ಒಳಚರಂಡಿಯಿಂದ ದುರ್ನಾತ: ಪರಿಹಾರಕ್ಕೆ ಮನವಿ

ಗುರುವಾರ , ಜೂಲೈ 18, 2019
28 °C

ಒಳಚರಂಡಿಯಿಂದ ದುರ್ನಾತ: ಪರಿಹಾರಕ್ಕೆ ಮನವಿ

Published:
Updated:

ಗುಲ್ಬರ್ಗ: ನಗರದ ರೈಲ್ವೆ ನಿಲ್ದಾಣ ಎದುರಿನ ಒಮ್ಮುಖ ಸಂಚಾರ ರಸ್ತೆಯಲ್ಲಿ ಒಳಚರಂಡಿ ಒಡೆದು ಐದಾರು ದಿನದಿಂದ ಸುತ್ತಲೂ ದುರ್ನಾತ ಹರಡಿದೆ. ಇದರಿಂದ ಸುತ್ತಲಿನ ನಿವಾಸಿಗಳು ತಾಪತ್ರಯ ಅನುಭವಿಸುವಂತಾಗಿದ್ದು, ಕೂಡಲೇ ಶಾಶ್ವತ ಪರಿಹಾರ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಮನವಿ ಸಲ್ಲಿಸಿದೆ.ಮ್ಯಾನ್‌ಹೋಲ್ ಮೂಲಕ ತ್ಯಾಜ್ಯ ಹೊರಬರುವುದು ತೀರಾ ಸಾಮಾನ್ಯ ಎನ್ನುವಂತಾಗಿದ್ದು, ಬಿಡಾಡಿ ದನಗಳು ಇದರಲ್ಲೆ ಒದ್ದಾಡುತ್ತವೆ. ಇದರಿಂದ ದನಗಳು ಹಾಗೂ ಜನಗಳು ಸಾಂಕ್ರಾಮಿಕ ರೋಗಕ್ಕೀಡಾಗುವ ಲಕ್ಷಣಗಳು ಹೆಚ್ಚಾಗಿದೆ. ಈ ದುರವಸ್ಥೆಯ ನೋಟವು ಅನಾಗರಿಕತೆಯನ್ನು ಪ್ರದರ್ಶಿಸುತ್ತಿದ್ದು, ಜನರು ಹಿಡಿಶಾಪ ಹಾಕುವಂತಾಗಿದೆ ಎಂದು ವಿವರಿಸಲಾಗಿದೆ.ವರ್ಷದಲ್ಲಿ ಸಾಕಷ್ಟು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೂ ತೇಪೆ ಹಾಕುವ ಕೆಲಸ ಮಾತ್ರ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಮಂಡಳಿಯು ಶಾಶ್ವತ ಪರಿಹಾರ ಕ್ರಮ ಜರುಗಿಸಬೇಕು ಮುಂದಾಗಬೇಕು ಎಂದು ಬಡಾವಣೆಯ ನಾಗರಿಕರ ಪರವಾಗಿ ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿಯ ಗೌಸ ಪಟೇಲ್ ಆಗ್ರಹಿಸಿದ್ದಾರೆ.12 ದಿನದಲ್ಲಿ ಸಮಸ್ಯೆ ಪರಿಹಾರದ ಭರವಸೆ:

ಜನರ ಒತ್ತಡಕ್ಕೆ ಮಣಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮುಂದಿನ 12 ದಿನದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರೆಂದು ಎಸ್‌ಯುಸಿಐ ಪ್ರಕಟಣೆ ತಿಳಿಸಿದೆ.ಜನರು ಒಂದುಗೂಡಿದರೆ ಎಂತಹದ್ದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಮಿತಿಯ ಸಂತೋಷಕುಮಾರ್ ಎಂ. ಹಿರವೇ, ಎಚ್.ವಿ. ದಿವಾಕರ್, ಸಂದೀಪ್ ಮತ್ತಿತರರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry