ಗುರುವಾರ , ನವೆಂಬರ್ 21, 2019
26 °C

ಕನ್ನಡ ಶಿಕ್ಷಕರ ನೇಮಕಾತಿ ಎಂದು?

Published:
Updated:

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಣ ಇಲಾಖೆಯು ಗಣಿತ, ವಿಜ್ಞಾನ ಮೊದಲಾದ ವಿಷಯಗಳಿಗೆ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾ ಬಂದಿದೆ. ಆದರೆ ಕನ್ನಡ ಭಾಷಾ ಶಿಕ್ಷಕರನ್ನು ಸರಿಯಾಗಿ ನೇಮಕ ಮಾಡಿಕೊಳ್ಳುತ್ತಿಲ್ಲ. ಹೀಗಾದರೆ, ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಉನ್ನತ ಶಿಕ್ಷಣ ಮಾಡಿದವರ ಪಾಡು ಏನು?

ಶಾಲೆಗಳಲ್ಲಿ ಕನ್ನಡದ ವಾತಾವರಣ ಮೂಡುವುದಾದರೂ ಹೇಗೆ? ಕರ್ನಾಟಕದಲ್ಲಿಯೇ ಕನ್ನಡವನ್ನು ಹೀಗೆ ಅವಗಣನೆ ಮಾಡುವುದು ಸರಿಯೇ? ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಉತ್ಸಾಹದಿಂದ ಮಾತನಾಡುತ್ತಿದ್ದಾರೆ. ಅವರಿಂದ ಸಕಾರಾತ್ಮಕ ನಿರ್ಧಾರವನ್ನು ನಿರೀಕ್ಷಿಸಬಹುದೇ?

– ಗಿರೀಶ್ ಮತ್ತೇರ, ಹೊಳಲ್ಕೆರೆ

ಪ್ರತಿಕ್ರಿಯಿಸಿ (+)