ಹುಣಸೂರು: ‘ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣ ಮೂಲ ಮಂತ್ರವಾಗಿದ್ದು, ಉನ್ನತ ಶಿಕ್ಷಣ ಹೊಂದಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು’ ಎಂದು ನಗರಸಭೆ ಆಯುಕ್ತೆ ಮಾನಸ ಹೇಳಿದರು.

ನಗರದ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಶಿಕ್ಷಣ ಪ್ರತಿಯೊಬ್ಬರ ಏಳಿಗೆಗೆ ಸಹಕಾರಿಯಾಗಿದ್ದು, ಅನ್ಯ ಕಾರಣಗಳಿಗೆ ಓದು ಮೊಟಕುಗೊಳಿಸಿ ಜೀವನ ಪರ್ಯಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕದೆ ಎಚ್ಚರವಹಿಸಿ ನಿಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವತ್ತ ಗಮನಹರಿಸಬೇಕು’ ಎಂದರು.

‘ಮಹಿಳೆಯರು ಮನೆ ನಿರ್ವಹಣೆ ಜೊತೆಗೆ ಹಲವು ಸಾಧನೆ ಮಾಡುತ್ತಿದ್ದು, ಇಂಥ ಸಾಧಕರನ್ನು ಗುರುತಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕಾಗಿದೆ. ಮಹಿಳೆಯರ ಕೆಲಸವನ್ನು ಗುರುತಿಸಿ ಗೌರವಿಸಿದಲ್ಲಿ ಮತ್ತಷ್ಟು ಸಾಧನೆ ಮಾಡಲು ಪೂರಕವಾಗಲಿದೆ’ ಎಂದರು.

ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ಅರಿವಳಿಕೆ ತಜ್ಞೆ ಡಾ. ಪೂರ್ಣಿಮಾ ಮಾತನಾಡಿ, ‘ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಅದನ್ನು ಖಂಡಿಸುವ ಮನಸ್ಥಿತಿ ಪ್ರತಿಯೊಬ್ಬ ಮಹಿಳೆಯಲ್ಲಿ ಇರಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಶ್ವೇತಾ ಬಿ.ವಿ, ತೋಟಗಾರಿಕೆ ಅಧಿಕಾರಿ ಚೈತ್ರಾ ಎ ಮಾತನಾಡಿದರು.

ಜ್ಞಾನಧಾರ ಎಜುಕೇಷನ್ ಫೌಂಡೇಷನ್ ಅಧ್ಯಕ್ಷೆ ಯಮುನ ಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-38-345425246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.