ಭೀಮಾ,ಕೃಷ್ಣಾಗೆ ನೀರು ಬಿಡುವಂತೆ ಆಗ್ರಹಿಸಿ ಪ್ರತಿಭಟನೆ

7

ಭೀಮಾ,ಕೃಷ್ಣಾಗೆ ನೀರು ಬಿಡುವಂತೆ ಆಗ್ರಹಿಸಿ ಪ್ರತಿಭಟನೆ

Published:
Updated:

ಅಫಜಲಪುರ: ಭೀಮಾ ಹಾಗೂ ಕೃಷ್ಣಾ ನದಿಗಳಿಗೆ ಮಹಾರಾಷ್ಟ್ರದ ಕೋಯ್ನಾ ಹಾಗೂ ಉಜನಿ ಅಣೆಕಟ್ಟುಗಳಿಂದ ನೀರು ಬಿಡುವಂತೆ ಹಾಗೂ ಕಾವೇರಿ ಹಾಗೂ ತಮಿಳು ನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯನ್ನು ವಿರೋಧಿಸಿ ಕನ್ನಡ ಒಕ್ಕೂಟ ಕರ್ನಾಟಕ ಬಂದಗೆ ಬೆಂಬಲಿಸಿ ತಾಲ್ಲುಕು ವಕೀಲರ ಸಂಘ ಹಾಗೂ ಅಭಿವೃದ್ಧಿ ಹೋರಾಟ ಸಮಿತಿ ಅವರು ಶನಿವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ವಕೀಲ ಸಂಗದ ಅಧ್ಯಕ್ಷ ಕೆ.ಜಿ.ಪೂಜಾರಿ ಮಾತನಾಡಿ ನಮ್ಮ ಭಾಗದ ರೈತರ ಜೀವನಾಡಿ ಆಗಿರುವ ಭಿಮಾ ಕೃಷ್ಣಾ ನದಿಗಲು ನೀರಿಲ್ಲದೆ ಬಿಕೋ ಎನ್ನುತ್ತಿವೆ. ಕೇಂದ್ರ ಸರ್ಕಾರ ಕೋಯ್ನಾ ಹಾಗೂ ಉಜನಿ ಆಣೆಕಟ್ಟುಗಳಿಂದ ಭಿಮಾ ಮತ್ತು ಕೃಷ್ಣಾ ನದಿಗೆ ನೀರು ಬಿಡಬೇಕು ಈ ಭಾಗದ ಸುಮಾರು 20 ತಾಲ್ಲೂಕುಗಳು ಕುಡಿಯುವ ನಿರಿಗಾಗಿ ಮತ್ತು ಕೃಷಿಗಾಗಿ ಕಳೆದ 6 ತಿಂಗಳಿಂದ ಜನರು ಗೋಳಾಡುವಂತಾಗಿದೆ.ಆದ ಕಾರಣ ರಾಷ್ಟ್ರಪತಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ಮಾಡಿ ಕೃಷ್ಣಾ ಮತ್ತು ಭೀಮಾನದಿಗಳಿಗೆ ನೀರು ಬಿಡಿಸಬೇಕು ಮತ್ತು ಕಾವೇರಿ ನದಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ರಾಷ್ಟ್ರಪತಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.ಹೋರಾಟ ಸಮಿತಿ ಅಧ್ಯಕ್ಷ ಸೂರ್ಯಕಾಂತಿ ನಾಕೇದಾರ ಮಾಜಿ ಶಾಸಕ ವಿಠ್ಠಲ ಹೇರೂರ, ಮಕ್ಬುಲ್ ಪಟೇಲ, ಸಿದ್ರಾಮಪ್ಪ ಮನ್ಮಿ,ಗುರುಶಾಂತ ಪಟ್ಟೇದಾರ,ಶಂಕರ ಸುಬಾನಿ, ದೇವೆಗೌಡ ತೆಲ್ಲೂರ ಮತ್ತು ವಕೀಲರಾದ ಯಶವಂತ ಸಾಲೀಮನಿ,ದತ್ತು ದೇವರ ನವದಗಿ, ಶರದಕುಮಾರ ಪೂಜರಿ, ಎಸ್.ಬಿ.ತಳಕೇರಿ, ಎಂ.ಎಲ್ ಪಟೇಲ, ಎಸ್,ವಾಯ್ಹ, ದರಿಗೊಂಡ, ಎಸ್.ಎಸ್ ಪಾಟೀಲ, ಎಸ್.ಜಿ.ಹುಲ್ಲೂರ, ಬಿ.ಎಸ್.ಧಾನಮ್ಮಗುಡಿ, ಎಸ್.ಜಿ.ಗುತ್ತೇದಾರ, ಎಫ್.ಎಂ.ಇನಾಮದಾರ, ರಮೇಶ ದೊಡ್ಡಮನಿ ಅಲ್ಲದೆ ಸಂಘದ ಕಾರ್ಯದರ್ಶಿ ಸಿ.ಎಸ್.ಹಿರೇಮಠ ಭಾಗವಹಿಸಿದ್ದರು ತಹಸೀಲ್ದಾರ ಪರವಾಗಿ ಸಿರಸ್ತೇದಾರ ರಾಠೋಡ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವದಾಗಿ ಭರವಸೆ     ನೀಡಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry