ಬಣ್ಣದ ಹೂ

Comments (Click here to Expand)
ಇನ್ನಷ್ಟು ವಿಶೇಷ ಗ್ಯಾಲರಿಗಳು ಇನ್ನಷ್ಟು
ಯಾದಗಿರಿ ಜಿಲ್ಲೆಯ ಮೈಲಾಪುರದಲ್ಲಿ ಭಾನುವಾರ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ದೇಗುಲದಿಂದ ಗಂಗಾಸ್ನಾನಕ್ಕಾಗಿ ಹೊನ್ನಕೆರೆಯತ್ತ ಮಲ್ಲಯ್ಯನ ಪಲ್ಲಕ್ಕಿ ಸಾಗುವಾಗ ಸೇರಿದ್ದ ಭಕ್ತಸಮೂಹ –ಪ್ರಜಾವಾಣಿ ಚಿತ್ರ/ರಾಜಕುಮಾರ

ಮೈಲಾರಲಿಂಗೇಶ್ವರ ಜಾತ್ರೆ

ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಸಿದ್ದಲಿಂಗಪುರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ಸೂರ್ಯಾಸ್ತವಾಗುತ್ತಿದ್ದಂತೆ ರೈತರು ರಾಸುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌

ಸಂಕ್ರಮಣದ ಕಿಚ್ಚು..

ಸ್ವಿಟ್ಜರ್ಲೆಂಡ್‌ ಭದ್ರತಾ ಪಡೆಯ ಯುದ್ಧ ವಿಮಾನಗಳು ಹಾಗೂ ವಾಣಿಜ್ಯ ವಿಮಾನವು ಪರ್ವತದ ಇಳಿಜಾರಿನಲ್ಲಿ ಶನಿವಾರ ಹಾರಾಟ ನಡೆಸಿದವು. ಅಂತರರಾಷ್ಟ್ರೀಯ ಸ್ಕೀ ಫೆಡರೇಶನ್‌ ವತಿಯಿಂದ ವೆಂಗೆನ್‌ನಲ್ಲಿ ನಡೆಯುವ ಶಿಖರದ ತುದಿಯಲ್ಲಿನ ಸ್ಕೀಯಿಂಗ್ ವಿಶ್ವಕಪ್‌ಗೂ ಮುನ್ನ ನಡೆದ ಹಾರಾಟವನ್ನು ಜನರು ಕುತೂಹಲದಿಂದ ಕಣ್ತುಂಬಿಕೊಂಡರ

ಲೋಹದ ಹಕ್ಕಿಗಳ ಕಲರವ

ಉಡಾವಣಾ ವೇದಿಕೆಯಲ್ಲಿ ಸಿದ್ಧವಾಗಿರುವ ‍ಪಿಎಸ್‌ಎಲ್‌ವಿ–ಸಿ40  -ಪಿಟಿಐ ಚಿತ್ರ    .....     ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ನೂರನೇ ಉಪಗ್ರಹದ ಉಡಾವಣೆಗೆ ಗುರುವಾರ ಕ್ಷಣಗಣನೆ ಆರಂಭಿಸಿದೆ. ಶುಕ್ರವಾರ ಬೆಳಿಗ್ಗೆ 9.28ಕ್ಕೆ ಕಾರ್ಟೊಸ್ಯಾಟ್–2 ಉಪಗ್ರಹವನ್ನು ಹೊತ್ತು ಧ್ರುವೀಯ ಉಪಗ್ರಹ ಉಡಾವಣಾ ವಾಹನ–‍ಪಿಎಸ್‌ಎಲ್‌ವಿ–ಸಿ40 ನಭದತ್ತ ಜಿಗಿಯಲಿದೆ. ಇದಕ್ಕಾಗಿ ಗುರುವಾರ ಬೆಳಿಗ್ಗೆ 5.29ರಿಂದ 28 ಗಂಟೆಗಳ ಕ್ಷಣಗಣನೆ ಆರಂಭಿಸಲಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ನಡೆಯಲಿದೆ. ಕಾರ್ಟೊಸ್ಯಾಟ್–2 ಈ ಕಾರ್ಯಾಚರಣೆಯ ಮುಖ್ಯ ಉಪಗ್ರಹವಾಗಿದೆ. ಇದರ ಜತೆಯಲ್ಲೇ ಇನ್ನೂ 30 ಉಪಗ್ರಹಗಳನ್ನು ಪಿಎಸ್‌ಎಲ್‌ವಿ–ಸಿ40 ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಆ 30ರಲ್ಲಿ 28 ವಿದೇಶಿ ಉಪಗ್ರಹಗಳಾಗಿವೆ.

ಉಡಾವಣೆಗೆ ಕ್ಷಣಗಣನೆ

ಕೊಯಮತ್ತೂರಿನಲ್ಲಿ ಶನಿವಾರ ಆಯೋಜಿಸಿದ್ದ ಕೋವೈ ಉತ್ಸವಕ್ಕಾಗಿ ಬಣ್ಣಬಣ್ಣದ ಛತ್ರಿಗಳಿಂದ ಸಿಂಗರಿಸಿದ್ದ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನ ಸಾಗಿದಾಗ ಕಂಡ ದೃಶ್ಯ –ಪಿಟಿಐ ಚಿತ್ರ

ಕೋವೈ ಉತ್ಸವ

ಸಿಖ್ಖರ ಧರ್ಮಗುರು ಗುರು ಗೋವಿಂದ್ ಸಿಂಗ್‌ ಅವರ 351ನೇ ಜನ್ಮದಿನದ ಅಂಗವಾಗಿ ಜಮ್ಮುವಿನ ಗುರುದ್ವಾರವೊಂದರಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. –ಪಿಟಿಐ ಚಿತ್ರ

ನಮನ

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪುಲಿಗೆರೆ ಉತ್ಸವದ ಅಂಗವಾಗಿ ಶುಕ್ರವಾರ ನಡೆದ ಉದಯರಾಗ ಸಂಗೀತ ಕಾರ್ಯಕ್ರಮದಲ್ಲಿ ಬಸವರಾಜ ಭಜಂತ್ರಿ ಶಹನಾಯಿ ನುಡಿಸಿದರು. ಅವರಿಗೆ ಶಶಿಧರ ಭಜಂತ್ರಿ ಮತ್ತು ಮಂಜುನಾಥ ಭಜಂತ್ರಿ ಸಾಥ್ ನೀಡಿದರು. ಶಶಿಕಾಂತ ಕುಲಕರ್ಣಿ ತಬಲಾ ಸಾಥ್‌ ನೀಡಿದರು.

ಪುಲಿಗೆರೆ ಉತ್ಸವ...

ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಗಡಿ ಭದ್ರತಾ ಪಡೆ ಹೆಡ್‌ ಕಾನ್‌ಸ್ಟೆಬಲ್‌ ಆರ್‌.ಪಿ ಹಜರಾ ಅವರ ಅಂತ್ಯಕ್ರಿಯೆಗೆ ಮುನ್ನ ಅಧಿಕಾರಿಗಳು ಶವಪೆಟ್ಟಿಗೆ ಹೊತ್ತು ಸಾಂಬದಲ್ಲಿ ಗುರುವಾರ ಮೆರವಣಿಗೆಯಲ್ಲಿ ಸಾಗಿದರು. –ಪಿಟಿಐ ಚಿತ್ರ

ಅಂತಿಮ ನಮನ