ಗುರುವಾರ , ಏಪ್ರಿಲ್ 22, 2021
28 °C

ಅಂಗವಿಕಲ ಮಕ್ಕಳಿಗೆ ಹಕ್ಕು ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: `ತಂದೆ ತಾಯಿಗಳಲ್ಲಿ, ಸಮಾಜದಲ್ಲಿ ಅಂಗವಿಕಲ ಮಕ್ಕಳ ಬಗ್ಗೆ `ಅವರೇನು?~ ಎನ್ನುವ ಉದಾಸೀನತೆ ಇರಬಾರದು. ಸಾಮಾನ್ಯ ಮಕ್ಕಳಿಗೆ ಕೊಡುವಷ್ಟೇ ಆಸ್ಥೆಯನ್ನು ಅಂಗವಿಕಲ ಮಕ್ಕಳಿಗೂ ನೀಡಬೇಕು. ಅವರಿಗೆ ಶಿಕ್ಷಣ ಕೊಡಿಸಲು ಮರೆಯಬಾರದು. ಅಂಗವಿಕಲ ಮಕ್ಕಳ ಬಗ್ಗೆ ಕೇವಲ ಅನುಕಂಪದ ಮಾತು ಸಾಲದು. ಅವರಿಗೆ ಬೇಕಾದ ಎಲ್ಲಾ ಮೂಲಭೂತ ಹಕ್ಕು ಒದಗಿಸಿಕೊಡಬೇಕು~ ಎಂದು ಶಾಸಕ ವಾಲ್ಮೀಕ ನಾಯಕ ಹೇಳಿದರು.ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಮಿಷನ್ ಗುಲ್ಬರ್ಗ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಗಳು ಹಾಗೂ ಸ್ಕಂದ ಶಿಕ್ಷಣ ಮತ್ತು ವೈದ್ಯಕೀಯ ಸೇವಾ ಟ್ರಸ್ಟ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ಮಗು ಎಷ್ಟೇ ಅನಾರೋಗ್ಯದಿಂದ ನರಳುತ್ತಿದ್ದರೂ, ಅಂಧರಾಗಿದ್ದರೂ, ಅಂಗವಿಕಲರಾಗಿದ್ದರೂ, ಬುದ್ಧಿ ಮಾಂದ್ಯರಾಗಿದ್ದರೂ ತಂದೆ ತಾಯಿಗೆ ಅವರು ಮುದ್ದಿನ ಮಕ್ಕಳೆ~ ಎಂದು ಅವರು ವಿವರಿಸಿದರು.

`ಅಂಗವಿಕಲ ಮಕ್ಕಳಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಸಿಕೊಂಡು ಅವರು ಸ್ವಾವಲಂಬಿಗಳಾಗಿ ಬದುಕಲು ಪಾಲಕರು ಮತ್ತು ಪೋಷಕರು, ಶಿಕ್ಷಕರು, ಸಮಾಜ ಅನುಕೂಲ ಕಲ್ಪಿಸಿಕೊಡಬೇಕು.

 

ಸರ್ಕಾರದ ನಿರ್ದೇಶನದಂತೆ ಶಾಸಕರ ಅನುದಾನದಲ್ಲಿ ಅಂಗವಿಕಲ ಮಕ್ಕಳಿಗೆ ಸೈಕಲ್ ಮತ್ತು ಕಾಲು ಕೂಡಿಸಲು ಅನುದಾನ ಸೌಲಭ್ಯ ಮಾಡಿಕೊಡುವೆ~ ಎಂದು ಅವರು ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚವ್ಹಾಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಸಿದ್ಧವೀರಯ್ಯಾ ರುದ್ನೂರ್, ಡಾ.ಲೋಕೇಶ ನಾಯಕ, ಬಿಜೆಪಿ ಮುಖಂಡ ಸಿದ್ದಣ್ಣ ಕಲ್ಲಶೆಟ್ಟಿ, ತಾಹೇರ್ ಜುನೇದಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಲಿಂಗಪ್ಪಾ ಹೆಬ್ಬಾಳ್, ಮಹೇಶ ಬಟಗಿರಿ, ಅಮಾತೆಪ್ಪ, ಶಾಲೆಯ ಮುಖ್ಯೋಪಾಧ್ಯಾಯಿನಿ ಜನಾಬಾಯಿ ಮುಖ್ಯ ಅತಿಥಿಗಳಾಗಿದ್ದರು.ವಿದ್ಯಾರ್ಥಿನಿಯರಾದ ಲಕ್ಷ್ಮೀ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ರೇವಣಸಿದ್ದಪ್ಪ ಅವರು ಪಂಡಿತ್ ಪುಟ್ಟರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಾಬುರಾವ್ ಸ್ವಾಗತಿಸಿದರು. ರವೀಂದ್ರ ಅಡಿವೇರ್ ನಿರೂಪಿಸಿದರು. ಶಿವಶರಣಪ್ಪ ಅರಿಕೇರಿ ಹಾಗೂ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.