ಗುಂಡ್ಲುಪೇಟೆ: ಮಹಿಳೆಯರು ಸ್ವಾವಲಂಬಿ ಬದುಕಲು ರೂಪಿಕೊಳ್ಳಲು ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆ ವೇದಿಕೆ ಸೃಷ್ಟಿ ಮಾಡುತ್ತಿದೆ ಎಂದು ಸಂಸ್ಥೆ ಸಂಸ್ಥಾಪಕ ಬಿ.ಎಸ್.ಅಜಯ್ ಕುಮಾರ್ ಹೇಳಿದರು.

ಬನ್ನಿತಾಳಪುರ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆ ಹಾಗೂ ಅಂತರ್ಧ್ವನಿ ವೇದಿಕೆ ಹಾಗೂ ಪೃಥ್ವಿ ಅಂತರ್ಧ್ವನಿ ಮಹಿಳಾ ಒಕ್ಕೂಟದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಸ್ವಾವಲಂಬಿಯಾಗಿ ಬದುಕಲು ಹಾಗೂ ಗ್ರಾಮದಲ್ಲಿ ಸಾಮಾಜಿಕ ಬದಲಾವಣೆ ತರಲು ಒಕ್ಕೂಟ ಪರಿಣಾಮಕಾರಿ ವೇದಿಕೆಯಾಗಿದೆ. ಮಹಿಳೆಯರ ಸ್ವಾವಲಂಬನೆಗೆ ಸಂಸ್ಥೆ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸಿದರು

ಪೃಥ್ವಿ ಒಕ್ಕೂಟದಿಂದ ಮಹಿಳಾ ಸಾಧನೆಗಳ ಪರಿಚಯ ಮಾಡಲಾಯಿತು.ಮಹಿಳೆಯರಿಗೆ ಉದ್ಯಮ ರೂಪಿಸಲು ಸಂಸ್ ಆರ್.ಎಲ್.ಎಫ್ ಸಾಲ ಯೋಜನೆಯ ಚೆಕ್ ಅನ್ನು ಅಜಯ್ ಕುಮಾರ್ ವಿತರಣೆ ಮಾಡಿದರು. ಮಹಿಳಾ ಪರ ಯೋಜನೆಯಲ್ಲಿ ತೊಡಗಿಸಿಕೊಂಡವರನ್ನು ಭಾಘ್ಯಾ ಅಜಯ್ ಕುಮಾರ್ ಗೌರವಿಸಿದರು. ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.

ಸಂಸ್ಥೆ ಯೋಜನಾ ಮುಖ್ಯಸ್ಥ ಮಧು.ಎನ್ ಹಾಗೂ ಮಹಿಳೆಯರು, ಗ್ರಾಮದ ಮುಖಂಡರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-37-1616492272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.