ಬಸವಣ್ಣ ಜಾಗತಿಕ ಸಂವಿಧಾನ ನಿರ್ಮಾತೃ

7

ಬಸವಣ್ಣ ಜಾಗತಿಕ ಸಂವಿಧಾನ ನಿರ್ಮಾತೃ

Published:
Updated:

ಗುಲ್ಬರ್ಗ: ವಿಶ್ವಮನ್ಯ ವಿಚಾರಗಳನ್ನು 12ನೇ ಶತಮಾನದಲ್ಲಿ ಪ್ರತಿಪಾದಿಸಿದ ಬಸವಾದಿ ಶರಣರು ಜಾಗತಿಕ ಮಟ್ಟದ ಸಂವಿಧಾನದ ನಿರ್ಮಾತೃ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಇಲ್ಲಿನ ಶಹಾಬಜಾರ್ ಸುಲಫಲ ಮಠ ದಲ್ಲಿ ಬಸವ ಜಯಂತಿ ಶತಮಾನೋತ್ಸವ ಹಾಗೂ ಲಿಂ. ಚನ್ನವೀರ ಶಿವಯೋಗಿಗಳ ಪುಣ್ಯ ಸ್ಮರಣೆ ಅಂಗವಾಗಿ ಸೆ. 25ರಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ `ಬಸವಣ್ಣನವರು ಮತ್ತು ಭಾರತದ ಸಂವಿಧಾನ~ ವಿಷಯ ಕುರಿತು ಮಂಗಳವಾರ ಜರುಗಿದ ಅನುಭಾವ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ವಚನ ಚಳವಳಿಯ ನೇತೃತ್ವ ವಹಿಸಿದ್ದ ಬಸವಣ್ಣ ಹಾಗೂ ವಚನಕಾರರ ಆಶಯಗಳನ್ನು ಹೊಂದಿರುವ ಭಾರತದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ವಚನಕಾರರ ಅಗಾಧ ಶಕ್ತಿಯ ಗುಣಗಾನ ಮಾಡಿದರು. `ಇವನಾರವ, ಇವನಾರವ ಎನಿಸದೆ, ಇವ ನಮ್ಮವ, ಇವ ನಮ್ಮವ~ ಎಂದು ಎಲ್ಲ ಜಾತಿ, ವರ್ಗದ ಜನರನ್ನು ಬಿಗಿದಪ್ಪಿದ ಬಸವಾದಿ ಶರಣರು ಸಮಾಜಿಕ ಕ್ರಾಂತಿಯ ಜೊತಗೆ ವೈಚಾರಿಕ ಕ್ರಾಂತಿಯನ್ನು ಉಂಟು ಮಾಡಿದರು ಎಂದು ಅಭಿಪ್ರಾಯಪಟ್ಟರು.ಸರ್ವರಿಗೆ ಸಮ ಬಾಳು, ಸರ್ವರಿಗೆ ಸಮಪಾಲು ಎಂದು ಹೇಳಿದ ವಚನಕಾರರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ. ಇಂತಹ ಪ್ರತಿಪರ ವಿಚಾರಗಳನ್ನು ಜಗತ್ತಿನ ಎಲ್ಲಡೆ ಪಸರಿಸುವ, ಪ್ರಚುರಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.ಸುಲಫಲ ಮಠದ ಮಹಾಂತ ಶಿವಾಚಾರ್ಯ, ಸೊನ್ನದ ಶಿವಾನಂದ ಸ್ವಾಮೀಜಿ, ಚವದಾಪುರಿ ಮಠದ ರಾಜಶೇಖರ ಶಿವಾಚಾರ್ಯ, ಯಲಗೋಡದ ಗುರುಲಿಂಗ ಶಿವಾಚಾರ್ಯ, ಪಾಳಾ ಹಾಗೂ ರೋಜಾ ಸ್ವಾಮೀಜಿ ಉಪಸ್ಥಿತರಿದ್ದರು.

ಶಾಸಕ ಶರಣಬಸಪ್ಪ ದರ್ಶನಾಪುರ, ಖಮರುಲ್ ಇಸ್ಲಾಂ, ಅಮರನಾಥ ಪಾಟೀಲ, ಮಾಜಿ ಶಾಸಕರಾದ ಕೈಲಾಸನಾಥ ಪಾಟೀಲ, ವೀರಯ್ಯ ಸ್ವಾಮಿ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಸ್ವಾಗತ ಸಮಿತಿ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಉದ್ಯಮಿಗಳಾದ ಬಸವರಾಜ ಭೀಮಳ್ಳಿ, ಶಿವಕಾಂತ ಮಹಾಜನ, ಪ್ರಮುಖರಾದ ಕಾಶಿನಾಥ ಮೋತಕಪಲ್ಲಿ, ಅಂಬಾರಾಯ ಅಷ್ಟಗಿ, ಮಾಪಣ್ಣ ಗಂಜಗಿರಿ, ವಿಜಯಕುಮಾರ ತೇಗಲತಿಪ್ಪಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry