ಸೋಮವಾರ, ಏಪ್ರಿಲ್ 12, 2021
23 °C

ಕನ್ನಡ ಪಂಡಿತರು ಇತಿಹಾಸ ಪರೀಕ್ಷೆ ಬರೀಬೇಕಾ?

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರೌಢಶಾಲಾ ಶಿಕ್ಷಕರ ಹುದ್ದೆ ನೇಮಕಾತಿಗಾಗಿ ಆನ್ ಲೈನ್ ಮೂಲಕ ಏಪ್ರಿಲ್ ತಿಂಗಳಲ್ಲಿ ಅರ್ಜಿ ಕರೆಯಲಾಗಿತ್ತು. ಅದರಂತೆ ವಿದ್ಯಾರ್ಥಿಗಳು ತಮ್ಮ ಸಮೀಪದ ಇಂಟರ್‌ನೆಟ್ ಸೆಂಟರ್‌ಗೆ ತೆರಳಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.ಆದರೆ ಆನ್‌ಲೈನ್‌ನಲ್ಲಿ ಪಡೆದ  ಪ್ರವೇಶ ಪತ್ರದಲ್ಲಿ ವಿಷಯಗಳೇ ಅದಲು ಬದಲಾಗಿದ್ದರಿಂದ ವಿದ್ಯಾರ್ಥಿಗಳು ಗೊಂದಲದಲ್ಲಿ ಮುಳುಗುವಂತಾಗಿದೆ.ಐಚ್ಛಿಕ ಕನ್ನಡ ವಿಷಯ ತೆಗೆದುಕೊಂಡು ಪದವಿ ಮುಗಿಸಿದ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಸಿದರೆ ಅವರು ಕನ್ನಡ ವಿಷಯ ಪರೀಕ್ಷೆ ಬರೆಯುವ ಬದಲು ಇತಿಹಾಸ ಬರೆಯಬೇಕು ಎಂದು ಪ್ರವೇಶಪತ್ರದಲ್ಲಿ ನಮೂದಿಸಲಾಗಿದೆ.ಜುಲೈ 15ರಿಂದ 18ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪ್ರವೇಶ ಪತ್ರ ಕೈಯಲ್ಲಿ ಹಿಡಿದುಕೊಂಡಿರುವ ವಿದ್ಯಾರ್ಥಿಗಳು `ನಾವು ಓದಿರುವುದು ಮತ್ತು ನಮೂದಿಸಿರುವ ವಿಷಯ ಒಂದೇ ಆಗಿದ್ದರೂ ಪ್ರವೇಶ ಪತ್ರದಲ್ಲಿ ಬೇರೆ ವಿಷಯವೇ ಬಂದಿದೆ~ ಎಂದು ಕಂಗಾಲಾಗಿ ಕುಳಿತಿದ್ದಾರೆ.ಪದವಿ ನಂತರ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಿಇಡಿ ಪೂರೈಸಿರುವ ತಾಲ್ಲೂಕಿನ ಕಡಣಿ ಗ್ರಾಮದ ತ್ರಿವೇಣಿ ಬಸವರಾಜ ಕಣ್ಣಿ, ಪದವಿಯಲ್ಲಿ ಕನ್ನಡ ಐಚ್ಛಿಕ ವಿಷಯವನ್ನಾಗಿ  ಬಿಇಡಿ ಮುಗಿಸಿರುವ ಹನ್ನೂರಿನ ಅಂಬಿಕಾ ಮಲ್ಲಿಕಾರ್ಜುನ ಮುಂತಾದವರು ಪಡೆದುಕೊಂಡ ಪ್ರವೇಶ ಪತ್ರದಲ್ಲಿ ಕನ್ನಡ ವಿಷಯದ ಬದಲಾಗಿ ಇತಿಹಾಸ ಎಂದು ನಮೂದಿತವಾಗಿ ಬಂದಿದೆ.ಹೀಗಾಗಿ 15ರಂದು ಬೆಳಿಗ್ಗೆ ನಡೆಯಲಿರುವ ಸಾಮಾನ್ಯ ಪರೀಕ್ಷೆ ಬರೆದು, ಮತ್ತೆ ಮಧ್ಯಾಹ್ನ ಇತಿಹಾಸ ಪರೀಕ್ಷೆ ಬರೆಯುವ ಪ್ರಸಂಗ ಎದುರಾಗಿದೆ. ಇದರಿಂದಾಗಿ ರಾಜ್ಯಮಟ್ಟದಲ್ಲಿ ಹೇಗೋ ಗುಲ್ಬರ್ಗ ವಿಭಾಗ ಮಟ್ಟದಲ್ಲೂ ನೂರಾರು ವಿದ್ಯಾರ್ಥಿಗಳು ಕಂಗಾಲಾಗಿ ಕುಳಿತುಕೊಳ್ಳುವಂತಾಗಿದೆ.ಶಿಕ್ಷಣ ಇಲಾಖೆಯಲ್ಲಿನ ಈ ಬಗೆಯ ಗೊಂದಲಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎನ್ನುವುದಕ್ಕೆ ಇಂತಹ ಅನೇಕ ಪ್ರಕರಣಗಳಿಗೆ ಇದು ಒಂದು ತಾಜಾ ಉದಾಹರಣೆ ಎಂದು ಹೇಳಬಹುದು.ವಿಷಯ ಬದಲಾವಣೆಗಾಗಿ....

ಪ್ರೌಢಶಾಲಾ ಶಿಕ್ಷಕರ ಹುದ್ದೆ ನೇಮಕಾತಿಗಾಗಿ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ವಿಷಯಗಳು ಬದಲಾಗಿ ಮುದ್ರಣವಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳು ಜುಲೈ 10ರ ಒಳಗಾಗಿ ಬೆಂಗಳೂರಿನ ಕೇಂದ್ರೀಕೃತ ದಾಖಲಾತಿ ಘಟಕದ ಇ-ಮೇಲ್ ವಿಳಾಸ ಠ್ಟಿಛ್ಝಿಃಜಞಜ್ಝಿ.್ಚಟಞಗೆ ತಮ್ಮ ಅರ್ಜಿ ಸಂಖ್ಯೆ ಪದವಿಯಲ್ಲಿ ಅಭ್ಯಾಸ ಮಾಡಿದ ಐಚ್ಛಿಕ ವಿಷಯ ಹಾಗೂ ಬದಲಾವಣೆ ಬಯಸಿದ ವಿಷಯಗಳ ವಿವರವನ್ನು ಕಳುಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಚನ್ನಬಸಪ್ಪ ಎಸ್. ಮುಧೋಳ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಅಭ್ಯರ್ಥಿಗಳು ಕಳುಹಿಸಿದ ಮಾಹಿತಿ ನಿಜವಿದ್ದಲ್ಲಿ ವಿಷಯ ಬದಲಾವಣೆ ಮಾಡಿ ಇಲಾಖೆಯ ವೆಬ್‌ಸೈಟ್ ಡಿಡಿಡಿ.ಠ್ಚಟಟ್ಝಛಿಛ್ಠ್ಚಠಿಜಿಟ್ಞ.ಚ್ಟ.್ಞಜ್ಚಿ.ಜ್ಞಿನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಸಂಬಂಧಿಸಿದ ಅಭ್ಯರ್ಥಿಗಳು ಜುಲೈ 10ರ ನಂತರ ಈ ವೆಬ್‌ಸೈಟ್‌ನಿಂದ ಪರಿಷ್ಕೃತ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 080-22228805-22271866ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.