ಗುರುವಾರ , ಏಪ್ರಿಲ್ 15, 2021
20 °C

371ನೇ ವಿಧಿ: 15ರವರೆಗೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `371ನೇ ವಿಧಿ ಜಾರಿಗೆ ಒತ್ತಾಯಿಸಿ ಜು.15ರ ತನಕ ನಿರಂತರವಾಗಿ ಜಿಲ್ಲೆಯ ಜನಪ್ರತಿನಿಧಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು~ ಎಂದು ಹೇಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ನಿರ್ಣಾಯಕ ಉಗ್ರ ಸ್ವರೂಪ ಹೋರಾಟ ಕೈಗೊಳ್ಳುತ್ತಿಲ್ಲವೇಕೆ? ಎಂಬ ಪ್ರಶ್ನೆಗೆ `ನಾಯಕರನ್ನು ನಂಬಿದ್ದೇವೆ~ ಎಂದು ಉತ್ತರಿಸಿದ ಘಟನೆ ಸೋಮವಾರ ನಡೆಯಿತು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪ್ರಧಾನಿ ಕಾರ್ಯಾಲಯಕ್ಕೆ ಇನ್ನೂ ಕರಡು ಬಂದಿಲ್ಲ ಎನ್ನಲಾಗಿದೆ. ನಿಜವಾಗಿ ಕರಡು ಸಿದ್ಧಗೊಂಡಿದೆಯೇ? ಅದರಲ್ಲಿ ಏನೇನು ವಿಷಯಗಳಿವೆ?~ ಎಂಬ ಪ್ರಶ್ನೆಗಳಿಗೆ `ಗೃಹ ಸಚಿವರು ಭರವಸೆ ನೀಡಿದ್ದಾರೆ. ಇನ್ನು ಕಾನೂನು ರೀತಿಯ ಹೋರಾಟ ಮಾಡಬೇಕು~ ಎಂದು ಹೇಳಿ ನುಣುಚಿಕೊಂಡರು.ಮನೆ ಹೋರಾಟ: ಸಂಸದ ಧರ್ಮ ಸಿಂಗ್ ಮನೆ ಮುಂದೆ (ಜು.2) ಸೋಮವಾರ ವೀರ ಕನ್ನಡಿಗರ ಸೇನೆ ನೇತೃತ್ವದಲ್ಲಿ  ಪ್ರತಿಭಟಿಸಿದರು.

 

ಜು.3ರಂದು ಆಟೋ ಚಾಲಕರ ಕಲ್ಯಾಣ ಸಂಘದಿಂದ ಶಾಸಕ ಖಮರುಲ್ ಇಸ್ಲಾಂ, ಜು.4ರಂದು ನವಕರ್ನಾಟಕ ನಿರ್ಮಾಣ ವೇದಿಕೆಯಿಂದ ಶಾಸಕ ಶರಣ ಪ್ರಕಾಶ ಪಾಟೀಲ ಸೇಡಂ, ಜು.5ರಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯಿಂದ ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಜು.6ರಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಯಿಂದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಜು.7ರಂದು ಕರುನಾಡು ರಕ್ಷಣಾ ವೇದಿಕೆ ಮತ್ತು ಯೂತ್ ಡ್ಯಾನ್ಸ್ ಅಕಾಡೆಮಿಯಿಂದ ಶಾಸಕ ಮಾಲೀಕಯ್ಯ ಗುತ್ತೇದಾರ್, ಜು.8ರಂದು ಯುವ ಸೈನ್ಯ ಸೇವಾ ಸಂಘದಿಂದ ಶಾಸಕ ಸುಭಾಷ್ ಗುತ್ತೇದಾರ್, ಜು.9ರಂದು ಕರ್ನಾಟಕ ದಲಿತ ಸರ್ವೋದಯ ಸಮಿತಿಯಿಂದ ಶಾಸಕ ದೊಡ್ಡಪ್ಪ ಗೌಡ ಪಾಟೀಲ್, ಜು.10ರಂದು ಕನ್ನಡ ಭೂಮಿ ಜಾಗೃತಿ ಸಮಿತಿಯಿಂದ ಸಂಸದ ಬಸವರಾಜ ಪಾಟೀಲ್ ಸೇಡಂ, ಜು.11ರಂದು ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದಿಂದ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಜು.12ರಂದು ವಿಶಾಲ ಕರ್ನಾಟಕ ಸಂಘಟನೆಯಿಂದ ಶಾಸಕ ವಾಲ್ಮೀಕಿ ನಾಯಕ, ಜು.13ರಂದು ಹೈದರಾಬಾದ್ ಕರ್ನಾಟಕ ಸಂಘರ್ಷ ಸಮಿತಿಯಿಂದ ಶಾಸಕ ಶರಣಬಸಪ್ಪ ದರ್ಶನಾಪುರ, ಜು.14ರಂದು ಡಾ.ಅಂಬೇಡ್ಕರ್ ಹೋರಾಟ ಸಮಿತಿಯಿಂದ ಶಾಸಕ ಬಾಬುರಾವ ಚಿಂಚನಸೂರ, ಜು.15 ಕನ್ನಡ ಸೇನೆಯಿಂದ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಮನೆ ಮುಂದೆ ಹೋರಾಟ ನಡೆಸಲಾಗುವುದು ಎಂದರು.ಜು.16ರಂದು ಎಲ್ಲ ಮುಖಂಡರು ಬೆಂಗಳೂರಿಗೆ ತೆರಳಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ ಮನೆ ಮುಂದೆ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.ಜ್ಞಾನಮಿತ್ರ ಸ್ಯಾಮುವೆಲ್, ತಿಪ್ಪಣ್ಣ ಲಂಡನ್‌ಕರ್, ಮಂಜುನಾಥ ನಾಲವಲಕರ್, ಹಾಜಿಸಾಬ ಭಗವಾನ್,ಮಿರಾಜುದ್ದೀನ್, ಅಶೋಕ್ ಗುತ್ತೇದಾರ್, ಧರ್ಮಸಿಂಗ್ ತಿವಾರಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.