₹ 500 ಕೋಟಿ ಮೀಸಲಿಡಿ: ಜಮೀರ್ ಅಹ್ಮದ್

7

₹ 500 ಕೋಟಿ ಮೀಸಲಿಡಿ: ಜಮೀರ್ ಅಹ್ಮದ್

Published:
Updated:

ಬೆಂಗಳೂರು: ಅಲ್ಪಸಂಖ್ಯಾತ ಇಲಾಖೆಯಿಂದ ಮುಸ್ಲಿಂ ಸಮುದಾಯಕ್ಕೆ ಸಿಗಬೇಕಾದ ಕಾರ್ಯಕ್ರಮಗಳು ಮತ್ತು ಅವುಗಳ ಅನುಷ್ಠಾನದ ಕುರಿತು ಸಚಿವರಾದ ಜಮೀರ್ ಅಹ್ಮದ್ ಮತ್ತು ಯು.ಟಿ. ಖಾದರ್ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸಭೆ ನಡೆಯಿತು.

ಬಳಿಕ ಮಾತನಾಡಿದ ಜಮೀರ್‌, ‘ನಮ್ಮ ಸಮುದಾಯಕ್ಕೆ ಬಜೆಟ್‌ನಲ್ಲಿ ₹ 500 ಕೋಟಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ’ ಎಂದರು.

‘ಹಜ್ ಭವನಕ್ಕೆ ಟಿಪ್ಪು ಹೆಸರಿಡುವಂತೆ ನಾನು ಸೂಚಿಸಿಲ್ಲ. ಇದು ಸಮುದಾಯದ ಜನರ ಬೇಡಿಕೆ. ಅಬ್ದುಲ್ ಕಲಾಂ ಹೆಸರಿಡುವಂತೆ ಬಿಜೆಪಿಯವರು ಸಲಹೆ ನೀಡಿದ್ದಾರೆ. ಅದನ್ನೂ ಪರಿಗಣಿಸಲಾಗುವುದು’ ಎಂದರು.

ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿರುವ ಮುಸ್ಲಿಂ ಸಮುದಾಯದ ಶಾಸಕರು ಸಭೆಯಲ್ಲಿದ್ದರು. ಆದರೆ, ಹಿರಿಯ ಶಾಸಕರಾದ ರೋಷನ್ ಬೇಗ್ ಮತ್ತು ಮಾಜಿ ಸಚಿವ ತನ್ವೀರ್ ಸೇಠ್ ಗೈರು ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !