102 ವರ್ಷದ ರೋಗಿಗೆ ಥ್ರೊಂಬೊಲೈಸಿಸ್‌ ಚಿಕಿತ್ಸೆ

7

102 ವರ್ಷದ ರೋಗಿಗೆ ಥ್ರೊಂಬೊಲೈಸಿಸ್‌ ಚಿಕಿತ್ಸೆ

Published:
Updated:

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 102 ವರ್ಷದ ಪಾರ್ಶ್ವವಾಯು ಪೀಡಿತ ರೋಗಿಗೆ ಥ್ರೊಂಬೊಲೈಸಿಸ್‌ ಚಿಕಿತ್ಸೆ ನೀಡುವಲ್ಲಿ ವೈದ್ಯರು ಸಫಲರಾಗಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನರರೋಗ ತಜ್ಞ ಡಾ. ಎನ್‌.ದೀಪಕ್‌ ಈ ಕುರಿತು ಮಾಹಿತಿ ನೀಡಿದರು.

‘ಸಾಮಾನ್ಯವಾಗಿ ಥ್ರಾಂಬೊಲೈಸಿಸ್‌ ಚಿಕಿತ್ಸೆಯನ್ನು 18 ರಿಂದ 80 ವರ್ಷದೊಳಗಿನವರಿಗೆ ಮಾಡಲಾಗುತ್ತದೆ. ಆದರೆ ನಾವು 102 ವರ್ಷದ ವ್ಯಕ್ತಿಗೆ ಮಾಡುವಲ್ಲಿ ಸಫಲರಾಗಿದ್ದೇವೆ. ಮೊದಲಿಗೆ ಸಾಕಷ್ಟು ಸವಾಲುಗಳು ಎದುರಾದವು. ಆದರೆ ಪರೀಕ್ಷೆ ನಡೆಸಿ ಸ್ಕ್ಯಾನಿಂಗ್‌ ಮಾಡಿದ ನಂತರ ಈ ಚಿಕಿತ್ಸೆ ನೀಡುವ ತೀರ್ಮಾನಕ್ಕೆ ಬರಲಾಯಿತು’ ಎಂದು ಅವರು ಹೇಳಿದರು.

‘ಟಿ.ರಾಮಸ್ವಾಮಿ ಅವರು ಮುಂಬೈನ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. 80 ವರ್ಷದ ನಂತರ ಅವರಿಗೆ ರಕ್ತದೊತ್ತಡ ಕಾಣಿಸಿಕೊಂಡಿತ್ತು. ನವೆಂಬರ್‌ 16ರಂದು ಇದ್ದಕ್ಕಿದ್ದಂತೆ ಅವರಿಗೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಂಡಿತು. ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತರ ಚೇತರಿಸಿಕೊಂಡರು. ಒಂದು ಚುಚ್ಚುಮದ್ದಿಗೆ ₹50 ಸಾವಿರ ಹಾಗೂ ಒಟ್ಟಾರೆ ಖರ್ಚು ₹ 1ಲಕ್ಷದವರೆಗೂ ಆಗಿದೆ’ ಎಂದು ರೋಗಿಯ ಸಹೋದರಿ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !