ಶುಕ್ರವಾರ, ಏಪ್ರಿಲ್ 23, 2021
24 °C

ವಿದ್ಯೆ ಅಭ್ಯಾಸ ಮಾಡುವವನ ಕೈವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕತ್ತಲೆ ಅಳಿಸಬೇಕಾದರೆ ಬೆಳಕು ಬೇಕು, ಅಜ್ಞಾನ ಅಳಿಸಬೇಕಾದರೆ ಜ್ಞಾನ ಬೇಕು. ವಿದ್ಯೆ ಎಂಬುದು ಅಭ್ಯಾಸ ಮಾಡುವವನ ಕೈ ವಶವಾಗುತ್ತದೆ ಎಂದು ಡಾ.ಶಿವರಾಜ ಶಾಸ್ತ್ರಿ ಹೇಳಿದರು.ಎಂ.ಬಿ ನಗರದ ಓಕಳಿ ಶಿಕ್ಷಣ ಸಂಸ್ಥೆಯ ಕನ್ನಡ ಕಾನ್ವೆಂಟ್ ಪ್ರೌಢ ಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ವಚನ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಾಸ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು, ಗುರು, ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಆಲಿಸಬೇಕು ಎಂದರು.ಮನನ ಮತ್ತು ಅಭ್ಯಾಸ ವ್ಯಕ್ತಿತ್ವ ವಿಕಾಸದ ಪ್ರಮುಖ ಅಂಶಗಳು. ಇಂಥ ಅಂಶಗಳನ್ನು ಶರಣರು ವಚನದಲ್ಲಿ ಹೇಳಿದ್ದಾರೆ. ವಚನ ಸಾಹಿತ್ಯದಿಂದ ಜಗತ್ತಿನಲ್ಲಿ ಅನೇಕ ಚಳವಳಿ ನಡೆದಿವೆ, ಶರಣರ ವಚನಗಳು ಮಾರ್ಗದರ್ಶನ ನೀಡುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಪ್ರೊ.ಕೆ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಈರಣ್ಣ ಎಸ್.ಜಿ.ಅಪ್ಪಾರಾವ ಅಕ್ಕೋಣಿ, ಶಿವರಾಜ ಅಂಡಗಿ, ಸಿ.ಎಸ್.ಪಾಟೀಲ, ಶಿವಾನಂದ ಕಶೆಟ್ಟಿ, ಉಪಸ್ಥಿತರಿದ್ದರು.

ಶಿವಲೀಲಾ, ಅರ್ಚನಾ ಪ್ರಾರ್ಥಿಸಿದರು. ಅನ್ನಪೂರ್ಣ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.