ಸಚಿವ ವಲ್ಯ್‌ಪುರ ನಿವಾಸದ ಎದುರು ಪ್ರತಿಭಟನೆ

ಗುರುವಾರ , ಜೂಲೈ 18, 2019
28 °C

ಸಚಿವ ವಲ್ಯ್‌ಪುರ ನಿವಾಸದ ಎದುರು ಪ್ರತಿಭಟನೆ

Published:
Updated:

ಗುಲ್ಬರ್ಗ: ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ನೂತನ ಸಚಿವ ಸುನಿಲ್ ವಲ್ಯಾಪುರೆ ಅವರ ಮನೆ ಎದುರು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.ಪಕ್ಷಾತೀತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರು 371ನೇ ಕಲಂ ಜಾರಿಗೆ ಸ್ಪಂದಿಸಿರುವುದು ಸ್ವಾಗತಾರ್ಹ. ಬರುವ ಮಳೆಗಾಲದ ಅಧಿವೇಶನದಲ್ಲಿ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ರಾಜ್ಯ ಸರ್ಕಾರದ ಸಚಿವರು ಹಾಗೂ ಈ ಭಾಗದ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂದೀಪ ಚವಾಣ್, ಜಗದೀಶ ನಾಯಕ, ನಿಲೇಶ ಎಂ. ಚವಾಣ್, ಮೋಹನ ವಿ. ರಾಠೋಡ, ಆನಂದ ಚವ್ಹಾಣ, ಲಕ್ಷ್ಮಣ ದಸ್ತಿ, ನಾಗಲಿಂಗಯ್ಯ ಮಠಪತಿ, ಕಲ್ಯಾಣರಾವ ಪಾಟೀಲ, ಮಂಜುನಾಥ ನಾಲವಾರಕರ್, ತಿಪ್ಪಣ್ಣ ಲಂಡನ್‌ಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry