ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಶಾಲೆಗಳಿಗೆ ಇನ್ನೂ ಬಾರದ ಸಮವಸ್ತ್ರ

Last Updated 2 ಜುಲೈ 2018, 19:45 IST
ಅಕ್ಷರ ಗಾತ್ರ

ಬಿಬಿಎಂಪಿಯ ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಸಮವಸ್ತ್ರ ಪೂರೈಕೆ ಆಗಿಲ್ಲ. ಇತ್ತೀಚೆಗಷ್ಟೇ ಎಲ್‌ವಿಟಿ ಕಂಟೈನರ್‌ ಎಂಬ ಕಂಪೆನಿಗೆ ಟೆಂಡರು ನೀಡಲಾಗಿದೆ. ಈ ಕಂಪೆನಿಯ ಪ್ರತಿನಿಧಿಗಳು ಶಾಲೆಗಳಿಗೆ ತೆರಳಿ ಮಕ್ಕಳ ಸಂಖ್ಯೆ, ಸಮವಸ್ತ್ರದ ಅಳತೆ ಪಡೆದು ಹೊಲಿದು ಕೊಡಬೇಕಿದೆ. ಇದಕ್ಕೆ ಬಿಬಿಎಂಪಿಯ ಶಿಕ್ಷಣ ವಿಭಾಗ 60 ದಿನಗಳ ಕಾಲಾವಕಾಶ ನೀಡಿದೆ. ಸಮವಸ್ತ್ರ ಪೂರೈಕೆಯ ನೋಟ ಹೀಗಿದೆ.

ಜೂನ್‌ 1

* ಶಾಲಾ ಆರಂಭದ ದಿನ

* ಸಮವಸ್ತ್ರ ಪೂರೈಸುವ ಕಂಪೆನಿಗೆ ಕಾರ್ಯಾದೇಶ ಕೊಟ್ಟದ್ದು.

60 ದಿನ

* ಸಮವಸ್ತ್ರ ಪೂರೈಸಲು ನೀಡಲಾದ ಕಾಲಾವಧಿ

* 3 ಸೆಟ್‌ ಉಡುಪುಗಳು

* ಎರಡು ಸಮವಸ್ತ್ರ, ಒಂದು ಬೇರೆ ಬಣ್ಣದ ಬಟ್ಟೆ

₹ 2.2 ಕೋಟಿ

ಸಮವಸ್ತ್ರ ಪೂರೈಕೆಗೆ ಟೆಂಡರು ಆದ ಮೊತ್ತ

14 ಸಾವಿರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗನವಾಡಿಯಿಂದ ಹಿಡಿದು ಪದವಿಪೂರ್ವ ಕಾಲೇಜಿನವರೆಗಿನ ವಿದ್ಯಾರ್ಥಿಗಳು

89 -ಅಂಗನವಾಡಿಗಳು

31 -ಪ್ರೌಢಶಾಲೆಗಳು

72 -ಪ್ರಾಥಮಿಕ ಶಾಲೆಗಳು

ವಿಳಂಬಕ್ಕೆ ಕಾರಣಗಳು

* ಚುನಾವಣಾ ನೀತಿ ಸಂಹಿತೆ

* ಇನ್ನೂ ಮುಗಿಯದ ದಾಖಲಾತಿ ಪ್ರಕ್ರಿಯೆ

* ಟೆಂಡರಿನ ತಾಂತ್ರಿಕ ಪ್ರಕ್ರಿಯೆಯಲ್ಲಿ ವಿಳಂಬ

* ರಾಜ್ಯದ ಸರ್ಕಾರಿ ಶಾಲೆಗಳಲ್ಲೂ ಇದೇ ಪರಿಸ್ಥಿತಿ

ವಿದ್ಯಾರ್ಥಿಗಳ ಅಳಲು

* ಹಳೆ ಬಟ್ಟೆಗಳನ್ನೇ ಧರಿಸಬೇಕು

* ಹೊಸ ಬಟ್ಟೆ ಬರುವಾಗ ಅರ್ಧ ವರ್ಷ ಮುಗಿಯುತ್ತದೆ

* ನೀತಿ ಸಂಹಿತೆಯಿಂದ ವಿನಾಯಿತಿ ಇರಬೇಕಿತ್ತು

ಸಮವಸ್ತ್ರದ ನಿರ್ಧಾರ

* ಇಲಾಖೆಯ ತಜ್ಞರ ಆಂತರಿಕ ಸಮಿತಿ ಬಣ್ಣ ಮತ್ತು ಬಟ್ಟೆಯ ಗುಣಮಟ್ಟ ಆಯ್ಕೆ ಮಾಡುತ್ತದೆ

* ಒಂದೇ ಬಣ್ಣದ ಸಮವಸ್ತ್ರದಿಂದ ಬೇಸರವಾಗುವುದನ್ನು ತಪ್ಪಿಸಲು ಒಂದು ದಿನ ಬೇರೆ ಬಣ್ಣದ ಬಟ್ಟೆ

ಮಾಹಿತಿ: ಶಿಕ್ಷಣ ಇಲಾಖೆ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT