ಜೀಪ್ ಸ್ಪರ್ಧೆಗೆ 5ರಂದು ಚಾಲನೆ

7

ಜೀಪ್ ಸ್ಪರ್ಧೆಗೆ 5ರಂದು ಚಾಲನೆ

Published:
Updated:

ಗುಲ್ಬರ್ಗ: ನೇಚರ್ ಅವೇರನೇಸ್  ಮತ್ತು ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅ. 5ರಂದು ಉಪ್ಪಿನ ತೋಟದ ಗದ್ದೆಯಲ್ಲಿ ರಾಷ್ಟ್ರ ಮಟ್ಟದ ಜೀಪ್ ಆಫ್ ರೋಡ್ ಇವೆಂಟ್ 2012 ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕುಶಾಲ ಮಾಲೀಕಯ್ಯ ಗುತ್ತೇದಾರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅ. 6ರಂದು ಕಮಲಾಪುರ ಸಮೀಪದ ಡೊಂಗರಗಾಂವನಲ್ಲಿ ಜೀಪ್ ಸ್ಪರ್ಧೆಯ ಟ್ರಯಲ್ಸ್ ಅನ್ನು ನಡೆಸಲಾಗುತ್ತದೆ. ರಾಷ್ಟ್ರದ ವಿವಿಧ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕದ ಚಿಕ್ಕಮಂಗಳೂರು, ಕೋಲ್ಕತ್ತ ಕಡೆಗಳಿಂದ ಸುಮಾರು 40ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಳ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಜೀಪ್ ಗುರು ಎಂದು ಪ್ರಸಿದ್ಧಿ ಪಡೆದಿರುವ ಕಲ್ಕತ್ತದ ಉದಯಭಾನಸಿಂಗ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ಜೀಪ್ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.  ಬೆಳಿಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದೆ. ಪರಿಸರ ಪ್ರಜ್ಞೆ ಹಾಗೂ ಸಾಹಸ ಕ್ರೀಡೆ ಪರಿಜ್ಞಾನದೊಂದಿಗೆ ಮೈನವಿರೇಳಿಸುವ ಜೀಪ್ ಸ್ಪರ್ಧೆ ನಡೆಯಲಿದ್ದು, ಇದಕ್ಕಾಗಿ ವಿವಿಧ ಬಗೆಯ ನಾಲ್ಕು ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.ಸಾಹಸಮಯವಾದ ಕೆಸರು ಗದ್ದೆ ಸ್ಪರ್ಧೆ, ರಬ್ಬರ್ ಟಾಯರ್‌ಗಳಿಂದ ನಿರ್ಮಿಸಲಾಗಿರುವ ರನ್‌ವೇನಲ್ಲಿ ಜೀಪ್ ಓಡಿಸುವ ಸ್ಪರ್ಧೆ, ಸಿಮೆಂಟ್ ಪೈಪುಗಳನ್ನು ಬಳಿಸಿ ವಿಭಿನ್ನವಾಗಿ ರೂಪಿಸಲಾಗಿರುವ ಮಾರ್ಗದಲ್ಲಿ ನಡೆಸಲಾಗುವ ಸ್ಪರ್ಧೆ, 10 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಮಣ್ಣಿನ ಹಂಪ್ಸ್ ಮೇಲೆ ಜೀಪ್ ಓಡುವ, ಜೀಪ್ ಗಾಳಿಯಲ್ಲಿ ನೆಲಕ್ಕೆ ಜಿಗಿಯುವ ಸ್ಪರ್ಧೆಯಗಳು ನಡೆಯಲಿವೆ. ಪ್ರತಿಯೊಂದ ಟ್ರ್ಯಾಕ್‌ಗೆ ಜೆ , ಇ1,ಇ2, ಪಿ1 ಎಂದು ಹೆಸರಿಡಲಾಗಿದೆ. ಇದೊಂದು ಸಾಹಸಮಯ ರಸ್ತೆ ಸ್ಪರ್ಧೆಯಾಗಿದ್ದು, ಅಗಸ್ಟ್ ನಲ್ಲಿ ಚೆನ್ನೈನಲ್ಲಿ ನಡೆದ ಜೀಪ್ ಸ್ಪರ್ಧೆಯಲ್ಲಿ ಗುಲ್ಬರ್ಗ ತಂಡಕ್ಕೆ  ಗ್ರೀನ್ ಅವಾರ್ಡ್ ಎಂಬ ಪ್ರಶಸ್ತಿ ದೊರೆತಿದೆ. ಈ ಉತ್ತೇಜನದಿಂದಲೇ ಗುಲ್ಬರ್ಗದಲ್ಲಿಯೂ  ಜೀಪ್ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಅ.6ರಂದು ಬೆಳಿಗ್ಗೆ 9ಕ್ಕೆ ಕಮಲಾಪುರದಲ್ಲಿ ಜೀಪ್ ಟ್ರಯಲ್ಸ್ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯನ್ನು ಸುಮಾರು 4ಕಿಲೋ ಮೀಟರ್ ಉದ್ದದ ದಟ್ಟವಾದ ಗುಡ್ಡ ಹಾಗೂ ಅರಣ್ಯ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿ ಪರಿಸರ ನಾಶವಾಗದಂತೆ ಜೀಪ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅರಣ್ಯ ಹಾಗೂ ದಟ್ಟವಾದ ಮಣ್ಣಿನ ರಸ್ತೆಗಳ ಮೇಲೆ ಜೀಪ್‌ಗಳನ್ನು ಸುಲಭವಾಗಿ ಚಲಾಯಿಸಬಹುದು ಎಂದು ಬಿಂಬಿಸುವ ಉದ್ದೇಶ ಕೂಡಾ ಈ ಸ್ಪರ್ಧೆಯದಾಗಿದ್ದು, ಟ್ರಯಲ್ಸ್ -ಎ ಹಾಗೂ ಟ್ರಯಲ್ಸ್ -ಬಿ ಎಂದು ವಿಭಾಗಗಳನ್ನಾಗಿ ಮಾಡಲಾಗಿದೆ. 70ಡಿಗ್ರಿ ಕೋನದಲ್ಲಿ ಜೀಪ್ ಓಡಿಸುವ ಸ್ಪರ್ಧೆ ಹಾಗೂ ಗುಡ್ಡದಿಂದ ನೀರು ಜಾರಿ ಬರುವ ಚಿಕ್ಕ ಮಾರ್ಗದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಗಿಡ-ಮರಗಳ ಸಂದುಗಳಲ್ಲಿ ಜೀಪ್ ಓಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ರಾಷ್ಟ್ರ ಮಟ್ಟದ ಜೀಪ್ ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಕ್ಲಬ್‌ನ ಉಪಾಧ್ಯಕ್ಷ ಮತೀನ್ ಪಟೇಲ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸಜ್ಜನಶೆಟ್ಟಿ, ವೈಭವ ರೆಡ್ಡಿ, ಮಹ್ಮದ್ ಇದ್ರೀಸ್ ಬಾಗ್ವಾನ್, ಸೈಯದ್ ಜಫರುಲ್ಲಾ ಹನಸ್, ಸಾಧಿಕ್‌ಬಾಯಿ ಜಮಖಂಡಿ ಮೊದಲಾದವರು ನೇತೃತ್ವದಲ್ಲಿ ನಡೆಸಲಾಗುತ್ತಿದೆ.ವಿಜೇತ ತಂಡಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಮುಂಜಾಗ್ರತ ಕ್ರಮವಾಗಿ ವೈದ್ಯಕೀಯ ಸೇವೆಗೆ 2 ಆಂಬುಲೇನ್ಸ್ ಹಾಗೂ ಇಬ್ಬರು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. 200ಮೀಟರ್ ಉದ್ದ ಹಾಗೂ 70 ಮೀಟರ್ ಅಗಲವಾದ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮತೀನ್ ಪಟೇಲ್, ಮಲ್ಲಿಕಾರ್ಜುನ್ ಸಜ್ಜನಶೆಟ್ಟಿ, ಶ್ಯಾಮಸುಂದರ್ ಕುಷ್ಟಗಿ ಮೊದಲಾದವರು  ಪತ್ರಿಕಾಗೋಷ್ಠಿಯಲ್ಲಿ ಇದ್ದರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್-94480-41369 ಗೆ ಸಂಪರ್ಕಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry