ಶನಿವಾರ, ಮೇ 21, 2022
26 °C

ಆತ್ಮವಿಶ್ವಾಸದಿಂದ ಉನ್ನತ ಸಾಧನೆ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪ್ರಯತ್ನಿಸಿದರೆ ಅತ್ಯುನ್ನತ ಸಾಧನೆ ಮಾಡಲು ಸಾಧ್ಯ ಎಂದು  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ಸಿ.ಎಸ್.ಉಗಾಜಿ ತಿಳಿಸಿದರು.ಶರಣಬಸವೇಶ್ವರ ಮಹಾವಿದ್ಯಾಲಯ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸೇವಾ ಮನೋಭಾವನೆ ಹಾಗೂ ನಿರಂತರ ಪ್ರಾಮಾಣಿಕ ಪ್ರಯತ್ನದಿಂದ ಉನ್ನತ ಪ್ರತಿಫಲ ದೊರೆಯುತ್ತದೆ. ಮಹಾವಿದ್ಯಾಲಯದಲ್ಲಿ ಓದುವ ಮಕ್ಕಳು ಉನ್ನತ ಗುರಿ ಹೊಂದಬೇಕು ಎಂಬುದು ಶರಣಬ–ಸವಪ್ಪ ಅಪ್ಪನವರ ಆಶಯವಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೊ.ಕಲ್ಯಾಣರಾವ ಪಾಟೀಲ, ಶ್ರದ್ಧೆ, ಶಿಸ್ತು ಸಂಯಮದಿಂದ ಮಾತ್ರ ಇತರ ಸ್ಪರ್ಧೆ ನಡೆಸಲು ಸಾಧ್ಯ ಎಂದರು. ಪ್ರಾಚಾರ್ಯ ಎಂ.ಬಿ.ನಿಗ್ಗುಡಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ದಶರಥ ಮೈತ್ರೇಯ, ಪ್ರೊ.ಸುರೇಶಕುಮಾರ ನಂದಗಾಂವ ಮತ್ತು ಪ್ರೊ. ಲಕ್ಷ್ಮಿಬಾಯಿ ಭಂಕೂರ ಇದ್ದರು.  ಪ್ರೊ.ವಿ.ಎಸ್.ಪಾಟೀಲ ಸ್ವಾಗತಿಸಿದರು. ಪ್ರೊ.ಭರತನೂರ ಪ್ರಾರ್ಥಿಸಿದರು. ಡಾ.ಶಿವರಾಜ ಹೇರೂರ, ಪ್ರೊ.ಹೂಗಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.