ಭಾನುವಾರ, ಏಪ್ರಿಲ್ 18, 2021
23 °C

ಸಿಸಿಐ ಸಿಮೆಂಟ್ ಕಂಪೆನಿ ಪುನರ್ ಆರಂಭ?:ಕುರಕುಂಟಾ ಕಾರ್ಮಿಕರ ಧರಣಿ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಸಿಐ ಸಿಮೆಂಟ್ ಕಂಪೆನಿ ಪುನರ್ ಆರಂಭ?:ಕುರಕುಂಟಾ ಕಾರ್ಮಿಕರ ಧರಣಿ ಸತ್ಯಾಗ್ರಹ

ಸೇಡಂ: ಯಾವುದೇ ಬಲವಾದ ಕಾರಣ ಇಲ್ಲದೇ ಸೇಡಂ ತಾಲ್ಲೂಕಿನ ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸಿಮೆಂಟ್ ಘಟಕವು 1998ರಿಂದ ತನ್ನ ಉತ್ಪಾದನೆ ನಿಲ್ಲಿಸಿರುವುದನ್ನು ಸಿಸಿಐ ವರ್ಕರ್ಸ್‌ ಯುನಿಯನ್ ಬಲವಾಗಿ ಖಂಡಿಸಿದೆ.ಗುರುವಾರ ನೂರಾರು ಕಾರ್ಮಿಕರು ಕಾರ್ಮಿಕ ಮುಖಂಡ ಮತ್ತು ಸಲಹೆಗಾರ ಗೋಪಾಲರಾವ ಗುಡಿ, ಸಂಘದ ಅಧ್ಯಕ್ಷ ರಾಚಪ್ಪ ಚಿತ್ತಾಪೂರಕರ್, ಪ್ರಧಾನ ಕಾರ್ಯದರ್ಶಿ ಕಾಶಿನಾಥ ಹೆಬ್ಬಾಳ, ಹೋರಾಟ ಸಮಿತಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಶರಣಪ್ಪ ಕೊಳ್ಳಿ, ಉಪಾಧ್ಯಕ್ಷ  ನಿಲಯ್ಯ ಸ್ವಾಮಿ ಮತ್ತು ಉಪ-ಪ್ರಧಾನ ಕಾರ್ಯದರ್ಶಿ ಶರಣಪ್ಪ ಹೆಬ್ಬಾಳ ಅವರ ನೇತೃತ್ವದಲ್ಲಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರ ಸೇಡಂ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು. ನಂತರ ಮನವಿಯನ್ನು  ರಾಜ್ಯಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಅವರಿಗೆ ಸಲ್ಲಿಸಿದರು.ಹಿನ್ನಲೆ: ಸಂಘದ ಸಾಮಾನ್ಯ ಸಭೆ ಕುರಕುಂಟಾ ಗ್ರಾಮದಲ್ಲಿ ಜುಲೈ 25 ರಂದು ಜರುಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಈ ಭಾಗದ ಶಾಸಕರು, ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಕಚೇರಿ ಮತ್ತು ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಯಿತು. ಆ ದಿಸೆಯಲ್ಲಿ ಈಗಾಗಲೇ ಶಾಸಕ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಮನವಿ ಸಲ್ಲಿಸಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.ಬರುವ 22ರಂದು ಸಂಸದ ಮತ್ತು ಕೇಂದ್ರದ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. ಕುರಕುಂಟಾ ಘಟಕವು ತನ್ನ ಉತ್ಪಾದನಾ ಅವಧಿಯಲ್ಲಿ ಉತ್ತಮ ಗುಣ ಮಟ್ಟಕ್ಕೆ 9 ಸಲ ಗೋಲ್ಡ್ ಮೆಡಲ್ ಪ್ರಶಸ್ತಿ ಪಡೆದಿದೆ.ಈ ದಿಸೆಯಲ್ಲಿ ಉತ್ತಮ ಗುಣಮಟ್ಟದ ಸುಣ್ಣದ ಕಲ್ಲಿನ ಗಣಿ ಹೊಂದಿರುವ ಕಂಪೆನಿ ಪುನ:ಹ ಆರಂಭಗೊಳ್ಳಬೇಕು.  ಇದರಿಂದ  ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ. ಜೊತೆಗೆ ಕಂಪೆನಿ ಸುತ್ತಲಿನ ಗ್ರಾಮಗಳ ಆರ್ಥಿಕ ಮಟ್ಟ ಸುಧಾರಣೆ ಆಗಲು ಸಾಧ್ಯ ಎಂಬುದು ಕಾರ್ಮಿಕರ ವಾದವಾಗಿದೆ.ಕಂಪೆನಿ ಮುಚ್ಚುವ ಸಂದರ್ಭದಲ್ಲಿ 430 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದರಲ್ಲಿ 87 ಜನರಿಗೆ ಮಾತ್ರ ಗ್ರಾಚ್ಯ್ಯೂಟಿ ಸೌಲಭ್ಯ ಸಿಕ್ಕಿದೆ. ಉಳಿದ 343 ಕಾರ್ಮಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ವಿಷಯ ಕುರಿತಂತೆ ಅಂದಿನಿಂದ ಇಂದಿನವರೆಗಿನ ಹೋರಾಟ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಕಾರ್ಮಿಕರು ಅಸಹಾಕರಾಗಿದ್ದಾರೆ ಎಂದು ಸಂಘ ವಿಷಾದಿಸಿಕೊಂಡಿದೆ.ಸಿಮೆಂಟ್ ವೇಜ್ ಬೋರ್ಡ್ ಅನ್ವಯ ಕಾನೂನು ಬದ್ದವಾಗಿ ಬೋನಸ್, ಗ್ರಾಚ್ಯೂಟಿ, ರಜೆ ವೇತನ ಮತ್ತು ಇತರೆ ಸಂಭಾವನೆ ಪಾವತಿಸಬೇಕು. ಆದರೆ ಕಳೆದ 14 ವರ್ಷಗಳಿಂದ ಪಾವತಿಸದೇ ಕಾರ್ಮಿಕರ ಬದುಕನ್ನು ಕತ್ತಲಲ್ಲಿ ನೂಕಿದೆ ಎಂದು ಸಂಘ ಮನವಿಯಲ್ಲಿ ಉಲ್ಲೇಖಿಸಿದೆ.ಇದರಲ್ಲಿ ಕೆಲ ಕಾರ್ಮಿಕರ ಸ್ಥಿತಿ ಚಿಂತಾಜಕನವಾಗಿದೆ. ಕೆಲವರು ಮುಪ್ಪಿನಾವಸ್ಥೆಯಲ್ಲಿ ನರಳುತ್ತಿದ್ದಾರೆ.  ನವದೆಹಲಿಯಲ್ಲಿ 2010 ಮಾರ್ಚ್ ತಿಂಗಳಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ವಿಷಯ ತಿಳಿದು ಕಂಪೆನಿ ಕಾರ್ಯವಾಹಕ ನಿರ್ದೇಶಕ ಅವರಿಗೆ ಸೂಚಿಸಿ ಈ ಕೂಡಲೇ ಸಮಸ್ಯೆ ಬಗೆ ಹರಿಸಲು ಸೂಚಿಸಿದಾಗ ಸೂಕ್ತ ಕ್ರಮ ಕೈಕೊಳ್ಳುವ ಭರವಸೆ ನೀಡಿದ ಅಧಿಕಾರಿಗಳು  ಈವರೆಗೂ ಕಂಪೆನಿ ಆಡಳಿತ ವರ್ಗ ಯಾವುದೇ ಕ್ರಮ ಜಾರಿಗೊಳಿಸದೇ ಇರುವುದು ದುರಾದೃಷ್ಟಕರ ಸಂಗತಿ ಎಂದು ಸಂಘ ಮನವಿಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.