ಅಶೋಕ ಚಕ್ರವಿಲ್ಲದ ಬಾವುಟ: ಪ್ರಕರಣ ದಾಖಲು

ಸೋಮವಾರ, ಮೇ 27, 2019
33 °C

ಅಶೋಕ ಚಕ್ರವಿಲ್ಲದ ಬಾವುಟ: ಪ್ರಕರಣ ದಾಖಲು

Published:
Updated:

ಚಿತ್ತಾಪುರ:  ಪಟ್ಟಣದ ವಿವಿಧ ಕಡೆಗೆ 66ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಡಲಾದ ರಾಷ್ಟ್ರಧ್ವಜಾರೋಹಣ ನಂತರ, ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರ ಒಂದೆ ಕಡೆಗೆ ಮುದ್ರಣವಾಗಿದೆ, ಮತ್ತೊಂದು ಕಡೆಗೆ ಮುದ್ರಣವಾಗಿಲ್ಲದ ಪರಿಣಾಮ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ.ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ ಕಾಶಿ ನೀಡಿರುವ ದೂರಿನ ಪ್ರಕಾರ ಪಟ್ಟಣದ ಆಶ್ರಯ ಕಾಲೋನಿಗೆ ಹೋಗುವ ದಾರಿಯಲ್ಲಿನ ಬ್ರಿಜ್ ಆಪ್ ಹೋಪ್ ಸೂಸೈಟಿಯ ಖಾಸಗಿ ಶಾಲೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಒಂದು ಕಡೆಗೆ ಚಕ್ರವಿಲ್ಲದ ರಾಷ್ಟ್ರಧ್ವಜವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.ಬಸವರಾಜ ಮಲ್ಕಪ್ಪ ಮುಡಬೂಳಕರ್ ಅವರು, ಫ್ರಾನ್ಸಿಸ್ ಇಂಗ್ಲೀಷ್ ಮಾಧ್ಯಮ ಶಾಲೆ ಹಾಗೂ ಇನ್ನೂ 10-12 ಕಡೆಗೆ ರಾಷ್ಟ್ರಧ್ವಜದ ಒಂದು ಪಕ್ಕದಲ್ಲಿ ಚಕ್ರವಿಲ್ಲದೆ ಇದ್ದರೂ ಧ್ವಜಾರೋಹಣ ಮಾಡಲಾಗಿದೆ ಎಂದು ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry