ಭಾನುವಾರ, ಆಗಸ್ಟ್ 18, 2019
24 °C

ಅಂಚೆ ಸೇವೆ ವಿಳಂಬವೇಕೆ?

Published:
Updated:

ಕೊರಿಯರ್ ಸೇವೆ ಪ್ರಬಲವಾಗುತ್ತಾ ಬಂದಂತೆ ಅಂಚೆ ಸೇವೆ ವಿಳಂಬವಾಗುತ್ತಿದೆ. ಅನೇಕ ಆಹ್ವಾನ ಪತ್ರಿಕೆಗಳು ಕಾಯ೯ಕ್ರಮ ನಡೆದ ಮೇಲೆ ಅಥವಾ ಅದೇ ದಿನ ಬಂದಿವೆ. ಆಗಸ್ಟ್‌ ಎರಡರಂದು ಬೆಂಗಳೂರಿನ ವಿಜಯನಗರದಲ್ಲಿ ಅಂಚೆಗೆ ಹಾಕಿದ ಒಂದು ಆಹ್ವಾನ ಪತ್ರ, ನನಗೆ ತುಮಕೂರಿನಲ್ಲಿ ಆರನೇ ತಾರೀಖು ತಲುಪಿದೆ. ಬೆಂಗಳೂರಿನಿಂದ ತುಮಕೂರು ವಿಳಾಸಕ್ಕೆ ಒಂದು ಪತ್ರ ತಲುಪಲು ಇಷ್ಟು ದಿನ ಬೇಕೇ?

ಇದೊಂದು ಸಾವ೯ಜನಿಕ ಸೇವೆ ಆಗಿರುವುದರಿಂದ, ಅಂಚೆ ಇಲಾಖೆಯು ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಪತ್ರಗಳನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು. ಎಲ್ಲರೂ, ಎಲ್ಲ ಸಂದಭ೯ದಲ್ಲಿಯೂ ₹ 40-50 ಖಚು೯ ಮಾಡಿ ಕೊರಿಯರ್‌ ಅನ್ನೇ ಮಾಡಲಾಗುವುದಿಲ್ಲ. ಇಂತಹ ಸಂದಭ೯ದಲ್ಲಿ ಅಂಚೆ ಸೇವೆಯ ಮೇಲೆ ಭರವಸೆ ಇಡುವ ಜನರಿಗೆ ಇಲಾಖೆ ನ್ಯಾಯ ಒದಗಿಸಬೇಕು.

– ರಮಾಕುಮಾರಿ, ತುಮಕೂರು

 

Post Comments (+)