ಸೋಮವಾರ, ಮೇ 23, 2022
30 °C

ಡಿಪೊ ಉದ್ಘಾಟನೆಗೆ ಕಳಪೆ ರಸ್ತೆಗಳೇ ವಿಘ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ಅಫಜಲಪುರದ ಸುತ್ತಮುತ್ತ ಎಲ್ಲ ತಾಲ್ಲೂಕುಗಳಿಗೆ ಕಳೆದ ಹತ್ತು ವರ್ಷಗಳ ಹಿಂದೆ ಬಸ್ ಡಿಪೊ ನಿರ್ಮಾಣವಾಗಿದೆ. ಆದರೆ ಅಫಜಲಪುರ ತಾಲ್ಲೂಕಿಗೆ ಬಸ್ ಡಿಪೊ ಮಂಜೂರಾಗಿ ಎರಡು ದಶಕಗಳ ನಂತರ ಡಿಪೊ ಕಟ್ಟಡ ನಿರ್ಮಾಣವಾದರೂ, ಉದ್ಘಾಟನೆಯಾಗುತ್ತಿಲ್ಲ.1991 ರಲ್ಲಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರು ತಾಲ್ಲೂಕಿಗೆ ಬಸ್ ಡಿಪೊ ಮಂಜೂರು ಮಾಡಿದ್ದರು. ಸಾರಿಗೆ ಇಲಾಖೆಯವರು ಕೇಳಿದ ಸ್ಥಳದಲ್ಲಿ ಡಿಪೊ ನಿರ್ಮಾಣಕ್ಕೆ ಸ್ಥಳವಕಾಶ ನೀಡಲು ಸಾಧ್ಯವಾಗಲಿಲ್ಲ. ಪಟ್ಟಣದಿಂದ 1 ಕಿ.ಮೀ ವ್ಯಾಪ್ತಿಯ ಒಳಗೆ ಸಾರಿಗೆ ಇಲಾಖೆಯವರಿಗೆ ಡಿಪೊ ನಿರ್ಮಾಣಕ್ಕೆ ಸ್ಥಳವಕಾಶ ಬೇಕಾಗಿತ್ತು. ಅದಕ್ಕಾಗಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಪ್ರಯತ್ನ ಮಾಡಿದರೂ, ಪಟ್ಟಣದ ನಾಗರಿಕರು ಸ್ಥಳವಕಾಶ ನೀಡಲಿಲ್ಲ. ಆದರೆ ದುಬಾರಿ ಬೆಲೆಗೆ ನೀಡುವ ನಿವೇಶನ ಸರ್ಕಾರದಲ್ಲಿ ಖರೀದಿ ಮಾಡುವ ಅವಕಾಶವಿಲ್ಲ. ಹೀಗಾಗಿ ಡಿಪೊ ಮಂಜೂರಾದರೂ ನಿವೇಶನ ದೊರೆಯದೆ ಎರಡು ದಶಕ ಕಾಯಬೇಕಾಯಿತು.ಮೂರು ವರ್ಷಗಳ ಹಿಂದೆ ಬಳೂರ್ಗಿ ರಸ್ತೆಯ ಬದಿಯಲ್ಲಿ ಸರ್ಕಾರಿ ನಿವೇಶನವೊಂದು ಪತ್ತೆ ಹಚ್ಚಿ ಬಸ್ ಡಿಪೊ ನಿರ್ಮಾಣಕ್ಕೆ ನೀಡಲಾಗಿದ್ದು, ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಡಿಪೊ ನಿರ್ಮಾಣವಾಗಿ ಉದ್ಘಾಟನೆಗಾಗಿ ಕಾಯುತ್ತಿದೆ. ತಿಂಗಳ ಹಿಂದೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ಶಂಕರ ಪಾಟೀಲ ಅವರು ಡಿಪೊ ಪರಿಶೀಲನೆ ಮಾಡಿ ಜ.26 ರೊಳಗಾಗಿ ಡಿಪೊ ಉದ್ಘಾಟನೆ ಮಾಡುವದಾಗಿ ಹೇಳಿ ಹೋಗಿದ್ದರೂ, ಅದರೆ ಈಗ ಕೇಳಿದರೆ ರಸ್ತೆ ಹಾಳಾಗಿವೆ ರಸ್ತೆ ದುರಸ್ತಿಯಾಗುವವರೆಗೆ ಬಸ್ ಡಿಪೊ ಉದ್ಘಾಟನೆ ಮಾಡುವುದಿಲ್ಲ ಎನ್ನುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.ಪಕ್ಕದ ಪಟ್ಟಣಗಳಾದ ಆಳಂದ, ಜೇವರ್ಗಿ, ಇಂಡಿ ಮತ್ತು ಸಿಂದಗಿ ಬಸ್ ಡಿಪೊಗಳಾಗಿ ಹಳೆ ಕಾಲವಾಯಿತು. ತಾಲ್ಲೂಕಿಗೆ ಬೇರೆ ತಾಲ್ಲೂಕಿನ ಬಸ್‌ಗಳೆ ಬಂದು ಹೋಗುತ್ತವೆ ಹೆಚ್ಚಾಗಿ ಗುಲ್ಬರ್ಗ ಡಿಪೊ ಬಸ್‌ಗಳೆ ತಾಲ್ಲೂಕಿನ 80 ಹಳ್ಳಿಗಳ್ಳ ಸಂಚರಿಸುತ್ತವೆ. ಹೀಗಾಗಿ ಯಾವ ಹಳ್ಳಿಗಳಿಗೂ ಸರಿಯಾದ ಬಸ್ ವ್ಯವಸ್ಥೆ ಯಾಗುತ್ತಿಲ್ಲ. ತಾಲ್ಲೂಕಿನ ಜನತೆ ರಸ್ತೆ ಮತ್ತು ಸಾರಿಗೆ ವ್ಯವಸ್ಥೆಗಾಗಿ ರೋಷಿ ಹೋಗಿದ್ದಾರೆ ಯಾವ ಜನಪ್ರತಿನಿಧಿಗಳು ತಾಲ್ಲೂಕಿನ ಸಮಸ್ಯೆಗಳು ಬಗೆ  ಹರಿಸುವ ಲಕ್ಷಣ ಕಾಣಿಸುತ್ತಿಲ್ಲ ಸಾರ್ವಜನಿಕರು ಮಾತಾನಾಡಿಕೊಳ್ಳುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.