ಸಂವಿಧಾನದ 371ನೇ ಕಲಂ ತಿದ್ದುಪಡಿ:ಮಳೆಗಾಲ ಅಧಿವೇಶನದಲ್ಲಿ ಜಾರಿ

ಶುಕ್ರವಾರ, ಜೂಲೈ 19, 2019
23 °C

ಸಂವಿಧಾನದ 371ನೇ ಕಲಂ ತಿದ್ದುಪಡಿ:ಮಳೆಗಾಲ ಅಧಿವೇಶನದಲ್ಲಿ ಜಾರಿ

Published:
Updated:

ಗುಲ್ಬರ್ಗ: ಸಂವಿಧಾನದ 371ನೇ ವಿಧಿಗೆ ಜುಲೈ 16ರಂದು ನಡೆಯಲಿರುವ ಮಳೆಗಾಲದ ಅಧಿವೇಶನದಲ್ಲಿ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸುವ ವಿಶ್ವಾಸ ತಮಗಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲ ತಿಳಿಸಿದರು.ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 371ನೇ ವಿಧಿ ಜಾರಿಗೆ ಒತ್ತಾಯಿಸಿ ಸುಮಾರು 15 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು, ರಾಜ್ಯದ ಹಲವಾರು ಜನ ಮುಖ್ಯಮಂತ್ರಿಗಳು ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಸಹ ಈಚೆಗೆ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋದಾಗ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಹೀಗಾಗಿ ಈ ಅಧಿವೇಶನದಲ್ಲಿ 371ನೇ ವಿಧಿ ಜಾರಿಯಾಗುವ ವಿಶ್ವಾಸವಿದೆ ಎಂದರು.ಉದ್ಯೋಗ, ಶಿಕ್ಷಣ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಆಂಧ್ರ ಮಾದರಿಯಲ್ಲಾದರೆ ಇಡೀ ಕರ್ನಾಟಕಕ್ಕೆ ಇದನ್ನು ಅನ್ವಯಿಸಬಹುದು. ಆಗ ರಾಜ್ಯ ಮಟ್ಟದ ಮೀಸಲಾತಿಯನ್ನು ಜಿಲ್ಲಾ ಮಟ್ಟದಲ್ಲೂ ತರಬಹುದು ಎಂದು ತಿಳಿಸಿದರು.ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಕುರಿತು ಯುವಕರು ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹ ವಿಷಯ. ಆದರೆ ಅದು ಬೇಡ, ಇದು ಬೇಕು ಎಂದು ಹೇಳುವುದು ತಪ್ಪು ಇವರುಗಳ ಹೋರಾಟ ಹಾಗೂ ಹೇಳಿಕೆಗಳ ಹಿಂದೆ  ದುರುದ್ದೇಶದ ವಾಸನೆ ಕಂಡು ಬರುತ್ತಿದೆ. ತಿದ್ದುಪಡಿಯಾದ ನಂತರ ಚರ್ಚಿಸಬೇಕಾದ ವಿಷಯಗಳನ್ನು ಮೊದಲೇ ಚರ್ಚೆಗೆ ಬರುವಂತೆ ಮಾಡಿ ಮತ್ತೆ ತಿದ್ದುಪಡಿಯಾಗದಂತೆ ನೋಡಿಕೊಳ್ಳುವುದೇ ಇದರ ಹಿಂದಿನ ಹುನ್ನಾರ ಎಂದು ಟೀಕಿಸಿದರು.ಅಕ್ರಮ ನೇಮಕಾತಿ- ಸಿಬಿಐಗೆ ಒಪ್ಪಿಸಿ: 1998ರಿಂದ 2004ರವರೆಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಮೂಲಕ ಒಂದೇ ಕೋಮಿಗೆ ಸೇರಿದ ಶೇ 80ರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಹಗರಣದ ಮುಖ್ಯ ಆರೋಪಿ ಬಿ.ಎ. ಹರೀಶ್‌ಗೌಡ ಹಾಗೂ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣ ಅವರ ವಿರುದ್ಧ ಸಿಬಿಐ ತನಿಖೆ ನಡೆಸುವ ಮೂಲಕ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಶಿವಶಂಕರ ಗಾರಂಪಳ್ಳಿ, ಲೂಯಿಸ್ ಕೋರಿ, ದೇವಿಂದ್ರಪ್ಪ, ನಾಗರಾಜ ಸ್ವಾದಿ ಉಪಸ್ಥಿರಿದ್ದರು.“371ನೇ ವಿಧಿ ತಿದ್ದುಪಡಿ ಅಡಿಯಲ್ಲಿ ಬಳ್ಳಾರಿಯನ್ನು ಸೇರಿಸಬೇಕೇ ಬೇಡವೇ ಎಂಬುದರ ಬಗ್ಗೆ ಗೊಂದಲ ಸೃಷ್ಟಿಸುವ ಹೇಳಿಕೆಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನೀಡಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿಯಾದ ನಂತರ ಯಾವ ಪ್ರದೇಶವನ್ನು ಸೇರಿಸಬೇಕು; ಯಾವುದನ್ನು ಬಿಡಬೇಕು ಎಂಬುದನ್ನು ಚರ್ಚಿಸಬೇಕು”

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry