ಮನೋರಂಜನೆ
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ‘ಡೆಕ್ಕನ್‌ ಹೆರಾಲ್ಡ್‌’ ರಂಗೋತ್ಸವದಲ್ಲಿ ಖಾಸರ್‌ ಥಾಕೊರೆ ಪದಮ್ಸೆ ನಿರ್ದೇಶನದ ‘ಮದರ್‌ ಕರೇಜ್‌ ಅಂಡ್‌ ಹರ್‌ ಚಿಲ್ಡ್ರನ್‌’ ನಾಟಕವನ್ನು ಕಲಾವಿದರು ಪ್ರದರ್ಶಿಸಿದರು– ಪ್ರಜಾವಾಣಿ ಚಿತ್ರ

ರಂಗೋತ್ಸವ

 ಗಾಂಧಿ ಜಯಂತಿ ಅಂಗವಾಗಿ ಅಲಹಾಬಾದ್ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಲಹಾಬಾದ್‌ನಲ್ಲಿ ನಿರ್ಮಿಸಿದ ಮಹಾತ್ಮ ಗಾಂಧಿ ಅವರ ಮರಳು ಶಿಲ್ಪದ ಸುತ್ತ ಸೊಮವಾರ ಸಾಧುಗಳು ನಿಂತಿರುವುದು –ಪಿಟಿಐ ಚಿತ್ರ

ಮಹಾತ್ಮ ಮತ್ತು ಸಂತ...

ಬಿಷಪ್‌ ಕಾಟನ್‌ ಮಹಿಳಾ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು – ಪ್ರಜಾವಾಣಿ ಚಿತ್ರ

ಘಟಿಕೋತ್ಸವ

ನಗರದ ಕೇಶವ ನೃತ್ಯ ಶಾಲೆಯ ವಿದ್ಯಾರ್ಥಿಗಳು ಶನಿವಾರ ಎಡಿಎ ರಂಗಮಂದಿರದಲ್ಲಿ ‘ಮೇಘದೂತ’ ನೃತ್ಯ ಪ್ರದರ್ಶಿಸಿದರು  –ಪ್ರಜಾವಾಣಿ ಚಿತ್ರ

ಮೇಘದೂತ’

ಮೈಸೂರಿನ ನಿರಂತರ ರಂಗ ತಂಡದ ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ‘ಕೂಡಲ ಸಂಗಮ’ ನಾಟಕ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

‘ಕೂಡಲ ಸಂಗಮ’

‘ಟಾಟಾ ಹೆಕ್ಸಾ’ ಸಂಸ್ಥೆ ವತಿಯಿಂದ ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕಲಾವಿದೆ ಅನೌಷ್ಕಾ ಶಂಕರ್ ಸಿತಾರ್‌ ನುಡಿಸಿದರು –ಪ್ರಜಾವಾಣಿ ಚಿತ್ರ

ಸಿತಾರ್‌ ನಿನಾದ

ಭಾರತೀಯ ವಿದ್ಯಾಭವನದಲ್ಲಿ ‘ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ’ ವತಿಯಿಂದ ಶನಿವಾರ ಆಯೋಜಿಸಿದ್ದ ‘ಹಾರಿಜನ್‌ ಸಿರೀಸ್‌’ ಕಾರ್ಯಕ್ರಮದಲ್ಲಿ ಕಲಾವಿದೆ ವೀಣಾ ಸಿ.ಎಸ್‌ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ  

ಭರತನಾಟ್ಯ

ಮೈ ಡೊಂಕಿನ ವಯ್ಯಾರಿ...ಕೋಲ್ಕತ್ತದಲ್ಲಿ ನಡೆದ ‘ಫ್ಯಾಷನ್‌ ಟೂರ್‌ 2016’ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಬಿಪಾಶಾ ಬಸು ಆಕರ್ಷಕ ಉಡುಗೆ ತೊಟ್ಟು ರ್‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು -ಪಿಟಿಐ ಚಿತ್ರ

ಬಿಂಕದ ಸಿಂಗಾರಿ

ಖ್ಯಾತ ವಸ್ತ್ರ ವಿನ್ಯಾಸಕರಾದ ಅಬು ಜಾನಿ ಮತ್ತು ಸಂದೀಪ್‌ ಖೋಸ್ಲಾ ವಿನ್ಯಾಸ ಮಾಡಿದ ಉಡುಪನ್ನು ತೊಟ್ಟ ರೂಪದರ್ಶಿ ಮುಂಬೈನಲ್ಲಿ ನಡೆದ ಫ್ಯಾಷನ್‌ ಷೋನಲ್ಲಿ ಹೆಜ್ಜೆ ಹಾಕಿದರು. -ಎಎಎಫ್‌ಪಿ ಚಿತ್ರ

ಬೆಡಗು ಬಿನ್ನಾಣ

ಅಕ್ಷಯನಗರದ ರಾಘವೇಂದ್ರಸ್ವಾಮಿ ಮಠದ ಸಭಾಂಗಣದಲ್ಲಿ ಕಡತೋಕ ಸುರೇಶ ಹೆಗಡೆ ಮತ್ತು ತಂಡದವರು ನಡೆಸಿಕೊಟ್ಟ ‘ಲವಕುಶ’ ಯಕ್ಷಗಾನ ಪ್ರಸಂಗ ಕಲಾಸಕ್ತರನ್ನು ರಂಜಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

‘ಲವಕುಶ’ ಯಕ್ಷಗಾನ ಪ್ರಸಂಗ

ಗುಜರಾತ್‌ನ ಅಹಮಬಾದ್‌ನಲ್ಲಿ ಮುಂಬರುವ ನವರಾತ್ರಿ ಉತ್ಸವದ ಅಂಗವಾಗಿ ಕಲಾವಿದೆಯರು ಮಂಗಳವಾರ ಗರ್ಬಾ ನೃತ್ಯದ ತಾಲೀಮು ನಡೆಸಿದರು.- ರಾಯಿಟರ್‍ಸ್‌ ಚಿತ್ರ

ನೃತ್ಯ ವೃತ್ತ!

ಇಸ್ಕಾನ್‌ನ ಬಯಲು ರಂಗಮಂದಿರಲ್ಲಿ ಸೋಮವಾರ ನಡೆದ ರುಕ್ಮಿಣಿ ದೇವಿ ಅರುಂಡೇಲ್‌ ಅವರ ‘ರಾಮಾಯಣ’ ನೃತ್ಯರೂಪಕ ಸರಣಿ ಕಾರ್ಯಕ್ರಮದಲ್ಲಿ ಶಾಲಿ ವಿಜಯ ಮತ್ತು ಶ್ರದ್ಧಾ ಆಚಾರ್ಯ ಭರತನಾಟ್ಯ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

ರಾಮಾಯಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ನೆನಪಿನೋಕುಳಿ’ ಸಮಾರೋಪ ಸಮಾರಂಭದಲ್ಲಿ ಸಾಲಿಗ್ರಾಮದ ಗುರುಪ್ರಸಾದಿತ ಯಕ್ಷಗಾನ ಮಂಡಳಿಯ ಕಲಾವಿದರು ‘ರಾಣಿ ಶಶಿಪ್ರಭ’ ಪ್ರಸಂಗವನ್ನು ಪ್ರಸ್ತುತಪಡಿಸಿದರು –ಪ್ರಜಾವಾಣಿ ಚಿತ್ರ

ನೆನಪಿನೋಕುಳಿ

ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಸೋಮವಾರ ನಡೆದ ನೃತ್ಯ, ಸಂಗೀತ ಉತ್ಸವದಲ್ಲಿ ಕಲಾವಿದೆ ಅರುಣಿಮಾ ಸೇನ್‌ ಗುಪ್ತಾ ಅವರು ಪ್ರದರ್ಶಿಸಿದ ಕಥಕ್‌ ನೃತ್ಯದ ಆಕರ್ಷಕ ಭಂಗಿ –ಪ್ರಜಾವಾಣಿ ಚಿತ್ರ

ನೃತ್ಯದ ಸೊಬಗು

ನಗರದ ಜೆಎಸ್‌ಎಸ್‌ ಸಭಾಂಗಣದಲ್ಲಿ ಕ್ರೇಜಿ ಮೈಂಡ್ಸ್‌ ಎಂಟರ್‌ಟೈನ್‌ಮೆಂಟ್‌ ವತಿಯಿಂದ ಆಯೋಜಿಸಿದ್ದ ‘ದೋ ಪಂಚಿ, ದೋ ಟಿಂಕೆ’ ಕಾರ್ಯಕ್ರಮದಲ್ಲಿ ಗಾಯಕರು ಮಹಮದ್‌ ರಫಿ ಮತ್ತು ಕಿಶೋರ್‌ ಕುಮಾರ್‌ ಅವರ ಗೀತೆಗಳನ್ನು ಪ್ರಸ್ತುತ ಪಡಿಸಿದರು. –ಪ್ರಜಾವಾಣಿ ಚಿತ್ರ

‘ದೋ ಪಂಚಿ, ದೋ ಟಿಂಕೆ

ಮೊನಕೊದ ಕಾರ್ಯಕ್ರಮವೊಂದರಲ್ಲಿ ‘ಬ್ಯಾಲೆಟ್‌’ ನೃತ್ಯಗಾರ್ತಿಯರು ನೀಡಿದ ಪ್ರದರ್ಶನ ಗಮನಸೆಳೆಯಿತು. -ಎಎಫ್‌ಪಿ ಚಿತ್ರ

‘ಬ್ಯಾಲೆಟ್‌’

ನೃತ್ಯ ಸಂಜೀವಿನಿ ಅಕಾಡೆಮಿಯು ನಗರದ ಎಡಿಎ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ಫಣಿಮಾಲ ಚಂದ್ರಶೇಖರ್ ಅವರ ಶಿಷ್ಯೆಯರು ‘ವಿಷ್ಣು ಕಲಾಪಂ’ ಭರತನಾಟ್ಯ ಪ್ರದರ್ಶಿಸಿದರು

‘ವಿಷ್ಣು ಕಲಾಪಂ’

ಶುಕ್ರವಾರ ನಡೆದ ಐಪಿಎಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್‌ ನೃತ್ಯ

ಕತ್ರಿನಾ ಕೈಫ್‌ ನೃತ್ಯ

ಉದಯಭಾನು ಕಲಾ ಸಂಘದ ಸಾಂಸ್ಕೃತಿಕ ಭವನದಲ್ಲಿ ಯಕ್ಷಗಾನ ತಪಸ್ಸಂಘ ಭಾನುವಾರ ಆಯೋಜಿಸಿದ್ದ ‘ಭೀಷ್ಮ ವಿಜಯ’ ಯಕ್ಷಗಾನ ಪ್ರದರ್ಶನದಲ್ಲಿ ಅಮೃತದೇವ ಕಟ್ಟನಕೆರೆ ಕಲಾವಿದರು ಯಕ್ಷಗಾನ ಪ್ರಸ್ತುತಪಡಿಸಿದರು –ಪ್ರಜಾವಾಣಿ ಚಿತ್ರ

ಭೀಷ್ಮ ವಿಜಯ

ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಕೃತಿ ಉತ್ಸವದಲ್ಲಿ ಶನಿವಾರ ನೃತ್ಯ ಪ್ರದರ್ಶನ ನೀಡಿದ ರಷ್ಯನ್‌ ಕಲಾವಿದರು –ಪಿಟಿಐ ಚಿತ್ರ

ವಿಶ್ವಸಂಸ್ಕೃತಿ ಉತ್ಸವ

ಬೆಂಗಳೂರಿನ ಉದಯಭಾನು ಕಲಾಸಂಘದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಸರಗೋಡು ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡದವರು ‘ನರಕಾಸುರ ವಧೆ’ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು. –ಪ್ರಜಾವಾಣಿ ಚಿತ್ರ

ಬೊಂಬೆಯಾಟ

ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಹುಬ್ಬಳ್ಳಿಯ ಕನ್ನಡ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ   ವಿದುಷಿ ಸುಜಾತಾ           ರಾಜಗೋಪಾಲ ಅವರ ಶಿಷ್ಯೆ ವಿಜಯಲಕ್ಷ್ಮಿ ಕೊಪ್ಪದ ಭರತನಾಟ್ಯ ರಂಗಪ್ರವೇಶ ಮಾಡಿದರು. ಶಾಸ್ತ್ರೀಯ ನೃತ್ಯದ ಮೂಲಕ ರಂಜಿಸಿದ ಅವರು ‘ಮೊದಲ ಪ್ರಯತ್ನ’ದಲ್ಲೇ ಪ್ರೇಕ್ಷಕರ ಹೃದಯ ಗೆದ್ದರು       -ಪ್ರಜಾವಾಣಿ ಚಿತ್ರ

ನೃತ್ಯದ ಸೊಬಗು...

ಸಪ್ತಸ್ವರ ಆರ್ಟ್ಸ್‌ ಅಂಡ್‌ ಕ್ರಿಯೇಷನ್ಸ್‌ ಸಂಸ್ಥೆ ಶುಕ್ರವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಕ್ರಮಣ 2016 ಸಾಂಸ್ಕೃತಿಕ ಉತ್ಸವದಲ್ಲಿ ಕಲಾವಿದೆಯರು ‘ಶ್ರೀನಿವಾಸ ಕಲ್ಯಾಣ’ ನೃತ್ಯರೂಪಕ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ

ಸಂಕ್ರಮಣ 2016

ನಯನ ಸಭಾಂಗಣದಲ್ಲಿ ಭಾರತೀಯ ವೈಷ್ಣವಿ ಪ್ರದರ್ಶನ ಕಲಾ ಪ್ರತಿಷ್ಠಾನ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ರೋಷನಿ ರಾಜ್‌ಕುಮಾರ್ ಕತಾರಿಯಾ ಅವರು ಕೂಚಿಪುಡಿ ನೃತ್ಯ ಪ್ರದರ್ಶಿಸಿದರು            -ಪ್ರಜಾವಾಣಿ ವಾರ್ತೆ

ನಾಟ್ಯ ಸೊಬಗು

ವಿಜ್ಞಾನ ಸಮಾವೇಶದ ಅಂಗವಾಗಿ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರುಪಮಾ ಮತ್ತು ರಾಜೇಂದ್ರ ತಂಡದವರು ನೃತ್ಯರೂಪಕ ಪ್ರದರ್ಶಿಸಿದರು 	ಪ್ರಜಾವಾಣಿ ಚಿತ್ರ/ಎಚ್‌.ಜಿ. ಪ್ರಶಾಂತ್‌

ಮೋಹಕ ನೃತ್ಯ

ವಿವೇಕನಗರದಲ್ಲಿ ಸೋಮವಾರ ಆರಂಭಗೊಂಡ ‘ಇನ್ಫಂಟ್‌ ಜೀಸಸ್‌ ಚರ್ಚ್‌’ನ ವಾರ್ಷಿಕ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಲೂನ್‌ಗಳನ್ನು ಹಾರಿಸಿ ಸಂಭ್ರಮ ವ್ಯಕ್ತಪಡಿಸಲಾಯಿತು              -ಪ್ರಜಾವಾಣಿ ಚಿತ್ರ

ಸಂಭ್ರಮ

ಶಾಂತಲಾ ಆರ್ಟ್ಸ್‌ ಟ್ರಸ್ಟ್‌ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾತೃ ನಮನ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ಪ್ರಸನ್ನ ಕಸ್ತೂರಿ ಅವರು ‘ವಿಸ್ಮಯ’ ರಂಗಪ್ರಸ್ತುತಿಪಡಿಸಿದರು              -ಪ್ರಜಾವಾಣಿ ಚಿತ್ರ

ಮಾತೃ ನಮನ

ಮೈಸೂರಿನ ಶಾರದಾವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹವ್ಯಕ ಸಂಘದಿಂದ ಭಾನುವಾರ ಆಯೋಜಿಸಿದ್ದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು            –ಪ್ರಜಾವಾಣಿ ಚಿತ್ರ

ಕೃಷ್ಣಾರ್ಜುನ ಕಾಳಗ...

ಅಮೆರಿಕ ಜಲಾಂತರ್ಗಾಮಿ ‘ಯುಎಸ್‌ಎಸ್‌ ಹಾರ್ಟ್‌ಫೋರ್ಡ್‌’ ಆರು ತಿಂಗಳ ಕರ್ತವ್ಯ ನಿರ್ವಹಣೆ ನಂತರ ನೌಕಾ ನೆಲೆ ಗ್ರೋಟಾನ್‌ ಕಾನ್‌ಗೆ ಮರಳಿದಾಗ ನೌಕಾಪಡೆಯ ಅಧಿಕಾರಿಯೊಬ್ಬರು ತಮ್ಮ ಪತ್ನಿಗೆ ಮುತ್ತು ನೀಡಿದ ಕ್ಷಣ. ಈ ಸಂದರ್ಭದಲ್ಲಿ ನೌಕಾಪಡೆಯ ಇನ್ನೊಬ್ಬ ಅಧಿಕಾರಿ ಹೂ ಹಿಡಿದು ಸಂತಸ ವ್ಯಕ್ತಪಡಿಸಿದರು                  -ಎಪಿ ಚಿತ್ರ

ಸಿಹಿ ಮುತ್ತು

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ್‌ (ಎಡದಿಂದ ನಾಲ್ಕನೆಯವರು) ಅಭಿನಯದ ಚೊಚ್ಚಲ ಚಲನಚಿತ್ರ ‘ಜಾಗ್ವಾರ್‌’ ನ ಮುಹೂರ್ತ ಸಮಾರಂಭದಲ್ಲಿ ನಟರಾದ ಚಂದ್ರಶೇಖರ್‌, ಶಿವರಾಜ್‌ ಕುಮಾರ್‌, ರವಿಚಂದ್ರನ್‌, ಸಚಿವ ಅಂಬರೀಷ್‌ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ

ಜಾಗ್ವಾರ್‌ ಮುಹೂರ್ತ

ಹಾಂಕಾಂಗ್‌ನಲ್ಲಿ ಇತ್ತೀಚೆಗೆ ನಡೆದ ಮಿಸ್‌ ಇಂಟರ್‌ನ್ಯಾಷನಲ್‌ ವರ್ಲ್ಡ್‌ವೈಡ್‌ ಕ್ವೀನ್‌ 2015’ಸ್ಪರ್ಧೆಯಲ್ಲಿ ವಿಜೇತರಾದ ನಮಿತಾ ಪರಿತೋಷ್‌ ಕೋಹಕ್‌

ವರ್ಲ್ಡ್‌ವೈಡ್‌ ಕ್ವೀನ್‌

ರಥಯಾತ್ರೆಯಲ್ಲಿ ಕಲಾವಿದರು ಯಕ್ಷಗಾನ ಪ್ರದರ್ಶಿಸಿದರು.         -ಪ್ರಜಾವಾಣಿ ಚಿತ್ರ

ರಥಯಾತ್ರೆ

ಕಬ್ಬನ್ ಉದ್ಯಾನದಲ್ಲಿ ವಾರಾಂತ್ಯದ ಸಾಂಸ್ಕೃತಿಕ ಸಂಭ್ರಮ ಸರಣಿಯ ಅಂಗವಾಗಿ ಭಾನುವಾರ ಬೆಳಿಗ್ಗೆ ‘ಉದಯರಾಗ’ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ‘ಭ್ರಮರಿ’ ತಂಡದ ಕಲಾವಿದರು ಪ್ರದರ್ಶಿಸಿದ ನೃತ್ಯ ರೂಪಕ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು               -ಪ್ರಜಾವಾಣಿ ಚಿತ್ರ

ಹಸಿರು ಬನದಲ್ಲಿ ನಾಟ್ಯ ಸಂಭ್ರಮ

ಯುವ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಿಂದ ಬೆಂಗಳೂರು ನಗರದ ಯವನಿಕಾ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಶುಕ್ರವಾರದ ಸಾಂಸ್ಕೃತಿಕ ಸಂಜೆ’ಯಲ್ಲಿ ಎನ್.ಅನುಪಮಾ ಅವರು ಕೂಚಿಪುಡಿ ನೃತ್ಯ ಪ್ರದರ್ಶಿಸಿದರು - –ಪ್ರಜಾವಾಣಿ ಚಿತ್ರ

ನೃತ್ಯ ಲಾಸ್ಯ

ಮುಂಬೈನಲ್ಲಿ ಆಯೋಜಿಸಿದ್ದ 17ನೇ ಚಲನಚಿತ್ರೋತ್ಸವದಲ್ಲಿ ‘ಚಲನಚಿತ್ರಗಳಲ್ಲಿ ಮಹಿಳೆ’ವಿಷಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಹೊರಬರುತ್ತಿರುವ ನಟಿ ಶಬಾನಾ ಅಜ್ಮಿ              -ಪಿಟಿಐ ಚಿತ್ರ

ಶಬಾನಾ ಅಜ್ಮಿ

ಜೈನ್‌ ವಿಶ್ವವಿದ್ಯಾಲಯದ ಕಲಾ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿಯರು ಶುಕ್ರವಾರ ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಸಮೂಹ ನೃತ್ಯದ ಭಂಗಿ – ಪ್ರಜಾವಾಣಿ ಚಿತ್ರ

ನೃತ್ಯಾಲಾಪ...

ಬೆಂಗಳೂರು ನಗರದ ಗಾಯನ ಸಮಾಜದಲ್ಲಿ ಗುರುವಾರ ‘47ನೇ ಸಂಗೀತ ಸಮ್ಮೇಳನ’ದ ಕಾರ್ಯಕ್ರಮದಲ್ಲಿ ಕಲಾವಿದೆ ರಕ್ಷಿತಾ ರಮೇಶ್ ವೀಣೆ ನುಡಿಸಿದರು - ಪ್ರಜಾವಾಣಿ ಚಿತ್ರ

ವೀಣಾ ವಾದನ

ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ ಕಲಾವಿದರು ‘ಶ್ರೀ ಕೃಷ್ಣ ಸಂಧಾನ’ ನಾಟಕ ಪ್ರದರ್ಶಿಸಿದರು. - ಪ್ರಜಾವಾಣಿ ಚಿತ್ರ

ಕೃಷ್ಣ ಸಂಧಾನ...

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ನೃತ್ಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ರಂಗ ಪ್ರವೇಶ’ ಕಾರ್ಯಕ್ರಮದಲ್ಲಿ ಕೆ.ಐ.ಶ್ವೇತಾ ಮತ್ತು ಕೆ.ಐ. ಸ್ವಾತಿ ಭರತನಾಟ್ಯ ಪ್ರದರ್ಶಿಸಿದರು. - ಪ್ರಜಾವಾಣಿ ಚಿತ್ರ

ನೃತ್ಯ ಲಾಸ್ಯ

ಮೈಸೂರಿನಲ್ಲಿ ಶುಕ್ರವಾರ ನಡೆದ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಆನೆ ‘ಅರ್ಜುನ’ ಅರಮನೆಯ ಬಲರಾಮ ದ್ವಾರದ ಮೂಲಕ ರಾಜ ಗಾಂಭೀರ್ಯದಿಂದ ಹೊರಬಂದ ಕ್ಷಣ   ಪ್ರಜಾವಾಣಿ ಚಿತ್ರ/ಎಚ್‌.ಜಿ. ಪ್ರಶಾಂತ್‌

‘ಅರ್ಜುನ’

ಸೂರತ್‌ನಲ್ಲಿ ನವರಾತ್ರಿ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಲಾವಿದೆಯೊಬ್ಬರು ಗರ್ಬಾ ಪ್ರದರ್ಶಿಸಿದರು             -ಪಿಟಿಐ ಚಿತ್ರ

ಕುಣಿದು ಕುಣಿದು ಬಾರೆ...

 ಬೆಂಗಳೂರು ನಗರದಲ್ಲಿ ಗುರುವಾರ ಕೆಜಿಎಸ್‌ ಕ್ಲಬ್‌ನಲ್ಲಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಷಾ, ರಂಜಿತಾ ‘ಅಷ್ಟಲಕ್ಷ್ಮಿ ವೈಭವ’ ನೃತ್ಯ ಪ್ರದರ್ಶಿಸಿದರು

ಅಷ್ಟಲಕ್ಷ್ಮಿ ವೈಭವ

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಬೆಂಗಳೂರು ಇಂಟರ್‌ನ್ಯಾಷನಲ್‌ ಆರ್ಟ್ಸ್‌ ಫೆಸ್ಟಿವಲ್‌’ ಕಾರ್ಯಕ್ರಮದಲ್ಲಿ ಕಲಾವಿದರು ಒಡಿಸ್ಸಿ ನೃತ್ಯ ಪ್ರದರ್ಶಿಸಿದರು              -ಪ್ರಜಾವಾಣಿ ಚಿತ್ರ

ನೃತ್ಯ ಸಂಭ್ರಮ

ನಗರದ ಎಡಿಎ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನುಪ್ರಿಯಾ ನಾಯರ್ ಭರತನಾಟ್ಯ ಪ್ರದರ್ಶಿಸಿದರು           -ಪ್ರಜಾವಾಣಿ ಚಿತ್ರ

ನೃತ್ಯ ವೈಭವ

ನಗರದ ಸೇವಾ ಸದನದಲ್ಲಿ ಸಂಗಮಮ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೇಖಾ ರಾಜು ಮೋಹಿನಿಯಾಟ್ಟಂ ನೃತ್ಯ ಪ್ರದರ್ಶಿಸಿದರು          -ಪ್ರಜಾವಾಣಿ ಚಿತ್ರ

ನೃತ್ಯ ಪ್ರದರ್ಶನ

ಮಥುರಾದ ಬೃಂದಾವನದಲ್ಲಿ ಭಾನುವಾರ ನಡೆದ ಸ್ವಾಮಿ ಹರಿದಾಸ ಸಂಗೀತ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪ್ರಸಿದ್ಧ ನೃತ್ಯಗಾರ್ತಿ ಡೋನಾ ಗಂಗೂಲಿ ಹಾಗೂ ಬಾಲಿವುಡ್ ನಟಿ ಮುಗ್ಧಾ ಗೋಡ್ಸೆ

ನೃತ್ಯ ಸಮ್ಮಿಲನ

ದಕ್ಷಿಣ ಜರ್ಮನಿಯ ಮ್ಯೂನಿಕ್‌ನಲ್ಲಿ ಭಾನುವಾರ ಅಕ್ಟೋಬರ್‌ಫೆಸ್ಟ್‌ ಬೀರ್‌ ಉತ್ಸವದ ಸಾಂಪ್ರದಾಯಿಕ ಉಡುಪಿನ ಪ್ರದರ್ಶನದಲ್ಲಿ ಹಾಸ್ಯಗಾರನ ವೇಷ ತೊಟ್ಟ ವ್ಯಕ್ತಿಯೊಬ್ಬ ಜಿಗಿದು ರಂಜಿಸಿದ ಬಗೆ                 -ಎಎಫ್‌ಪಿ ಚಿತ್ರ

ಜಿಗಿತ!

ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಮತ್ತೂರು ಕೃಷ್ಣಮೂರ್ತಿ ಸ್ಮಾರಕ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಎಚ್‌.ವಿ.ಗಾಯತ್ರಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು – –ಪ್ರಜಾವಾಣಿ ಚಿತ್ರ

ಮಕ್ಕಳ ಗಾಯನ

ಬೆಂಗಳೂರು ನಗರದ ಕಬ್ಬನ್ ಉದ್ಯಾನದಲ್ಲಿ ಭಾನುವಾರ ಭರತನಾಟ್ಯ ಪ್ರದರ್ಶಿಸಿದ ಅನನ್ಯ ಕಲಾನಿಕೇತನದ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರ

ನೃತ್ಯ ಸೊಬಗು

ಧರ್ಮಶಾಲಾ ಬಳಿಯ ಮಂದಿರವೊಂದರಲ್ಲಿ ಟಿಬೆಟನ್ನರ 55 ನೇ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಕಲಾವಿದೆಯೊಬ್ಬರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು                 -ಪಿಟಿಐ ಚಿತ್ರ

ನೃತ್ಯ ಲಾಸ್ಯ

ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ‘ಪವನಸುತ ಕಲಾ ಟ್ರಸ್ಟ್‌’ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಲಾವಿದರು ‘ಸುಭದ್ರಾ ಕಲ್ಯಾಣ’ ನಾಟಕ ಪ್ರದರ್ಶಿಸಿದರು                -ಪ್ರಜಾವಾಣಿ ಚಿತ್ರ

ಸುಭದ್ರಾ ಕಲ್ಯಾಣ

ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ವರುಷ ಒಂದು– ಆರಂಭ ಅನೇಕ’ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಗೆ ಮುನ್ನ ಬೆಳಗಾವಿಯ ಡೊಳ್ಳು ಕುಣಿತ ಕಲಾವಿದರು ಪ್ರದರ್ಶನ ನೀಡಿದರು

ಡೊಳ್ಳಿನ ಸದ್ದಿಗೆ ಹೆಜ್ಜೆ

ದಕ್ಷಿಣ ಕನ್ನಡದ ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯಲ್ಲಿ ಶನಿವಾರ ಆಚರಿಸಲಾದ 69ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಆಕರ್ಷಕ ಮಲ್ಲಗಂಬ ಸಾಹಸ ಪ್ರದರ್ಶಿಸಿದರು.- ಚಿತ್ರ: ನಿತೀಶ್‌ ಪಿ. ಬೈಂದೂರು

ಮಕ್ಕಳ ಕಸರತ್ತು

ಪಂಜಾಬ್‌ನ ಅಮೃತಸರದಲ್ಲಿ ಶಾಲಾ ಮಕ್ಕಳು ಸ್ವಾತಂತ್ರ್ಯೋತ್ಸವದ ದಿನ ಪ್ರಸ್ತುತ ಪಡಿಸಲಿರುವ ನೃತ್ಯದ ತಾಲೀಮು ನಡೆಸಿದರು. ಪಿಟಿಐ ಚಿತ್ರ

ನೃತ್ಯದ ತಾಲೀಮು

ಶಾಂತಲಾ ಆರ್ಟ್ಸ್‌ ಟ್ರಸ್ಟ್‌ನಿಂದ ಬುಧವಾರ ಬೆಂಗಳೂರು ನಗರದಲ್ಲಿ ಆಯೋಜಿಸಿದ್ದ ‘ಶಾಂತಲಾ ನೃತ್ಯ ವೈಭವ’ದಲ್ಲಿ ಕಲಾವಿದೆ ಅಮೃತಾ ಅಜಯ್‌ ತಿರುಮಲೈ ಅವರು ಭರತನಾಟ್ಯ ಪ್ರಸ್ತುತಪಡಿಸಿದರು - ಪ್ರಜಾವಾಣಿ ಚಿತ್ರ

ಶಾಂತಲೆ

ದೊಡ್ಡಬಳ್ಳಾಪುರದಲ್ಲಿ ಡಿವೈಎಫ್‌ಐ ಸಾಂಸ್ಕೃತಿಕ ಉಪಸಮಿತಿ ಭಾನುವಾರ ಆಯೋಜಿಸಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಸ್ವಚ್ಛ ಭಾರತ್‌ ಅಭಿಯಾನ ಸಾರುವ ಗಾಳಿಪಟ ಗಮನಸೆಳೆಯಿತು. -ಪ್ರಜಾವಾಣಿ ಚಿತ್ರ

ಗಾಳಿಪಟ ಸ್ಪರ್ಧೆ

ಬಾದಾಮಿ ಬೆಟ್ಟದ ಪರಿಸರದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ, ಪೂರ್ವದ ಬೆಟ್ಟದ ಮೇಲಿನಿಂದ ಧುಮ್ಮಿಕ್ಕಿದ ಜೋಡಿ ಜಲಪಾತ. ಸ್ಥಳೀಯರು ಈ ಜೋಡಿ ಜಲಪಾತಕ್ಕೆ ‘ಅಕ್ಕ–ತಂಗಿಯರ ದಿಡುಗು’ ಎನ್ನುವರು. ಪ್ರಜಾವಾಣಿ ಚಿತ್ರ

ಅಕ್ಕ–ತಂಗಿಯರ ಬೆಡಗು!

ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನೇಪಾಳದ ಲೀನಾ ಮಲಾಕರ್‌ ಮತ್ತು ದೆಹಲಿಯ ಪೂರ್ಣಿಮಾ ರೋಯ್‌ ಚೌಧರಿ ಕಥಕ್‌ ನೃತ್ಯ ಪ್ರದರ್ಶಿಸಿದರು. ಪ್ರಜಾವಾಣಿ ಚಿತ್ರ

ಮೋಹಕ ನೃತ್ಯ

ಮಂಗಳೂರಿನ ಪಿಲಿಕುಳದಲ್ಲಿ ನಡೆಯುತ್ತಿರುವ ಸಂಗಮ ಸಂಭ್ರಮ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿರುವ ಕಲಾಶಿಬಿರದಲ್ಲಿ ಪ್ರದರ್ಶನಕ್ಕಿಟ್ಟಿರುವ ಚಿತ್ರಗಳನ್ನು ಹುಲಿವೇಷಧಾರಿಗಳು ವೀಕ್ಷಿಸುತ್ತಿದ್ದ ಪರಿ... ಪ್ರಜಾವಾಣಿ ಚಿತ್ರ

ಹುಲಿಯ ಕಣ್ಣು...

ಇಸ್ರೇಲ್‌ನ ಟೆಲ್‌ಅವಿವ್‌ನಲ್ಲಿ ನಡೆದ ಲ್ಯಾಟಿನ್‌ ನೃತ್ಯ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದ ಜೋಡಿಯೊಂದರ ವೈಖರಿ. ಈ ಸ್ಫರ್ಧೆಯಲ್ಲಿ 66 ಜೋಡಿಗಳು ಪಾಲ್ಗೊಂಡಿದ್ದು, ಇಲ್ಲಿ ಗೆದ್ದ ಜೋಡಿ ಈ ವರ್ಷದ ಅಂತ್ಯದಲ್ಲಿ ಇಸ್ರೇಲ್‌ನಲ್ಲಿ ನಡೆಯಲಿರುವ ವಿಶ್ವ ಲ್ಯಾಟಿನ್‌ ನೃತ್ಯೋತ್ಸವದಲ್ಲಿ ಪ್ರದರ್ಶನ ನೀಡಲಿದೆ      –ರಾಯಿಟರ್ಸ್‌ ಚಿತ್ರ

ಜೋಡಿ ಮೋಡಿ...

ರೇನ್‌ ರೇನ್‌ ಗೋ ಅವೇ... ಎಂದು ಇಂಗ್ಲಿಷ್‌ನಲ್ಲಿ ಹಾಡುಗಳಿದ್ದರೆ, ಹಾವೇರಿಯ ಪುಟಾಣಿಗಳು ‘ಹುಯ್ಯೋ ಹುಯ್ಯೋ ಮಳೆರಾಯ..’ ಎಂದು ಮಳೆಯನ್ನು ಮತ್ತೆ ಮತ್ತೆ ಆಹ್ವಾನಿಸುತ್ತಾ ತುಂತುರು ಮಳೆಯಲ್ಲಿ ಓಡಾಡುತ್ತಾ ಸಂಭ್ರಮಿಸುವ ದೃಶ್ಯ ಹಾವೇರಿಯಲ್ಲಿ ಕ್ಯಾಮರಾಕ್ಕೆ ಸರೆ ಸಿಕ್ಕಿದ್ದು ಹೀಗೆ ಪ್ರಜಾವಾಣಿ ಚಿತ್ರ

ಬಾ ಮಳೆಯೇ ಬಾ..

ನಗರದ ಎಡಿಎ ರಂಗಮಂದಿರದಲ್ಲಿ ಭಾನುವಾರ ಯಕ್ಷ ಮಿತ್ರಕೂಟದ 15 ನೇ ವಾರ್ಷಿಕೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗಮಂಟಪ ಕಲಾವಿದರು ಪ್ರದರ್ಶಿಸಿದ ‘ಅಕ್ಕು’ ನಾಟಕದ ಒಂದು ದೃಶ್ಯ.       -ಪ್ರಜಾವಾಣಿ ಚಿತ್ರ

ಅಜ್ಜಿ ಕತೆ ಹೇಳು

ನೂಪುರ್ ಕಲಾ ಸಂಸ್ಥೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಥಕ್ ನೃತ್ಯ ಕಲಾವಿದರಾದ ಹರಿ ಹಾಗೂ ಚೇತನ್ ‘ಶಾಕುಂತಲಂ’ ಪ್ರಸಂಗ ಪ್ರಸ್ತುತಪಡಿಸಿದರು  –ಪ್ರಜಾವಾಣಿ ಚಿತ್ರ

ಶಾಕುಂತಲ ಪ್ರಸಂಗ

ಶಾಂತಲಾ ಆರ್ಟ್ಸ್‌ ಟ್ರಸ್ಟ್‌ನ 30ನೇ ವಾರ್ಷಿಕೋತ್ಸವದ ಅಂಗವಾಗಿ ಮಲ್ಲೇಶ್ವರದ ಸೇವಾ ಸದನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ಲಾವಣ್ಯ ಅನಂತ್‌ ಅವರು ಭರತನಾಟ್ಯ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ

ಲಾವಣ್ಯ

ಸೋಲ್‌ನಲ್ಲಿ ಶುಕ್ರವಾರ ನಡೆದ ಮಿಸ್‌ ಕೊರಿಯಾ 2015ರ ಸೌಂದರ್ಯ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಲೀ ಮಿನ್‌–ಜಿ ಅವರು ಮಿಸ್‌ ಕೊರಿಯಾ ಕಿರೀಟ ಗೆದ್ದ (ಬಲದಿಂದ ಮೂರನೆಯವರು) ನಂತರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇತರೆ ಸ್ಪರ್ಧಿಗಳೊಂದಿಗೆ ಕಾಣಿಸಿಕೊಂಡ ದೃಶ್ಯ. 24 ವರ್ಷದ ಲೀ ಮಿನ್‌ –ಜಿ 2016ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ - ಎಫ್‌ಪಿ ಚಿತ್ರ

ಮಿಸ್‌ ಕೊರಿಯಾ

ಲಾಸ್‌ವೆಗಾಸ್‌ನ ಎನ್‌ಕೋರ್‌ ಬೀಚ್ ಕ್ಲಬ್‌ನಲ್ಲಿ ನಡೆದ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರೂಪದರ್ಶಿಯರೊಂದಿಗೆಸಂಭ್ರಮಿಸಿದ ನಟಿ ರೂಮೆರ್ ವಿಲ್ಲಿಸ್ (ಮಧ್ಯದಲ್ಲಿರುವವರು)             –ಎಎಫ್‌ಪಿ ಚಿತ್ರ

ಸ್ವಾತಂತ್ರ್ಯ

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಮಕ್ಕಳ ಸಮಾವೇಶದ ಸಮಾರೋಪ ಸಮಾರಂಭದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಿತು.–ಪ್ರಜಾವಾಣಿ ಚಿತ್ರ

ಚಿಣ್ಣರ ನಾಟ್ಯ

‘ನಾದಂ’ ಸಂಸ್ಥೆಯು ನಗರದ ಎಡಿಎ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಶಾಸ್ತ್ರೀಯ ನೃತ್ಯ ಹಾಗೂ ಸಂಗೀತ ಉತ್ಸವದಲ್ಲಿ ಕಲರಿ ಅಕಾಡೆಮಿ ಆಫ್‌ ಪರ್‌ಫಾರ್ಮಿಂಗ್‌ ಆರ್ಟ್ಸ್‌ ವಿದ್ಯಾರ್ಥಿಗಳು ‘ಕಲರಿಪಯಟ್ಟು’ ಪ್ರದರ್ಶಿಸಿದರು             -ಪ್ರಜಾವಾಣಿ ಚಿತ್ರ

ಕಲರಿಪಯಟ್ಟು

ನೈರುತ್ಯ ಕೋಪನ್‌ಹೆಗೆನ್‌ನ ರೋಸ್ಕಿಲ್ಡೆಯಲ್ಲಿ ನಡೆಯುತ್ತಿರುವ ರೋಸ್ಕಿಲ್ಡೆ ಉತ್ಸವದಲ್ಲಿ ಮಂಗಳವಾರ ಭಾಗವಹಿಸಿದ್ದ ಯುವತಿಯೊಬ್ಬರು ನೃತ್ಯ ಪ್ರದರ್ಶಿಸಿದರು. ಈ ಉತ್ಸವವು ಜೂನ್ 27ರಂದು ಆರಂಭವಾಗಿದ್ದು, ಜುಲೈ 4ರವರೆಗೆ ನಡೆಯಲಿದೆ                   – ಎಎಫ್‌ಪಿ ಚಿತ್ರ

ನೃತ್ಯ

 ರಿಯಾಲಿಟಿ ಟಿವಿ ಶೋ ‘ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌’ ಗೆದ್ದ ಅರುಣಾಚಲ ಪ್ರದೇಶ ಮೂಲದ ಮಾಣಿಕ್‌ ಪಾಲ್‌ (ಬಲಬದಿ) ಮುಂಬೈನಲ್ಲಿ ಶನಿವಾರ ಪ್ರಶಸ್ತಿ ಸ್ವೀಕರಿಸಿದರು. ಚಿತ್ರದಲ್ಲಿ (ಎಡದಿಂದ) ಬಾಲಿವುಡ್‌ ನಟಿ ಮಲೈಕಾ ಅರೋರಾ, ನಿರ್ಮಾಪಕ ಕರಣ್‌ ಜೋಹರ್‌ ಮತ್ತು ಕಿರಣ್‌ ಖೇರ್‌ ಇದ್ದಾರೆ  -ಪಿಟಿಐ ಚಿತ್ರ

ಪ್ರತಿಭೆ

ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಶ್ರದ್ಧಾ ನೃತ್ಯಾರ್ಣವ 2015’ ಕಾರ್ಯಕ್ರಮದಲ್ಲಿ ಶ್ರದ್ಧಾ ನೃತ್ಯ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಭರತನಾಟ್ಯ ಮನಸೂರೆಗೊಳಿಸಿತು        -ಪ್ರಜಾವಾಣಿ ಚಿತ್ರ

ನೃತ್ಯ ವೈಭವ

ಬೆಂಗಳೂರಿನ ಸೇವಾ ಸದನದಲ್ಲಿ ಅಷ್ಠಭಾವಿಕಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಧಿಕಾ ಶೆಟ್ಟಿ ಮತ್ತು ಶುಭಾಮಣಿ ಭರತನಾಟ್ಯ ಪ್ರದರ್ಶಿಸಿದರು.  ಪ್ರಜಾವಾಣಿ ಚಿತ್ರ

‌ನಾಟ್ಯ

ಇಂಡೊನೇಷ್ಯಾದ ಬಾಲಿಯ ನಗರದಲ್ಲಿ ನಡೆಯತ್ತಿರುವ 37ನೇ ಬಾಲಿ ಕಲಾ ಉತ್ಸವದ ವೇಳೆ ಬುಧವಾರ ಕಲಾವಿದೆಯೊಬ್ಬರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಈ ಕಲಾ ಉತ್ಸವವು ಇಡೀ ತಿಂಗಳು ನಡೆಯಲಿದ್ದು, ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತಗಳು ಪ್ರದರ್ಶನಗೊಳ್ಳಲಿವೆ–  ಎಎಫ್‌ಪಿ ಚಿತ್ರ

ನೃತ್ಯ ಭಂಗಿ

ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಹೊಸಕೋಟೆಯ ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಮಂಗಳವಾರ ಅತುಲ್‌ ಪೇಠೆ ನಿರ್ದೇಶನದ ‘ಸತ್ಯಶೋಧಕ’ ನಾಟಕ ಪ್ರದರ್ಶನ ಏರ್ಪಡಿಸಿತ್ತು. ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಚಿಂತನೆಯ ಈ ಕ್ರಾಂತಿಕಾರಿ ನಾಟಕವನ್ನು ಹೆಗ್ಗೋಡಿನ ‘ಜನಮನದಾಟ’ ತಂಡದ ಕಲಾವಿದರು ಪ್ರದರ್ಶಿಸಿದರು         -–ಪ್ರಜಾವಾಣಿ ಚಿತ್ರ

‘ಸತ್ಯಶೋಧಕ’ ನಾಟಕ

ಲಂಡನ್‌ನಲ್ಲಿನ ಕಿಂಗ್ಸ್‌ ಕ್ರಾಸ್‌ ರೈಲು ನಿಲ್ದಾಣದ ಹೊರಭಾಗದಲ್ಲಿ ಟ್ಯೂಬ್‌ ಮೂಲಕ ಜಾರುವ ಮೋಜಿನಾಟ ಪ್ರಚಾರಕ್ಕಾಗಿ ನಿಯೋಜಿಸಿದ್ದ 100 ಮೀ ಎತ್ತರದ ಟ್ಯೂಬ್‌ನಲ್ಲಿ ಯುವತಿಯರಿಬ್ಬರು ಜಾರಿಬ್ಬರು ಜಾರಿ ಸಂಭ್ರಮಿಸಿದರು -ರಾಯಿಟರ್ಸ್‌ ಚಿತ್ರ

ಜಾರಿದ ಸುಂದರಿಯರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಯುವಸೌರಭ’ ಕಾರ್ಯಕ್ರಮದಲ್ಲಿ ಕಲಾವಿದೆ ಕೆ.ಪಿ.ರೋಹಿಣಿ ಅವರು ಭರತನಾಟ್ಯ ಪ್ರದರ್ಶಿಸಿದರು ಪ್ರ್ರಜಾವಾಣಿ ಚಿತ್ರ

ನಾಟ್ಯ ಸೌರಭ

ಗುವಾಹಟಿಯಲ್ಲಿ ಸೋಮವಾರ ನಡೆದ ಫ್ಯಾಷನ್ ಶೋನಲ್ಲಿ ರೂಪದರ್ಶಿಯೊಬ್ಬರು ರ‍್ಯಾಂಪ್‌ ಮೇಲೆ ಹೆಜ್ಜೆಹಾಕಿದರು ಪಿಟಿಐ ಚಿತ್ರ

ಹೆಜ್ಜೆ ಮೇಲೆ ಹೆಜ್ಜೆ...

ಇಂಡೋನೇಷ್ಯಾದ ಬಾಲಿಯಲ್ಲಿ ಶನಿವಾರ ನಡೆದ ‘ಬಾಲಿ ಕಲಾ ಉತ್ಸವ’ದಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಯುವತಿಯರು ನೃತ್ಯ ಪ್ರದರ್ಶಿಸಿದರು. ಪ್ರತಿ ವರ್ಷ ಜೂನ್‌ 13ರಿಂದ ಜುಲೈ 12ರವರೆಗೆ ಈ ಉತ್ಸವವನ್ನು ಆಚರಿಸಲಾಗುತ್ತದೆ          -ಎಪಿ ಚಿತ್ರ

ನೃತ್ಯ ವೈಭವ

ನಗರದ ಎಡಿಎ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ‘ಶ್ರೀ ಕೃಷ್ಣ ಸಂಧಾನ’ ನಾಟಕ ಪ್ರದರ್ಶಿಸಿದರು      -ಪ್ರಜಾವಾಣಿ ಚಿತ್ರ

ನಾಟಕ ಪ್ರದರ್ಶನ

ನಾಟ್ಯಾಂತರಂಗ ಸಂಸ್ಥೆ ಮಲ್ಲೇಶ್ವರದ ಸೇವಾ ಸದನದಲ್ಲಿ ಗುರುವಾರ ಆಯೋಜಿಸಿದ್ದ ‘ನೃತ್ಯಾರ್ಪಣ’ ಕಾರ್ಯಕ್ರಮದಲ್ಲಿ ನಿವೇದಿತಾ ನಿಖಿಲ್‌ ಭರತನಾಟ್ಯ ಪ್ರದರ್ಶಿಸಿದರು          -ಪ್ರಜಾವಾಣಿ ಚಿತ್ರ

ನೃತ್ಯಾರ್ಪಣ

ಬೆಂಗಳೂರಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ಗೌಡ ಅವರು ತಮ್ಮ ಅಭಿನಯದ ‘ಜಾಗ್ವಾರ್‌’ ಚಿತ್ರ ಕುರಿತು ಮಾತನಾಡಿದರು.           - ಕೆಪಿಎನ್ ಚಿತ್ರ

ಪತ್ರಿಕಾಗೋಷ್ಠಿ

ಅಮೃತಾ ಕಲಾ ಮಂದಿರ ನಗರದ ಎಡಿಎ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ಎಸ್‌. ಅರ್ಚನಾ ಅವರು ಭರತನಾಟ್ಯ ಪ್ರಸ್ತುತಪಡಿಸಿದರು        -ಪ್ರಜಾವಾಣಿ ಚಿತ್ರ

ಭರತನಾಟ್ಯ

ಸ್ಪೇನ್‌ನ ಬಾಲೆರಿಕ್ ಮಲೋರ್ಕಾ ದ್ವೀಪದ ಕಾಲ್ವಿಯಾ ನಗರದಲ್ಲಿರುವ ಮಗಾಲ್ಫ್ ರೆಸಾರ್ಟ್‌ನಲ್ಲಿ ಬುಧವಾರ ಪ್ರವಾಸಿಗರು ಕ್ಯಾಮೆರಾಗೆ ನೀಡಿದ ಮಾದಕ ಭಂಗಿ. ಮಗಾಲ್ಫ್ ರೆಸಾರ್ಟ್ ಮಾದಕ ದ್ರವ್ಯ ವ್ಯಸನಿಗಳು ಮತ್ತು ಕುಡಿದು ಅಸಭ್ಯವಾಗಿ ವರ್ತಿಸುವ ವಿದೇಶಿ ಪ್ರವಾಸಿಗರಿಂದ ಕುಖ್ಯಾತವಾಗಿದೆ. ಮಲೋರ್ಕಾ ಪಾಲಿಕೆ ತರಲು ಹೊರಟಿರುವ ಹೊಸ ನಿಯಮಾವಳಿಗಳು ಇದಕ್ಕೆ ಕಡಿವಾಣ ಹಾಕಬಹುದು ಎಂದು ಅಲ್ಲಿನ ಜನ ಆಶಿಸುತ್ತಿದ್ದಾರೆ  - ಎಪಿ ಚಿತ್ರ

ಮತ್ತೇರಿದ ಮೇಲೆ

ನಗರದ ಉದಯಭಾನು ಕಲಾಸಂಘದಲ್ಲಿ  ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಸಿರಿಕಲಾ ಮೇಳದ ಕಲಾವಿದರು ಪ್ರದರ್ಶಿಸಿದ, ಅರ್ಪಿತಾ ಹೆಗಡೆ ರಚನೆಯ ಆಕರ್ಷಕ ‘ರಾಧಾಂತರಂಗ  ಯುಗಳ ಯಕ್ಷಗಾನ ಕಾರ್ಯಕ್ರಮ ಪ್ರೇಕ್ಷಕರನ್ನು ಸೆಳೆಯಿತು               ಪ್ರಜಾವಾಣಿ ಚಿತ್ರ ಚಂದ್ರಹಾಸ ಕೋಟೆಕಾರ್

ಯಕ್ಷ ವೈಭವ

ಬೆಂಗಳೂರಿನ ಸೇವಾಸದನದಲ್ಲಿ ಶನಿವಾರ ಕ್ರಿಯೇಟಿವ್‌ ಥಿಯೇಟರ್‌ ತಂಡದ ಕಲಾವಿದರು ‘ಮೂಗ್‌ ಮಸಾಲ’ ನಾಟಕ ಪ್ರದರ್ಶಿಸಿದರು                  /ಪ್ರಜಾವಾಣಿ ಚಿತ್ರ

ನಾಟಕ ಪ್ರದರ್ಶನ

ಸಾಯಿ ಆರ್ಟ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಬೆಂಗಳೂರಿನ ರಂಗೋಲಿ ಮೆಟ್ರೊ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಾಯಿ ನೃತ್ಯೋತ್ಸವ–73’ ಕಾರ್ಯಕ್ರಮದಲ್ಲಿ ಅನೀಶ್‌ ರಾಘವನ್‌ ಹಾಗೂ ಸ್ವಾತಿ ರಾಘವನ್‌ ಒಡಿಸ್ಸಿ ನೃತ್ಯ ಪ್ರದರ್ಶಿಸಿದರು            –ಪ್ರಜಾವಾಣಿ ಚಿತ್ರ

ಜುಗಲ್‌ಬಂದಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಭೈರುಂಬೆಯಲ್ಲಿ ಭಾನುವಾರ ರಾತ್ರಿ ನಡೆದ ‘ಮೋಹ ಮೇನಕೆ’ ಯಕ್ಷಗಾನ ಪ್ರದರ್ಶನದಲ್ಲಿ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯ ಹಾಗೂ ತಂಡದ ಯಕ್ಷಗಾನ ಭಂಗಿ- ಪ್ರಜಾವಾಣಿ ಚಿತ್ರ

ಮೇನಕೆ ವಯ್ಯಾರ..

ಸೈಬೀರಿಯಾದ ಕೇಂದ್ರೀಯ ಕ್ರಾಸ್ನೋಯಾರ್ಸ್ಕ್‌ ಪ್ರಾಂತ್ಯದಲ್ಲಿ ಸೋಮವಾರ ನಡೆದ ‘ಸಿಟಿ ಆಫ್‌ ಫ್ಯೂಚರ್‌’ ಉತ್ಸವದ ವರ್ಣಮಯ ನೋಟ. ಈ ಸಂದರ್ಭ ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು- ರಾಯಿಟರ್ಸ್‌ ಚಿತ್ರ

ಜನಪದ ಬಣ್ಣ

ಇತ್ತೀಚೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ‘ವಿಜಯರಂಗ ಮಕ್ಕಳ ಕಲಾ ಉತ್ಸವ’ದಲ್ಲಿ ಸುಬ್ರಾಯ ಭಟ್ಟ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಅಳತೆ ಬಲ್ಲವ ಅರಿತವನಲ್ಲವೇ?’ ಎಂಬ ಇಂಗ್ಲಿಷ್‌ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು

ಮಕ್ಕಳ ನಾಟಕ ಪ್ರದರ್ಶನ

ಚಿತ್ಕಲಾ ಸ್ಕೂಲ್‌ ಆಫ್‌ ಡಾನ್ಸ್‌ ಬೆಂಗಳೂರು ನಗರದ ಎಡಿಎ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ನೃತ್ಯಾಭಿವಂದನೆ ಕಾರ್ಯಕ್ರಮದಲ್ಲಿ ನಿತ್ಯಾ ಶಿಕಾರ್‌ಪುರ್‌ ಭರತನಾಟ್ಯ ಪ್ರದರ್ಶಿಸಿದರು - ಪ್ರಜಾವಾಣಿ ಚಿತ್ರ

ಭರತನಾಟ್ಯ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ರಂಗಮಂಟಪ ಆಶ್ರಯದಲ್ಲಿ ‘ನಾಟಕ ವರ್ಷ ಮೈಸೂರು– 2015’ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಕೆ.ವೈ. ನಾರಾಯಣಸ್ವಾಮಿ ರಚಿಸಿದ ‘ಅನಭಿಜ್ಞ ಶಾಕುಂತಲ’ ನಾಟಕ ಪ್ರದರ್ಶನ ನಡೆಯಿತು. ಪ್ರಕಾಶ್‌ ಪಿ. ಶೆಟ್ಟಿ ಅವರು ನಿರ್ದೇಶಿಸಿದ ಈ ನಾಟಕ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು              -ಪ್ರಜಾವಾಣಿ ಚಿತ್ರ

ಅನಭಿಜ್ಞ ಶಾಕುಂತಲ

ಸಂಗೀತ ನಾಟಕ ಅಕಾಡೆಮಿ ಗುರುವಾರ ಧಾರವಾಡದಲ್ಲಿ ಏರ್ಪಡಿಸಿದ್ದ ಸುರಸಂಗಮ ಕಾರ್ಯಕ್ರಮದಲ್ಲಿ ಮಿಜೊರಾಂನ ಕಲಾವಿದರು ನೃತ್ಯ ಪ್ರದರ್ಶಿಸಿದರು.                  /ಕೆಪಿಎನ್‌ ಚಿತ್ರ

ಮಿಜೋರಾಂ ಮೋಡಿ

ಮಣಿಪಾಲ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಂಯೋಜನಾ ಸಮಿತಿಯ ವತಿಯಿಂದ ಮಣಿಪಾಲದ ಪೊಲೀಸ್ ಠಾಣೆಯ ಹಿಂಭಾಗದ ಬಯಲು ರಂಗಮಂದಿರದಲ್ಲಿ ಡಾ.ಹರೀಶ್ ಜೋಷಿಯವರ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ದೊಂದಿಬೆಳಕಿನ ‘ಮಹಿಷಮರ್ಧಿನಿ’ ಎಂಬ ತೆಂಕು ತಿಟ್ಟಿನ ಯಕ್ಷಗಾನ ಪ್ರದರ್ಶನ ಶನಿವಾರ ನಡೆಯಿತು. (ಹಿರಿಯಡಕ ಚಿತ್ರ)

ಯಕ್ಷಗಾನ ಪ್ರದರ್ಶನ

ಅರುಣಾಚಲ ಪ್ರದೇಶದಲ್ಲಿ ಬುದ್ಧ ಮಹೋತ್ಸವದ ನಂತರ ಪ್ರತಿ ವರ್ಷ ಮೇ ತಿಂಗಳಲ್ಲಿ ಪ್ರವಾಸೋದ್ಯಮ ಹಬ್ಬವಾಗಿ ನಡೆಸುವ ತವಾಂಗ್‌ ಉತ್ಸವದಲ್ಲಿ ಪ್ರದರ್ಶನ ನೀಡಿದ ಟಿಬೆಟ್‌ ಪ್ರದರ್ಶನ ಕಲಾ ಸಂಸ್ಥೆಯ ವಿದ್ಯಾರ್ಥಿಗಳು. ಈ ಉತ್ಸವವನ್ನು 2012ರಿಂದ ಪ್ರಾರಂಭಿಸಲಾಗಿದೆ - ಪಿಟಿಐ ಚಿತ್ರ

ಕಲಾ ಪ್ರದರ್ಶನ

ಮಥುರಾದಲ್ಲಿ ನಡೆದ ಶ್ರೀ ಕೃಷ್ಣ ಮಹೋತ್ಸವದಲ್ಲಿ ನಟಿ ಹಾಗೂ ಸಂಸದೆ ಹೇಮಾಮಾಲಿನಿ ನಟಿ ಶ್ರದ್ಧಾ ಕಪೂರ್‌ ಜೊತೆ ನರ್ತಿಸಿದರು        –ಪಿಟಿಐ ಚಿತ್ರ

ಹಳೆ ಬೇರು ಹೊಸ ಚಿಗುರು!

ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್ಸ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯವನಿಕ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ವೇತಾ ಕುಮಾರ್‌ ಕಶೆಟ್ಟಿ ಕೂಚಿಪುಡಿ ನೃತ್ಯ ಪ್ರದರ್ಶಿಸಿದರು         –ಪ್ರಜಾವಾಣಿ ಚಿತ್ರ

ಕೂಚಿಪುಡಿ ನೃತ್ಯ

ಮ್ಯಾಡ್ರಿಡ್‌ನಲ್ಲಿ ನಡೆದ ಸಿರ್ಕ್‌ ದು ಸೋಲೀಲ್‌ ಕೂಝಾ ಪ್ರದರ್ಶನದಲ್ಲಿ ಕಲಾವಿದರು ಮೈನವಿರೇಳಿಸುವ ನೃತ್ಯವನ್ನು ಪ್ರಸ್ತುತಪಡಿಸಿದರು. ಜಗತ್ತಿನ ಅತಿ ದೊಡ್ಡದೆನ್ನಲಾದ ಸಿರ್ಕ್‌ ದು ಸೋಲೀಲ್‌ ರಂಗ ನಿರ್ಮಾಣ ಕಂಪೆನಿಯನ್ನು ಅದರ ಸಂಸ್ಥಾಪಕ ಗೈ ಲಾಲಿಬರ್ಟ್‌ ಅವರು ₨15 ಶತಕೋಟಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ‘ಗ್ಲೋಬ್‌ ಅಂಡ್‌ ಮೇಲ್‌’ ವರದಿ ಮಾಡಿದೆ      ರಾಯಿಟರ್ಸ್‌ ಚಿತ್ರ

ಆಕೃತಿಯೋ ಪ್ರತಿಕೃತಿಯೋ -ಕೂಝಾ ಕುಣಿತ...

ನಗರದ ಭಾರತೀಯ ವಿದ್ಯಾ ಭವನದಲ್ಲಿ ಶನಿವಾರ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದೆ ಅನುಪಮಾ ಭೂಷಣ್‌ ಅವರು ಕೂಚುಪುಡಿ ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ

ಭರತನಾಟ್ಯ

ಹಾವೇರಿಯ ತೇರುಬೀದಿ ಆಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಶನಿವಾರ ಆಂಜನೇಯನ ಜೊತೆಗೆ ಬಾಲ ಆಂಜನೇಯ ಕಾಣಿಸಿಕೊಂಡಿದ್ದು ಹೀಗೆ.

ಮೆರವಣಿಗೆ

ರಂಗ ನಿರಂತರ ಸಾಂಸ್ಕೃತಿಕ ಸಂಸ್ಥೆ ನಗರದ ಸಂಸ ಬಯಲು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಮಣಿಪಾಲದ ಅಭಿನಯ ಸಂಗಮ ಕಲಾವಿದರು ‘ಕರ್ಣಭಾರ’ ನಾಟಕ ಪ್ರದರ್ಶಿಸಿದರು - ಪ್ರಜಾವಾಣಿ ಚಿತ್ರ

ಕರ್ಣಭಾರ