ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ

ಶುಕ್ರವಾರ, ಮೇ 24, 2019
29 °C

ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ

Published:
Updated:

ಗುಲ್ಬರ್ಗ:  ಸ್ವಾತಂತ್ರ್ಯ ಸಿಕ್ಕಿದಾಕ್ಷಣ ಮುಗಿಯದು, ಅದು ನಿರಂತರವಾಗಿರಬೇಕು. 1857ರ ಸಿಪಾಯಿ ದಂಗೆಯಿಂದ ಪ್ರಾರಂಭವಾದ ಸ್ವಾತಂತ್ರ್ಯ ಸಂಗ್ರಾಮ ಇನ್ನೂ ಮುಗಿದಿಲ್ಲ. ನಾವು ಸ್ವಾತಂತ್ರ್ಯ ಕೊಟ್ಟಿದ್ಯಾರಿಗೆ? ಭ್ರಷ್ಟರಿಗೆ, ಭಯೋತ್ಪಾದಕರಿಗೆ, ಶೋಷಕರಿಗೆ ಎಂದು ವ್ಯಥೆ ಪಟ್ಟುಕೊಂಡ ಎಂ.ಎಸ್.ಐ. ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್.ಎಲ್. ಪಾಟೀಲ `ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ~ ಎಂಬ ಕವಿ ಸಿದ್ದಲಿಂಗಯ್ಯನವರ ಕವನ ನೆನಪಿಸಿದರು.

ನಗರದ ಸೂಪರ್ ಮಾರ್ಕೆಟ್‌ನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕಾಯಕ ಫೌಂಡೇಷನ್ ಎಜುಕೇಷನ್ ಟ್ರಸ್ಟ್ ಹಾಗೂ ವಿಶ್ವ ಜ್ಯೋತಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ `ಸ್ವಾತಂತ್ರ್ಯದ ಸಾರ್ಥಕತೆ~ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಭಾರತ ಶ್ರೀಮಂತ ರಾಷ್ಟ್ರ ಆದರೆ ಭಾರತಿಯರು ಬಡವರು, 40 ಪ್ರತಿಶತ ಜನ ಎರಡು ಹೊತ್ತು ಊಟಕ್ಕೂ ಗತಿಯಿಲ್ಲದವರಿದ್ದಾರೆ ಎಂದರು.

ಪ್ರೊ. ಆರ್.ಕೆ. ಹುಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ.ಆರ್.ಪಾಟೀಲ ಕೇವಲ ವೈಯಕ್ತಿಕ ಏಳಿಗೆ ಬಯಸದೆ ಇಡಿ ವ್ಯವಸ್ಥೆ ಬದಲಿಸುವ ಕಡೆ ಗಮನಕೊಡಲು ಕೋರಿದರು.

ಕಾಯಕ ಫೌಂಡೇಷನ್‌ಎಜ್ಯುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಶಿವರಾಜ ಪಾಟೀಲ ಮಾತನಾಡಿದರು.

ಮಾಜಿ ಉಪ ಸಭಾಪತಿ ಬಿ. ಆರ್. ಪಾಟೀಲ, ವಿಶ್ವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪಿ ಶ್ರೀನಾಥ, ಪ. ಮಾನು ಸಗರ್, ಬಸವರಾಜ ಬಿರಾದಾರ,  ರಾಜಶೇಖರ ಯಾಳಗಿ, ಸುಮಿತ್ರಾ.ಕೆ ಇದ್ದರು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry