ನೂರು ಕಡೆ 100 ಸಿನಿಮಾ ಪ್ರದರ್ಶನ

7

ನೂರು ಕಡೆ 100 ಸಿನಿಮಾ ಪ್ರದರ್ಶನ

Published:
Updated:

ಗುಲ್ಬರ್ಗ: ಭಾರತೀಯ ಸಿನಿಮಾದ ಉತ್ಕೃಷ್ಟತೆ, ವೈವಿಧ್ಯತೆ ಪ್ರತಿನಿಧಿಸುವ ನೂರು ಚಿತ್ರಗಳನ್ನು ಆಯ್ಕೆ ಮಾಡಿ ಕರ್ನಾಟಕದಾದ್ಯಂತ ನೂರು ಕಡೆ ನೂರು ಸಿನಿಮಾಗಳ ಪ್ರದರ್ಶನ~ ಮಾಡಲಾಗುತ್ತಿದೆ. ಚಿತ್ರಗಳ ಪ್ರದರ್ಶನದ ಜೊತೆಗೆ ಪರಿಣತರ ಜೊತೆ ಸಂವಾದ, ಚರ್ಚೆ ಕೂಡ ಏರ್ಪಡಿಸಲಾಗುತ್ತಿದೆ ಎಂದು ಸಮುದಾಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ  ಪ್ರೊ. ಆರ್.ಕೆ. ಹುಡಗಿ ತಿಳಿಸಿದರು.ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯ (ಭಾಷಾ ನಿಕಾಯ) ಮತ್ತು ಚಿತ್ರ ಸಮುದಾಯ ಆಶ್ರಯದಲ್ಲಿ ನಗರದ ಎಂಎಸ್‌ಐ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಗಿರೀಶ ಕಾರ್ನಾಡರ ನಾಗಮಂಡಲ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೇಷ್ಠ ಹಾಗೂ ಸದಭಿರುಚಿಯ ಸಿನಿಮಾಗಳನ್ನು ಪ್ರದರ್ಶಿಸುವುದರ ಜೊತೆಗೆ ಅದರ ಸಾಧ್ಯತೆ, ಇತಿಮಿತಿಗಳನ್ನು ತಿಳಿಸಿ ಚಿತ್ರ ಮಾಧ್ಯಮದ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಮೂಡಿಸುವುದೇ ಚಿತ್ರ ಸಮುದಾಯದ ಮುಖ್ಯ ಗುರಿ ಎಂದು ಅವರು ವಿವರಿಸಿದರು.ಭಾರತೀಯ ಮೊದಲ ಸಿನಿಮಾ `ರಾಜಾ ಹರಿಶ್ಚಂದ~್ರ ನಿರ್ಮಾಣವಾಗಿ ನೂರು ವರ್ಷ ಕಳೆದಿರುವ ಈ ಸಂದರ್ಭದಲ್ಲಿ ಬದುಕಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ ಸಿನಿಮಾಗಳನ್ನು ಪ್ರದರ್ಶನ ಮಾಡುವುದರೊಂದಿಗೆ ಉತ್ತಮ ಸಾಂಸ್ಕೃತಿಕ ಲೋಕ ನಿರ್ಮಾಣಕ್ಕೆ ಸಂಘಟನೆ ಮುಂದಾಗಿದೆ ಎಂದು ವಿವರಿಸಿದರು.ಬಹುಸಂಖ್ಯಾತರಿಗೆ ಪ್ರಮುಖ ಮನರಂಜನೆ ಒದಸಗಿಸುವ ಪ್ರಬಲ ಮತ್ತು ಪ್ರಭಾವಿ ಮಾಧ್ಯಮವಾದ ಚಲನಚಿತ್ರ ಕಲಾ ಅಭಿವ್ಯಕ್ತಿಯ ಸಾಧನವಾಗಿದೆ. ಆದರೆ ಅಭಿರುಚಿ, ರಸಗ್ರಹಣ, ವಿಮರ್ಶೆ, ಶಿಕ್ಷಣ ನೀಡುವ ಕೆಲಸ ಆಗಿಲ್ಲ. ಎಂದರು.ಚಿತ್ರ ಕುರಿತು ಮಾತನಾಡಿದ ಪ್ರೊ. ಕಲ್ಯಾಣರಾವ ಪಾಟೀಲ ಅವರು, ಗಿರೀಶ್ ಕಾರ್ನಾಡರ ಅಗ್ನಿ ಮತ್ತು ಮಳೆ ಹಾಗೂ ನಾಗ ಮಂಡಲ ನಾಟಕಗಳ ಒಳಪದರನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸಮುದಾಯ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಅಶೋಕ ಶಟಕಾರ, ಕಾರ್ಯದರ್ಶಿ ಶರಣಪ್ಪ ಸೈದಾಪುರ ಮುಖ್ಯ ಅತಿಥಿಗಳಾಗಿದ್ದರು.ಡಾ. ಮೀನಾಕ್ಷಿ ಬಾಳಿ, ಶಾಂತಾ ಭೀಮಶೇನರಾವ, ಕೆ. ನೀಲಾ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾಲೇಜಿನ ಪ್ರಚಾರ್ಯ ಪ್ರೊ. ಶಿವಪುತ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎ.ಡಿ. ಶೇರಿಕಾರ ಸ್ವಾಗತಿಸಿದರು. ಪ್ರೇಮಚಂದ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್. ತಡಕಲ್ ವಂದಿಸಿದರು. `ನಾಗ ಮಂಡಲ~ ಚಿತ್ರ ಪ್ರದರ್ಶಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry