ಭಾನುವಾರ, ಏಪ್ರಿಲ್ 18, 2021
32 °C

ಜಿಲ್ಲಾ ಪಂಚಾಯಿತಿಗೆ ಹೈಟೆಕ್ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಆಡಿಯನ್ಸ್ ರೆಸ್ಪಾನ್ಸ್ ಸಿಸ್ಟಮ್ ಅನ್ನು ಬುಧವಾರ ಪರಿಚಯಿಸಲಾಯಿತು.ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾ ಅಧಿಕಾರಿ  ಎಸ್.ಬಸವರಾಜ ನೂತನ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಈ ವ್ಯವಸ್ಥೆಯನ್ನು ಬಳಸುವ ಬಗ್ಗೆ  ಪ್ರಾಯೋಗಿಕ ತರಬೇತಿ ನೀಡಿದರು.ಈ ವಿಧಾನದ ಅಳವಡಿಕೆಯಿಂದ ನಿರ್ಣಯ ಕೈಗೊಳ್ಳುವಾಗ ಪಾರದರ್ಶಕ ವ್ಯವಸ್ಥೆ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಮತದಾನವನ್ನು ಮಾಡಬಹುದು. ರಾಜ್ಯದಲ್ಲಿಯೇ ಈ ಪದ್ಧತಿಯನ್ನು ಅಳವಡಿಸಿರುವ ಮೊದಲ ಜಿಲ್ಲಾ ಪಂಚಾಯಿತಿ ಎಂಬ ಹೆಗ್ಗಳಿಕೆಯೂ ಗುಲ್ಬರ್ಗ ಜಿಲ್ಲೆಯದ್ದಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಲ್ಮಾ ಫಾಹಿಮ್ ತಿಳಿಸಿದರು.ನೂತನ ಸದಸ್ಯರು ರಿಮೋಟ್ ಮೂಲಕ ಮತ ಚಲಾಯಿಸುವ ಪ್ರಯೋಗವನ್ನೂ ಕೈಗೊಂಡರು. ಈ ವಿಧಾನದಿಂದ ಹೌದು ಅಥವಾ ಇಲ್ಲ ಗಳಂಥ ನಿರ್ಣಯಗಳನ್ನು ಸುಲಭವಾಗಿ ಕೈಗೊಳ್ಳಬಹುದು. ಆದ್ಯತೆಯ ಮೇರೆಗೆ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಬಹುದು. ಕೆಲವೊಮ್ಮೆ ಹಿಂಜರಿಕೆಯಿಂದ ಅಥವಾ ಗೌಪ್ಯ ಕಾಪಾಡಲು ಸಾಧ್ಯವಾಗದೆ ಇರುವುದರಿಂದ ಕೆಲ ಸದಸ್ಯರು ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ನಿರ್ಲಿಪ್ತರಾಗುತ್ತಾರೆ. ಒಟ್ಟಾರೆಯಾಗಿ ಪ್ರತಿಯೊಬ್ಬ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಈ ವಿಧಾನದಿಂದ ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಲ್ಮಾ ವಿವರಿಸಿದರು.ಅಗತ್ಯವಿದ್ದಲ್ಲಿ ಯಾರು ಯಾವುದಕ್ಕೆ ಮತ ನೀಡಿದ್ದಾರೆ ಎಂಬುದನ್ನೂ ಅರಿಯಬಹುದಾಗಿದೆ ಎಂದೂ ಹೇಳಿದರು. ನೂತನ ಸದಸ್ಯರು ಈ ಹೊಸ ಪದ್ಧತಿಯನ್ನು ಸ್ವಾಗತಿಸಿದರು. ಸದ್ಯ ಈ ತಂತ್ರಜ್ಞಾನ ಅಳವಡಿಸಿರುವುದು ಖುಷಿ ತಂದಿದೆ. ಆದರೆ ಇದರ ಬಳಕೆ ಹಾಗೂ ಅನ್ವಯಿಸುವ ಪದ್ಧತಿಯನ್ನು ಅರಿಯಲು ಒಂದು ತರಬೇತಿಯ ಅಗತ್ಯವಿದೆ. ನಂತರ ಪರಿಣಾಮಕಾರಿಯಾಗಿ ಬಳಸಬಹುದು. ನೂತನ ಸದಸ್ಯರಿಗೆ ತರಬೇತಿ ಆಯೋಜಿಸಬೇಕು ಎಂದ ನೆಲೋಗಿಯ ಸದಸ್ಯೆ ಶೋಭಾ ಬಾನಿ ಅವರ ಸಲಹೆಗೆ  ಅಧ್ಯಕ್ಷ ಶಿವಪ್ರಭು ಪಾಟೀಲ  ಸಹಮತಿ ವ್ಯಕ್ತ ಪಡಿಸಿದರು. ಮುಂದಿನ ಸಭೆಯಿಂದ ಇದನ್ನೇ ಬಳಸುವ ಉತ್ಸಾಹ ತೋರಿದರು. ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.