ಶಿಕ್ಷಕರ ಧರಣಿ- ಬಿಎಸ್‌ಪಿ ಮುಖಂಡರ ಭೇಟಿ

7

ಶಿಕ್ಷಕರ ಧರಣಿ- ಬಿಎಸ್‌ಪಿ ಮುಖಂಡರ ಭೇಟಿ

Published:
Updated:

ಗುಲ್ಬರ್ಗ: ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಆಯ್ಕೆಯಾದ ಚಿತ್ರಕಲಾ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿಗೆ ಬೆಂಬಲ ಸೂಚಿಸಿ ಬಿಎಸ್‌ಪಿ  ಮುಖಂಡರು ಭೇಟಿ ನೀಡಿ ಬೆಂಬಲ ಸೂಚಿಸಿದರು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ಧನ್ನಿ, ಪ್ರಧಾನ ಕಾರ್ಯದರ್ಶಿ ಕೆ.ಬಿ.ವಾಸು ಇತರರು ಭೇಟಿ ನೀಡಿ ಶಿಕ್ಷಕರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಹಾಗೂ ಸಮಾಜಕಲ್ಯಾಣ ಖಾತೆ ಸಚಿವರಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರು.ಸದಸ್ಯರಾದ ಭೋಜರಾಜ ಬಡಿಗೇರ, ಅನಿಲಕುಮಾರ ಹುಮನಾಬಾದ್, ಬಸವರಾಜ ಕೆ.ಕೆ., ಮೊಹಮ್ಮದ್ ಮೊಸೀನ್, ರಜನಿ, ಅಂಬಿಕಾ, ಸಾರಿಕಾ, ಗೀತಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry