ದೇಶೀಯ ಕ್ರೀಡೆ ಬೆಳಿಸಿ: ಪದ್ಮಾಕರ ಕುಲಕರ್ಣಿ

7

ದೇಶೀಯ ಕ್ರೀಡೆ ಬೆಳಿಸಿ: ಪದ್ಮಾಕರ ಕುಲಕರ್ಣಿ

Published:
Updated:

ಗುಲ್ಬರ್ಗ: ಜನರಿಂದ ಮರೆತು ಹೋಗುತ್ತಿರುವ ಕೊಕ್ಕೊ ಆಟಕ್ಕೆ ಉತ್ತಮವಾದ ವೇದಿಕೆಯ ಅವಶ್ಯವಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ತೆರಿಗೆಗಳ ಉಪ ಆಯುಕ್ತ ಪದ್ಮಾಕರ ಕುಲಕರ್ಣಿ ಹೇಳಿದರು.ಇಲ್ಲಿನ ಎಸ್. ನಿಜಲಿಂಗಪ್ಪ ಮೈದಾನದಲ್ಲಿ ಕರ್ನಾಟಕ ರಾಜ್ಯ ಕೊಕ್ಕೊ ಅಸೋಸಿಯೇಶನ್ ಬೆಂಗಳೂರು, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಗುಲ್ಬರ್ಗ ಜಿಲ್ಲಾ ಕೊಕ್ಕೊ ಅಸೋಸಿಯೇಶನ್ ಹಾಗೂ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ಆಶ್ರಯದಲ್ಲಿ ಸೋಮವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ, ದೇಶೀಯ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿವೆ.ಇಂಥ ಜನಪ್ರೀಯವಾದ ಆಟಗಳಿಗೆ ಮನ್ನಣೆ ಸಿಗದೆ ಇರುವುದು ವಿಷಾದನೀಯ. ಆಟ ಯಾವುದೇ ಇರಲ್ಲಿ. ಅದನ್ನು ಕ್ರೀಡಾ ಮನೋಭಾವದಿಂದ ಕಾಣಬೇಕು. ನಶಿಸಿ ಹೋಗುತ್ತಿರುವು ಕ್ರೀಡೆಗಳಿಗೆ ರಾಷ್ಟ್ರೀಯ ಮನ್ನಣೆ ಸಿಗುವಂಥಾಗಬೇಕು.

 

ದೈಹಿಕ ಹಾಗೂ ಶಾರೀರಿಕ ಶಕ್ತಿಗೆ ಉತ್ತೇಜನ ನೀಡುವಂಥ ಗುಣ ಇರುವ ಈ ಆಟಕ್ಕೆ ಮಾರುಹೋಗದೆ ಇರುವವರ ಸಂಖ್ಯೆ ತೀರಾ ವಿರಳ. ಅಪ್ಪಟ ಗ್ರಾಮೀಣ ಭಾಗದ ಈ ಕ್ರೀಡೆ ಬೆಳೆಸಲು ಕ್ರೀಡಾಸಕ್ತ ಆಟಗಾರರು ಹೆಚ್ಚು -ಹೆಚ್ಚು  ಪಾಲ್ಗೊಳ್ಳಬೇಕು ಎಂದು ಹೇಳಿದರು.ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ. ಕೇವಲ ಗೆಲುವನ್ನೇ ಆಟದ ಪ್ರಮುಖ ಗುರಿ ಎಂದು ತಿಳಿಯಬಾರದು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಇಂಥ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ದೇಶಿಯ ಕ್ರೀಡೆಗಳಿಗೆ ಜೀವ ಬಂದಂತಾಗುತ್ತದೆ. ಕೊಕ್ಕೊ ಬಡವರ ಆಟ. ಇಂಥ ಆಟವನ್ನು ಉಳಿಸಿ ಬೆಳಸುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ. ರಾಜ್ಯ ಮಟ್ಟದ ಈ ಟೂರ್ನಿಗೆ ಉತ್ತಮ ಸ್ಪಂದನೆ ಸಿಕ್ಕಿರುವುದು ತುಂಬಾ ಸಂತಸದ ಸಂಗತಿ ಎಂದು ಹೇಳಿದರು.ಕೇವಲ ಇಂಥ ಟೂರ್ನಿಗಳನ್ನು ಆಯೋಜನೆ ಮಾಡುವ ಮೂಲಕ ಕೆಲಸ ಮುಗಿಯುವುದಿಲ್ಲ. ಪ್ರಾಥಮಿಕ ಹಂತದಲ್ಲಿ ಜಿಲ್ಲೆಗಳಲ್ಲಿ ಕೊಕ್ಕೊ ಕ್ಲಬ್‌ಗಳನ್ನು ತೆರೆಬೇಕು. ಕ್ಲಬ್‌ಗಳನ್ನು ಸ್ಥಾಪನೆ ಮಾಡುವುದರಿಂದ ಕೊಕ್ಕೊ ಆಟಕ್ಕೆ ಮರು ಜೀವಂತಿಕೆ ನೀಡಲು ಸಾಧ್ಯ ಎಂದು ಹೇಳಿದರು.ಕೊಕ್ಕೊ ಅಸೋಸಿಯೇಶನ್ ಅಧ್ಯಕ್ಷ ಮುಕುಂದ, ಡಾ. ಜಯಶ್ರೀ ಮುದ್ದಾ, ಪ್ರಾಣೇಶ ಹುಟಗಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.ಕೊಕ್ಕೊ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಪ್ರಾಸ್ತಾವಿಕ ಮಾತನಾಡಿದರು. ಡಾ. ದಯಾನಂದ ಅಗಸರ್ ಕ್ರೀಡಾಚಟುವಟಿಕೆ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry