ಕಲಬುರಗಿ: ‘ಪುರುಷ ಪ್ರಧಾನ ಜಗತ್ತು ಮಹಿಳೆಗೆ ಶಿಕ್ಷೆ ಕೊಡುತ್ತಿದ್ದ ಕಾಲದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರು ಹೆಣ್ಣನ್ನು ಶಿಕ್ಷಕಿಯನ್ನಾಗಿಸಿದರು. ಇದರಿಂದಾಗಿಯೇ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿಯಾಗಲು ಸಾಧ್ಯವಾಯಿತು’ ಎಂದು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು.

ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ವಿಜ್ಞಾನ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಮಹಿಳಾ ವಿಶೇಷ ಘಟಕವು ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುದ್ಧನಿಂದ ಮೊದಲುಗೊಂಡು ವಚನಕಾರ ಬಸವಣ್ಣ, ಆಧುನಿಕ ಕಾಲದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಿಳೆಯ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ. ಇಂದು ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ಶಿಕ್ಷಿತಳಾಗಿ ಉದ್ಯೋಗದಾತೆಯಾಗಿರಲು ಬುದ್ಧ ಬಸವ ಅಂಬೇಡ್ಕರ್ ಕಾರಣವಾಗಿದ್ದಾರೆ. ಮಹಿಳೆ ಇಂದು ತನ್ನದೇ ಆದ ಘನತೆ ಮತ್ತು ಆತ್ಮವಿಶ್ವಾಸವನ್ನು ರೂಢಿಸಿಕೊಂಡಿದ್ದಾಳೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಮಹಿಳಾ ಘಟಕದ ಸಂಚಾಲಕಿ ನಿರ್ಮಲಾ ಸಿರಗಾಪುರ, ‘ಮಹಿಳೆಯು ಆಧುನಿಕ ಕಾಲದಲ್ಲಿ ಸಮಾನತೆಯಿಂದ ಬಾಳಲು ಡಾ.ಅಂಬೇಡ್ಕರ್ ಸಂವಿಧಾನ ಕೊಟ್ಟ ಹಕ್ಕುಗಳು ಕಾರಣವಾಗಿವೆ. ಹಾಗಾಗಿ ದೇಶದ ಮಹಿಳೆಯರು ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು’ ಎಂದರು.

ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಎಸ್.ಕಾಂತ ಮಹಿಳಾ ಪರ ವಚನಗಳನ್ನು ಓದಿ ವಿವರಿಸಿದರು. ಐಕ್ಯೂಎಸಿ ಸಂಯೋಜಕ ಸಿದ್ಧಾರ್ಥ ಮದನಕರ್ ವೇದಿಕೆಯಲ್ಲಿದ್ದರು.

ಕೆಪಿಇ ಸಂಸ್ಥೆಯ ಡಾ.ಅಂಬೇಡ್ಕರ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡದ್ದಕ್ಕಾಗಿ ಸಿದ್ದಪ್ಪ ಎಸ್.ಕಾಂತ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಧ್ಯಾಪಕರಾದ ರತಿ ರೇವೂರ, ಶಿಲ್ಪಾ ಎಲ್., ಮಂಜುಳಾ ಕೆ., ಆರ್.ಸುಮಾ, ಕೌಶಲ್ಯಾ, ಅಂಜುಮನ್, ಸುದರ್ಶನ ಮದನಕರ್, ಅರುಣ್ ಜೋಳದಕೂಡ್ಲಿಗಿ, ವಸಂತ ನಾಶಿ, ದತ್ತುರಾಯ ಶಿವರಾಜ, ಶಿವಕುಮಾರ್, ಸುರೇಶ ಕುಲಕರ್ಣಿ, ಅರುಣಕುಮಾರ್, ಗ್ರಂಥಪಾಲಕ ರಮೇಶ ಜಾಬನೂರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-34-220667718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.