ವಿಜಯಪುರ ತಾಲ್ಲೂಕು ಹೆಬ್ಬಾಳಟ್ಟಿ ಗ್ರಾಮ: ₹ 8 ಲಕ್ಷ ಮೌಲ್ಯದ ಗಾಂಜಾ ವಶ

7

ವಿಜಯಪುರ ತಾಲ್ಲೂಕು ಹೆಬ್ಬಾಳಟ್ಟಿ ಗ್ರಾಮ: ₹ 8 ಲಕ್ಷ ಮೌಲ್ಯದ ಗಾಂಜಾ ವಶ

Published:
Updated:

ವಿಜಯಪುರ: ತಾಲ್ಲೂಕಿನ ಹೆಬ್ಬಾಳಟ್ಟಿ ಗ್ರಾಮದ ಗುರಪ್ಪ ಸಿದ್ದಪ್ಪ ಕಾಖಂಡಕಿ ಎಂಬುವರ ಜಮೀನಿನಲ್ಲಿ ಬಾಳೆ, ಪೇರಲೆ ಗಿಡಗಳ ನಡುವೆ ಬೆಳೆಯಲಾಗಿದ್ದ ಗಾಂಜಾವನ್ನು ಡ್ರೋಣ್‌ ಮೂಲಕ ಪತ್ತೆ ಹಚ್ಚಿದ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ₹ 8 ಲಕ್ಷ ಮೌಲ್ಯದ 101 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಬೆಳೆದಿದ್ದ ಸಿದ್ದಪ್ಪ ಗುರಪ್ಪ ಎಂಬಾತನನ್ನು ಬಂಧಿಸಿ, ಜಮೀನಿನ ಮಾಲೀಕ ಗುರಪ್ಪ ಕಾಖಂಡಕಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !