ಆಳಂದ: ಭೂ ಕಂಪನ: ಆತಂಕ ಮೂಡಿಸಿದ ಸದ್ದು

ಬುಧವಾರ, ಮೇ 22, 2019
24 °C

ಆಳಂದ: ಭೂ ಕಂಪನ: ಆತಂಕ ಮೂಡಿಸಿದ ಸದ್ದು

Published:
Updated:

ಆಳಂದ:  ತಾಲ್ಲೂಕಿನ ಅನೇಕ ಭಾಗದಲ್ಲಿ ಗುರುವಾರ ಬೆಳಿಗ್ಗೆ 9ರ ಸುಮಾರಿಗೆ ದಿಢೀರನೆ ಭಾರಿ ಸದ್ದು ಕೇಳಿ ಬಂದ ಪರಿಣಾಮ ಅನೇಕರಲ್ಲಿ ಆತಂಕ ಮೂಡಿಸಿತು. ಬೆಳಗಿನ ಜಾವ ತಮ್ಮ ತಮ್ಮ ಕೆಲಸದಲ್ಲಿ ನಿರತರಾದಾಗ ಒಮ್ಮೆಲೆ ದೂರದಲ್ಲಿ ಎಲ್ಲೋ ಸ್ಫೋಟಗೊಂಡಂತೆ ಅನುಭವ ನೀಡಿದೆ. ತಾಲ್ಲೂಕಿನ ಮಾದನಹಿಪ್ಪರಗಾ, ನಿಂಬರ್ಗಾ, ಕಿಣ್ಣಿಸುಲ್ತಾನ, ಸಾವಳೇಶ್ವರ, ಖಜೂರಿ, ಚಿಂಚೋಳಿ, ಹಿರೋಳಿ ಹೀಗೆ ಮತ್ತಿತರ ಗಡಗಡ ಸದ್ದು ಉಂಟಾಗಿರುವುದರ ಜೊತೆಗೆ ನೆಲ ನಡುಗಿದ ಅನುಭವು ಕೆಲವರಿಗೆ ಆಗಿದೆ ಎಂದು ಸಂತೆಗೆ ಬಂದ ಹಲವರು ಪಟ್ಟಣದಲ್ಲಿ ಮಾತನಾಡಿಕೊಳ್ಳುತ್ತಿದ್ದರು.ಭಾರಿ ಸದ್ದಿನಿಂದ ಮನೆಯೊಳಗಿನ ಗೃಹ ಉಪಯೋಗಿ ಸಾಮಗ್ರಿಗಳು ಹಾಗೂ ಮನೆಯ ಅಂಚುಗಳು ಕ್ಷಣ ಹೊತ್ತು ಅಲುಗಾಡಿದ ಅನುಭವ ಆಗಿದೆ ಎಂದು ಕಾಮನಹಳ್ಳಿ ಸಿದ್ದಯ್ಯ ಸ್ವಾಮಿ ಪತ್ರಿಕೆಗೆ ತಿಳಿಸಿದರು. ಅನೇಕರಿಗೆ ಏನಾಯಿತು? ಎಂಬುವುದು ತಿಳಿಯದೆ ಪರಸ್ಪರ ಮಾತನಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಮಹಾರಾಷ್ಟ್ರದ ಸೋಲಾಪೂರ, ಅಕ್ಕಲಕೋಟ ಭಾಗಗಳಲ್ಲಿ ಭೂಮಿ ಕಂಪನಗೊಂಡಿದೆ ಎಂದು ಮಧ್ಯಾಹ್ನದ ಹೊತ್ತಿಗೆ ಪಟ್ಟಣದಲ್ಲಿ ಸದ್ದು ಭಾರಿ   ಸುದ್ದಿಯಾಯಿತು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry