ಮತಕ್ಕಾಗಿ ಕೊಳಚೆ ನೀರಲ್ಲಿ ಮಲಗಿದ ಪಾಕಿಸ್ತಾನದ ರಾಜಕಾರಣಿ

7

ಮತಕ್ಕಾಗಿ ಕೊಳಚೆ ನೀರಲ್ಲಿ ಮಲಗಿದ ಪಾಕಿಸ್ತಾನದ ರಾಜಕಾರಣಿ

Published:
Updated:

ಕರಾಚಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತಗಳನ್ನು ಸೆಳೆಯಲು ಸಭೆ–ಸಮಾವೇಶಗಳಲ್ಲಿ ಭಾಷಣ ಬಿಗಿಯುವುದು, ಮನೆ–ಮನೆಗೆ ಭೇಟಿ ನೀಡುವುದು ಸಾಮಾನ್ಯ. ಆದರೆ ಪಾಕಿಸ್ತಾನದ ಸಾರ್ವತ್ರಿಕ ಚುನಾವಣಾ ಕಣದಲ್ಲಿ ಇರುವ ಕರಾಚಿಯ ಕ್ಷೇತ್ರವೊಂದರ ಪಕ್ಷೇತರ ಅಭ್ಯರ್ಥಿಯೊಬ್ಬರು ಕೊಳಚೆ ನೀರಿನಲ್ಲಿ ಮಲಗಿಕೊಂಡು ಮತಯಾಚನೆ ಮಾಡಿದ್ದಾರೆ.

ಆಯಾಜ್‌ ಮೆಮೂನ್‌ ಮೋತಿವಾಲಾ ಈ ರೀತಿ ಮತ ಕೇಳುವ ಮೂಲಕ ಆ ನಗರ ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮ ಬಳಕೆದಾರರಿಗೂ ಪರಿಚಿತರಾಗುತ್ತಿದ್ದಾರೆ. 

‘ಕೊಳಚೆ ನೀರಿನಲ್ಲಿ ಕೂರುವ ಮೂಲಕ ಪ್ರದೇಶದ ಜನರು ಅನುಭವಿಸುತ್ತಿರುವ ಕೊಳಚೆ ಸಮಸ್ಯೆ ಮತ್ತು ಸದ್ಯದ ಆಡಳಿತ ವರ್ಗ ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಸಾರುತ್ತಿದ್ದೇನೆ’ ಎಂದು ತಮ್ಮ ಕೊಳಚೆ ನೀರಿನಲ್ಲಿನ ಧರಣಿಯನ್ನು ಆಯಾಜ್‌ ಸಮರ್ಥಿಕೊಂಡಿದ್ದಾರೆ.

ಇವರ ಮತ ಸೆಳೆಯುವ ಪ್ರಯತ್ನ ಇಷ್ಟಕ್ಕೆ ನಿಂತಿಲ್ಲ. ತಮ್ಮ ಧರಣಿಯನ್ನು ಫೇಸ್‌ಬುಕ್‌ ಲೈವ್‌ ಮಾಡಿ, ಬಾಯಿಗೆ ಒಂದಿಷ್ಟು ಕೊಳಚೆ ನೀರನ್ನು ಹಾಕಿಕೊಂಡಿದ್ದಾರೆ. ಅದೇ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು, ವಿಜಯದ ಚಿಹ್ನೆ ತೋರಿಸುತ್ತ ದಾರಿಹೋಕರಿಗೆ ಪೋಜು ನೀಡಿದ್ದಾರೆ. 

ಬಹುತೇಕ ನೆಟಿಜನರು ಇವರ ವರ್ತನೆಯನ್ನು ಪ್ರಚಾರದ ಗಿಮಕ್‌ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !