ಬುಧವಾರ, ಮೇ 25, 2022
31 °C

ಎದೆಗಾರಿಕೆ ಇರುವವರೇ ನಿಜವಾದ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಗತ್ತಿನ ಯಾವ ಸಂಸ್ಕೃತಿಯಲ್ಲೂ ಮರಣದಲ್ಲಿ ಮಹಾನವಮಿ ಕಾಣುವುದು ಅಸಾಧ್ಯ. ಆದರೆ ಶರಣ ಪರಂಪರೆಯಲ್ಲಿ ಮಾತ್ರ ಮರಣದಲ್ಲಿ ಮಹಾನವಮಿಯನ್ನು ಕಾಣಬಹುದು ಎಂದು ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.ಬಸವ ಸಮಿತಿ ವತಿಯಿಂದ ಇಲ್ಲಿನ ಖೂಬಾ ಕಲ್ಯಾಣ ಮಂಟಪದಲ್ಲಿ ಸೋಮವಾರ ಜರುಗಿದ ಲಿಂ. ಸಿದ್ರಾಮಪ್ಪ ಅಂಗಡಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಮರಣವೇ ಮಹಾನವಮಿ” ಎಂಬ ವಿಷಯ ಕುರಿತು ಮಾತನಾಡಿದರು.ತನಗೆ ಆಶ್ರಯ ನೀಡಿದ ಬಿಜ್ಜಳನ ಹತ್ತಿರ ಬಸವಣ್ಣನವರು ಜೋಳವಾಳಿಯಾಗಿರದೆ ಕರ್ತವ್ಯದ ಮತ್ತು ವೇಳೆಯ ಆಳಾಗಿದ್ದರು. ದೇಹ, ಮನಸ್ಸು, ಚೈತನ್ಯದ ಬಗ್ಗೆ ವಚನಕಾರರ ವಿಚಾರಗಳು ಬಹಳಷ್ಟು ಪ್ರಸ್ತುತ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಮಾತನಾಡಿ, ಸಂಬಂಧಗಳೇ ಕಳಚಿ ಹೋಗುತ್ತಿರುವ ಈ ದಿನದಲ್ಲಿ ಹಿರಿಯರನ್ನು ಸ್ಮರಿಸುವ ಮೂಲಕ ಮುರಿದು ಹೋಗಿರುವ ಸಂಬಂಧಗಳನ್ನು ಜೋಡಿಸುವ ಕೆಲಸ ಮಾಡುತ್ತಿರುವುದು ಸ್ತುತ್ಯರ್ಹವಾದ ಕೆಲಸ ಎಂದು ಬಣ್ಣಿಸಿದರು.ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಉದ್ಯಮಿ ಡಾ. ಎಸ್. ಎಸ್. ಪಾಟೀಲ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ ಎನ್. ತಿಪ್ಪಣ್ಣ, ವಿಲಾಸವತಿ ಖೂಬಾ, ಮಧುರಾ ಅಶೋಕ, ಸುವರ್ಣ ಚೆನ್ನಣ್ಣ, ದೇವರಾಯ ನಾಡೆಪಲ್ಲೆ ವೇದಿಕೆಯಲ್ಲಿದ್ದರು.

ಉದ್ದಂಡಪ್ಪ ಕಾರ್ಯಕ್ರಮ ನಿರೂಪಿಸಿದರು. ಡಾ. ವೀರಣ್ಣ ದಂಡೆ ಸ್ವಾಗತಿಸಿದರು. ಡಾ. ಜಯಶ್ರೀ ದಂಡೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.