ಶಾಲೆ ಮುಂದೆ ಗ್ರಾಮಸ್ಥರ ಪ್ರತಿಭಟನೆ

ಭಾನುವಾರ, ಜೂಲೈ 21, 2019
21 °C

ಶಾಲೆ ಮುಂದೆ ಗ್ರಾಮಸ್ಥರ ಪ್ರತಿಭಟನೆ

Published:
Updated:

ಚಿತ್ತಾಪುರ: ತಾಲ್ಲೂಕಿನ ಅಲ್ಲೂರ್(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಗನುಸಾರವಾಗಿ ಶಿಕ್ಷಕರಿಲ್ಲ. ಶಿಕ್ಷಕರ ಕೊರತೆ ನಿವಾರಿಸುವಂತೆ ಒತ್ತಾಯಿಸಿ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಶಾಲೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.`ಶಾಲೆಯಲ್ಲಿ ಶಿಕ್ಷಕರ ಸಮಸ್ಯೆ ಇದೆ ಎಂದು ಶಿಕ್ಷಣಾಧಿಕಾರಿಗೆ ಮನವಿ ಪತ್ರ ಕೊಟ್ಟರೂ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಶಿಕ್ಷಕರು ಬೇರೆಡೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ 280 ಇದೆ. ಶಿಕ್ಷಕರು ಕೇವಲ ಐವರಿದ್ದಾರೆ~ಎಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ತಿಳಿಸಿದರು.`ಶಿಕ್ಷರ ಕೊರತೆ ಅರಿಯಲು ಶಿಕ್ಷಣಾಧಿಕಾರಿ ಶಾಲೆಗೆ ಬರಬೇಕು. ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗನುಸಾರವಾಗಿ ಶಿಕ್ಷಕರ ವ್ಯವಸ್ಥೆ ಮಾಡುತ್ತೇನೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಲಿಖಿತ ಭರವಸೆ ನೀಡಬೇಕು~ ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ್ದ ನಾಲವಾರ ವಲಯ ಶಿಕ್ಷಣ ಸಂಯೋಜಕ ಚಂದ್ರಾಮ ಅಮನಗಡೆ ಅವರು, ಶಿಕ್ಷಣಾಧಿಕಾರಿ ಚವ್ಹಾಣ್‌ಶೆಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ, ಅವರು `ಒಂದು ವಾರದಲ್ಲಿ ಶಿಕ್ಷಕರ ನಿಯೋಜನೆ ಮಾಡುತ್ತೇನೆ~ ಎಂದು ಅವರಿಗೆ ತಿಳಿಸಿದರಂತೆ. ಅದನ್ನು ಆಧರಿಸಿ ಶಿಕ್ಷಣ ಸಂಯೋಜಕರು ಒಂದು ವಾರದಲ್ಲಿ ಇಬ್ಬರು ಶಿಕ್ಷಕರನ್ನು ಶಾಲೆಗೆ ನಿಯೋಜಿಸುವ ಲಿಖಿತ ಭರವಸೆ ನೀಡಿದಾಗ, ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ, ಗ್ರಾಮದ ಮುಖಂಡರಾದ ವೆಂಕಟೇಶ ಕುಲ್ಕರ್ಣಿ, ಅಶೋಕರೆಡ್ಡಿ, ವಿರುಪಾಕ್ಷರೆಡ್ಡಿ ಪಾಟೀಲ್, ನಾಗರಾಜ ಠಾಣಾಗುಂದಿ, ಗಂಗಾಧರ ಕರದಾಳ, ಮಹಿಪಾಲರೆಡ್ಡಿ ಠಾಣಾಗುಂದಿ, ಈರಪ್ಪ ಮುರಳ್,  ಶರಣಪ್ಪ, ಮಲ್ಲಪ್ಪ ಪೂಜಾರಿ, ಹಣಮಂತ ತಳವಾರ, ದೇವಪ್ಪ ಬೈನಾರ್, ಬನ್ನಪ್ಪ ಬಂದೆಳ್ಳಿ, ಮಲ್ಲಪ್ಪ, ಈರಪ್ಪ, ಶಂಕರ, ಮಹಾದೇವಮ್ಮ ಮುಂತಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry