ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವೈದ್ಯರಿಗೆ ವೀಸಾ ನಿರ್ಬಂಧ ಸಡಿಲ

Last Updated 15 ಜೂನ್ 2018, 7:16 IST
ಅಕ್ಷರ ಗಾತ್ರ

ಲಂಡನ್‌: ಭಾರತೀಯ ವೈದ್ಯರು ಹಾಗೂ ಇತರ ವೃತ್ತಿಪರರ ಮೇಲೆ ವಿಧಿಸಿರುವ ವಲಸೆ ನಿರ್ಬಂಧವನ್ನು ಸಡಿಲಿಸಲು ಬ್ರಿಟನ್‌ ಸರ್ಕಾರ ಮುಂದಾಗಿದೆ. ಮುಖ್ಯವಾಗಿ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿನ(ಎನ್‌ಎಚ್‌ಎಸ್‌) ವೈದ್ಯರ ಕೊರತೆಯನ್ನು ನೀಗಿಸಲು ಈ ಕ್ರಮಕೈಗೊಳ್ಳಲಾಗುತ್ತಿದೆ.

ಈ ಬಗ್ಗೆ ಶುಕ್ರವಾರ ಬ್ರಿಟನ್‌ ಗೃಹ ಕಾರ್ಯದರ್ಶಿ ಸಜೀದ್‌ ಜಾವೀದ್‌ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಸದ್ಯ ಪ್ರತಿ ತಿಂಗಳು 1600 ಮಂದಿಗೆ ವೀಸಾ ನೀಡಲಾಗುತ್ತಿದೆ. ವೃತ್ತಿಪರರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಸಂಖ್ಯೆಯನ್ನು ತಾತ್ಕಾಲಿಕವಾಗಿ ಹೆಚ್ಚಿಸುವ ಸಾಧ್ಯತೆಗಳಿವೆ.

ಬ್ರಿಟನ್‌ನಲ್ಲಿನ ಆರೋಗ್ಯ ರಕ್ಷಣೆ ಸಂಘಟನೆಗಳು ಮತ್ತು ಭಾರತ ಮೂಲದ ವೈದ್ಯರ ಬ್ರಿಟನ್‌ ಸಂಘಟನೆ (ಬಿಎಪಿಐಒ) ಭಾರತೀಯ ವೈದ್ಯರಿಗೆ ವೀಸಾ ನೀಡುವ ವಿಷಯದ ಬಗ್ಗೆ ಲಾಬಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT