಾನುವಾರ ದೀಪ ಬೆಳಗಿ 2018 ಹೊಸ ವರ್ಷ ಆಚರಿಸಲಾಯಿತು. –ಪಿಟಿಐ ಚಿತ್ರ

ಹೊಸ ವರ್ಷ ಆಚರಣೆ

ಆಸ್ಟ್ರೇಲಿಯಾ ಸಿಡ್ನಿ ಹಾರ್ಬರ್‌ನಲ್ಲಿರುವ ಸಿಡ್ನಿ ಒಪೆರಾ ಹೌಸ್‌ನ ಸಮೀಪ ಭಾನುವಾರ ಸಿಡಿಮದ್ದು ಸಿಡಿಸಿ ಹೊಸವರ್ಷ ಸ್ವಾಗತಿಸಲಾಯಿತು. ರಾಯಿಟರ್ಸ್‌ ಚಿತ್ರ

ಹೊಸ ವರ್ಷಕ್ಕೆ ಸ್ವಾಗತ

ರಾಷ್ಟ್ರಕವಿ ಕುವೆಂಪು ಅವರ ಕಲ್ಪನೆಯಂತೆ ಹಕ್ಕಿಗಳ ರೂಪದೀ ‘ದೇವರು ರುಜು ಮಾಡಿದನು’ ಕವನವನ್ನು ನೆನಪಿಸುವಂತೆ ಆಗಸದಲ್ಲಿ ಚಂದ್ರಮ ಹಿನ್ನೆಲೆಯಾಗಿ, ಹಕ್ಕಿಗಳ ಹಿಂಡು ಸಾಗಿದ ಪರಿ ಇದು. ಈ ದೃಶ್ಯ ಸೆರೆಯಾಗಿದ್ದು, ಶನಿವಾರ ಅಸ್ಸಾಂ ನ ನಾಗಾನ್‌ನಲ್ಲಿ. ಪಿಟಿಐ ಚಿತ್ರ

ದೇವರು ರುಜು ಮಾಡಿದನು...

ಟೆಸ್ಟ್‌, ಏಕದಿನ ಮತ್ತು ಟಿ–20 ಸರಣಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ವಿರಾಟ್‌ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ಬುಧವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು ಪಿಟಿಐ ಚಿತ್ರ

ವಿರುಷ್ಕಾ ದಂಪತಿ

ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಸಮೀಪದ ಕವಿಕಾ ಲೇ ಔಟ್‌(ಮಾರುತಿನಗರ) ಒಳಚರಂಡಿ ಮೇಲ್ಭಾಗದ ಮಣ್ಣು ಕುಸಿದಿದ್ದು, ವಾಹನ ಸವಾರರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಪ್ಲಾಸ್ಟಿಕ್‌ ಚೀಲವನ್ನು ಕಟ್ಟಲಾಗಿದೆ

ಎಚ್ಚರಿಕೆ...

ಸಿಖ್‌ರ 10 ನೇ ಗುರು ಗೋವಿಂದ್‌ ಸಿಂಗ್‌ಜಿ ಅವರ 351 ನೇ ಹುಟ್ಟು ಹಬ್ಬದ ಅಂಗವಾಗಿ ಅಮೃತಸರದ ಸ್ವರ್ಣ ಮಂದಿರಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ ಪಿಟಿಐ ಚಿತ್ರ

ದೀಪಾಲಂಕಾರ

ಅಲಹಾಬಾದ್‌ನ ಆಲ್ ಸೇಂಟ್ಸ್ ಕ್ಯಾಥೆಡ್ರಲ್‌ನಲ್ಲಿ ಸೋಮವಾರ ಮೇಣದ ಬತ್ತಿ ಹೊತ್ತಿಸುವ ಮೂಲಕ ಜನರು ಕ್ರಿಸ್‌ಮಸ್ ಆಚರಿಸಿದರು –ಪಿಟಿಐ ಚಿತ್ರ

ಹಬ್ಬದ ಬೆಳಕು

ಇದು ಯಾವುದೇ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾನದ ಊಟ ಅಲ್ಲ... ವಿಕಾಸ ಸೌಧದಲ್ಲಿ ಕೆಲಸ ಮಾಡುವ ವಿವಿಧ ಇಲಾಖೆಗಳ ನೌಕರರ ಸಹಭೋಜನ –ಪ್ರಜಾವಾಣಿ ಚಿತ್ರ

ಸಹಭೋಜನ

ಪ್ರಕಾಶ್‌ ಶೆಟ್ಟಿ

ಮತಪತ್ರ...

ನಗರದೆಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ ಕಳೆಕಟ್ಟುತ್ತಿದ್ದು, ಸಫೀನಾ ಪ್ಲಾಜಾದಲ್ಲಿ ಮಂಗಳವಾರ ಮಹಿಳೆಯರು ಅಲಂಕೃತ ವಸ್ತುಗಳ ಖರೀದಿಯಲ್ಲಿ ನಿರತರಾಗಿರುವುದು. –ಪ್ರಜಾವಾಣಿ ಚಿತ್ರ

ಕ್ರಿಸ್‌ಮಸ್‌ ಸಂಭ್ರಮ

ಜೆರುಸಲೇಂ ಅನ್ನು ಇಸ್ರೇಲ್‌ ರಾಜಧಾನಿಯೆಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರ ಖಂಡನಿ ‘ತೆಹ್ರಿಕ್‌ –ಎ– ಲಬೈಕ್‌ ಪಾಕಿಸ್ತಾನ್‌’ ಕಾರ್ಯಕರ್ತರು ಲಾಹೋರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. –ಎಎಫ್‌ಪಿ ಚಿತ್ರ

ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ಮಂಗಳವಾರ (ಡಿ.12) ಉದ್ಘಾಟನೆಯಾಗುತ್ತಿದ್ದು, ಸೋಮವಾರ ರಾತ್ರಿ ಅದು ವಿದ್ಯುತ್‌ ದೀಪಗಳಿಂದ ಜಗಮಗಿಸಿತು. – ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಸುಂದರ ವಿಮಾನ ನಿಲ್ದಾಣ....

ಲಿಂಗಾಯತ ಸಮಾವೇಶಕ್ಕಾಗಿ ಕೂಡಲಸಂಗಮದಿಂದ ಬಸವ ಜ್ಯೋತಿ ತಂದಿದ್ದ, ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಪಂಚಮಿ ವೇದಿಕೆಯಲ್ಲಿ ಆಸೀನರಾಗಿದ್ದನ್ನು, ಕ್ಯಾಮೆರಾದಲ್ಲಿ ಸೆರೆ ಹಿಡಿದ ಪಂಚಮಿ ತಾಯಿ ಜಿ.ವಿ.ಶಾರದ

ಮೊಮ್ಮಗಳ ಫೋಟೊ..

ಊರೂರು ಅಲೆದಾಡಿ ಕುಟುಂಬಗಳ ಇತಿಹಾಸವನ್ನು ಸಾರುವ ಹೆಳವರು ಬಂಡಿ ಕಟ್ಟಿಕೊಂಡು ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಸಾಗುತ್ತಿದ್ದಾಗ ಮಲ್ಲಿಕಾರ್ಜುನ ದಾನನ್ನವರ ಅವರ ಕ್ಯಾಮೆರಾ ಕಣ್ಣಲ್ಲಿ ಕಂಡಿದ್ದು ಹೀಗೆ.

ಬದುಕಿನ ಬಂಡಿ...!

ಎಲೆಯ ಮರೆಯ ಸರಿಸಿ ನೆಲ ಸೋಕಿದ ಸೂರ್ಯರಶ್ಮಿಯ ಚುಂಬನದಲ್ಲಿ ಕಲ್ಲು ಬೆಂಚಿನ ಮೇಲೆ ಮಾತಿಗೆ ಕುಳಿತ ಮಹಿಳೆಯರ ಚಿತ್ತ ಕದಲಿಸುವ ಸೂರ್ಯಲಾಸ್ಯದ ಚಿತ್ರ ಚಂದ್ರಹಾಸ್‌ ಕೋಟೆಕಾರ್‌ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದದ್ದು ಹೀಗೆ

ಮುಂಜಾನೆ ಮಾತು

ಸುವರ್ಣ ಸಂಭ್ರಮದಲ್ಲಿರುವ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ವಿಶಾಖಪಟ್ಟಣದಲ‌್ಲಿ ನಡೆದ ಸಮಾರಂಭದಲ್ಲಿ ಸೇನಾ ಧ್ವಜವನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಆದ ನಂತರ ಇದೇ ಮೊದಲ ಬಾರಿ ಅವರು ನೌಕಾಪಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು –‍ಪಿಟಿಐ ಚಿತ್ರ

ಸುವರ್ಣ ಸಂಭ್ರಮ

ಅಮ್‌ಸ್ಟರ್ಡಮ್‌ನಲ್ಲಿ ಕಾಲುವೆ ಪಕ್ಕದ ಗಿಡ ಹಾಗೂ ಕಟ್ಟಡಗಳಿಗೆ ಮಾಡಲಾಗಿದ್ದ ವಿದ್ಯುತ್‌ ಅಲಂಕಾರ ಗಮನಸೆಳೆಯುತ್ತಿದೆ. ಕ್ರಿಸ್‌ಮಸ್‌ ಹಬ್ಬಕ್ಕೆ ಮುನ್ನ ಈ ರೀತಿ ಸಂಭ್ರಮಾಚರಣೆ ಇಲ್ಲಿ ಆರಂಭವಾಗುತ್ತದೆ.  ರಾಯಿಟರ್ಸ್ ಚಿತ್ರ

ಸಂಭ್ರಮಾಚರಣೆ

ಒಖಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ‘ಆಪರೇಷನ್ ಸಿನರ್ಜಿ’ಯಲ್ಲಿ ಪಾಲ್ಗೊಂಡ ರಕ್ಷಣಾ ಸಿಬ್ಬಂದಿಯನ್ನು ತಿರುವನಂತಪುರದ ಶಂಗುಮುಘಮ್‌ನಲ್ಲಿರುವ ಭಾರತೀಯ ವಾಯು ಪಡೆಯ ತಾಂತ್ರಿಕ ವಿಭಾಗದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಭೇಟಿಯಾಗಿ ಅಭಿನಂದಿಸಿದರು –ಪಿಟಿಐ ಚಿತ್ರ

ಅಭಿನಂದನೆ

ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಭಾನುವಾರ ನಡೆದ ಆಳ್ವಾಸ್‌ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಸಾಧಕರಾದ ಲಕ್ಷ್ಮೀನಾರಾಯಣ ಆಚಾರ್ಯ, ರತ್ನಮಾಲಾ ಪ್ರಕಾಶ್‌, ಗಿರೀಶ್‌ ಭಾರದ್ವಾಜ್‌, ಪ್ರೊ.ಬಿ.ಸುರೇಂದ್ರ ರಾವ್‌, ಪ್ರೊ.ಕೆ.ಬಿ.ಸಿದ್ದಯ್ಯ, ಡಾ.ತೇಜಸ್ವಿ ಕಟ್ಟೀಮನಿ, ಹೆನ್ರಿ ಡಿಸೋಜ, ನ್ಯಾ.ಎನ್‌. ಸಂತೋಷ್‌ ಹೆಗ್ಡೆ, ಸಿದ್ದಲಿಂಗ ಪಟ್ಟಣಶೆಟ್ಟಿ, ಪ್ರೊ.ಜಿ.ಎಚ್‌.ಹನ್ನೆರಡುಮಠ, ಎಂ.ಪ್ರಭಾಕರ ಜೋಷಿ, ಪದ್ಮರಾಜ ದಂಡಾವತಿ, ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರನ್ನು ನುಡಿಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಯಶ್ರೀ, ಅಮರನಾಥ ಶೆಟ್ಟಿ, ಡಾ.ಎಂ.ಮೋಹನ ಆಳ್ವ, ನಾಗತಿಹಳ್ಳಿ ಚಂದ್ರಶೇಖರ್‌, ಅಭಯಚಂದ್ರ ಜೈನ್‌, ಕ್ಯಾ.ಗಣೇಶ್‌ ಕಾರ್ಣಿಕ್‌ ಇದ್ದರು. ಪ್ರಜಾವಾಣಿ ಚಿತ್ರ

ನುಡಿಸಿರಿ ಗೌರವ

ಚುಮು ಚುಮು ಚಳಿಯಲ್ಲಿ ಪ್ರಕಾಶಮಾನವಾಗಿ ಬೆಳಕು ಚಲ್ಲಿದ ಅಗಲವಾದ ಸೂಪರ್‌ ಮೂನ್‌ ದರ್ಶನವು ಶನಿವಾರ ಸಂಜೆ ದಾವಣಗೆರೆಯ ಶಿವಯೋಗಿ ಆಶ್ರಮದಲ್ಲಿ ಕ್ಯಾಮೆರಾದ ಕಣ್ಣಿಗೆ ಸೆರೆ ಸಿಕ್ಕಿತು. –ಅನೂಪ್‌ ಆರ್‌.ತಿಪ್ಪೇಸ್ವಾಮಿ

ಸೂಪರ್‌ ಮೂನ್‌...

ಶಿವಮೊಗ್ಗ ಸಮೀಪದ ಆಯನೂರು ಕೆರೆಯಲ್ಲಿ ವರಟೆ ಬಾತುಗಳು(ಸ್ಪಾಟ್ ಬಿಲ್ಲಡ್ ಡಕ್) ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪರಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ. ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್‌

ಸ್ವಚ್ಛಂದ ವಿಹಾರ

ಹೆಚ್ಚುಕಮ್ಮಿ ಗುಬ್ಬಚ್ಚಿ ಗಾತ್ರ. ಮಹಾ ಚಟುವಟಿಕೆಯ ಹಕ್ಕಿ. ಕಪ್ಪು ಹಕ್ಕಿಗೆ ರೆಕ್ಕೆಯಲ್ಲಿ ಬಿಳಿ ಪಟ್ಟೆ. ಪೃಷ್ಠ ಮತ್ತು ಬಾಲದ ಬುಡದಲ್ಲಿ ಕೆಂಗಂದು ಬಣ್ಣ. ಹೆಣ್ಣಿನದು ಬೂದುಗಂದು ಮೈಬಣ್ಣ. ರೆಕ್ಕೆಯಲ್ಲಿ ಬಿಳಿ ಪಟ್ಟೆಯಿಲ್ಲ. ಪೊದೆ ತುಂಬಿದ ಬಯಲಿನಲ್ಲಿ ಹಾರಾಟ. ಮನುಷ್ಯರ ನಡುವೆ ಭಯವಿಲ್ಲದೆ ಹಾರಾಡಿಕೊಂಡಿರುತ್ತವೆ. ಕೀಟಗಳೇ ಮುಖ್ಯ ಆಹಾರ. ಈ ಹಕ್ಕಿ ದೇವರಾಯನದುರ್ಗ ಪರಿಸರದಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕಿದೆ. –ಡಾ.ಜಿ.ವಿ.ಆನಂದಮೂರ್ತಿ

ಚಿಟ್ಟು ಮಡಿವಾಳ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್‌) ತೆರಳಲಿರುವ ನಾಸಾದ ಗಗನಯಾನಿಗಳಾದ ಸ್ಕಾಟ್‌ ಟಿಂಗ್ಲೆ, ರೋಸ್ಕೊಸ್‌ಮೋಸ್‌ ಆ್ಯಂಟನ್‌ ಮತ್ತು ಜಪಾನ್‌ನ ಗಗನಿಯಾನಿ ನೋರಿಶಿಗೆ ಅವರು ರಷ್ಯಾದ ಗಗಾರಿನ್‌ ತರಬೇತಿ ಕೇಂದ್ರದಲ್ಲಿ ಬುಧವಾರ ಅಂತಿಮ ಪರೀಕ್ಷೆ ನಡೆಸಿದರು. ಈ ಮೂವರು ಗಗನಯಾನಿಗಳು ಐಎಸ್‌ಎಸ್‌ಗೆ ಡಿಸೆಂಬರ್‌ 17 ರಂದು ತೆರಳಿದ್ದಾರೆ –ಎಎಫ್‌ಪಿ ಚಿತ್ರ

ಗಗನಯಾನಕ್ಕೆ ಸಿದ್ಧ

ಕಬ್ಬನ್‌ ಉದ್ಯಾನದಲ್ಲಿ ತಿಳಿಗುಲಾಬಿ ಬಣ್ಣದ ಹೂಗಳಿಂದ ನಳನಳಿಸುತ್ತಿರುವ ತಬೂಬಿಯಾ ಮರದ ಅಂದಕ್ಕೆ ಮನಸೋತ ಯುವಕರು ಹೂವುಗಳತ್ತ ಜಿಗಿದ ಪರಿ

ಕಬ್ಬನ್‌ ಉದ್ಯಾನದಲ್ಲಿ ತಿಳಿಗುಲಾಬಿ ಬಣ್ಣದ ಹೂಗಳಿಂದ ನಳನಳಿಸುತ್ತಿರುವ ತಬೂಬಿಯಾ ಮರದ ಅಂದಕ್ಕೆ ಮನಸೋತ ಯುವಕರು ಹೂವುಗಳತ್ತ ಜಿಗಿದ ಪರಿ

ಕಬ್ಬನ್‌ ಉದ್ಯಾನದಲ್ಲಿ ತಿಳಿಗುಲಾಬಿ ಬಣ್ಣದ ಹೂಗಳಿಂದ ನಳನಳಿಸುತ್ತಿರುವ ತಬೂಬಿಯಾ ಮರದ ಅಂದಕ್ಕೆ ಮನಸೋತ ಯುವಕರು ಹೂವುಗಳತ್ತ ಜಿಗಿದ ಪರಿ - ಪ್ರಜಾವಾಣಿ ಚಿತ್ರ/ರಂಜು ಪಿ

ಬಣ್ಣದ ಹೂ

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿರುವ ಆಲದ ಮರ ಏರಿ ಖಷಿಪಟ್ಟ ವಿದೇಶಿ ಪ್ರವಾಸಿಗರು.      ಚಿತ್ರ: ಸತೀಶ್‌ ಬಡಿಗೇರ್‌

ಸಂತಸದ ಕ್ಷಣ

ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 6,914 ಮಹಿಳೆಯರು ಬಿಡಿಸಿದ ರಂಗೋಲಿ ಎಲ್ಲರ ಗಮನ ಸೆಳೆಯಿತು. ನಿಗದಿಪಡಿಸಿದ್ದ 45 ನಿಮಿಷ ಅವಧಿಯಲ್ಲಿ ಒಟ್ಟು 12,014 ರಂಗೋಲಿ ಚಿತ್ತಾರಗಳು ಅರಳಿದವು. ‘ಈ ಹಿಂದೆ ಬೆಳಗಾವಿಯಲ್ಲಿ 3,500 ಮಂದಿ ಹಾಕಿದ್ದ ರಂಗೋಲಿ, ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಸೇರಿದೆ. ಇಲ್ಲಿಯ ಸಾಧನೆಯನ್ನೂ ಲಿಮ್ಕಾ ದಾಖಲೆಯಲ್ಲಿ ನಮೂದಿಸಲು ಕಳುಹಿಸಲಾಗುವುದು’ ಎಂದು ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದರು.

ರಂಗೋಲಿ ಹಾಕಿ ದಾಖಲೆ ಬರೆದ ಮಹಿಳೆಯರು

ಕರ್ನಾಟಕ ರಾಜ್ಯದ ನಕಾಶೆಯನ್ನು ಹೋಲುವ ಈ ಹುಣಸೆ ಮರದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೋಡಿದವರು ಎಲ್ಲರೂ ಈ ಮರವು ತಮ್ಮ ಊರಲ್ಲಿದೆ ಎಂದೇ ಹೇಳುತ್ತಿದ್ದಾರೆ. ಆದರೆ, ಇದು ಇರುವುದು ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಬಳಿ – ಚಿತ್ರ: ಗಿರೀಶ ಮುಕ್ಕಲ

ಹುಣಸೆ ಮರದಲ್ಲಿ ಕರ್ನಾಟಕ ನಕಾಶೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಶುಕ್ರವಾರ ಬ್ರಹ್ಮರಥೋತ್ಸವವು ವೈಭವದಿಂದ ನಡೆಯಿತು. ನಾಡಿನ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. –ಪ್ರಜಾವಾಣಿ ಚಿತ್ರ

ಮಹಾರಥೋತ್ಸವ

ಭಾರತ ಕ್ರಿಕೆಟ್‌ ತಂಡದ ಆಟಗಾರ ಭುವನೇಶ್ವರ್ ಕುಮಾರ್‌ ಮೀರಠ್‌ನಲ್ಲಿ ಗುರುವಾರ ಬಾಲ್ಯದ ಗೆಳತಿ ನೂಪರ್‌ ನಗರ್‌ ಅವರೊಂದಿಗೆ ವಿವಾಹವಾದರು. –ಪಿಟಿಐ ಚಿತ್ರ

ಸಪ್ತಪದಿ ತುಳಿದ್ರು ಭುವನೇಶ್ವರ್ ಕುಮಾರ್‌ -ನೂಪರ್‌ ನಗರ್‌

ಭಾರತ ಕ್ರಿಕೆಟ್ ತಂಡದ ಆಟಗಾರ ಜಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಗೆ ಗುರುವಾರ ಮುಂಬೈನಲ್ಲಿ ವಿವಾಹವಾದರು.

ವಿವಾಹ ಸಮಾರಂಭ...

ಉಜಿರೆ: ಶನಿವಾರ ರಾತ್ರಿ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಂಡವು

ಧರ್ಮಸ್ಥಳ: ಲಕ್ಷ ದೀಪೋತ್ಸವ ಸಮಾಪನ

ಆಂಧ್ರಪ್ರದೇಶದ ಅಲ್ಲಗಡದಲ್ಲಿ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ಗುರುವಾರ ಹಮ್ಮಿಕೊಂಡಿದ್ದ ಪ್ರಜಾ ಸಂಕಲ್ಪ ಯಾತ್ರೆಯಲ್ಲಿ ವೃದ್ಧೆಯೊಬ್ಬರು ಸಂಕಟ ಹೇಳಿಕೊಂಡರು. –ಪಿಟಿಐ ಚಿತ್ರ

ವೃದ್ಧೆಯ ಅಳಲು

ಕಡೆಯ ಕಾರ್ತಿಕ ಸೋಮವಾರದ ಅಂಗವಾಗಿ ಸಂಪಂಗಿರಾಮನಗರದ ಕಲ್ಯಾಣಿಯಲ್ಲಿ ಆಯೋಜಿಸಿದ್ದ ದೀಪೋತ್ಸವದ ಮೆರುಗು ಕ್ಯಾಮೆರಾದ ‘ಜೂಮ್‌’ ತಂತ್ರದಲ್ಲಿ ಕಂಡಿದ್ದು ಹೀಗೆ...–ಪ್ರಜಾವಾಣಿ ಚಿತ್ರ

ದೀಪೋತ್ಸವದ ರಂಗು

ನಗರದ ಎ.ಡಿ.ಎ ರಂಗಮಂದಿರದಲ್ಲಿ ಶನಿವಾರ ರಸಿಕ ಆರ್ಟ್ಸ್ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆಯರು ನೃತ್ಯ ಪ್ರದರ್ಶನ ನೀಡಿದರು –ಪ್ರಜಾವಾಣಿ ಚಿತ್ರ

ನೃತ್ಯ ಪ್ರದರ್ಶನ

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್‌)ಯ ಕನ್ನಡ ಸಂಘ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆತೊಟ್ಟು, ಸೊಂಟದ ಮೇಲೆ ಬಿಂದಿಗೆ ಹೊತ್ತು, ಬೃಹತ್‌ ಗೊಂಬೆಗಳ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಮನಹೋಹಕವಾಗಿತ್ತು ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ದೃಶ್ಯ ಮನಹೋಹಕ

ಕನ್ನಡ ಸೇನೆಯು ಬೆಂಗಳೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ 62ನೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಕನ್ನಡ ಅಭಿಮಾನಿಗಳು –ಪ್ರಜಾವಾಣಿ ಚಿತ್ರ

ಕನ್ನಡ ರಾಜ್ಯೋತ್ಸವ

ಬ್ರಿಟನ್‌ರಾಜಕುಮಾರ ಚಾರ್ಲ್ಸ್‌ ಅವರ ಪತ್ನಿ ಕ್ಯಾಮಿಲ್ಲಾ ಅವರು ಸೌಖ್ಯ ಇಂಟರ್‍ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್‍ಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ, ಆಸ್ಪತ್ರೆಯ ಆವರಣದಲ್ಲಿರುವ ಹೋಲಿ ಟ್ರಿನಿಟಿ ಚಾಪೆಲ್‍ನಲ್ಲಿ ಸಸಿ ನೆಟ್ಟರು. ಸೌಖ್ಯ ಸ್ಥಾಪಕ ಡಾ. ಐಸಾಕ್ ಮಥಾಯಿ, ಡಾ. ಸುಜಾ ಐಸಾಕ್‌ ಮತ್ತು ಅನ್ನಾ ಐಸಾಕ್‌ ಇದ್ದರು

ಚಾರ್ಲ್ಸ್‌ ಪತ್ನಿ ಕ್ಯಾಮಿಲ್ಲಾ ಭೇಟಿ

ಕಾರ್ತಿಕ ಮಾಸದ ಅಕ್ಷಯ ನವಮಿ ಆಚರಣೆಯ ಭಾಗವಾಗಿ ಜಾರ್ಖಂಡ್‌ನ ಧನಬಾದ್ ಜಿಲ್ಲೆಯ ಹೀರಾಪುರದಲ್ಲಿ ಭಕ್ತರು ನೆಲ್ಲಿಕಾಯಿ ಮರಕ್ಕೆ ಪೂಜೆ ಸಲ್ಲಿಸಿದರು. ಸತ್ಯ ಯುಗ ಇದೇ ದಿನ ಆರಂಭವಾಯಿತು ಎನ್ನುವ ನಂಬಿಕೆ ಇದೆ. ಹಾಗಾಗಿ ಸತ್ಯ ಯುಗಾದಿ ಎಂದೂ ಕರೆಯಲಾಗುವ ಈ ದಿನ ಉತ್ತಮ ಕಾರ್ಯ ಮಾಡುವುದರಿಂದ ಪುಣ್ಯ ದೊರೆಯುತ್ತದೆ ಎನ್ನಲಾಗುತ್ತದೆ –ಪಿಟಿಐ ಚಿತ್ರ

ಅಕ್ಷಯ ನವಮಿ ಆಚರಣೆ: ನೆಲ್ಲಿಕಾಯಿ ಮರಕ್ಕೆ ಪೂಜೆ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾನುವಾರ ನಡೆದ ಫ್ಯಾಷನ್‌ ಷೋನಲ್ಲಿ ರೂಪದರ್ಶಿಗಳು ವೈವಿಧ್ಯಮಯ ಖಾದಿ ವಸ್ತ್ರಗಳನ್ನು ಧರಿಸಿ ಪ್ರದರ್ಶಿಸಿದರು ಪಿಟಿಐ ಚಿತ್ರ

ವೈವಿಧ್ಯಮಯ ಖಾದಿ ವಸ್ತ್ರ

ಜೈಪುರ ಅಭಿವೃದ್ಧಿ ಪ್ರಾಧಿಕಾರ ತಮ್ಮ ಗ್ರಾಮದ ಜಮೀನುಗಳನ್ನು ವಶಪಡಿಸಿಕೊಳ್ಳುವುದನ್ನು ಖಂಡಿಸಿ ನಿಂದರ್‌ ಗ್ರಾಮದ ರೈತರು ಗುಂಡಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪಿಟಿಐ ಚಿತ್ರ

ಪ್ರತಿಭಟನೆ

ಗೋಪಾಷ್ಟಮಿ ಪ್ರಯುಕ್ತ ಶನಿವಾರ ಮಥುರಾದಲ್ಲಿ ಸ್ಥಳೀಯರು ಗೋವಿಗೆ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಕಾರ್ತೀಕ ಮಾಸ, ಶುಕ್ಲ ಪಕ್ಷದ ಎಂಟನೇ ದಿನ ಈ ಆಚರಣೆ ನಡೆಸಲಾಗುತ್ತದೆ. ಈ ದಿನ ಗೋವು ಹಾಗೂ ಕರುವನ್ನು ಶೃಂಗರಿಸಿ ಪೂಜೆ ಮಾಡಲಾಗುತ್ತದೆ. ಕೃಷ್ಣ ಬಾಲಕನಾಗಿದ್ದಾಗ ಇದೇ ದಿನ ಗೋವುಗಳನ್ನು ಮೇಯಿಸಲು ಕರೆದುಕೊಂಡು ಹೋಗಲು ಪ್ರಾರಂಭಿಸಿದ ಎಂಬ ಪ್ರತೀತಿಯಿದೆ –ಪಿಟಿಐ ಚಿತ್ರ

ಗೋಪಾಷ್ಟಮಿ ಗೋಪೂಜೆ

ವಜ್ರಮಹೋತ್ಸವದ ಅಂಗವಾಗಿ ಸಿಂಗಾರಗೊಂಡಿರುವ ವಿಧಾನಸೌಧ/ ಚಿತ್ರ:ಎಂ.ಎಸ್‌.ಮಂಜುನಾಥ್‌

ವಿಧಾನಸೌಧಕ್ಕೆ ಬಣ್ಣದ ದೀಪಾಲಂಕಾರ

ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ನಿಮಿತ್ತ, ಸೋಮವಾರ ಕಿತ್ತೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಧಾರವಾಡದ ರತಿಕಾ ನೃತ್ಯ ನಿಕೇತನ ತಂಡದ ಕಲಾವಿದೆಯರು – ಪ್ರಜಾವಾಣಿ ಚಿತ್ರ

ಕಿತ್ತೂರು ಚೆನ್ನಮ್ಮ ಜಯಂತಿ

ಮೈಸೂರಿನ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಬಳಗದಿಂದ ನಂದಿ ವಿಗ್ರಹಕ್ಕೆ ಕಾರ್ತಿಕ ಮಾಸದ ಮೊದಲ ಸೋಮವಾರ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಹಾಲು, ಮೊಸರು, ಗಂಧ, ಅರಿಸಿನ, ಕುಂಕುಮ ಸೇರಿದಂತೆ 48 ಬಗೆಯ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು. ಬೃಹತ್‌ ನಂದಿ ವಿಗ್ರಹ ಪೂಜೆ ವೇಳೆ ವಿವಿಧ ವರ್ಣಗಳಲ್ಲಿ ಕಂಗೊಳಿಸಿದ್ದು ಹೀಗೆ

ಮಹಾರುದ್ರಾಭಿಷೇಕ

ಛತ್ ಪೂಜಾ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುವ ಭಕ್ತೆಯರಿಗೆ ಕೋಲ್ಕತ್ತದಲ್ಲಿ ಮಹಿಳೆಯೊಬ್ಬರು ಸೋಮವಾರ ಉಚಿತವಾಗಿ ಪೂಜಾ ಸಾಮಗ್ರಿಗಳನ್ನು ವಿತರಿಸಿದರು –ರಾಯಿಟರ್ಸ್ ಚಿತ್ರ

ಪ್ರಾರ್ಥನೆ

ಮೈಸೂರಿನ ಚಾಮುಂಡಿಬೆಟ್ಟದಲ್ಲಿನ 16 ಅಡಿ ಎತ್ತರದ ಏಕಶಿಲಾ ನಂದಿ ವಿಗ್ರಹಕ್ಕೆ ಸೋಮವಾರ ಮಹಾಭಿಷೇಕ ನಡೆಯಿತು. ಚಿತ್ರ: ಪಿಟಿಐ

ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ ಮಹಾಭಿಷೇಕ

ಹಾವೇರಿ ತಾಲ್ಲೂಕಿನ ದೇವಿಹೊಸೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಯುವಕನೊಬ್ಬ ಕೊಬ್ಬರಿ ಕಟ್ಟಿದ ಹೋರಿಯನ್ನು ಹಿಡಿಯಲು ಮುಂದಾದ ದೃಶ್ಯ. –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ

ಕೊಬ್ಬರಿ ಹೋರಿ ಹಿಡಿಯುವ ಸಾಹಸ...

ಉತ್ತರ ಸ್ಪೇನ್‌ನ ಪ್ರದೇಶವೊಂದರಲ್ಲಿ ಹಬ್ಬಿರುವ ಕಾಳ್ಗಿಚ್ಚು ನಿಯಂತ್ರಣಕ್ಕೆ ಅಗ್ನಿಶಾಮಕ ಸಿಬ್ಬಂದಿ ಸೋಮವಾರ ಹರಸಾಹಸಪಟ್ಟರು. ಬೆಂಕಿಯ ಕೆನ್ನಾಲಿಗೆಗೆ ಸ್ಪೇನ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ. ನೆರೆಯ ಪೋರ್ಚುಗಲ್‌ನಲ್ಲಿ 24 ಗಂಟೆಗಳಲ್ಲಿ ಕಾಳ್ಗಿಚ್ಚಿಗೆ 27 ಮಂದಿ ಬಲಿಯಾಗಿದ್ದಾರೆ. –ರಾಯಿಟರ್ಸ್ ಚಿತ್ರ

ಕಾಳ್ಗಿಚ್ಚು

ಕೋಲ್ಕತ್ತದಲ್ಲಿ ಗುರುವಾರ ವಿಶ್ವ ದೃಷ್ಟಿ ದಿನದ ಅಂಗವಾಗಿ ನಡೆದ ರ‍್ಯಾಲಿಯಲ್ಲಿ ವಿದ್ಯಾರ್ಥಿನಿರು ಕಪ್ಪು ಪಟ್ಟಿ ಕಟ್ಟಿಕೊಂಡು ನೇತ್ರ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು  ಪಿಟಿಐ ಚಿತ್ರ

ವಿಶ್ವ ದೃಷ್ಟಿ ದಿನ: ರ‍್ಯಾಲಿ

ಗಂಡು ಮಗುವಿನೊಂದಿಗೆ ರಾಬಿನ್‌ ಉತ್ತಪ್ಪ ದಂಪತಿಯ ಸಂಭ್ರಮ.

ದಂಪತಿಯ ಸಂಭ್ರಮ...

ಎಎಫ್‌ಸಿ ಏಷ್ಯಾಕಪ್‌ ಅರ್ಹತಾ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ಫುಟ್‌ಬಾಲ್‌ ತಂಡದ ಆಟಗಾರರು ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.

ಅರ್ಹತಾ ಪಂದ್ಯಕ್ಕೆ ಸಜ್ಜು...

ವನ್ಯಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ರಾಜಸ್ತಾನದ ಬಿಕಾನೇರ್‌ನಲ್ಲಿ ಶಾಲಾ ಮಕ್ಕಳು ಪ್ರಾಣಿಗಳ ಮುಖವಾಡ ಧರಿಸಿ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು –ಪಿಟಿಐ ಚಿತ್ರ

ಜಾಗೃತಿ

ಸೇಂಟ್‌ ಜೋಸೆಫ್‌ ಇಂಡಿಯನ್‌ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ‘19ನೇ ಜುವೆಲ್ಸ್‌ ಆಫ್‌ ಇಂಡಿಯಾ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ’ಕ್ಕೆ ಶನಿವಾರ ಭೇಟಿ ನೀಡಿದ್ದ ಮೇಳದ ರಾಯಭಾರಿ ನಟಿ ರಚಿತಾ ರಾಮ್‌ ವಿಭಿನ್ನ ವಿನ್ಯಾಸದ ಆಭರಣವನ್ನು ಪ್ರದರ್ಶಿಸಿದರು. 9ರವರೆಗೆ ಈ ಪ್ರದರ್ಶನ ಇರಲಿದೆ

ಆಭರಣ ಮೇಳ

ನಗರದಲ್ಲಿ ಗುರುವಾರ ತನೈರಾ ಸ್ಯಾರೀಸ್ ಆಯೋಜಿಸಿದ್ದ ತರಿ–ದಿ ಲೂಮ್‌ ನೃತ್ಯ ಕಾರ್ಯಕ್ರಮದಲ್ಲಿ ಮಾಳವಿಕಾ ಸಾರುಕೈ ಮತ್ತು ತಂಡದವರು ನೃತ್ಯ ಪ್ರದರ್ಶನ ನೀಡಿದರು– ಪ್ರಜಾವಾಣಿ ಚಿತ್ರ

ನೃತ್ಯ

ರಂಗ ಬದುಕು ಸಂಸ್ಥೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾವಿದರು ಅಂಬಿಗರ ಚೌಡಯ್ಯ ನಾಟಕ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

ಅಂಬಿಗರ ಚೌಡಯ್ಯ ನಾಟಕ

ಬುಲ್‌ ಬುಲ್‌ ನೋಟ... ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿ ಕಾಣಿಸಿಕೊಂಡ ತಿಳಿಗೆಂಪು ಬಣ್ಣದ ಬುಲ್‌ ಬುಲ್‌ ಹಕ್ಕಿಯು ಕ್ಯಾಮೆರಾಕ್ಕೆ ಸೆರೆಯಾಗಿದ್ದು ಹೀಗೆ. ಪ್ರಜಾವಾಣಿ ಚಿತ್ರ: ಸತೀಶ್‌ ಬಡಿಗೇರ.

ಬುಲ್‌ ಬುಲ್‌ ನೋಟ...

ಪ್ರವಾಹದಿಂದ ಜಲಾವೃತವಾಗಿದ್ದ ಈಶಾನ್ಯ ಭಾರತದ ಪ್ರಸಿದ್ಧ ಕಾಂಜಿರಂಗ ಮತ್ತು ಪೊಬಿಟೋರಾ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸಿಗರ ಸಂಚಾರಕ್ಕೆ ಮತ್ತೆ ತೆರೆಯಲಾಗಿದೆ. ಗುವಾಹಟಿಯಿಂದ 55 ಕಿ.ಮೀ. ದೂರದಲ್ಲಿರುವ ಪೊಬಿಟೋರಾ ಅಭಯಾರಣ್ಯದಲ್ಲಿ ಸೋಮವಾರ ಆನೆಗಳ ಮೇಲೆ ಕುಳಿತು ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರಿಗೆ ಖಡ್ಗಮೃಗಗಳು ಕಾಣಿಸಿಕೊಂಡವು. ಎಎಫ್‌ಪಿ ಚಿತ್ರ.

ಪ್ರವಾಸ

ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಸೋಮವಾರ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಸಮೀಪದ ಗೋವನಕೊಪ್ಪ-ಕೊಣ್ಣೂರು ನಡುವಿನ ಹಳೆಯ ಸೇತುವೆ ಮುಳುಗಡೆಯಾಗಿದೆ.

ಬೆಳಗಾವಿ ಜಿಲ್ಲೆ: ಗೋವನಕೊಪ್ಪ-ಕೊಣ್ಣೂರು ನಡುವಿನ ಹಳೆಯ ಸೇತುವೆ ಮುಳುಗಡೆ

ಪ್ರಕಾಶ್‌ ಶೆಟ್ಟಿ

ಕಮಲ!

ಥಾಯ್ಲಂಡ್‌ನ ಶ್ವೇತ ದೇವಾಲಯದ ಮಾದರಿಯಲ್ಲಿ ದುರ್ಗಾ ದೇವಿ ಪ್ರತಿಷ್ಠಾಪನೆಗೆ ಕೋಲ್ಕತ್ತದಲ್ಲಿ ನಿರ್ಮಿಸುತ್ತಿರುವ ಪೂಜಾ ಪೆಂಡಾಲ್‌ಗೆ ಕಾರ್ಮಿಕರು ಶುಕ್ರವಾರ ಅಂತಿಮ ಸ್ಪರ್ಶ ನೀಡಿದರು  ಪಿಟಿಐ ಚಿತ್ರ

ದುರ್ಗಾ ದೇವಿ ಪ್ರತಿಷ್ಠಾಪನೆಗೆ ಸಿದ್ಧತೆ

 20ಕೆಎನ್‌ಕೆ4 ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿ ಬಳಿಯಿರುವ ಬೆಟ್ಟದಲ್ಲಿ ಚೆನ್ನಾಗಿ ಮಳೆ ಆಗಿರುವುದರಿಂದ ಮರಗಳು ಚಿಗುರಿ ಹಸಿರು ಹೊದಿಕೆಯಂತೆ ಬೆಟ್ಟ ಕಾಣುತ್ತಿರುವುದು

ಭೂಮಿ ತಾಯಿಗೆ ಹಸಿರು ಹೊದಿಕೆ

 ಮಾಗಡಿಯಲ್ಲಿ ಕಲೆಯ ಐಸಿರಿ ಸೋಮೇಶ್ವರ ಸ್ವಾಮಿ ದೇಗುಲದ ಪೌಳಿಯಲ್ಲಿನ ಕೆಂಪೇಗೌಡ ನ್ಯಾಯ ತೀರ್ಮಾನಿಸುತ್ತಿದ್ದ ಕಲಾತ್ಮಕ ಹಜಾರದ ಗೋಪುರದ ಮುಂದಿನ ಸಸ್ಯಸಂಕುಲ ನೋಡುಗರ ಗಮನ ಸೆಳೆಯುತ್ತಿದೆ. ಇಮ್ಮಡಿ ಕೆಂಪೇಗೌಡ ಹನುಮಾಪುರದ ಶಿಲ್ಪಿ ಮುನಿಯಾ ಬೋವಿ ಇದನ್ನು ನಿರ್ಮಿಸಿದ್ದ ಚಿತ್ರ–ದೊಡ್ಡಬಾಣಗೆರೆ ಮಾರಣ್ಣ

ಮನ ಸೆಳೆಯುವ ಸಸ್ಯ ಸಂಕುಲ...

ನವರಾತ್ರಿ ಅಂಗವಾಗಿ ಕೋಲ್ಕತ್ತದಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಕೆಲಸ ಭರದಿಂದ ಸಾಗಿತು –ಪಿಟಿಐ ಚಿತ್ರ

ನವರಾತ್ರಿ ಸಂಭ್ರಮ

ಪ್ರಕಾಶ್‌ ಶೆಟ್ಟಿ

ವೈ.ಸಿ. ಮೋದಿ ನೇಮಕ...

ಕೋಲ್ಕತ್ತಾದ ಹೌರಾ ಸೇತುವೆ ಸಮೀಪದ ಗಂಗಾ ನದಿ ತಟದಲ್ಲಿ ಮಂಗಳವಾರ ಭಕ್ತಾದಿಗಳು ಪಿತೃಗಳಿಗೆ ತರ್ಪಣ ಸಲ್ಲಿಸಿದರು –ಪಿಟಿಐ ಚಿತ್ರ

ಪಿತೃಗಳಿಗೆ ತರ್ಪಣ

ಬೆಂಗಳೂರಿನ ರಾಜಭವನದಲ್ಲಿ ಶನಿವಾರ ಐಜಿಪಿ ಡಿ.ರೂಪಾ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಷ್ಟ್ರಪತಿ ಪದಕ ಪ್ರದಾನ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರು. ಚಿತ್ರ: ಎಎನ್ಐ

ಐಜಿಪಿ ಡಿ.ರೂಪಾಗೆ ರಾಷ್ಟ್ರಪತಿ ಪದಕ ಪ್ರದಾನ

ರಾಜಭವನದಲ್ಲಿ ಶನಿವಾರ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ನೀಡುವ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಸ್ಕೃತರನ್ನು ಅಭಿನಂದಿಸಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ಇದ್ದರು.

ರಾಷ್ಟ್ರಪತಿ ಪದಕ ಪ್ರದಾನ

ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಗುರುವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಲ್ಲಿ ನಿರತರಾಗಿದ್ದರೆ ಇತ್ತ ಅಬೆ ಅವರ ಪತ್ನಿ ಅಕೀ ಅಬೆ ಅವರು ಅಹಮದಾಬಾದ್‌ನ ಅಂಧರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿದ್ದ ಯುವತಿಯಿಂದ ಉಗುರಿಗೆ ಬಣ್ಣ ಹಚ್ಚಿಸಿಕೊಂಡರು –ಪಿಟಿಐ ಚಿತ್ರ

ಉಗುರಿಗೆ ಬಣ್ಣ

ವಿದೇಶಿ ಭಕ್ತರು ತಮ್ಮ ಪಿತೃಗಳ ಮೋಕ್ಷಕ್ಕಾಗಿ ಭಾನುವಾರ ಗಯಾದಲ್ಲಿ ಪಿಂಡಪ್ರದಾನ ಮಾಡಿದರು –ಪಿಟಿಐ ಚಿತ್ರ

ಮೋಕ್ಷಕ್ಕಾಗಿ ಪಿಂಡಪ್ರದಾನ

ಸಿದ್ದಾಪುರ ತಾಲ್ಲೂಕು ಹೊಳೆಮರೂರ ಗ್ರಾಮದ ಗಜಾನನ ಜೋಗಳೇಕರ ಅವರ ತೋಟದಲ್ಲಿ ತೆಂಗಿನ ಮರವು ತನ್ನೊಡಲಲ್ಲಿ ಬಸುರಿ ಗಿಡಕ್ಕೆ ಆಶ್ರಯ ನೀಡಿದೆ. -ಚಿತ್ರ: ಮನೋಜ್ ದೇಶಭಾಗ

ತೆಂಗಿನ ಮಡಿಲಲ್ಲಿ ಬಸುರಿ...

ಚೆನ್ನೈನ ದೇವಾಲಯವೊಂದರಲ್ಲಿ ಸೋಮವಾರ ದೀಪ ಬೆಳಗುವ ಮೂಲಕ ಮಹಿಳೆಯರು ಓಣಂ ಹಬ್ಬವನ್ನು ಆಚರಿಸಿದರು –ಪಿಟಿಐ ಚಿತ್ರ

ಓಣಂ ಬೆಳಕು

ಪ್ರಕಾಶ್‌ ಶೆಟ್ಟಿ

ಮೇಷ್ಟ್ರೇ!

ಚಂಡೀಗಡ–ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಧಾಲಿ ಸುರಂಗದ ಬಳಿ ಶನಿವಾರಿ ಭಾರಿ ಭೂಕುಸಿತ ಸಂಭವಿಸಿದೆ. ಹೆದ್ದಾರಿ ಬದಿ ನಿಲ್ಲಿಸಿದ್ದ ಏಳು ಕಾರುಗಳ ಮೇಲೆ ಗುಡ್ಡದ ಭಾಗ ಕುಸಿದು ಬಿದ್ದಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು ಸಾವುನೋವಿನ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಇಡೀ ಅವಘಡ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಿಂದ ತೆಗೆಯಲಾದ ಸ್ಕ್ರೀನ್‌ಗ್ರ್ಯಾಬ್‌ಗಳಿವು.

ಭಾರಿ ಭೂಕುಸಿತ

ದೆಹಲಿಯ ಜಮಾ ಮಸೀದಿಯಲ್ಲಿ ನಡೆದ ಪ್ರಾರ್ಥನೆ

ಈದ್‌ ಅಲ್‌–ಅಧಾ

 ಕೋಲ್ಕತ್ತ ಸಮೀಪದ ಉದ್ಯಾನದಲ್ಲಿ ಜಗತ್ತಿನ ಏಳು ಅದ್ಭುತಗಳ ಪ್ರತಿರೂಪಗಳನ್ನು ನಿರ್ಮಿಸುವ ಯೋಜನೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಕೈಗೊಂಡಿದೆ ಪಿಟಿಐ ಚಿತ್ರ

ಜಗತ್ತಿನ ಅದ್ಭುತಗಳು..

ಮೈಸೂರು ದಸರೆಯ ಜಂಬೂಸವಾರಿಗೆ ಆನೆಗಳ ತಾಲೀಮು ಆರಂಭವಾಗಿದೆ. ಮೈಸೂರು ನಗರದ ಕೆ.ಆರ್‌.ವೃತ್ತದಲ್ಲಿ ಶುಕ್ರವಾರ ‘ಅರ್ಜುನ’ನ ಮುಂದಾಳತ್ವದಲ್ಲಿ 15 ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡವು. ಸೆ. 21ರಿಂದ 30ರವರೆಗೆ ದಸರಾ ಉತ್ಸವ ನಡೆಯಲಿದ್ದು, ಕೊನೆಯ ದಿನ ಜಂಬೂಸವಾರಿ ಇದೆ

ಜಂಬೂಸವಾರಿಗೆ ಆನೆಗಳ ತಾಲೀಮು

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜಿಟಿಜಿಟಿ ಮಳೆಯಲ್ಲಿ ವಿದ್ಯಾರ್ಥಿನಿಯರು ಕೊಡೆ ಹಿಡಿದು ಸೆಲ್ಫಿ ತೆಗೆದುಕೊಂಡ ಕ್ಷಣ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

ಮಳೆ ಜತೆ ಸೆಲ್ಫಿ

ಕೋಲ್ಕತ್ತದಲ್ಲಿ ಬುಧವಾರ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಅಡುಗೆ ಅನಿಲ ಸಿಲಿಂಡರ್‌ನ ಬೃಹತ್‌ ಮಾದರಿಯನ್ನು ಪ್ರದರ್ಶಿಸಿದರು. –ಪಿಟಿಐ ಚಿತ್ರ

ಪ್ರತಿಭಟನೆ...

ಬೆಂಗಳೂರಿನ ಶಿವಾಜಿನಗರದ ಸೇಂಟ್‌ ಮೇರಿ ಬೆಸಿಲಿಕಾ ಚರ್ಚ್‌ನ ವಾರ್ಷಿಕೋತ್ಸವ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಸಮೂಹ –ಪ್ರಜಾವಾಣಿ ಚಿತ್ರ

ವಾರ್ಷಿಕೋತ್ಸವ

ಗುರುನಾನಕ್‌ ಅವರ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಪಂಜಾಬ್‌ನ ಬಟಾಲದಲ್ಲಿ ಸಿಖ್‌ ಧರ್ಮಿಯರು ಪವಿತ್ರಗ್ರಂಥ ಗುರುಗ್ರಂಥಸಾಹೇಬ್‌ಅನ್ನು ರಥದಲ್ಲಿರಿಸಿ ಮೆರವಣಿಗೆ ನಡೆಸಿದರು. ಚಿತ್ರ: ಎಎಫ್‌ಪಿ

ಗುರುವಿಗೆ ನಮನ

‘ಪ್ರಜಾವಾಣಿ’ಯ ವಿಶೇಷ ವರದಿಗಾರ ಡಿ.ಉಮಾಪತಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ದತ್ತಿ ಪ್ರಶಸ್ತಿಯನ್ನು ಭಾನುವಾರ ನವದೆಹಲಿಯಲ್ಲಿ ಪ್ರದಾನ ಮಾಡಿದರು. ಜವಾಹರಲಾಲ್‌ ನೆಹರೂ ವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ, ಲೇಖಕ ಡಾ.ಸಂತೋಷ್‌ ಹಾನಗಲ್‌ ಚಿತ್ರದಲ್ಲಿದ್ದಾರೆ

ದತ್ತಿ ಪ್ರಶಸ್ತಿ