ಅಪೌಷ್ಟಿಕತೆಯಿಂದ ಮಕ್ಕಳ ಮರಣ

7

ಅಪೌಷ್ಟಿಕತೆಯಿಂದ ಮಕ್ಕಳ ಮರಣ

Published:
Updated:

ಗುಲ್ಬರ್ಗ: ದೇಶದಲ್ಲಿ ಅಪೌಷ್ಟಿಕತೆಯು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಪೌಷ್ಟಿಕತೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಸಾವನ್ನಪ್ಪುತ್ತಿವೆ, ಇದನ್ನು ತಪ್ಪಿಸಲು ಮನೆಯಲ್ಲಿ ಮಕ್ಕಳಿಗೆ ಸಮತೋಲಿತ ಪೌಷ್ಟಿಕ ಆಹಾರ ನೀಡಬೇಕೆಂದು ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು.ಅವರು ಶನಿವಾರ ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಪದವಿಪೂರ್ವ ಮಹಿಳಾ ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಗರ್ಭಿಣಿಯರಾದಾಗ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಇದರಿಂದ ಜನಿಸುವ ಮಗುವು ಪೌಷ್ಟಿಕತೆಯಿಂದ ಕೂಡಿದ್ದು ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದರು.ಸರ್ಕಾರಿ ಪದವಿಪೂರ್ವ ಕಾಲೇಜಿನ (ಎಂ.ಪಿ.ಎಚ್.ಎಸ್.) ಹಿರಿಯ ಪ್ರಾಧ್ಯಾಪಕಿ ಸಂಗೀತ ಎಂ. ಕಟ್ಟಿಮನಿ ಉಪನ್ಯಾಸ ನೀಡಿದರು. ಪ್ರೌಢಾವಸ್ಥೆಯ ಹೆಣ್ಣುಮಕ್ಕಳು ರಕ್ತ ಸಂಬಂಧಿಕರೊಡನೆ ಮದುವೆಯನ್ನು ಮಾಡಿಕೊಳ್ಳಬಾರದು. 18 ವರ್ಷದ ನಂತರ ಮದುವೆಯಾಗಬೇಕು. ಹುಟ್ಟಿದ ಮಕ್ಕಳಿಗೆ ಸರಿಯಾದ ವಯಸ್ಸಿನಲಿ ್ಲಸಮತೋಲನ ಆಹಾರ ನೀಡಬೇಕು ಹಾಗೂ ಚುಚ್ಚುಮದ್ದುಗಳನ್ನು ನಿಯಮಿತವಾಗಿ ಹಾಕಿಸಬೇಕು. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕಾಂಶ ಮತ್ತು ಅಂಗವೈಕಲ್ಯವನ್ನು ತಡೆಯಬಹುದಾಗಿದೆ ಎಂದರು. ಮಹಿಳೆಯರು ಗರ್ಭ ಧರಿಸಿದಾಗ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಲ್ಲಿ ಅವರಿಗೆ ಸರ್ಕಾರ ಜಾರಿಗೆ ತಂದಿರುವ ಪ್ರಸೂತಿ ಆರೈಕೆ, ಜನನಿ ಸುರಕ್ಷಾ ಯೋಜನೆ, ಹೆರಿಗೆಯಾದ ನಂತರ ಮಡಿಲು ಕಿಟ್‌ಗಳಂತಹ ಸರ್ಕಾರದ ಯೋಜನೆಯ ಲಾಭವನ್ನು ಪಡೆಯಬಹುದು. ಹೆರಿಗೆಯು ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳಬೇಕು. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ನೋಡಿಕೊಳ್ಳಲು ಅನುಕೂಲವಾಗುವುದು ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಶಿರಸಗಿ, ಸರ್ಕಾರಿ ಪದವಿಪೂರ್ವ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎನ್.ಎನ್. ಹೊಸೂರ, ವಾರ್ತಾ ಇಲಾಖೆಯ ಟಿ.ಎಸ್. ಪವಾರ, ಗಣ್ಯರಾದ ರಾಜುಗೌಡ ನಾಗನಹಳ್ಳಿ, ಬಸವರಾಜ ಬಿರಾದಾರ ಮತ್ತಿತರರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿಕತ್ವದಲ್ಲಿ ಜನಪದ ಸಂಗೀತ ಕಲಾವಿದೆ ಸುಹಾಸಿನಿ ಉದಯಕುಮಾರ ಫುಲಾರೆ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry