ಕಾವೇರಿ: ಚಿತ್ತಾಪುರದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

7

ಕಾವೇರಿ: ಚಿತ್ತಾಪುರದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

Published:
Updated:

ಚಿತ್ತಾಪುರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಆಚರಣೆ ಅಂಗವಾಗಿ ಇಲ್ಲಿನ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮೆರವಣಿಗೆ ನಡೆಸಿ, ತಮಿಳುನಾಡು ಮುಖ್ಯಮಂತ್ರಿ ಜಯಲಲೀತಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಮಾಡಿದರು.ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಮಹೇಶ ಕಾಶಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ನರಹರಿ ಡಿ. ಕುಲ್ಕರ್ಣಿ, ಆಟೋ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ಉಪಾಧ್ಯಕ್ಷ ದಿಲೀಪ್ ಕಾಶಿ ಅವರ ನೇತೃತ್ವದಲ್ಲಿ ಪದಾಧಿಕಾರಿ, ಕಾರ್ಯಕರ್ತರು ಪಟ್ಟಣದ ಚಿತಾವಲಿ ಚೌಕ್‌ದಿಂದ ಜನತಾ ಚೌಕ್, ಅಂಬೇಡ್ಕರ್ ಚೌಕ್, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಚೆ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.ಮಳೆ ಬಾರದ ಕಾರಣ ರಾಜ್ಯ ಸರ್ಕಾರ ರಾಜ್ಯವನ್ನು ಬರಪೀಡಿತವೆಂದು ಘೋಷಣೆ ಮಾಡಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನೆಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರಭಟನೆಯಲ್ಲಿ ಜಗದೇವ ಕುಂಬಾರ, ಪ್ರದೀಪ್ ಪೂಜಾರಿ, ವಿಶ್ವನಾಥ ಬೆಂಕಿ, ಮಹಾದೇವ ಹಾಸಬಾ, ಸಾಬಣ್ಣಾ ಆಡ್ಲಾಪುರ, ರಾಜಶೇಖರ ಸ್ವಾಮಿ, ಸೋಮಶೇಖರ ಮುಡಬೂಳಕರ್, ಬಸವರಾಜ ಮಡಿವಾಳ, ರಾಮು ಹಡಪದ, ಜಗನ್ನಾಥ ಗುತ್ತೆದಾರ್, ಸುನೀಲ್ ಹಡಪದ, ಜಗನ್ನಾಥ, ಶರಣು ಮರಗೋಳ, ಭೀಮರಾವ ಭಜಂತ್ರಿ, ರಾಜು ರಾಜಾಪುರ, ಭಾಗವಹಿಸಿದ್ದರು. ಅಂಚೆ ಕಚೇರಿ ಅಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಬಂದ್ ವಿಫಲ: ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಚಿತ್ತಾಪುರದಲ್ಲಿ ಸ್ಪಂಧನೆ ಸಿಗಲಿಲ್ಲ. ಅಂಗಡಿಗಳು ತೆರೆದಿದ್ದವು. ಬಸ್ ಸಂಚಾರ  ವ್ಯಾಪಾರ ವಹಿವಾಟು ಎಂದಿನಂತೆ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry