₹ 6 ಲಕ್ಷ ಮೌಲ್ಯದ ಪ್ಲಾಸ್ಟಿಕ್‌ ಸಾಮಗ್ರಿ ವಶ

7
ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ದಾಳಿ

₹ 6 ಲಕ್ಷ ಮೌಲ್ಯದ ಪ್ಲಾಸ್ಟಿಕ್‌ ಸಾಮಗ್ರಿ ವಶ

Published:
Updated:
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಬುಧವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ನಗರಸಭೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಪ್ಲಾಸ್ಟಿಕ್‌ ಸಾಮಗ್ರಿ. ನಗರಸಭೆ ಆಯುಕ್ತ ಮನೋಹರ, ಆರೋಗ್ಯ ನಿರೀಕ್ಷಕ ಸುಭಾಷ ಹಾಗೂ ಸಿಬ್ಬಂದಿ ಇದ್ದಾರೆ

ಬೀದರ್: ಅಧಿಕಾರಿಗಳ ಮೂರು ಪ್ರತ್ಯೇಕ ತಂಡಗಳು ಬುಧವಾರ ನಗರದ 85 ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು ₹ 6 ಲಕ್ಷ ಮೌಲ್ಯದ 750 ಕೆಜಿ ಪ್ಲಾಸ್ಟಿಕ್‌ ಸಾಮಗ್ರಿಗಳನ್ನುವಶಪಡಿಸಿಕೊಂಡಿವೆ.

ಬೆಳಿಗ್ಗೆ ಓಲ್ಡ್‌ಸಿಟಿಯಿಂದ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಕಿರಾಣಿ ಅಂಗಡಿಗಳು, ಹೋಟೆಲ್‌, ಬಟ್ಟೆ ಅಂಗಡಿಗಳಲ್ಲಿ ತಪಾಸಣೆ ನಡೆಸಿ ಅಂಗಡಿಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ಪ್ಲಾಸ್ಟಿಕ್‌ ಚೀಲ, ತಟ್ಟೆ, ಗ್ಲಾಸ್‌ ಹಾಗೂ ಕ್ಯಾರಿಬ್ಯಾಗ್‌ಗಳನ್ನು ವಶಪಡಿಸಿಕೊಂಡರು.

‘ಒಂದು ತಿಂಗಳ ಮೊದಲೇ ಮುನ್ಸೂಚನೆ ನೀಡಿದರೂ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ
ಕ್ರಾಂತಿಗಣೇಶ ಪ್ರದೇಶದ ಗಣೇಶ ಪ್ಲಾಸ್ಟಿಕ್‌ ಹಾಗೂ ರೈಲು ನಿಲ್ದಾಣ ಸಮೀಪದ ಸಂತೋಷ ಬಸವಜ್ಯೋತಿ ಗಾರ್ಮೆಂಟ್ಸ್‌ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗಿದೆ. ಮೊದಲ ದಿನ ಯಾರಿಗೂ ದಂಡ ವಿಧಿಸಿಲ್ಲ. ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಇಟ್ಟುಕೊಂಡಿರುವ ಅಂಗಡಿಗಳ ಮಾಲೀಕರಿಗೆ ಗುರುವಾರದಿಂದ ಅಧಿಕ ಮೊತ್ತದ ದಂಡ ವಿಧಿಸಲಾಗುವುದು’ ಎಂದು ನಗರಸಭೆ ಆಯುಕ್ತ ಮನೋಹರ ತಿಳಿಸಿದ್ದಾರೆ.

‘ನಗರದ ಶಹಾಪುರ ಗೇಟ್‌ ಬಳಿ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುವುದು. ವಾಹನಗಳಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಕಂಡು ಬಂದರೆ ವಾಹನ ಸಮೇತ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು. ಪ್ಲಾಸ್ಟಿಕ್‌ ಬಳಕೆ ವಿರುದ್ಧದ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

ನಗರಸಭೆ ಆಯುಕ್ತ ಮನೋಹರ, ಎಇಇ ಮೊಯಿಸ್‌ ಹುಸೇನ್, ಆರೋಗ್ಯ ನಿರೀಕ್ಷಕರಾದ ಸುಭಾಷ, ಗಿರೀಶ್‌, ಹಫೀಜ್‌, ಪರಿಸರ ಅಧಿಕಾರಿ ಸುಗಂಧಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !