ಶನಿವಾರ, ಏಪ್ರಿಲ್ 10, 2021
25 °C

ನಗರದ ವಿವಿಧೆಡೆ ಸ್ವಾತಂತ್ರ್ಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ವಿವಿಧೆಡೆ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಟೀಂ ಯೂನಿಟಿ ಸಂಚಾಲಕ ರಾಜೇಶ ಜೆ.ಗುತ್ತೇದಾರ ನೇತೃತ್ವದಲ್ಲಿ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸೇಂಟ್ ಮೇರಿ ಶಾಲೆಯಿಂದ ಸರ್ಕಲ್‌ವರೆಗೆ ಯುವಕರು ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ರಾಷ್ಟ್ರ ನಾಯಕರ ಭಾವಚಿತ್ರಗಳ ಮೆರವಣಿಗೆ ನಡೆಯಿತು.

ಪಟೇಲ್ ವೃತ್ತದ ಬಹಿರಂಗ ಸಭೆಯಲ್ಲಿ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿದರು. ಪುಂಡಲೀಕ, ರೇವಣ ಸಿದ್ದ ಬಡಾ, ಶರಣು, ಅಂಬಾದಾಸ, ಅನಿಲ ಉದನೂರು, ನಾಗಲಿಂಗಯ್ಯ ಮಠಪತಿ ಅನೇಕರು ಪಾಲ್ಗೊಂಡಿದ್ದರು.

ಸನ್‌ರೈಸ್ ಕನ್ನಡ ಕಾನ್ವೆಂಟ್ ಶಾಲೆ: ಇಲ್ಲಿನ ಆಳಂದ ರಸ್ತೆಯ ವಿಜಯನಗರ ಕಾಲೊನಿಯ ಸನ್‌ರೈಸ್ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಬುಧವಾರ ಸ್ವಾತಂತ್ರೋತ್ಸವ ದಿನವನ್ನು ಆಚರಿಸಲಾಯಿತು.

ಶಾಲೆಯ ಮುಖ್ಯಗುರು ಸಿದ್ದರಾಮ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಸೋಮಶೇಖರ ಎಸ್. ಖಾನಾಪುರ ಅತಿಥಿಗಳಾಗಿದ್ದರು.  ಸುಪ್ರಿಯಾ ಎಸ್. ವೈದ್ಯ ಇದ್ದರು. ಶಿವರಾಜ ಎಸ್.ಕೆ. ನಿರೂಪಿಸಿದರು. ಗುರುದೇವಿ ಮಠಪತಿ ಸ್ವಾಗತಿಸಿದರು. ಮೀನಾಕ್ಷಿ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನಡೆಯಿತು.

ವಿವೇಕಾನಂದ ಇನ್ಸ್‌ಟಿಟ್ಯೂಟ್: ನಗರದ ವಿವೇಕಾನಂದ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಬುಧವಾರ ಸ್ವಾತಂತ್ರೋತ್ಸವ ದಿನ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರವೀಣ ನಾಯಕ ಧ್ವಜಾರೋಹಣ ನೆರವೇರಿಸಿದರು. ಮುರಾರ್ಜಿ ಕೆ. ನಿರೂಪಿಸಿದರು. ಅಭಿಷೇಕ ಮಿಶ್ರಾ ವಂದಿಸಿದರು.

ರಕ್ತದಾನ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೈಯದ್ ಅಜ್ಮತ್ ಹುಸೇನಿ, ಕೃಪಾ ಕೆ., ಸಾಯಿನಾಥ ಅವರು ರಸಪ್ರಶ್ನೆ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು. ಪ್ರಶಾಂತ ಆರ್.ಎಚ್., ಸೈಯದ್ ಅಜ್ಮತ್ ಹುಸೇನಿ, ಸ್ನೇಹಾ ಆರ್., ಧನಲಕ್ಷ್ಮೀ (ಜಂಟಿಯಾಗಿ) ಪ್ರಬಂಧ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು ಎಂದು ತಿಳಿಸಲಾಗಿದೆ.

ಶ್ರೀಗುರು ಸಂಗಮೇಶ್ವರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆ: ರಾಮ ನಗರದ ಶ್ರೀಗುರು ಸಂಗಮೇಶ್ವರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಎಸ್.ಜಿ.ಎಸ್ ಕಾನ್ವೆಂಟ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಭೋಗಪ್ಪ ಎಸ್.ಮನ್ನಳ್ಳಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.

ನಿವೃತ್ತ ದಕ್ಷಿಣ ಕ್ಷೇತ್ರದ ಶಿಕ್ಷಣಾಧಿಕಾರಿ ಶಿವಮೂರ್ತಿ ಗಾರಂಪಳ್ಳಿ ಮುಖ್ಯ ಅತಿಥಿಯಾಗಿದ್ದರು. ಶಿವಣ್ಣ ಸಾಹುಕಾರ, ಸಂತೋಷ ಪಾಟೀಲ ಹಾಗೂ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಿವುಡರ ಸಂಘ: ನಗರದ ಗಂಜ್ ರಸ್ತೆಯ ಅಶೋಕ ಚೌಕ್ ಬಳಿ ಗುಲ್ಬರ್ಗ ಜಿಲ್ಲಾ ಕಿವುಡರ ಸಂಘವನ್ನು ಸ್ವಾತಂತ್ರ್ಯ ದಿನ ಆಚರಣೆ ಅಂಗವಾಗಿ ಗುಲ್ಬರ್ಗ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಧನಂಜಯ ಬಿ.ಉದನೂರು ಉದ್ಘಾಟಿಸಿದರು.

ಪ್ರಧಾನ ಕಾರ್ಯದರ್ಶಿ ಬಸವಲಿಂಗಯ್ಯ ಸಿ.ಹಿರೇಮಠ ಹಾಜರಿದ್ದರು.

ಕಿರಣ ಪತ್ತಿನ ಸಂಘ: ಬೇಲೂರ ಕ್ರಾಸಿನ ಕಿರಣ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಸ್ವಾತಂತ್ರ್ಯೋತ್ಸವವು ಅಧ್ಯಕ್ಷ ಚಂದ್ರಕಾಂತ ಬಿರಾದಾರ ನೇತೃತ್ವದಲ್ಲಿ ನಡೆಯಿತು.

ಉಪಾಧ್ಯಕ್ಷ ಹಣಮಂತರಾಯ ಅಟ್ಟೂರ, ನಿರ್ದೇಶಕ, ಬಸವರಾಜ ಮಚ್ಚಟ್ಟಿ, ದೇವಾನಂದ ಬಿರಾದಾರ, ಕಾಶಿನಾಥ ಚೌಹಾಣ, ಚಂದ್ರಕಾಂತ ಮುತ್ತಗಿ, ಸಿರಾಜ ಪಟೇಲ್, ಪರಮೇಶ್ವರ ಟೆಂಗಳಿ, ಗುರುಪಾದ ನಾಗೂರ ಮತ್ತಿತರರು ಭಾಗವಹಿಸಿದ್ದರು.    

ನೂತನ ವಿದ್ಯಾಲಯ: ನೂತನ ವಿದ್ಯಾಲಯದಲ್ಲಿ ಬುಧವಾರ ಸ್ವಾತಂತ್ರ್ಯೋತ್ಸವ ನಿಮಿತ್ತ ಸಂಸ್ಥೆಯ ಅಧ್ಯಕ್ಷ ಡಾ.ಮುರಳೀಧರ ಎಸ್.ರಾವ್ ರಾಷ್ಟ್ರಧ್ವಜಾರೋಹಣ ಮಾಡಿದರು. ಸಂಸ್ಥೆಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಬೋಧಕ- ಬೋಧಕೇತರ ಸಿಬ್ಬಂದಿಗಳು ಇದ್ದರು.

ಎನ್‌ಸಿಸಿ, ಸ್ಕೌಟ್ಸ್‌ಗೈಡ್ಸ್, ಭಾರತ ಸೇವಕ ದಳ ವಿದ್ಯಾರ್ಥಿಗಳಿಂದ ಕವಾಯತು, ಇತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕನ್ಯಾ ಪ್ರೌಢಶಾಲೆ ಎನ್‌ಸಿಸಿ ತಂಡ ಪ್ರಥಮ, ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಬಹುಮಾನ ಪಡೆದರು. ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಬಿ.ಜಿ.ಜೋಶಿ ನೇತೃತ್ವದಲ್ಲಿ ದಿನಾಚರಣೆ ಹಾಗೂ ಗಿಡನೆಡುವ ಕಾರ್ಯಕ್ರಮ ನಡೆಯಿತು.

ಸಿದ್ಧಶ್ರೀ ಶಿಕ್ಷಣಸಂಸ್ಥೆ: ಯಲ್ಲಾಲಿಂಗೇಶ್ವರ ಪುಣ್ಯಾಶ್ರಮ ಕೋಟನೂರ(ಡಿ) ಇಲ್ಲಿನ ಶ್ರೀ ಸಿದ್ದಶ್ರೀ ಶಿಕ್ಷಣಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗುಲ್ಬರ್ಗ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಭಾಷ ರಾಠೋಡ್ ಶ್ವಜಾರೋಹಣ ನೆರವೇರಿಸಿದರು. ಸಂಸ್ಥೆಯಆಡಳಿತಾಧಿಕಾರಿ ಬಸಯ್ಯಾ ಉದನೂರ, ಬಿ.ಸಿ.ಹಿರೇಮಠ ಸಿಬ್ಬಂದಿ ಇದ್ದರು.

ಜಿಡಿಎ: ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ರಾಷ್ಟ್ರಧ್ವಜಾರೋಹಣ ಮಾಡಿದರು. ಶಾಸಕ ಶಶೀಲ ನಮೋಶಿ, ಪ್ರಾಧಿಕಾರದ ಸದಸ್ಯರಾದ ಸಾಹೇಬ ಗೌಡ ಭೋಗುಂಡಿ,ಶಿವಯೋಗಿ ನಾಗನಳ್ಳಿ, ಶಿದ್ದಾಜಿ ಪಾಟೀಲ್, ನಿಂಗಪ್ಪ ಮಳ್ಳಿ, ಸಂಜೋತಾಶಹಾ, ದ್ಯಾವಮ್ಮತಳವಾರ, ಪ್ರಾಧಿಕಾರದ ಆಯುಕ್ತ ಎಸ್.ಬಿ. ಕಟ್ಟಿಮನಿ ಸಿಬ್ಬಂದಿ ಇದ್ದರು.

ಕುರುಬ ಸಂಘ: ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 217ನೇ ಜನ್ಮದಿನವನ್ನು ಬುಧವಾರ ಪ್ರಶಾಂತನಗರದ ಬೀರಲಿಂಗೇಶ್ವರ ವಸತಿ ನಿಲಯದಲ್ಲಿ ಆಚರಿಸಲಾಯಿತು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಶಾಖೆ ಅಧ್ಯಕ್ಷ ದೇವೇಂದ್ರಪ್ಪ ಮರತೂರು ಧ್ವಜಾರೋಹಣ ನಿರ್ವಹಿಸಿದರು.ಕಾರ್ಯಾಧ್ಯಕ್ಷ ಸಾಯಬಣ್ಣ ಮಲ್ಲಾಬಾದ , ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ಪ್ರಭು ಜುಮ್ಮಣ್ಣ, ಕನಕಜ್ಯೋತಿ ಸಹಕಾರ ಸಂಘದ ಅಧ್ಯಕ್ಷ ಗುರುನಾಥ ಪೂಜಾರಿ ಇತರ ಮುಖಂಡರು ಇದ್ದರು.

ವೀರಮಾಹೇಶ್ವರ ಸಹಕಾರಿ: ವೀರಮಾಹೇಶ್ವರ (ಜಂಗಮರ) ಸೌಹಾರ್ದ ಪತ್ತಿನ ಸಹಕಾರಿ ನಿ. ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮವನ್ನು ಅಧ್ಯಕ್ಷ ಭದ್ರಯ್ಯಾ ಸ್ವಾಮಿ ಸಾಲಿಮಠ ನೆರವೇರಿಸಿದರು.

ಉಪಾಧ್ಯಕ್ಷ ವೀರಯ್ಯಾ ಸ್ವಾಮಿ ಗಾಣಗಾಪುರ, ಆಡಳಿತ ಮಂಡಳಿ ನಿರ್ದೇಶಕ ಘನಲಿಂಗ ರುದ್ರಮುನಿ ಇನಾಮದಾರ, ಚಂದ್ರಶೇಖರ ಸಾಲಿಮಠ, ವಿವೇಕಾನಂದ ಚಂಡ್ರಕಿಮಠ, ಚನ್ನಬಸಯ್ಯಾ ನಂದಿಕೋಲ, ಮೃತ್ಯುಂಜಯ್ಯಾ ಪಲ್ಲಾಪುರ ಮಠ, ಸತೀಶ ಸ್ವಾಮಿ, ವಿಶಾಲ ಮತ್ತಿತರರು ಭಾಗವಹಿಸಿದ್ದರು. 

ಜ್ಞಾನದರ್ಶನ ವಿದ್ಯಾಮಂದಿರ: ಮಾತಾ ಮಾಣಿಕೇಶ್ವರಿ ಕಾಲೊನಿ ಜ್ಞಾನದರ್ಶನ ವಿದ್ಯಾಮಂದಿರ ಶಾಲೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಲೆಫ್ಟಿನೆಂಟ್ ಕಮಾಂಡರ್ ಸಂಗಮೇಶ ಶೀಲವಂತ ಮುಖ್ಯ ಅತಿಥಿಯಾಗಿದ್ದರು. ಗೋವಿನ್ ಎನ್.ಮಾಮಡೇ ಅವರನ್ನು ಸನ್ಮಾಸಲಾಯಿತು. ಸಂಸ್ಥೆಯ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ, ಉಪಾಧ್ಯಕ್ಷ ಲಿಂಗನಗೌಡ ಬಿರಾದಾರ, ವಿಜಯ ಮಹಾಂತೇಶ, ಆಡಳಿತ ವರ್ಗ, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

ಕಂಪ್ಯೂಟರ್ ತರಬೇತಿ ಸಂಸ್ಥೆ: ನಗರದ ಶಾಹಬಜಾರ ನಾಕಾದಲ್ಲಿನ ಶಿವಸಾಯಿ ಕಂಪ್ಯೂಟರ್ ತರಬೇತಿ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪ್ರಾಚಾರ್ಯ ಬಸವರಾಜ ಆರ್.ಸಿಂಧೆ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಪಂಚಯ್ಯ ಎಸ್.ಹಿರೇಮಠ, ಸೋಮನಾಥ ನಾಗಭುಜಂಗೆ, ನಿತೀಶಕುಮಾರ ಮತ್ತಿತರರು ಉಪಸ್ಥಿತರಿದ್ದರು.

ಬಸವ ಪ್ರಭು ಕನ್ನಡ ಕಾನ್ವೆಂಟ್ ಶಾಲೆ: ಬಸವಪ್ರಭು ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷರು ನೆರವೇರಿಸಿದರು. ಪ್ರಕಾಶ ಪಾಟೀಲ ಮುಖ್ಯ ಅತಿಥಿಯಾಗಿದ್ದರು. ಶಾಲೆ ಆಡಳಿತಾಧಿಕಾರಿ ಶಾಂತನಗೌಡ ಪಾಟೀಲ ಹರನೂರ, ಸವಿತಾ ಎಂ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜ್ಞಾನ ಜ್ಯೋತಿ ಕೆರಿಯರ್ ಅಕಾಡೆಮಿ: ಜ್ಞಾನ ಜ್ಯೋತಿ ಕೆರಿಯರ್ ಅಕಾಡೆಮಿ ವತಿಯಿಂದ ಕಾರ್ಯಕ್ರಮದಲ್ಲಿ ಮಹಾಪೌರ ಸೋಮಶೇಖರ ಮೇಲಿನಮನಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆ ನಿರ್ದೇಶಕ ಎನ್.ಎಸ್.ಹಿರೇಮಠ, ಶಿವಾನಂದ ಅಷ್ಟಗಿ ಮತ್ತಿತರರು ಪಾಲ್ಗೊಂಡಿದ್ದರು.

ಜೈ ಹನುಮಾನ ಪ್ರೌಢಶಾಲೆ: ನಗರದ ಬಿದ್ದಾಪುರ ಕಾಲೋನಿಯಲ್ಲಿರುವ ಜೈ ಹನುಮಾನ ಪ್ರೌಢಶಾಲೆಯಲ್ಲಿ ಬುಧವಾರ ಸ್ವಾತಂತ್ರೋತ್ಸವ ದಿನ ಆಚರಿಸಲಾಯಿತು.

ಸಂಸ್ಥೆಯ ಗೌರವಾಧ್ಯಕ್ಷ ನಾಗೇಂದ್ರಪ್ಪ ದೇವಗಾಂವಕರ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕರಾದ ಶಿವಕುಮಾರ ಬೆಲ್ಲದ, ಗಾಂಧಿ ಐರೋಡಿ, ಚಂದ್ರಶೇಖರ ಪಡಶೆಟ್ಟಿ, ಸಂಗಮೇಶ ಎಂ. ಹಿರೇಮಠ, ಫಿರಪ್ಪ ಮತ್ತಿತರರು ಪಾಲ್ಗೊಂಡಿದ್ದರು

ಸಿದ್ಧಾರೂಢ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ: ನಗರದ ಕರುಣೇಶ್ವರ ನಗರದಲ್ಲಿರುವ ಸಿದ್ಧಾರೂಢ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಬುಧವಾರ ಧ್ವಜಾರೋಹಣ ಮಾಡುವ ಮೂಲಕ 66ನೇ ಸ್ವಾತಂತ್ರೋತ್ಸವ ದಿನ ಆಚರಿಸಲಾಯಿತು.

ಪ್ರಭು ಜಾಧವ, ಮಲ್ಲಿಕಾರ್ಜುನ ಹರಿಹರ ಧ್ವಜಾರೋಹಣ ನೆರವೇರಿಸಿದರು. ಪಾರ್ವತಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಮಂಗಲಾ ವಂದಿಸಿದರು.

ಬೀದಿ ವ್ಯಾಪಾರಿಗಳ ಸೌಹಾರ್ದ ಪತ್ತಿನ ಬ್ಯಾಂಕ್: ನಗರದ ಗಾಜಿಪುರ ಬಡಾವಣೆಯ ಮಿಲನ ಚೌಕ ಬೀದಿ ವ್ಯಾಪಾರಿಗಳ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಗನ್ನಾಥ ಸೂರ್ಯವಂಶಿ ಧ್ವಜಾರೋಹಣ ಮಾಡಿದರು. ಅಮೃತ ಪಾಟೀಲ ಸಿರನೂರ, ಸಚಿನ್ ಫರಹತಬಾದ್, ಸುಭಾಸ್, ಸುನೀಲ ಚೌಹಾಣ, ಸೋನು, ಅಭಿಷೇಕ ಹಾಜರಿದ್ದರು.

ನವೋದಯ ವಿದ್ಯಾಮಂದಿರ: ನಗರದ ಶಹಬಜಾರ ಬಡಾವಣೆಯಲ್ಲಿ ಶಂಕರ್ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟಿನ ನವೋದಯ ವಿದ್ಯಾಮಂದಿರ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. ಶಿವಾನಂದ ಖಜೂರ್ಗಿ ಅತಿಥಿಗಳಾಗಿದ್ದರು. ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಎಸ್.ಕೊಗನೂರು, ಅಶೋಕ ಲೊಡ್ಡನ್, ಚನ್ನಬಸಪ್ಪ ಬಿ.ನೆನೆಗಾರ ಮಲ್ಲಿಕಾರ್ಜುನ್ ಕೊಗನೂರು, ಭೀಮರಾವ ಕೊಗನೂರ ಉಪಸ್ಥಿತರಿದ್ದರು.

ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಿಕ್ಷಕಿ ಸಂಗೀತಾ, ಅಶ್ವಿನಿ ಪ್ರಾಥಿಸಿದರು. ಬಸವರಾಜ ಪಂಚಾಳ ನಿರೂಪಿಸಿದರು. ದೇವಿಕಾ ವಂದಿಸಿದರು.

ಅಂಬುಬಾಯಿ ಅಂಧ ಬಾಲಕಿಯರ ವಸತಿ ಶಾಲೆ: ಹೈದರಾಬಾದ್ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅಂಬುಬಾಯಿ ಅಂಧ ಬಾಲಕಿಯರ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚಾರಣೆ ಆಚರಿಸಲಾಯಿತು. ಅಧ್ಯಕ್ಷೆ ಶೋಭರಾಣಿ ಡಿ.ಅಗರ್‌ವಾಲ್ ಅವರು ಧ್ವಜಾರೋಹಣ ನೆರವೇರಿಸಿದರು.

ಸಂಘದ ಕಾರ್ಯದರ್ಶಿಗಳು, ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರಮಜೀವಿ ಪಬ್ಲಿಕ್ ಶಾಲೆ: ಹೈಕೋರ್ಟ್ ಪೀಠದ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಶ್ರಮ ಜೀವಿ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ಭೀಮಣ್ಣ ಬೋನಾಳ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ನಿವೃತ್ತ ಉಪನ್ಯಾಸಕ ನಾಗನಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಶಾಲೆ ಮುಖ್ಯೋಪಾಧ್ಯಾಯ ದಿಗಂಬರಾವ ಇನರಾಜ, ವಿಜಯಲಕ್ಷ್ಮಿ ಎನ್.ಬಿರಾದಾರ, ರಾಜು, ಮಲ್ಲಿಕಾರ್ಜುನ ಪೂಜಾರಿ, ಸುಧಾರಾಣಿ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.