Friday, 23 March, 2018

ಬಾಗಲಕೋಟೆ

ಬಡವರಿಗೆ ಮೀಸಲಾತಿ ಸವಲತ್ತು ಕಲ್ಪಿಸಿ

‘ಜಂಗಮರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿಯ ಬಡವರಿಗೂ ರಾಜ್ಯ ಸರ್ಕಾರ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸ ಲಾತಿ ನೀಡಬೇಕು’ ಎಂದು ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿ’

ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಸಮಾಜದ ಸದಸ್ಯರು ಗುರುವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ಟೆಂಡರ್ ಆಗದೇ ಭ್ರಷ್ಟಾಚಾರ ಸಾಧ್ಯವೇ?’

‘ಜಿಲ್ಲಾ ಗಣಿಗಾರಿಕೆ ನಿಧಿ (ಡಿಎಂಎಫ್‌) ಅಡಿ ಮುಧೋಳ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಇನ್ನೂ ಟೆಂಡರ್ ಆಗಿಲ್ಲ. ಆಗಲೇ ರೊಕ್ಕ ಹೊಡೆಯಲು ಸಾಧ್ಯವೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಗುರುವಾರ ಇಲ್ಲಿ ಪ್ರಶ್ನಿಸಿದರು.

ಶರಣರ ವಚನಗಳು ಬದುಕಿಗೆ ದಾರಿದೀಪ

‘12ನೇ ಶತಮಾನದಲ್ಲಿ ಬಸವಣ್ಣನವರಿಗಿಂತ ಮೊದಲು ವಚನ ರಚಿಸಿದ ಶರಣ ದಾಸಿಮಯ್ಯನವರಾಗಿದ್ದು, ಅವರ ವಚನಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪಗಳಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಚುನಾವಣೆಗೆ ಮತಯಂತ್ರ, ಸಿಬ್ಬಂದಿ ಸಜ್ಜು

ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ 14,73,840 ಮತದಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ ಜಿಲ್ಲಾಧಿಕಾರಿ ಕೆ.ಜಿ. ಶಾಂತರಾಮ್‌ ಮಾಹಿತಿ ಹಂಚಿಕೊಂಡರು.

ಕಬಡ್ಡಿ: ಹಿರೆಆಲಗುಂಡಿ ವಿನಾಯಕ ತಂಡ ಪ್ರಥಮ

ಮುಂಡುಗನೂರ ಗ್ರಾಮದಲ್ಲಿ ಮಾಳಿಂಗೇಶ್ವರನ ಜಾತ್ರೆಯ ನಿಮಿತ್ತವಾಗಿ ನಡೆದ ಪುರುಷರ 55 ಕೆ.ಜಿ ವಿಭಾಗದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಹಿರೆಆಲಗುಂಡಿ ವಿನಾಯಕ ತಂಡ ಪ್ರಥಮ ಸ್ಥಾನ ಪಡೆಯಿತು.

‘ಎಕ್ಸ್‌ರೇ ತೆಗೆಯಲು ₹200 ಲಂಚ’

‘ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್‌ರೇ ತೆಗೆಯಲು ₹200 ಕೇಳುತ್ತಾರೆ’ ಎಂದು ಸ್ವತಃ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗವ್ವ ಕುರಣಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

‘ವಿಶೇಷ ಅನುದಾನ ಕ್ಷೇತ್ರಕ್ಕೆ ಬಂದಿಲ್ಲ’

‘ಗ್ರಾಮದ ಅಭಿವೃದ್ಧಿಗೆ ಗ್ರಾಮ ವಿಕಾಸ ಯೋಜನೆ ಮಂಜೂ ರಾಗಿದ್ದು ಈ ಯೋಜನೆಯಿಂದ ಲೋಕಾಪುರ ಸರ್ವಾಂಗೀಣ ವಿಕಾಸ ಹೊಂದಲಿದೆ ಎಂದು ಶಾಸಕ ಗೋವಿಂದ ಕಾರಜೋಳ ತಿಳಿಸಿದರು.

‘ಜೀವ ಉಳಿಸುವ ಮಹತ್ಕಾರ್ಯ ರಕ್ತದಾನ’

‘ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಅದರ ಕೃತಕ ನಿರ್ಮಾಣ ಅತ್ಯಂತ ಕಠಿಣ ಹಾಗೂ ದುಬಾರಿ. ಗರ್ಭಿಣಿ ಯರಿಗೆ, ಬಡರೋಗಿ ಗಳಿಗೆ, ಅಪಘಾತಕ್ಕಿ ಡಾದವರ ಜೀವ ಉಳಿಸುವಲ್ಲಿ ರಕ್ತ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಇಲ್ಲಿನ ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಜಿ. ಪಾಟೀಲ ಅಭಿಪ್ರಾಯಪಟ್ಟರು.

ತಳಮಟ್ಟದಿಂದ ಪಕ್ಷದ ಸಶಕ್ತೀಕರಣ

‘ಬಿಜೆಪಿ ಕೇಂದ್ರದಲ್ಲಿ ಹಾಗೂ 21 ರಾಜ್ಯಗಳಲ್ಲಿ ಇಂದು ಅಧಿಕಾರದಲ್ಲಿರುವುದಕ್ಕೆ ಕಾರ್ಯಕರ್ತರ ಪರಿಶ್ರಮ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವ ಕಾರಣ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಜಮೀನು ಖರೀದಿಗೆ ದರ ನಿಗದಿ: ಡಿಸಿ

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಲ್ಲಿ ಜಮೀನು ಖರೀದಿಸಲು ದರ ನಿಗದಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ನೇತೃತ್ವದಲ್ಲಿ ಮಂಗಳವಾರ ದರ ನಿಗದಿ ಸಭೆ ಜರುಗಿತು.

ತವರು ಜಿಲ್ಲೆಗೆ ಅನ್ಯಾಯ: ಸವದಿ ಆರೋಪ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಹಂಚಿಕೆಯಲ್ಲಿ ಸಚಿವೆ ಉಮಾಶ್ರೀ ಬಾಗಲಕೋಟೆ ಜಿಲ್ಲೆಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ ಕೂಡಲೇ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದರು.

Pages