ಮಂಗಳವಾರ, ಏಪ್ರಿಲ್ 13, 2021
23 °C

ಇಂದಿನಿಂದ ಪ್ರೌಢಶಾಲಾ ಶಿಕ್ಷಕರ ಹುದ್ದೆ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಪ್ರೌಢಶಾಲಾ ಶಿಕ್ಷಕರ ಹುದ್ದೆ ನೇಮಕಾತಿಗಾಗಿ ಭಾನುವಾರದಿಂದ ಜುಲೈ 18ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಚನ್ನಬಸಪ್ಪ ಎಸ್. ಮುಧೋಳ್ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 71 ಪರೀಕ್ಷಾ ಕೇಂದ್ರಗಳಿದ್ದು, ಈ ಪೈಕಿ 64 ಕೇಂದ್ರಗಳನ್ನು ನಗರದಲ್ಲಿ ಇನ್ನುಳಿದ 7 ಕೇಂದ್ರಗಳನ್ನು ಶಹಾಬಾದ ಪಟ್ಟಣದಲ್ಲಿ ಸ್ಥಾಪಿಸಲಾಗಿದೆ. 18,667 ಗುಲ್ಬರ್ಗ ನಗರದ ಪರೀಕ್ಷಾ ಕೇಂದ್ರಗಳಲ್ಲಿ 2,141 ಅಭ್ಯರ್ಥಿಗಳು ಶಹಾಬಾದ ಕೇಂದ್ರ ಸೇರಿ ಒಟ್ಟು 20,808 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಶಿಕ್ಷಣ ಇಲಾಖೆ ವತಿಯಿಂದ ಮುಖ್ಯ ಅಧೀಕ್ಷಕರ ಜೊತೆ ಪ್ರತಿ ಕೇಂದ್ರಕ್ಕೆ ಒಬ್ಬರಂತೆ 71 ವೀಕ್ಷಕರನ್ನು ನೇಮಿಸಲಾಗಿದ್ದು, ಗುಲ್ಬರ್ಗದಲ್ಲಿ 18 ಜನ, ಶಹಾಬಾದನಲ್ಲಿ ಇಬ್ಬರು ಸೇರಿದಂತೆ ಒಟ್ಟು 20 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಮಧ್ಯಾಹ್ನ ಕಲಾ ಶಿಕ್ಷಕರ ಪರೀಕ್ಷೆ ನಡೆಯಲಿದೆ.

 

ಪರೀಕ್ಷಾರ್ಥಿಗಳ ಗಮನಕ್ಕೆ...

ಪ್ರೌಢಶಾಲಾ ಶಿಕ್ಷಕರ ಹುದ್ದೆ ನೇಮಕಾತಿ ಪ್ರವೇಶ ಪತ್ರದಲ್ಲಿ ಜಿಲ್ಲೆಯ ಶಹಾಬಾನ ಪರೀಕ್ಷಾ ಕೇಂದ್ರದ ಹೆಸರು ಆಲ್ ಅಮೀನ್ ಶಾಲೆ ಎಂದಿದೆ. ಅಭ್ಯರ್ಥಿಗಳು ಈ ವಿಷಯ ಕುರಿತು ಈಗಾಗಲೇ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಮುದ್ರಣ ದೋಷದಿಂದಾಗಿ ಪ್ರವೇಶ ಪತ್ರದಲ್ಲಿ ತಪ್ಪಾಗಿ ಅಚ್ಚಾಗಿದೆ.

 

ಅಂಜುಮನ್ ಉರ್ದು ಶಾಲೆ ಎಂದಾಗಬೇಕಿದ್ದ ಶಾಲೆಯ ವಿಳಾಸ ಆಲ್ ಅಮೀನ್ ಶಾಲೆ ಎಂದಾಗಿದ್ದು, ಅಭ್ಯರ್ಥಿಗಳು ಇದನ್ನು ಗಮನಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.