ಕ್ರೀಡೆ
ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ ವೆಲ್ತ್‌ ಗೇಮ್ಸ್‌ನ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಸಿಂಗಾಪೂರದ ಹೋ ವಾ ತೋನ್‌ –ರಾಯಿಟರ್ಸ್‌ ಚಿತ್ರ

ಕಾಮನ್‌ ವೆಲ್ತ್‌ ಗೇಮ್ಸ್‌

ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್‌ ಆಟಗಾರ ಕಿದಂಬಿ ಶ್ರೀಕಾಂತ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡದರು –ಪಿಟಿಐ ಚಿತ್ರ

‘ಪದ್ಮಶ್ರೀ’ ಪ್ರದಾನ

ಹೋರಿ ಸಂಭ್ರಮ

  ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಮದುರೆಯಲ್ಲಿ ಸೋಮವಾರ ನಡೆದ ಜಲ್ಲಿಕಟ್ಟು ಉತ್ಸವದಲ್ಲಿ ಗ್ರಾಮಸ್ಥರು ಗೂಳಿ ಬೆದರಿಸುವ ಸಾಹಸ ಪ್ರದರ್ಶಿಸಿದರು. ಈ ವೇಳೆ ಯುವಕನೊಬ್ಬನನ್ನು ಗೂಳಿಯು ಕೋಡುಗಳಿಂದ ಎತ್ತಿಹಾಕಿತು. ಪಾಲಮೇಡುವಿನಲ್ಲಿ ನಡೆದ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.   –ರಾಯಿಟರ್ಸ್ ಚಿತ್ರ

ಯುವಕನನ್ನು ಬೆದರಿಸಿದ ಗೂಳಿ

ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘5ಕೆ’ ಮ್ಯಾರಥಾನ್‌ನಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ

‘5ಕೆ’ ಮ್ಯಾರಥಾನ್‌

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಪಂದ್ಯದ ಟಿಕೆಟ್‌ ಖರೀದಿಸಲು ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡನೇ ದ್ವಾರದ ಬಳಿಯ ಟಿಕೆಟ್‌ ಕೌಂಟರ್‌ ಮುಂದೆ ಕ್ರಿಕೆಟ್‌ ಪ್ರಿಯರು ಸಾಲಿನಲ್ಲಿ ನಿಂತಿದ್ದರು -ಪ್ರಜಾವಾಣಿ ಚಿತ್ರ/ ವಿಶ್ವನಾಥ ಸುವರ್ಣ

ಟಿಕೆಟ್‌ಗಾಗಿ ಸಾಲು...

ಬೌಲಿಂಗ್ ಅಭ್ಯಾಸದಲ್ಲಿ ರವೀಂದ್ರ ಜಡೇಜಾ

ಭಾರತ ಕ್ರಿಕೆಟ್‌ ತಂಡದ ತಾಲೀಮು

ಮೈಸೂರು ಜಿಲ್ಲೆಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜಾಂಬೂರಿ ಪ್ರಯುಕ್ತ ಶುಕ್ರವಾರ ನಡೆದ ಸಾಹಸ ಕ್ರೀಡಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಗ್ಗದ ನೆರವಿನಿಂದ ಮೇಲೇರಲು ಕಸರತ್ತು ನಡೆಸಿದರು – ಪ್ರಜಾವಾಣಿ ಚಿತ್ರ

ಜಾಂಬೂರಿ

ಕೊಹ್ಲಿ ಶತಕದ ಮಿಂಚು

ರಿಯೊ ಒಲಿಂಪಿಕ್ಸ್‌ನ ವನಿತೆಯರ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿದ್ದ ಸಾಕ್ಷಿ ಮಲಿಕ್ ಅವರು ಬುಧವಾರ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದಾಗ ಅವರ ತಂದೆ ಸುಬೀರ್ ಮಲಿಕ್ (ಎಡ) ಮತ್ತು ತಾಯಿ ಸುದೇಶ ಮಲಿಕ್ ಅವರು ಸಂತಸದಿಂದ ಬರಮಾಡಿಕೊಂಡರು –ಪಿಟಿಐ ಚಿತ್ರ

ಸಂತಸದ ಸ್ವಾಗತ

ಮಹಿಳಾ ಶಕ್ತಿ

ವ್ಯಂಗ್ಯ ಲೋಕ

ವ್ಯಂಗ್ಯ ಲೋಕ

ಒಲಿಂಪಿಕ್ಸ್‌ ಹಕ್ಕಿ...

ವ್ಯಂಗ್ಯ ಲೋಕ

ವ್ಯಂಗ್ಯ ಲೋಕ

14-8-2016 ಭಾನುವಾರ

ರಿಯೊ ಒಲಿಂಪಿಕ್‌ ಕೂಟದಲ್ಲಿ ಭಾನುವಾರ ನಡೆದ ಪುರುಷರ ಟ್ರ್ಯಾಪ್‌ ಶೂಟಿಂಗ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಮಾನವ್‌ಜಿತ್‌ ಸಿಂಗ್‌ ಸಂಧು ಗುರಿ ಹಿಡಿದ ಕ್ಷಣ –ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್‌

ರಿಯೊ ಒಲಿಂಪಿಕ್‌ ಕೂಟದಲ್ಲಿ ಭಾನುವಾರ ನಡೆದ ಪುರುಷರ ಟ್ರ್ಯಾಪ್‌ ಶೂಟಿಂಗ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಮಾನವ್‌ಜಿತ್‌ ಸಿಂಗ್‌ ಸಂಧು ಗುರಿ ಹಿಡಿದ ಕ್ಷಣ –ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್

ರಿಯೊ ಡಿ ಜನೈರೊದ ಕ್ಯಾರಿಯೊಕೊ ಅರೆನಾದಲ್ಲಿ ನಡೆದ ಮಹಿಳೆಯರ ವೈಯಕ್ತಿಕ ಇಪಿ ಫೆನ್ಸಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚೀನಾದ ಸುನ್‌ ಯುಜೀ (ಎಡ) ಮತ್ತು ದಕ್ಷಿಣ ಕೊರಿಯಾದ ಕಾಂಗ್‌ ಯಂಗ್‌ ಮಿ ಅವರ ಪೈಪೋಟಿಯ ಕ್ಷಣ –ಎಎಫ್‌ಪಿ ಚಿತ್ರ

ಪೈಪೋಟಿಯ ಕ್ಷಣ

ಗುರುಪೂರ್ಣಿಮೆಯ ಅಂಗವಾಗಿ ಬುಧವಾರ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕೋಚ್ ರಮಾಕಾಂತ್ ಅಚ್ಚೆಕರ್ ಅವರಿಂದ ಆಶೀರ್ವಾದ ಪಡೆದರು ಪಿಟಿಐ ಚಿತ್ರ

ಗುರುಪೂರ್ಣಿಮೆ

ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಆರ್‌ಸಿಬಿ ಅಭಿಮಾನಿಯೊಬ್ಬ ತೊಟ್ಟಿದ್ದ ವಿಭಿನ್ನ ಶೈಲಿಯ ವಸ್ತ್ರ. –ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್

‘ಅಭಿಮಾನಿಯ ವಿಭಿನ್ನ ವಸ್ತ್ರ’

ಮಂಗಳವಾರ ನಡೆಯಲಿರುವ ಐಪಿಎಲ್ ಪಂದ್ಯಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ 'ಆರ್‌ಸಿಬಿ' ತಂಡದ ನಾಯಕ ಕೊಹ್ಲಿ. -ಪ್ರಜಾವಾಣಿ ಚಿತ್ರ

ಅಭ್ಯಾಸದಲ್ಲಿ ನಿರತರಾದ 'ಆರ್‌ಸಿಬಿ' ತಂಡದ ಆಟಗಾರರು.

ಕರ್ನಾಟಕ ಕ್ರಿಕೆಟ್‌ ತಂಡದ ನಾಯಕ ಆರ್‌. ವಿನಯ್‌ ಕುಮಾರ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಸಚಿವೆ ಉಮಾಶ್ರೀ ಮತ್ತು ವಿನಯ್‌ ಅವರ ಪತ್ನಿ ರಿಚಾ ಅವರನ್ನೂ ಚಿತ್ರದಲ್ಲಿ ಕಾಣಬಹುದು -ಪ್ರಜಾವಾಣಿ ಚಿತ್ರ

ಸಾಧಕನಿಗೆ ಸನ್ಮಾನ

ಆಫ್ಘಾನಿಸ್ತಾನದ ಐದು ವರ್ಷದ ಬಾಲಕ ಮುರ್ತಜಾ ಅಹಮದಿಗೆ ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಕಳಿಸಿದ ಜರ್ಸಿಯನ್ನು ತೊಟ್ಟು ಫುಟ್‌ಬಾಲ್ ಆಡಿದ. ಭಯೋತ್ಪಾದಕ ದಾಳಿಯಿಂದ ನಲುಗಿದ್ದ ಘಜನಿ ಪ್ರದೇಶದ ಈ ಬಾಲಕನಿಗೆ ಯುನಿಸೆಫ್‌ ಮೂಲಕ ಮೆಸ್ಸಿ ಕಾಣಿಕೆ ಕಳುಹಿಸಿದ್ದಾರೆ. ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಮುಂದೆ ಪುಟಾಣಿಯು ತನ್ನ ಫುಟ್‌ಬಾಲ್ ಕೌಶಲ ತೋರಿದ್ದು ಹೀಗೆ. -ಎಎಫ್‌ಪಿ ಚಿತ್ರ

ಮೆಸ್ಸಿ ಕಳಿಸಿದ ಜೆರ್ಸಿ

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ವೇಳೆ ಶನಿವಾರ ಅಶ್ವಿನಿ ಪೊನ್ನಪ್ಪ (ಎಡ), ಜ್ವಾಲಾ ಗುಟ್ಟಾ (ಬಲ) ಅಭಿಮಾನಿಗಳ ಜೊತೆ ಸ್ವಂತಿ ತೆಗೆದುಕೊಂಡ ಕ್ಷಣ  –ಪಿಟಿಐ ಚಿತ್ರ

ಸ್ವಂತಿ ಸಂಭ್ರಮ...

ಐಪಿಎಲ್‌ ತಂಡ ಗುಜರಾತ್‌ ಲಯನ್ಸ್‌ ಪೋಷಾಕನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ ನಾಯಕ ಸುರೇಶ್‌ ರೈನಾ

ಲಯನ್ಸ್‌ ಪೋಷಾಕು...

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕೇರಳ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ ಗಳಿಸಿ ಕರ್ನಾಟಕದ ಗೆಲುವಿಗೆ ಕಾರಣರಾದ ಶ್ರೇಯಸ್‌ ಗೋಪಾಲ್‌ (ಮಧ್ಯ) ಸಹ ಆಟಗಾರರೊಂದಿಗೆ ಖುಷಿಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ ಕ್ಷಣ -–ಪ್ರಜಾವಾಣಿ ಚಿತ್ರ

ಪೆವಿಲಿಯನ್‌ನತ್ತ ಹೆಜ್ಜೆ

ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಚ್ ಅವರು ಬರ್ಕ್ಲೆಸ್ ಟೆನಿಸ್ ವಿಶ್ವ ಟೂರ್‌ ಫೈನಲ್‌ನಲ್ಲಿ ಸೋಮವಾರ ಪ್ರಶಸ್ತಿ ಗೆದ್ದರು. ನೊವಾಕ್ 6–1, 6–1 ರಿಂದ ಜಪಾನ್‌ನ ಕೀ ನಿಶಿಕೊರಿ ಅವರನ್ನು ಮಣಿಸಿದರು.

ಪ್ರಶಸ್ತಿಗೆ ನೊವಾಕ್ ಮುತ್ತು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಭ್ಯಾಸ ಮುಗಿಸಿದ ಬಳಿಕ ಪುಟ್ಟ ಅಭಿಮಾನಿಗೆ ಕೈಕುಲುಕಿದ ಕ್ಷಣ –ಪ್ರಜಾವಾಣಿ ಚಿತ್ರ

ಅಭಿಮಾನಿಗಳ ಪ್ರೀತಿ...

ಮೈಸೂರಿನ ಚಾಮುಂಡಿ ವಿಹಾರದ ಟರ್ಫ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಕಲ್ಲಿಕೋಟೆ ವಿ.ವಿ ತಂಡದ ಟಿ.ಜೆ. ಶಿಜಿ (ಎಡಬದಿ) ಅವರಿಂದ ಚೆಂಡನ್ನು ಕಸಿದುಕೊಳ್ಳಲು ವೆಲ್ಲೂರಿನ ತಿರುವಳ್ಳವರ್‌ ವಿ.ವಿ ತಂಡದ ಪಿ. ಅನುಸೂಯಾ ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ

ಮಹಿಳಾ ಹಾಕಿ

ಜಪಾನ್‌ ರಾಜಧಾನಿ ಟೋಕಿಯೊದ ಉದ್ಯಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಬೀದಿ ರಗ್ಬಿ’ ಆಟದಲ್ಲಿ ಲಂಡನ್‌ನ ಮೇಯರ್‌್ ಬೋರಿಸ್‌ ಜಾನ್ಸನ್‌ 10 ವರ್ಷದ ಬಾಲಕನಿಗೆ ಡಿಕ್ಕಿಯಾಗಿ ಇಬ್ಬರೂ ಎಡವಿಬಿದ್ದ ದೃಶ್ಯಗಳಿವು. ಜಪಾನ್‌ನಲ್ಲಿ 2019ರಲ್ಲಿ ನಡೆಯಲಿರುವ  ‘ರಗ್ಬಿ ವಿಶ್ವಕಪ್‌ ’ಗೆ ಪೂರ್ವಭಾವಿಯಾಗಿ  ಈ ಆಟ ಆಯೋಜಿಸಲಾಗಿತ್ತು.             -ರಾಯಿಟರ್ಸ್‌ ಚಿತ್ರ

ಇದೇನಿದು ಮಕ್ಕಳಾಟ?

ಕರ್ನಾಟಕದ ಅಥ್ಲೀಟ್‌ ಎಂ.ಆರ್‌ ಪೂವಮ್ಮ ಅವರಿಗೆ ನವದೆಹಲಿಯಲ್ಲಿ ಮಂಗಳವಾರ ಕ್ರೀಡಾ ಸಚಿವ ಸರ್ವಾನಂದ ಸೊನೊವಾಲ್‌ ಅವರು 2015ರ ಸಾಲಿನ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.-ಪಿಟಿಐ ಚಿತ್ರ

ಪೂವಮ್ಮಗೆ ಅರ್ಜುನ ಪ್ರಶಸ್ತಿ

ಬ್ಯಾಂಕಾಕ್‌ನಲ್ಲಿರುವ ಪ್ರಾಣಿ ಸಂಗ್ರಹಾಲಯದಲ್ಲಿ ಏರ್ಪಡಿಸಲಾಗುವ ಕಿಕ್‌ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಎರಡು ಒರಾಂಗುಟಾನ್‌ಗಳು ಪರಸ್ಪರ ಕಾದಾಟದಲ್ಲಿ ತೊಡಗಿದ್ದ ದೃಶ್ಯ. ಸ್ಥಳೀಯರು ಅಲ್ಲದೇ ವಿದೇಶಿಗರು ಈ ಸ್ಪರ್ಧೆ ವೀಕ್ಷಿಸಲು ಬರುತ್ತಾರೆ.  ಎಎಫ್‌ಪಿ ಚಿತ್ರ

ಒರಾಂಗುಟಾನ್‌ ಕಿಕ್‌ಬಾಕ್ಸಿಂಗ್‌

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರು ಶುಕ್ರವಾರ ತಮ್ಮ ಕೋಚ್‌ ರಮಾಕಾಂತ್‌ ಆಚ್ರೇಕರ್‌ ಅವರಿಗೆ ನಮಸ್ಕರಿಸಿದ ಕ್ಷಣ. ಗುರು ಪೂರ್ಣಿಮೆಯ ಸಲುವಾಗಿ ಅವರು ಮುಂಬೈನಲ್ಲಿ ಗುರುವನ್ನು ಭೇಟಿಯಾಗಿದ್ದರು. ಸಚಿನ್‌ 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

ಗುರುವಿಗೆ ನಮನ

ಕಬಡ್ಡಿ, ಕಬಡ್ಡಿ, ಕಬಡ್ಡಿ.... ಜೈಪುರದಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಪಟ್ನಾ ಪೈರೇಟ್ಸ್‌ ಎದುರಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡದ ಸೋನು ನರ್ವಾಲ್‌ ಪಾಯಿಂಟ್‌ ಗಳಿಸಿ ಹಿಂತಿರುಗಲು ಯತ್ನಿಸಿದ ಕ್ಷಣ

ಕಬಡ್ಡಿ, ಕಬಡ್ಡಿ, ಕಬಡ್ಡಿ....

ರಾಜ್ಯ ಕ್ರಿಕೆಟ್‌ ತಂಡದ ಆಟಗಾರ ಉದಿತ್‌ ಪಟೇಲ್ ಹಾಗೂ ನಿಧಿ ಅವರ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಶನಿವಾರ ನಡೆಯಿತು. ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್‌ (ಎಡಬದಿ) ಹಾಗೂ ಅವರ ಪತ್ನಿ ತರೂಲ್‌ ಪಟೇಲ್‌ ಇದ್ದರು –ಪ್ರಜಾವಾಣಿ ಚಿತ್ರ

ಆರತಕ್ಷತೆ ಸಮಯ

ಬೆಂಗಳೂರಿನಲ್ಲಿ ಗುರುವಾರ ನಡೆದ ಗಾಲ್ಫ್‌ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದುಕೊಂಡಿರುವ ಶರ್ಮಿಳಾ ನಿಕೊಲೆಟ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ

ಗಾಲ್ಫ್‌

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಆಯೋಜಿಸಿದ್ದ ಕ್ರಿಕೆಟ್ ಮೇನಿಯಾ ಸ್ಪರ್ಧೆಯ ವಿಜೇತರಿಗೆ ಗುರುವಾರ ಬೆಂಗಳೂರಿನ ಕೆಎಎಸ್‌ ಅಧಿಕಾರಿಗಳ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಚಿತ್ರದಲ್ಲಿ (ಕುಳಿತವರಲ್ಲಿ ಎದುರಿನಿಂದ ಮೂರನೇ ಸಾಲು, ಎಡದಿಂದ ಬಲಕ್ಕೆ) ಕವಿ ಅಸಾದುಲ್ಲಾ ಬೇಗ್, ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್, ಚಿತ್ರನಟಿ ಮೈತ್ರೇಯಿ ಗೌಡ, ಪಿ. ನಂದಿನಿ (ಬಂಪರ್ ಪ್ರಶಸ್ತಿ ವಿಜೇತೆ), ಸಂಗೀತಗಾರ ಬಾಬು, ಪ್ರವೀಣ್ ದೇಶಪಾಂಡೆ (ಪ್ರಥಮ), ವಿಶ್ವನಾಥ್ ರಾಜು (ದ್ವಿತೀಯ), ಎ. ರಾಜಕಿರಣ್ ಮತ್ತು ಎಂ.ಎನ್. ಶಿವರಾಮನ್ (ತೃತೀಯ) ಇದ್ದಾರೆ. –ಪ್ರಜಾವಾಣಿ ಚಿತ್ರ

ವಿಜೇತರು

ರಫೆಲ್ ನಡಾಲ್ ಸ್ಟಟ್‌ಗರ್ಟ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಹುಲ್ಲಿನಂಕನದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನಡಾಲ್ 6–3, 6–4ರಿಂದ ಗೇಲ್ ಮೊನಫಿಸ್‌ ವಿರುದ್ಧ ಜಯ ಗಳಿಸಿದರು. 90 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್ ಎದುರಾಳಿಯನ್ನು ಸೋಲಿಸಿದರು. 29 ವರ್ಷ ವಯಸ್ಸಿನ ನಡಾಲ್ 66ನೇ ಟ್ರೋಫಿ ಗೆಲ್ಲುವ ಹಾದಿಯಲ್ಲಿದ್ದಾರೆ. ಅವರು ಇಲ್ಲಿಯವರೆಗೆ 13 ಬಾರಿ ಮೊನಫಿಸ್ ಅವರ ಎದುರು ಸೆಣಸಿದ್ದಾರೆ. ಅದರಲ್ಲಿ 11 ಬಾರಿ ಅವರು ಗೆಲುವು ಸಾಧಿಸಿದ್ದಾರೆ.

ಗೆಲುವಿನ ಸಂಭ್ರಮ

ಬೆಂಗಳೂರಿನಲ್ಲಿ ನಡೆದ ಲೂಯಿಸ್‌ ಫಿಲಿಪ್‌ ಕಪ್‌ ಗಾಲ್ಫ್‌ ಟೂರ್ನಿಯ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಚೆನ್ನೈನ ಕಾಲಿನ್‌ ಜೋಶಿ          – ಪ್ರಜಾವಾಣಿ ಚಿತ್ರ

ಫಿಲಿಪ್‌ ಕಪ್‌

ಬೆಂಗಳೂರಿನಲ್ಲಿ ಗುರುವಾರ ನಡೆದ ಪಿ ಆ್ಯಂಡ್‌ ಜಿ ಶಿಕ್ಷಾ ಸ್ಕೂಲ್‌ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಕಿರಿಯ ಆಟಗಾರನಿಗೆ ಬ್ಯಾಟಿಂಗ್‌ ಮಾಡುವುದನ್ನು ಹೇಳಿಕೊಟ್ಟ ಕ್ಷಣ ಪ್ರಜಾವಾಣಿ ಚಿತ್ರ

ಬ್ಯಾಟಿಂಗ್‌

ಭಾರತ ಫುಟ್‌ಬಾಲ್‌ ತಂಡದ ಆಟಗಾರರು ಮಂಗಳವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಕ್ಷಣ           -ಪ್ರಜಾವಾಣಿ ಚಿತ್ರ

ಭಾರತ ಫುಟ್‌ಬಾಲ್‌ ತಂಡ

ಭಾರತ ಕ್ರಿಕೆಟ್‌ ತಂಡದ ಆಟಗಾರ ರೋಹಿತ್‌ ಶರ್ಮಾ ಮತ್ತು ಗೆಳತಿ ರಿತಿಕಾ ಸಾಜ್ದೆ ನಡುವೆ ನಿಶ್ಚಿತಾರ್ಥ ಕಾರ್ಯಕ್ರಮ ಮುಂಬೈಯಲ್ಲಿ ನಡೆಯಿತು.

ಖುಷಿಯ ಕ್ಷಣ

ಹೋಗಿ ಬರಲೇ....ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಬುಧವಾರ ಸೋಲು ಕಂಡ ಸ್ಪೇನ್‌ನ ರಫೆಲ್‌ ನಡಾಲ್‌ ಅಭಿಮಾನಿಗಳತ್ತ ಕೈ ಬೀಸಿದ ಕ್ಷಣ

ಹೋಗಿ ಬರಲೇ....

ಐಪಿಎಲ್‌ನಲ್ಲಿ ಫೈನಲ್‌ ತಲುಪಿರುವ ಮುಂಬೈ ಇಂಡಿಯನ್ಸ್‌ ತಂಡದ ಆಟಗಾರರು ಶನಿವಾರ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಫುಟ್‌ಬಾಲ್‌ ಆಡಿದರು  ಪಿಟಿಐ ಚಿತ್ರ

ಅಭ್ಯಾಸದ ವೇಳೆ ಫುಟ್‌ಬಾಲ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕ್ರಿಸ್‌ ಗೇಲ್‌ (ಎಡ) ಮತ್ತು ನಾಯಕ ವಿರಾಟ್‌ ಕೊಹ್ಲಿ ಗುರುವಾರ ರಾಂಚಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣ ಪಿಟಿಐ ಚಿತ್ರಗಳು

ರಾಯಲ್‌ ಚಾಲೆಂಜರ್ಸ್‌...

ಇಂಗ್ಲೆಂಡ್‌ ಎದುರಿನ ಕ್ರಿಕೆಟ್ ಸರಣಿ ಆಡಲು ನ್ಯೂಜಿಲೆಂಡ್ ತಂಡದ ಹ್ಯಾಮಿಷ್‌ ರುಧರ್‌ಫರ್ಡ್‌ ಲಾರ್ಡ್ಸ್‌್ ಅಂಗಳದಲ್ಲಿ ಫುಟ್‌ಬಾಲ್‌ ಆಡಿ ಅಭ್ಯಾಸ ನಡೆಸಿದರು

ಕ್ರಿಕೆಟಿಗಾರ ಫುಟ್‌ಬಾಲ್‌ ಅಭ್ಯಾಸ

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ಸಜ್ಜಾಗುತ್ತಿರುವ ಇಂಗ್ಲೆಂಡ್‌ ತಂಡದ ಆಟಗಾರ ಅಲಸ್ಟೇರ್‌ ಕುಕ್‌ ಲಾರ್ಡ್ಸ್‌ನಲ್ಲಿ ತಾಲೀಮು ನಡೆಸಿದರು ರಾಯಿಟರ್ಸ್‌ ಚಿತ್ರ

ಅಲಸ್ಟೇರ್‌ ಕುಕ್‌ ನ ತಾಲೀಮು

ಹೋದ ತಿಂಗಳು ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಕಿವುಡರ ಪ್ರಥಮ ಏಷ್ಯಾಕಪ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ‘ರನ್ನರ್ಸ್‌ ಅಪ್‌’ ಸ್ಥಾನ ಗಳಿಸಿರುವ ಭಾರತ ತಂಡದ ಆಟಗಾರರು ಸೋಮವಾರ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರನ್ನು ಭೇಟಿ ಮಾಡಿದರು ಪಿಟಿಐ ಚಿತ್ರ

‘ರನ್ನರ್ಸ್‌ ಅಪ್‌’ ಭಾರತ

ಭಾನುವಾರ ನಡೆದ ಪಂದ್ಯದ ವೇಳೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ತಮ್ಮ ಗೆಳತಿ ಅನುಷ್ಕಾ ಶರ್ಮಾ ಜತೆ ಕಾಣಿಸಿಕೊಂಡರು ಪ್ರಜಾವಾಣಿ ಚಿತ್ರ; ಆರ್‌. ಶ್ರೀಕಂಠ ಶರ್ಮಾ

ಗೆಳತಿ ಜತೆ

ವಿಶ್ವ 10 ಕೆ ಓಟದಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳಾದ ಅಂಜು ಬಾಬಿ ಜಾರ್ಜ್‌,ಮೇರಿ ಜೋಸ್‌ ಪೆರೆಕ್, ನಟ ರಾಹುಲ್‌ ಬೋಸ್‌ ಹಾಗೂ ಸಪ್ನಾ ದೇಸಾಯಿ ಅವರು ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪದಾರ್ಥಗಳನ್ನು ತಯಾರಿಸಿ ಖುಷಿ ಪಟ್ಟ ಕ್ಷಣ ಪ್ರಜಾವಾಣಿ ಚಿತ್ರ

ರುಚಿ–ರುಚಿ ಅಡುಗೆ..

ಬೆಂಗಳೂರಿನ ಎಎಸ್‌ಸಿ ಕಾಲೇಜ್‌ ಆ್ಯಂಡ್‌ ಸೆಂಟರ್‌ನ ಆಗರಮ್‌ ಈಕ್ಷೇಸ್ಟ್ರಿಯನ್‌ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ ರಾಷ್ಟ್ರೀಯ ಈಕ್ಷೇಸ್ಟ್ರಿಯನ್‌ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ವಿಜೇತರಾದವರು ಪದಕದೊಂದಿಗೆ ಪ್ರಜಾವಾಣಿ ಚಿತ್ರ; ನೇಹಾ ಬಿ.ಎಸ್‌

ಪದಕದೊಂದಿಗೆ

ಮಂಗಳವಾರ ಖುಲ್ನಾದ ಶೇಖ್‌ ಅಬು ನಸೇರ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆ ಹೊಂದಿರುವ ಪಾಕಿಸ್ತಾನದ ಆಟಗಾರರು ದೈಹಿಕ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಕ್ಷಣ ಎಎಫ್‌ಪಿ ಚಿತ್ರ

ದೈಹಿಕ ತಾಲೀಮಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡಗಳ ನಡುವಣ ಪಂದ್ಯವನ್ನು ಮಗಳೊಂದಿಗೆ ವೀಕ್ಷಿಸಿದ ದೋನಿ ಪತ್ನಿ ಸಾಕ್ಷಿ –ಪ್ರಜಾವಾಣಿ ಚಿತ್ರ

ಮಗಳೊಂದಿಗೆ...

. ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗ ದಲ್ಲಿ ಪ್ರಶಸ್ತಿ ಗೆದ್ದ ನೊವಾಕ್‌ ಜೊಕೊವಿಚ್‌ ಪ್ರಶಸ್ತಿಗೆ ಮುತ್ತಿಕ್ಕಿದ ಕ್ಷಣ –ಎಪಿ ಚಿತ್ರ

ಪ್ರಶಸ್ತಿಗೆ ಸಿಹಿ ಮುತ್ತು..

ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಆರ್‌ಸಿಬಿ ನಡುವಣ ಪಂದ್ಯ ವೀಕ್ಷಿಸಲು ಬಂದಿದ್ದ ವಿರಾಟ್‌ ಕೊಹ್ಲಿ ಗೆಳತಿ ಅನುಷ್ಕಾ ಶರ್ಮ ಪಿಟಿಐ ಚಿತ್ರ

ಗೆಳತಿಯ ನೋಟ

ಬ್ರಿಟನ್‌ನ ಮಾಜಿ ಟೆನಿಸ್‌ ಆಟಗಾರ ಟಿಮ್‌ ಹೆನ್ಮನ್‌ (ಎಡ) ಮತ್ತು ಕ್ರೊವೇಷ್ಯಾದ ಗೋರನ್‌ ಇವಾನಿಸೆವಿಚ್‌ ಅವರು ‘ರೋಡ್‌ ಟು ವಿಂಬಲ್ಡನ್‌’ ಕಾರ್ಯಕ್ರಮದ ಪ್ರಚಾರ ಕಾರ್ಯಕ್ಕಾಗಿ ಗುರುವಾರ ನವದೆಹಲಿಗೆ ಭೇಟಿ ನೀಡಿದ್ದರು      - ಪಿಟಿಐ ಚಿತ್ರ

‘ರೋಡ್‌ ಟು ವಿಂಬಲ್ಡನ್‌’

ಬುಧವಾರ ನಡೆದ ಸಮಾರಂಭದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ‘ಪದ್ಮ ಶ್ರೀ’ ಗೌರವ ಸ್ವೀಕರಿಸಿದರು ಪಿಟಿಐ/ಎಎಫ್‌ಪಿ ಚಿತ್ರ

.

ಹಾಕಿ ಆಟಗಾರ್ತಿ ಸಬಾ ಅಂಜುಮ್‌ ಅವರೂ ಇದೇ ವೇಳೆ ‘ಪದ್ಮ ಶ್ರೀ’ ಪುರಸ್ಕಾರ ಪಡೆದರು ಪಿಟಿಐ/ಎಎಫ್‌ಪಿ ಚಿತ್ರ

.

ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ತಮ್ಮ ಮಗಳೊಂದಿಗೆ ಮಂಗಳವಾರ ರಾಂಚಿಯ ವಿಮಾನ ನಿಲ್ದಾಣಕ್ಕೆ ಬಂದ ಕ್ಷಣ ಪಿಟಿಐ ಚಿತ್ರ

.

ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿಯೊಂದಿಗೆ ನೊವಾಕ್‌ ಜೊಕೊವಿಚ್‌

ಪ್ರಶಸ್ತಿಯೊಂದಿಗೆ

ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ ಅಭ್ಯಾಸ ನಡೆಸುವ ಮಕ್ಕಳು ಸೋಮವಾರ ಸಂಜೆ ಹಿರಿಯ ಅಥ್ಲೀಟ್‌ಗಳಾದ (ಎಡದಿಂದ) ಡಿ.ವೈ. ಬಿರಾದಾರ್‌, ಕೆನೆತ್‌ ಪೊವೆಲ್‌ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್‌ ಎನ್‌. ಲಿಂಗಪ್ಪ ಅವರನ್ನು ಅಭಿನಂದಿಸಿದರು ಪ್ರಜಾವಾಣಿ ಚಿತ್ರ

.

ಮಿಯಾಮಿ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಕೆನಡಾದ ವಾಸೆಕ್‌ ಪೊಸ್ಪಿಸಿಲ್‌ ಮತ್ತು ಅಮೆರಿಕದ ಜಾಕ್‌ ಸಾಕ್‌ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡ ಅಮೆರಿಕದ ಬಾಬ್‌ ಮತ್ತು ಮೈಕ್‌ ಬ್ರಯನ್‌ ಸಹೋದರರು ಸಂಭ್ರಮಿಸಿದ ರೀತಿ ಎಎಫ್‌ಪಿ ಚಿತ್ರ

.

ಬೆಂಗಳೂರಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಭಾರತೀಯ ಅಥ್ಲೆಟಿಕ್ ಅಕಾಡೆಮಿಯ (ಐಎಎ) ಉದ್ಘಾಟನೆ ಭಾನುವಾರ ನಡೆಯಿತು. ಇದು ಕೆಲ ಅಥ್ಲೀಟ್‌ಗಳೇ ಒಂದುಗೂಡಿ ಆರಂಭಿಸಿರುವ ಅಕಾಡೆಮಿ. ಈ ವೇಳೆ ಅಥ್ಲೀಟ್‌ಗಳು ಒಟ್ಟಾಗಿ ಕಾಣಿಸಿಕೊಂಡ ಕ್ಷಣ. ಎಡದಿಂದ; ಬಿ.ಎಲ್. ಭಾರತಿ, ಎಸ್‌.ಎಂ. ರೋಷನ್‌, ತರಬೇತುದಾರ ಸಿ. ಮುರಳೀಧರನ್‌, ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್‌ ರೀತ್‌ ಅಬ್ರಹಾಂ, ಪೂನಮ್‌ ಬೆಳ್ಳಿಯಪ್ಪ ಮತ್ತು ಬಿಂದು ರಾಣಿ –ಪ್ರಜಾವಾಣಿ ಚಿತ್ರ

.

ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದ ಸಿದ್ಧತೆಗಾಗಿ ಭಾರತ ತಂಡದ ಆಟಗಾರರು ಮಂಗಳವಾರ ಫುಟ್‌ಬಾಲ್ ಆಡಿದರು. ಕೊಹ್ಲಿ, ರೈನಾ ಇದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡ ಮಾರ್ಚ್‌ 19 ರಂದು ಬಾಂಗ್ಲಾದೇಶದ ಎದುರು ಆಡಲಿದೆ. –ಎಎಫ್‌ಪಿ ಚಿತ್ರ

ಭಾರತ ತಂಡದ ಅಭ್ಯಾಸ

ಅಡಿಲೇಡ್‌ ಓವಲ್‌ನಲ್ಲಿ ಭಾನುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಐರ್ಲೆಂಡ್‌ ತಂಡದ ಗ್ಯಾರಿ ವಿಲ್ಸನ್‌ ವಿಕೆಟ್ ಪಡೆದ ಪಾಕಿಸ್ತಾನದ ಆಟಗಾರರು ಸಂಭ್ರಮಿಸಿದರು. ಈ ಪಂದ್ಯದಲ್ಲಿ ಗ್ಯಾರಿ ವಿಲ್ಸನ್‌ 29 ರನ್‌ ಗಳಿಸಿದರು. ಪಾಕ್‌ ತಂಡದ ಸೊಹೈಲ್ ಖಾನ್‌ ವಿಲ್ಸನ್‌ ಅವರ ವಿಕೆಟ್‌ ಪಡೆದು ಸಂಭ್ರಮಿಸಿದರು.  ಎಎಫ್‌ಪಿ ಚಿತ್ರ

ವಿಕೆಟ್‌ ಪಡೆದ ಸಂಭ್ರಮ

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೌಥಾಂಪ್ಟನ್‌ ವಿರುದ್ಧ ಗೋಲು ಗಳಿಸಿದ ಚೆಲ್ಸಿ ತಂಡದ ಡಿಯಾಗೊ ಕೋಸ್ಟಾ ಅವರ ಸಂಭ್ರಮ. ಈ ಪಂದ್ಯ 1–1 ಗೋಲಿನ ಡ್ರಾದಲ್ಲಿ ಕೊನೆಗೊಂಡಿತು –ಎಎಫ್‌ಪಿ ಚಿತ್ರ

ಸಂಭ್ರಮ

ದುಬೈ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಅಗ್ನೀಸ್ಕಾ ರಡ್ವಾನ್‌ಸ್ಕಾ ವಿರುದ್ಧ 6–4, 6–2 ರಲ್ಲಿ ಜಯ ಪಡೆದ ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಆಟದ ವೈಖರಿ	 –ರಾಯಿಟರ್ಸ್‌ ಚಿತ್ರ

ಟೆನಿಸ್

ವೆಸ್ಟ್‌ಇಂಡೀಸ್‌ ತಂಡದ ದಿನೇಶ್‌ ರಾಮ್ದಿನ್‌ ಅವರ ವಿಕೆಟ್ ಪಡೆದ ಐರ್ಲೆಂಡ್‌ ತಂಡದ ಜಾರ್ಜ್‌ ಡಾಕ್‌ರೆಲ್‌ ಸಹ ಆಟಗಾರನೊಂದಿಗೆ ಸಂಭ್ರಮಿಸಿದ ಕ್ಷಣ

ಸಂಭ್ರಮದ ಕ್ಷಣ

ಡಬ್ಲ್ಯುಟಿಎ ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ರಷ್ಯಾದ ಎಲೆನಾ ವೆಸ್ನಿನಾ ಎದುರು 7–5, 6–1ರಲ್ಲಿ ಗೆಲುವು ದಾಖಲಿಸಿದ ಚೀನಾದ ಪೆಂಗ್‌ ಶುಯಿ ಚೆಂಡನ್ನು ಹಿಂತಿರುಗಿಸಿದ ಕ್ಷಣ	 –ರಾಯಿಟರ್ಸ್‌ ಚಿತ್ರ

ಚೆಂಡು ಹಿಂತಿರುಗಿಸಿದ ಕ್ಷಣ

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಬಾಕ್ಸರ್‌ ಎಂ.ಸಿ. ಮೇರಿಕೋಮ್‌ ತಮ್ಮ ಹೊಸ ಬಾಕ್ಸಿಂಗ್‌ ಅಕಾಡೆಮಿ ಉದ್ಘಾಟನೆಗೆ ಆಹ್ವಾನಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ನವದೆಹಲಿಯಲ್ಲಿ ಭೇಟಿಯಾದರು

ಭೇಟಿ

ಶೂಟರ್ ಗಗನ್‌ ನಾರಂಗ್‌ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್‌ ತಂಡದ ಕೋಚ್‌ ಪಿ. ಗೋಪಿಚಂದ್‌ ಹೈದರಾಬಾದ್‌ನಲ್ಲಿ ಮಂಗಳವಾರ ಎಫ್‌ಎನ್‌ಸಿಸಿ ಶೂಟಿಂಗ್‌ ಅಕಾಡೆಮಿಯನ್ನು ಉದ್ಘಾಟಿಸಿದರು. 	–ಪಿಟಿಐ ಚಿತ್ರ

ಶೂಟಿಂಗ್‌ ಅಕಾಡೆಮಿ

ಮಲೆನಾಡು ಮಿತ್ರವೃಂದದ ವತಿಯಿಂದ ಜಾಲಹಳ್ಳಿಯ ಎಚ್‌ಎಂಟಿ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಮಲೆನಾಡಿಗರ 6ನೇ ವರ್ಷದ ಕ್ರೀಡಾಕೂಟದಲ್ಲಿ ಮಕ್ಕಳು ಪಾಲ್ಗೊಂಡಿದ್ದರು

ಕ್ರೀಡಾಕೂಟ

ಉಡುಪಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪ್ರೌಢಶಾಲಾ ಬಾಲಕರ ಕ್ರೀಡಾಕೂಟದ 100 ಮೀಟರ್‌ ಓಟದಲ್ಲಿ ಸಂಖ್ಯೆ 1124, 1076, 1011 ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. 	ಪ್ರಜಾವಾಣಿ ಚಿತ್ರ

ಬಾಲಕರ ಕ್ರೀಡಾಕೂಟದ

ಬ್ರಿಟನ್ನಿನ ಟೆನಿಸ್ ಆಟಗಾರ ಆ್ಯಂಡಿ ಮರ್ರೆ ತಮ್ಮ ಗೆಳತಿ ಕಿಮ್‌ ಸೀರ್ಸ್‌ ಅವರೊಂದಿಗೆ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ (ಸಂಗ್ರಹ ಚಿತ್ರ)

ನಿಶ್ಚಿತಾರ್ಥ

ಬೆಂಗಳೂರಿನಲ್ಲಿ ನಡೆದ ಫೈವ್‌ ಸ್ಟಾರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ಆಟಗಾರರು ಟ್ರೋಫಿಯೊಂದಿಗೆ. (ಎಡದಿಂದ ಬಲಕ್ಕೆ) ಸುದೀಪ್‌ ಸುರೇಶ್‌, ನಿಖಿಲ್‌ ಶ್ರೀರಾಮ್‌, ಅಪೇಕ್ಷಾ ನಾಯಕ್‌ ಮತ್ತು ದೀಪ್ತಿ ರಮೇಶ್‌ 	–ಪ್ರಜಾವಾಣಿ ಚಿತ್ರ

ಪ್ರಶಸ್ತಿ...

ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ 150ನೇ ವರ್ಷಾಚರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರಾದ (ಎಡದಿಂದ) ಸೌರವ್‌ ಗಂಗೂಲಿ, ಚಂದು ಬೋರ್ಡೆ ಮತ್ತು ಸಲೀಮ್‌ ದುರಾನಿ ಅವರು ದೀಪ ಬೆಳಗಿಸುವ ಮೂಲಕ ವರ್ಷಾಚರಣೆಗೆ ಚಾಲನೆ ನೀಡಿದರು –ಪಿಟಿಐ ಚಿತ್ರ

ಚಾಲನೆ

ಕೋಲಾರದ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜೀವ್‌ಗಾಂಧಿ ಖೇಲ್‌ ಅಭಿಯಾನದ ಪ್ರಯುಕ್ತ ಸೋಮವಾರ ನಡೆದ ಜಿಲ್ಲಾ ಮಟ್ಟದ ಆಯ್ಕೆ ಟ್ರಯಲ್ಸ್‌ನ 100 ಮೀ. ಓಟದ ಸ್ಪರ್ಧೆಯಲ್ಲಿ ವಿನಯ್‌ ಮೊದಲು ಗುರಿ ಮುಟ್ಟಿದರು

100 ಮೀ. ಓಟದ ಸ್ಪರ್ಧೆ

ಇಟಲಿ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಮತ್ತು ಮ್ಯಾನೇಜರ್‌ ಮಾರ್ಕ್‌ ಮ್ಯಾಟರಜಿ ಶನಿವಾರ ಬೆಂಗಳೂರಿಗೆ ಬಂದಾಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು ಮ್ಯಾಟರಜಿ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಚೆನ್ನೈ ತಂಡದಲ್ಲಿ ಆಡಲಿದ್ದಾರೆ.	–ಪಿಟಿಐ ಚಿತ್ರ

ಅದ್ದೂರಿ ಸ್ವಾಗತ

ಗಮನ ಸೆಳೆದ ಬಾಣ-ಬಿರುಸುಗಳು ಆಗಸದಲ್ಲಿ ಚಿತ್ತಾರ ಮೂಡಿಸಿ, ಆಕರ್ಷಕ ನೃತ್ಯದೊಂದಿಗೆ ದಕ್ಷಿಣ ಕೊರಿಯದ ಇಂಚೆನ್ ನಲ್ಲಿ ಶುಕ್ರವಾರ 17ನೇ ಏಷ್ಯನ್ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. -ಎಪಿ ಚಿತ್ರ

ಏಷ್ಯನ್ ಕ್ರೀಡಾಕೂಟಕ್ಕೆ ಚಾಲನೆ

ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಮಂಡಳಿ ವತಿಯಿಂದ ಕೋರಮಂಗಲದ ರೆಡ್ಡಿ ಜನಸಂಘ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಮಹಿಳಾ ಕಬಡ್ಡಿ ಟೂರ್ನಿಯ ಫೈನಲ್‌ನಲ್ಲಿ ಬಸವನಗುಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ವಿರುದ್ಧ 35–9 ರಿಂದ ಗೆದ್ದ ಮೂಡಲಪಾಳ್ಯದ ಭೈರವೇಶ್ವರ ನಗರದ ಬಿಬಿಎಂಪಿಯ ಪದವಿ ಪೂರ್ವ ಕಾಲೇಜು ತಂಡ. ಎಡದಿಂದ (ನಿಂತಿರುವವರು) ರಾಗಿಣಿ, ಪುಷ್ಪಲತಾ, ಸುಜಾತಾ, ಹರ್ಷಿತಾ, ಕಿರಿಯ ಕೋಚ್‌ ಬೋರಯ್ಯ, ನಂದಿನಿ, ಗಗನಾ, ಪ್ರಿಯಾಂಕಾ, (ಕುಳಿತಿರುವವರು) ತಂಡದ ವ್ಯವಸ್ಥಾಪಕರಾದ ನಾಗಜ್ಯೋತಿ ಮತ್ತು ಪವಿತ್ರಾ, ಪ್ರಿನ್ಸಿಪಾಲ್‌ ಆರ್‌.ಈಶ್ವರಪ್ಪ, ತಂಡದ ಮಾರ್ಗದರ್ಶಕರಾದ ಮಾಜಿ ಅಂತರರಾಷ್ಟ್ರೀಯ ಆಟಗಾರ ಬಿ.ಸಿ.ರಮೇಶ್‌, ದೈಹಿಕ ಶಿಕ್ಷಕ ಕೆ.ಆರ್‌.ವೆಂಕಟರಮಣ, (ಮಂಡಿವೂರಿ ಕುಳಿತಿರುವವರು) ಕಾವ್ಯಾ, ರಕ್ಷಿತಾ, ಅಶ್ವಿನಿ, ಅಮೃತಾ, ಸಿಂಧು, ಶಬನಾ.

ಕಬಡ್ಡಿ ಟೂರ್ನಿ

ಪದವಿ ಪೂರ್ವ ಶಿಕ್ಷಣ ಮಂಡಳಿಯ ವತಿಯಿಂದ ನಡೆದ ಬೆಂಗಳೂರು ಜಿಲ್ಲಾ ಅಂತರ ಪದವಿ ಪೂರ್ವ ಕಾಲೇಜು ಮಟ್ಟದ ಮಹಿಳಾ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಬಿಷಪ್‌ ಕಾಟನ್‌ ಕಾಲೇಜು ತಂಡವನ್ನು 3–0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದ ಜ್ಯೋತಿ ನಿವಾಸ್‌ ಪದವಿ ಪೂರ್ವ ಕಾಲೇಜು ತಂಡ. ಎಡದಿಂದ (ನಿಂತಿರುವವರು) ಆರತಿ, ಅನನ್ಯ, ಆರ್‌.ಪೂಜಾ, ವಾಫಿ, ವರ್ಷಾ, ಪ್ರಮೋಧಿನಿ, ಎ.ಪೂಜಾ, ಜೀವಿತಾ, ರತ್ನಾ, ವೆನೆಸ್ಸಾ, ನಾಗನೇತ್ರ, (ಕುಳಿತ್ತಿರುವವರು) ದೈಹಿಕ ಶಿಕ್ಷಣ ನಿರ್ದೇಶಕ ಸಾಜನ್‌ ಜಾರ್ಜ್‌, ಪ್ರಿನ್ಸಿಪಾಲ್‌ ಲೂಯಿಸಾ ಸೆಬಾಸ್ಟಿನ್‌ ಮತ್ತು ಮಧುರಾಂಬಿಕಾ, (ಮಂಡಿವೂರಿ ಕುಳಿತ್ತಿರುವವರು) ದೀಕ್ಷಾ, ಅಕ್ಷರಾ, ತಾನಿಷಾ, ಮೋನಿಷಾ ಗೌಡ, ಶ್ವೇತಾ, ಆರ್‌.ಮೋನಿಷಾ.

ಪ್ರಶಸ್ತಿ

ಬೆಂಗಳೂರಿನಲ್ಲಿ ಮಂಗಳವಾರ ಕೊನೆಗೊಂಡ ರಾಜ್ಯ ಯುವ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದುಕೊಂಡ ಹಲಸೂರು ಸ್ಪೋರ್ಟ್‌ ಯೂನಿಯನ್‌ ತಂಡ. ಕುಳಿತವರು: (ಎಡದಿಂದ) ಅಜಯ್‌, ಚರಣ್‌, ಕಿಶನ್, ವಿಷ್ಣು, ಅಗಸ್ತ್ಯ (ನಿಂತವರು) ಶ್ರೇಯಸ್‌ ಶುಕ್ಲಾ, ಚಾಣಕ್ಯ, ಹರಿಹರನ್‌, ವಿ.ಯು. ಆಂಥೋಣಿ (ಕೋಚ್‌), ಮಿಲಿಂದ್‌, ಅನೀಜ್‌ ಮತ್ತು ದೇವ್‌	 –ಪ್ರಜಾವಾಣಿ ಚಿತ್ರ

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌

ಮಂಗಳೂರಿನಲ್ಲಿ ಎನ್‌.ಶೆಟ್ಟೀಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ಆರನೇ ವಾರ್ಷಿಕ ಜೇಮ್ಸ್‌ ನೇಸ್ಮಿಥ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ನಿಟ್ಟೆಯ ಎನ್‌ಎಸ್‌ಎಎಮ್‌ ಕಾಲೇಜು ತಂಡವನ್ನು 57–34ರಿಂದ ಸೋಲಿಸಿ ಪ್ರಶಸ್ತಿ ಗೆದ್ದ ಸುರತ್ಕಲ್‌ನ ಎನ್‌ಐಟಿಕೆ ತಂಡ. ಎಡದಿಂದ (ನಿಂತಿರುವವರು) ಟಿಮ್ಸನ್‌, ಸಂಜಯ್‌, ಶ್ರೀನಿಧಿ, ತೌಫೀಕ್‌,  ಕೋಚ್‌ಗಳಾದ ಮಹೇಶ್‌ ಶೆಟ್ಟಿ, ಆದಿತ್ಯ ಮಹಾಲೆ, ಆತಿಥೇಯ ಕ್ಲಬ್‌ನ ಅಧ್ಯಕ್ಷ ನವೀನ್‌ ಶೆಟ್ಟಿ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ರಮಾನಂದ ಶೆಟ್ಟಿ, ಕ್ಲಬ್‌ನ ಕಾರ್ಯದರ್ಶಿ ಲಕ್ಷ್ಮಣ್‌ ಸುವರ್ಣ, ತಂಡದ ನಾಯಕ ಸೂರಜ್‌, ಕೋಚ್‌ ಹುಸೇನ್‌, ಚಿರಾಗ್‌ (ಕುಳಿತ್ತಿರುವವರು) ಚರಣ್‌, ಹರ್ಷಿತ್‌, ಮನು, ಪುನೀತ್‌, ಅನ್ವಿತ್‌, ರವಿ, ಹರಿ ಮತ್ತು ಶ್ಯಾಮ್‌.

ಪ್ರಶಸ್ತಿ

ಮುಂಬೈನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಲೋಗೊ ಅನಾವರಣಗೊಳಿಸಲಾಯಿತು. ವಿವಿಧ ತಂಡಗಳ ಸಹ ಮಾಲೀಕರಾದ ಜಾನ್‌ ಅಬ್ರಹಾಂ, ಸಚಿನ್‌ ತೆಂಡೂಲ್ಕರ್‌, ರಣಬೀರ್‌ ಕಪೂರ್‌, ಅಭಿಷೇಕ್‌ ಬಚ್ಚನ್‌, ನೀತಾ ಅಂಬಾನಿ ಹಾಗೂ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ (ಬಲದಿಂದ ಎರಡನೆಯವರು) ಈ ವೇಳೆ ಇದ್ದರು.

ಅನಾವರಣ

ಬೆಂಗಳೂರಿನಲ್ಲಿ ನಡೆದ ಕೋಕ ಕೋಲಾ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ವಿದ್ಯಾನಗರದ ಸರ್ಕಾರಿ ಕ್ರೀಡಾ ಶಾಲಾ ತಂಡದ ಆಟಗಾರರು ಪದಕದೊಂದಿಗೆ (ನಿಂತವರು, ಎಡದಿಂದ), ದಿಲೀಪ್‌ ಗೌಡ, ಧೀರಜ್‌, ಕೃಷ್ಣ (ತರಬೇತುದಾರ), ಲಕ್ಕೇಗೌಡ, ಜೋಯೆಲ್‌ ಮತ್ತು ಶ್ರೀಕಾಂತ್‌. (ಮಂಡಿಯೂರಿ ಕುಳಿತವರು, ಎಡದಿಂದ), ನವೀನ್‌, ತರುಣ್‌ ಕುಮಾರ್‌, ಮೊಹಮ್ಮದ್‌ ಜುನಿಯಾ, ಜೀವನ್‌, ಲಿನುಯೆಸ್‌, ನಿಶ್ಚಿತ್‌ ಮತ್ತು ಬ್ರಿಜೇಶ್

ಫುಟ್‌ಬಾಲ್‌ ಟೂರ್ನಿ

ಕೇರಳದ ಅಲಪುಜಾ ಪುನ್ನಮಾಡ ಹಿನ್ನೀರಿನಲ್ಲಿ ಶನಿವಾರ ನಡೆದ 62ನೇ ನೆಹರೂ ಕಪ್‌ ದೋಣಿ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡಗಳು 	–ಪಿಟಿಐ ಚಿತ್ರ

ದೋಣಿ ಸ್ಪರ್ಧೆ

ಕಾಮನ್‌ವೆಲ್ತ್‌ ಕೂಟದಲ್ಲಿ ಪದಕ ಗೆದ್ದ ಭಾರತದ ಸ್ಪರ್ಧಿಗಳನ್ನು ಸನ್ಮಾನಿಸಲು ಶುಕ್ರವಾರ ನವದೆಹಲಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಸ್ಕ್ವಾಷ್‌ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ಜೊತೆ ಮಾತುಕತೆಯಲ್ಲಿ ನಿರತರಾದ ಕ್ಷಣ  –ಪಿಟಿಐ ಚಿತ್ರ

ಮಾತುಕತೆ

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಗುರುವಾರ ನಡೆದ ವಿವಿಧ ವಿಭಾಗಗಳ ಫೈನಲ್‌ನಲ್ಲಿ ವಿಜೇತರಾದವರು; (ಎಡದಿಂದ) ನಿಂತವರು: ಎನ್‌.ಎಸ್. ಗಗನಾ, ಅದ್ವಿಕಾ (13 ವರ್ಷದೊಳಗಿನವರ ಬಾಲಕಿಯರ ಡಬಲ್ಸ್), ಅಶ್ವಿನಿ ಭಟ್, ಮಿಥುಲಾ (15 ವರ್ಷದೊಳಗಿನವರ ಡಬಲ್ಸ್), ರಿಚಾ ಮುಕ್ತಿಬೋಧ (13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್), ಅಪೇಕ್ಷಾ ನಾಯಕ, ಧ್ರುತಿ ಯತೀಶ್ (17 ವರ್ಷದೊಳಗಿನವರ ಡಬಲ್ಸ್), ಕುಳಿತವರು: ಅಜಿಂಕ್ಯಾ ಜೋಶಿ (ಬಾಲಕರ ಸಿಂಗಲ್ಸ್), ಸಿ.ಎಸ್. ಸಾಕೇತ್ (13 ವರ್ಷದೊಳಗಿನವರ ಡಬಲ್ಸ್‌), ಮಿಥುನ್ ಮಂಜುನಾಥ್ (17 ವರ್ಷದೊಳಗಿನವರ ಸಿಂಗಲ್ಸ್‌), ಬಿ.ಎಂ. ರಾಹುಲ್ (15 ವರ್ಷದೊಳಗಿನವರ ಸಿಂಗಲ್ಸ್), ಎಂ. ರಘು (ಡಬಲ್ಸ್‌) , ಅನಿರುದ್ಧ (15 ವರ್ಷದೊಳಗಿನ ಬಾಲಕರು), ಮಯೂರೇಶ್

ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌

20ನೇ ಫಿಫಾ ವಿಶ್ವಕಪ್‌ನಲ್ಲಿ ದಿಗ್ವಿಜಯ ಸಾಧಿಸಿದ ಜರ್ಮನಿ ತಂಡಕ್ಕೆ ಶುಭ ಕೋರಲು ಖ್ಯಾತ ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲ ತೀರದಲ್ಲಿ ರಚಿಸಿದ ಕಲಾಕೃತಿ...

ಮರಳು ಶಿಲ್ಪ...

20ನೇ ಫಿಫಾ ವಿಶ್ವಕಪ್‌ನಲ್ಲಿ ದಿಗ್ವಿಜಯ ಸಾಧಿಸಿದ ಜರ್ಮನಿ ತಂಡಕ್ಕೆ ಶುಭ ಕೋರಲು ಖ್ಯಾತ ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲ ತೀರದಲ್ಲಿ ರಚಿಸಿದ ಕಲಾಕೃತಿ...

ಮರಳು ಶಿಲ್ಪ...

ಫೈನಲ್‌ ಪಂದ್ಯದಲ್ಲಿ ಜರ್ಮನಿ ಮತ್ತು ಅರ್ಜೆಂಟೀನಾ ತಂಡಗಳಿಗೆ ಬೆಂಬಲ ನೀಡಿದ ಅಭಿಮಾನಿಗಳು.

ಬೆಂಬಲ...

ಫೈನಲ್‌ ಪಂದ್ಯದಲ್ಲಿ ಜರ್ಮನಿ ಮತ್ತು ಅರ್ಜೆಂಟೀನಾ ತಂಡಗಳಿಗೆ ಬೆಂಬಲ ನೀಡಿದ ಅಭಿಮಾನಿ.

ಬೆಂಬಲ...

ಬ್ರೆಜಿಲ್‌ನ ಸೂಪರ್‌ ಮಾಡೆಲ್‌ ಗಿಸೆಲ್‌ ಬುಂಡ್‌ಶೆನ್‌ ಟ್ರೋಫಿಯೊಂದಿಗೆ ಕಾಣಿಸಿಕೊಂಡ ಕ್ಷಣ

ಟ್ರೋಫಿಯೊಂದಿಗೆ ಸೂಪರ್‌ ಮಾಡೆಲ್‌

ಸ್ಟೂಡೆಂಟ್ಸ್‌ ಯೂನಿಯನ್‌ ಫುಟ್‌ಬಾಲ್‌ ಕ್ಲಬ್‌ ಸದಸ್ಯರು ನಗರದ ಕಾಕ್ಸ್‌ಟೌನ್‌ ಬಳಿಯ ಐಟಿಸಿ ಮೇಲ್ಸೇತುವೆಯ ಕೆಳಗೆ ಭಾನುವಾರ ರಾತ್ರಿ ದೊಡ್ಡ ಪರದೆಯನ್ನು ಅಳವಡಿಸಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಫೈನಲ್‌ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರು	–ಪ್ರಜಾವಾಣಿ ಚಿತ್ರ

ಫುಟ್‌ಬಾಲ್‌ ಕದನ ಕುತೂಹಲ...

ಕೊಲಂಬಿಯದ ಪಾಪ್‌ ಗಾಯಕಿ ಶಕೀರಾ ಅವರು ರಿಯೊ ಡಿ ಜನೈರೊದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡದ್ದು ಹೀಗೆ. ವಿಶ್ವಕಪ್‌ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಅವರು ಕಾರ್ಯಕ್ರಮ ನೀಡಿದರು 	–ಎಪಿ ಚಿತ್ರ

ಶಕೀರಾ...

ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್‌ ಮೆಸ್ಸಿಗೆ ಬೆಂಬಲ ನೀಡಿದ ಮೆಕ್ಸಿಕೊ ಅಭಿಮಾನಿಗಳು

ಮೆಕ್ಸಿಕೊ ಅಭಿಮಾನಿಗಳು

ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಜರ್ಮನಿ ಎದುರಿನ ಫೈನಲ್‌ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಹೊರಭಾಗದಲ್ಲಿ ನೆರೆದಿದ್ದ ಅರ್ಜೆಂಟೀನಾ ತಂಡದ ಅಭಿಮಾನಿಗಳು

ಅಭಿಮಾನಿಗಳು

 ಆಸ್ಟ್ರಿಯದಲ್ಲಿ ಭಾನುವಾರ ಕೊನೆಗೊಂಡ ಡಬ್ಲ್ಯುಟಿಎ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಜರ್ಮನಿಯ ಆಂಡ್ರಿಯಾ ಪೆಟ್ಕೊವಿಚ್‌ ಟ್ರೋಫಿಯೊಂದಿಗೆ ಸಂಭ್ರಮಿಸಿದರು. ಪೆಟ್ಕೊವಿಚ್‌ ಫೈನಲ್‌ನಲ್ಲಿ 6–3, 6–3 ರಲ್ಲಿ ಅಮೆರಿಕದ ಶೆಲ್ಬಿ ರಾಜರ್ಸ್‌ ಅವರನ್ನು ಮಣಿಸಿದರು –ಎಪಿ ಚಿತ್ರ

ಟ್ರೋಫಿಯೊಂದಿಗೆ ಪೆಟ್ಕೊವಿಚ್‌...

ಏಷ್ಯನ್‌ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡಕ್ಕೆ ಬೆಂಗಳೂರಿನಲ್ಲಿ ಶುಕ್ರವಾರ ಸನ್ಮಾನಿಸಲಾಯಿತು. ಕುಳಿತವರು, ಎಡದಿಂದ; ಸಾಬಿಯಾ ಸೋಫಿಯಾ, ಎಲ್‌.ಜೆ. ರೀನಾ, ಸಂಪೂರ್ಣ ಹೆಗ್ಡೆ (ನಾಯಕಿ), ನರಸಿಂಹ ರೆಡ್ಡಿ (ಕೋಚ್‌), ಸಂತೋಷ್‌ (ಸಹಾಯಕ ಕೋಚ್‌), ಸುಮಿತ್ರಾ ಮಾಚಯ್ಯ (ಉಪ ನಾಯಕಿ), ಮೀನಾಕ್ಷಿ ಮತ್ತು ಮಾಯಾ ರಾಜಕುಮಾರ್‌. ನಿಂತವರು: ಮಯೂರಾ ಜೈನ್‌, ಪಾರ್ವತಿ, ಡಿ. ಸಂಧ್ಯಾ, ಎನ್‌. ತೇಜಸ್ವಿನಿ, ಸೌಮ್ಯಾ ಗೋಪಿನಾಥ್‌, ಗಾನಾ ಶ್ರೀಕಾಂತ್‌, ಆಶ್ರಿತಾ ಮುತ್ತುಕುಮಾರಸ್ವಾಮಿ ಮತ್ತು ಸಪ್ನಾ ಶೆಟ್ಟಿ.	 –ಪ್ರಜಾವಾಣಿ ಚಿತ್ರ

ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡ

ಬ್ರೆಜಿಲ್‌ ಹಾಗೂ ಚಿಲಿ ನಡುವಿನ ಪಂದ್ಯಕ್ಕೂ ಮುನ್ನ ಅಭಿಮಾನಿಗಳು ಭಿತ್ತಿಚಿತ್ರಗಳನ್ನು ತೋರಿಸಿದ ಕ್ಷಣ

ಪಂದ್ಯಕ್ಕೂ ಮುನ್ನ