ನಾಗಾಯಿ ಶಾಸನ ಸಂರಕ್ಷಿಸಲು ನಿರ್ಲಕ್ಷ್ಯ!

ಬುಧವಾರ, ಮೇ 22, 2019
32 °C

ನಾಗಾಯಿ ಶಾಸನ ಸಂರಕ್ಷಿಸಲು ನಿರ್ಲಕ್ಷ್ಯ!

Published:
Updated:

ಚಿತ್ತಾಪುರ: ಪಟ್ಟಣದ ಆಗ್ನೇಯಕ್ಕೆ ಎರಡು ಕಿ.ಮೀ ಅಂತರದಲ್ಲಿರುವ ಐತಿಹಾಸಿಕ ಕ್ಷೇತ್ರ ನಾಗಾಯಿಯಲ್ಲಿರುವ ತ್ರೈಪುರುಷ ದೇವಾಲಯದ ಆವರಣದಲ್ಲಿರುವ ಶಾಸನವನ್ನು ಸಂರಕ್ಷಿಸಲು ತಾಲ್ಲೂಕು ಆಡಳಿತ ಹಾಗೂ ರಾಜ್ಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲಾಗಿದ್ದಾರೆ ಎನ್ನುವುದಕ್ಕೆ ಕೆಳಗೆ ಉರುಳಿ ಬಿದ್ದ ಶಿಲಾ ಶಾಸನವೇ ಸಾಕ್ಷಿಯಾಗಿ ನಿಂತಿದೆ.

ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಶಿಕ್ಷಣದಿಂದ ಉತ್ತುಂಗಕ್ಕೇರಿದ ನಾಗಾಯಿ ಅಗ್ರಹಾರದ ಬಗ್ಗೆ ಸಮಗ್ರ ಮಾಹಿತಿ ನೀಡುವ ಶಾಸನ ಇದಾಗಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿ ನಿಲಯ, ಗ್ರಂಥಾಲಯ, ಗ್ರಂಥಪಾಲಕರು ಮತ್ತು ಅವರಿಗೆ ದಾನ ಬಿಟ್ಟ ಹಾಗೂ ಬೋಧಕರಿಗೆ ಜೀವನ ಸಾಗಿಸಲು ಭೂಮಿ ಉಂಬಳಿಯಾಗಿ ಬಿಟ್ಟ ವಿವರಣೆ ನೀಡುವ ಶಾಸನವನ್ನು ನಿರ್ಲ್ಷಕ್ಷಿಸಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ನಾಗಾಯಿ ಕ್ಷೇತ್ರಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು, ಸಾರ್ವಜನಿಕರನ್ನು ಕಾಡುತ್ತಿದೆ.

ಕಳೆದ ವರ್ಷ ಮಂದಿರದ ಆವರಣಕ್ಕೆ ಬಂದ ಜೀಪೊಂದು ಶಾಸನಕ್ಕೆ ಡಿಕ್ಕಿ ಹೊಡೆದು ಶಾಸನವನ್ನು ನೆಲಕ್ಕುರುಳಿಸಿತ್ತು. ಅಂದಿನಿಂದ ಇಂದಿನವರೆಗೆ ಅದು ನೆಲದ ಮೇಲೆಯೆ ಬಿದ್ದು ಅನಾಥ ಪ್ರಜ್ಞೆ ಎದುರಿಸುತ್ತಿದೆ. ಶಾಸನವನ್ನು ಮತ್ತೆ ನೇರವಾಗಿ ನಿಲ್ಲಿಸುವ ಕೆಲಸ ಯಾರೂ ಮಾಡುತ್ತಿಲ್ಲ. ತಾಲ್ಲೂಕು ಆಡಳಿತ ಕಣ್ಣೆತ್ತಿಯೂ ನೋಡುತ್ತಿಲ್ಲ. ಇದು ಇತಿಹಾಸಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳು ಅನೇಕ ಸಂಖ್ಯೆಯಲ್ಲಿವೆ. ಆದರೆ, ಒಂದೂ ಸಂಘಟನೆಯವರು ಶಾಸನಕ್ಕೆ ಒದಗಿರುವ ದುರ್ಗತಿ ಕಂಡು ಅದನ್ನು ಸರಿ ಮಾಡುವಂತೆ ಆಡಳಿತದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿಲ್ಲ. ಒಂದು ವರ್ಷದಿಂದ ನೆಲಕ್ಕುರುಳಿರುವ ಶಾಸನದ ಕಡೆಗೆ ಯಾರೂ ಅದರತ್ತ ದೃಷ್ಟಿ ಹಾಯಿಸಿಲ್ಲ. ಶಾಸನದ ಮಹತ್ವ ಹಾಗೂ ಅದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತೋರಿಸಲು ಉಳಿಸಿಕೊಂಡು, ಐತಿಹಾಸಿಕ ಸ್ಮಾರಕವಾಗಿ ಕಾಪಾಡಿಕೊಂಡು ಹೋಗುವ ದೆಶೆಯಲ್ಲಿ ಯೋಚಿಸಿ ಶಾಸನದ ಸಂರಕ್ಷಣೆಗೆ ಮುಂದಾಗಬೇಕು ಎನ್ನುವುದು ಇತಿಹಾಸಪ್ರಿಯರ ಮನವಿ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry