ಬಾಂಧವ್ಯ ಬೆಸೆದ ಈದ್-ಉಲ್-ಫಿತರ್

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬಾಂಧವ್ಯ ಬೆಸೆದ ಈದ್-ಉಲ್-ಫಿತರ್

Published:
Updated:
ಬಾಂಧವ್ಯ ಬೆಸೆದ ಈದ್-ಉಲ್-ಫಿತರ್

ಗುಲ್ಬರ್ಗ: ಪರಸ್ಪರ ಶುಭಾಶಯ ವಿನಿಮಯಿಸಿಕೊಂಡು ಉತ್ತಮ ಬಾಂಧವ್ಯ ಮತ್ತು ಭವ್ಯ ಭವಿಷ್ಯವನ್ನು ಹಾರೈಸುವ `ಈದ್-ಉಲ್-ಫಿತರ್~ ಸಂಭ್ರಮವನ್ನು ಸೋಮವಾರ ನಗರದೆಲ್ಲೆಡೆ ಆಚರಿಸಲಾಯಿತು. ರಂಜಾನ್ ಮಾಸದ 30ನೇ ದಿನದ ಚಂದ್ರದರ್ಶನದ ಮರುದಿನದ ಈ ಹಬ್ಬದಲ್ಲಿ ಮುಸ್ಲಿಂ ಬಾಂಧವರು ತನ್ಮಯತೆಯಲ್ಲಿ ಪಾಲ್ಗೊಂಡರು.ಸೇಡಂ ರಸ್ತೆಯ ರಾಜಾಪುರ, ಶೋರ್ ಗುಂಬಜ್ ಬಳಿಯ ಬಹುಮನಿ ಮತ್ತು ರೆಹಮತ್ ನಗರದ ಈದ್ಗಾ ಮೈದಾನ ಸೇರಿದಂತೆ ಕೋಟೆ, ಸೂಪರ್ ಮಾರ್ಕೆಟ್ ಮತ್ತಿತರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ರಂಜಾನ್: ಚಂದ್ರಮಾನ ಕ್ಯಾಲೆಂಡರ್‌ನ ಒಂಭತ್ತನೆ ತಿಂಗಳಿನ ಮೊದಲ ದಿನದ ಚಂದ್ರದರ್ಶನ ನಂತರ ಉಪವಾಸ ಆರಂಭಿಸಿ, 30ನೇ ದಿನದ ಚಂದ್ರದರ್ಶನ ಮಾಡಿಕೊಂಡು ಉಪವಾಸ ಅಂತ್ಯಗೊಳಿಸುತ್ತಾರೆ. ಈ ನಡುವಿನ ಪವಿತ್ರ ಮಾಸವೇ ರಂಜಾನ್. ರಂಜಾನ್ ಆಚರಿಸುವುದು ಪ್ರತಿಯೊಬ್ಬ ಮುಸ್ಲಿಮರಿಗೆ ಬಹಳ ವಿಶೇಷ.  ಅಂತರಂಗ-ಬಹಿರಂಗವನ್ನು ಶುದ್ಧವಾಗಿಟ್ಟುಕೊಳ್ಳುವುದು ಸೇರಿದಂತೆ ಮನುಷ್ಯನಲ್ಲಿ ಪವಿತ್ರ ಮೌಲ್ಯಗಳು ಸ್ಫುರಿಸಲು ಒಂದು ಮಾಸಪೂರ್ತಿ ಚಂದ್ರೋದಯ-ಚಂದ್ರಾಸ್ತದ ನಡುವಿನ ಸಮಯ ಹೊರತುಪಡಿಸಿ ಇನ್ನುಳಿದ ಅವಧಿಯಲ್ಲಿ ಸಂಪೂರ್ಣ ನೀರಾಹಾರಿಗಳಾಗಿ ಉಪವಾಸ ಆಚರಿಸುವುದು ಬಹಳ ಶ್ರದ್ಧೆಯಿಂದ ಕೂಡಿರುತ್ತದೆ.ಈದ್-ಉಲ್-ಫಿತರ್
:  ರಂಜಾನ್ ಮುಗಿದ ಮರುದಿನವೇ ಈದ್-ಉಲ್-ಫಿತರ್. ಅಂದು ಮುಂಜಾನೆ  ಸ್ನಾನ ಮತ್ತಿತರ ದೈನಂದಿನ ಕಾರ್ಯ ಪೂರೈಸಿದ ಬಳಿಕ ಜುಬ್ಬಾ ಮತ್ತಿತರ ಹೊಸ ಬಟ್ಟೆ ತೊಟ್ಟು, ಸುಗಂಧ ದ್ರವ್ಯ ಸಿಂಪಡಿಸಿ, ಕಣ್ಣಿಗೆ ಶೂರ್ಮಾ ಹಾಕಿಕೊಂಡು ಸಿದ್ಧವಾಗುತ್ತಾರೆ. ಹಾಲು, ಬಾದಾಮಿ, ದ್ರಾಕ್ಷಿ, ಗೋಂಡಬಿಯಿಂದ ಕೂಡಿದ `ಕ್ಷೀರ ಕೂರ್ಮಾ~ ಸೇವಿಸಿದ ಬಳಿಕ ಪ್ರಾರ್ಥನೆಗೆ ತೆರಳುತ್ತಾರೆ. ಈದ್ಗಾ ಮೈದಾನ, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಆ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡುತ್ತಾರೆ. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ. ನಂತರ ಖಬರ್‌ಸ್ತಾನಕ್ಕೆ ತೆರಳಿ ಹಿರಿಯರನ್ನು ಸ್ಮರಿಸಿಕೊಂಡು ಗೌರವ-ಪ್ರಾರ್ಥನೆ ಸಲ್ಲಿಸುತ್ತಾರೆ.ಮಹಿಳೆಯರು ಮನೆಯಲ್ಲಿ ನಮಾಜ್ ಮಾಡಿ ದಿನದ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ. ಸಿಹಿ, ಬಿರಿಯಾನಿ, ಕೂರ್ಮಾ ಮತ್ತಿತರ ಬಗೆ ಬಗೆಯ ಖಾದ್ಯಗಳು, ಪಾನೀಯಗಳನ್ನು ತಯಾರು ಮಾಡುತ್ತಾರೆ. ಮನೆಯವರೆಲ್ಲ ಜೊತೆಯಾಗಿ ಹಬ್ಬದ ಊಟ ಮಾಡುತ್ತಾರೆ. ಆ ಬಳಿಕ ಸಮೀಪದ ಸಂಬಂಧಿಕರ ಮನೆಗೆ ಭೇಟಿ ನೀಡಿ ಶುಭಾಶಯ ಕೋರುತ್ತಾರೆ.ಜೊತೆಯಾಗಿ ಆಹಾರ ಸೇವಿಸಿ ಬರುತ್ತಾರೆ. ಸಂಕಷ್ಟಗಳು ಮಾಯವಾಗಿ ಸಂಭ್ರಮವು ಬರಲಿ. ಲೋಕದಲ್ಲಿ ಎಲ್ಲರ ಸಂಬಂಧವು ಚೆನ್ನಾಗಿರಲಿ ಎಂಬುದೇ ಇದರ ಆಶಯ ಎನ್ನುತ್ತಾರೆ ಹಿರಿಯ ಪತ್ರಕರ್ತ ನಜ್ಹೀರ್ ಅಹ್ಮದ್.`ಇದರ ಜೊತೆ ಎಲ್ಲ ಧರ್ಮದ ಗೆಳೆಯರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಸಹಭೋಜನ ಮಾಡುತ್ತೇವೆ. ಸಾಮರಸ್ಯ- ಬಾಂಧವ್ಯ ವೃದ್ಧಿಯ ಆಶಯವೇ ಈ ದಿನ ಉದ್ದೇಶ~ ಎಂದು ಅವರು ವಿವರಿಸಿದರು.  ರಂಜಾನ್ ಹಿನ್ನಲೆಯಲ್ಲಿ ನಗರದ ಸೂಪರ್ ಮಾರ್ಕೆಟ್ ಎರಡು ದಿನ ಜನಜಂಗುಳಿ ವ್ಯಾಪಾರದಿಂದ ತುಂಬಿತ್ತು. ಹಲವರು ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಬಾಂಧವ್ಯ ಸಾರುವ ಹಬ್ಬವನ್ನು ಸಂಬಂಧಿಕರು, ಗೆಳೆಯರ ಮನೆ ಮನೆಗೆ ತೆರಳಿ ಸಂಭ್ರಮಿಸಿದರು. ಮುಂಜಾನೆಯಿಂದ ಸಂಜೆ ತನಕ ಸೂರ್ಯ ನಗರಿಯು ಸಡಗರದಿಂದ ಕೂಡಿತ್ತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry