ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ: ನೆಲಕ್ಕುರುಳಿದ ಉತ್ಸವಮೂರ್ತಿ

Last Updated 8 ಸೆಪ್ಟೆಂಬರ್ 2018, 19:36 IST
ಅಕ್ಷರ ಗಾತ್ರ

ತಿರುಪತಿ: ತಿರುಮಲದಲ್ಲಿ ಶತಮಾನದಷ್ಟು ಹಳೆಯ ಉತ್ಸವಮೂರ್ತಿಯೊಂದು ಅರ್ಚಕರ ಕೈಯಿಂದ ಜಾರಿ ಕೆಳಕ್ಕೆ ಬಿದ್ದಿದ್ದರಿಂದ ಭಕ್ತರಲ್ಲಿ ಶನಿವಾರ ಆತಂಕ ಮನೆ ಮಾಡಿತ್ತು.

‘ಗರುಡ ಆಳ್ವಾರ್‌ ಮಂಟಪಂ’ನಲ್ಲಿ ದೈನಂದಿನ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ, ಗರ್ಭಗುಡಿಗೆ ತೆರಳುತ್ತಿದ್ದ ಸಮಯದಲ್ಲಿ ಅರ್ಚಕರು ಆಯತಪ್ಪಿ ಬಿದ್ದರು. ಹೀಗಾಗಿ ಅವರ ಕೈಯಲ್ಲಿದ್ದ ಉತ್ಸವಮೂರ್ತಿ ಕಲ್ಲಿನ ಹಾಸಿನ ಮೇಲೆ ಬಿದ್ದಿದೆ. ನಂತರ ವಿಶೇಷ ಪೂಜೆ ಸಲ್ಲಿಸಿದ ದೇವಾಲಯದ ಪ್ರಧಾನ ಅರ್ಚಕರು, ಉತ್ಸವಮೂರ್ತಿಯನ್ನು ವೆಂಕಟೇಶ್ವರ ಮೂರ್ತಿ ಇರುವ ಗರ್ಭಗುಡಿಯಲ್ಲಿ ಇರಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT