ಶನಿವಾರ, ಏಪ್ರಿಲ್ 17, 2021
28 °C

ವೈದ್ಯ ವೃತ್ತಿಯಿಂದ ಆತ್ಮತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಮಾಜ ಸೇವೆಗೆ ಅವಕಾಶ ಒದಗಿಸುವ ವೈದ್ಯಕೀಯ ವೃತ್ತಿ ತುಂಬಾ ಪವಿತ್ರವಾದುದು. ರೋಗದಿಂದ ಬಳಲುವವರನ್ನು ನಗು ನಗುತ್ತಾ ಬದಕುವಂತೆ ಮಾಡುವ ವೈದ್ಯ ವೃತ್ತಿಯಿಂದ ಆತ್ಮತೃಪ್ತಿ ಸಿಗುತ್ತದೆ ಎಂದು ಡಾ. ಮಾಣಿಕರಾವ ಪಾಟೀಲ ಅಭಿಪ್ರಾಯ ಪಟ್ಟರು.ಗುಲ್ಬರ್ಗ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಆಯೋಜಿಸಿದ್ದ ವಿಶ್ವ ವೈದ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ವೈದ್ಯರ ಪಾಲಿಗೆ ಜನಸೇವೆಯೆ ಜನಾರ್ದನ ಸೇವೆ ಆಗಿರುತ್ತದೆ. ಸಮಾಜವು ವೈದ್ಯ ವೃತ್ತಿಯನ್ನು ಕೊಂಡಾಡುತ್ತದೆ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ರಾಮಕೃಷ್ಣ ರೆಡ್ಡಿ ಮಾತನಾಡಿ, `ವೈದ್ಯರಿಗೆ ಜನಪರ ಕಾಳಜಿ ಇರುತ್ತದೆ. ಸಮಾಜಕ್ಕೆ ಅವರ ಸೇವೆ ಅನನ್ಯ. ಮನುಷ್ಯನ ಹುಟ್ಟು-ಸಾವಿಗೆ ದೇವರೆ ಕಾರಣ ಎಂದು ತಿಳಿಯಲಾಗುತ್ತದೆ. ಹುಟ್ಟು-ಸಾವಿನ ಮಧ್ಯೆ ವೈದ್ಯರು ದೇವರ ಪ್ರತಿನಿಧಿಗಳಂತೆ ಮನುಷ್ಯನ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಾರೆ~ ಎಂದರು.

 

ಡಾ. ವಿ.ಸಿ. ಮೈಲಾಪುರ, ಡಾ. ಸುರೇಶ ಜಿ. ನವಣಿ, ಡಾ. ಮಧುಸೂದನ ಜಾಜಿ ಅವರನ್ನು ಸನ್ಮಾನಿಸಲಾಯಿತು. ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿರುವ ಡಾ. ವಿ.ಸಿ. ಮೈಲಾಪುರ ದಂಪತಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.ಅವಿನಾಶ ಭೋರಗಾಂವಕರ, ರಾಮಗೋಪಾಲ ಮಾಲು, ಡಾ. ಜಯಕಿಶನ ಠಾಕೂರ, ಎಸ್.ಎಸ್. ಕುಮ್ಮಣ್ಣ, ಜೀರಗಿ, ನಾಡಗೌಡ, ಓಂಪ್ರಕಾಶ, ಮಲ್ಲಣ್ಣ ರೆಡ್ಡಿ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.