ಕುರಿಕೋಟಾ ಸೇತುವೆ: ನ.10 ಗಡುವು

7

ಕುರಿಕೋಟಾ ಸೇತುವೆ: ನ.10 ಗಡುವು

Published:
Updated:

ಗುಲ್ಬರ್ಗ: ನವೆಂಬರ್ 10ರೊಳಗೆ ಕುರಿಕೋಟಾ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಸಚಿವ ರೇವುನಾಯಕ ಬೆಳಮಗಿ ಮನೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಲಕ್ಷ್ಮಣ ದಸ್ತಿ ಎಚ್ಚರಿಸಿದ್ದರು.ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದಕ್ಕೆ ಪೂರ್ವಭಾವಿಯಾಗಿ  ಸೆ. 9ರಂದು ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗೆ ಈ ಕುರಿತು ಎಚ್ಚರಿಕೆ ಪತ್ರ ಸಲ್ಲಿಸಲಾಗುವುದೆಂದು ತಿಳಿಸಿದರು. ಪ್ರತಿದಿವಸ 23 ಸಾವಿರಕ್ಕೂ ಹೆಚ್ಚು ಜನ ಸಂಚರಿಸುತ್ತಿದ್ದು, ಇನ್ನೂ ದುರಸ್ತಿ ನಡೆದಿರುವುದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದರು.

 

ಜುಲೈ 3ರಿಂದ ಸಂಚಾರ ಸ್ಥಗಿತ ಗೊಳಿಸಲಾಗಿದ್ದು, ಇದಕ್ಕೆ ಪೂರಕವಾಗಿ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಡಾ. ಸಿ.ಎಸ್. ವಿಶ್ವನಾಥ ಅಧ್ಯನ ನಡೆಸಿ ಸೇತುವೆ ಪುನರ್ ನಿರ್ಮಾಣಕ್ಕೆ ಸರ್ಕಾರಕ್ಕೆ ವರದಿ ನೀಡಿದ್ದರು. ಆಗಸ್ಟ್, 1ರಂದು ಹೈದರಾಬಾದ್ ರ‌್ಯಾಪಕಾನ್ ಕನ್ಸಲ್‌ಟೆನ್ಸಿಯವರಿಗೆ ಮೌಖಿಕವಾಗಿ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲು ಆದೇಶಿಸಿದ ಸರ್ಕಾರ ಶೀಘ್ರ ಅನುಮೋದನೆ ಪಡೆದು ಲಿಖಿತ ಆದೇಶ ನೀಡುವುದಾಗಿ ತಿಳಿಸಿತ್ತು ಎಂದು ಹೇಳಿದರು.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ,ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸದಾಶಿವರೆಡ್ಡಿ ಭೇಟಿ ನೀಡಿ ಅ.1ರಿಂದ ಲಘು ವಾಹನ ಸಂಚಾರ ಆರಂಭಿಸಿ 20 ದಿನಗಳ ನಂತರ ಎಲ್ಲ ವಾಹನ ಸಂಚರಿಸುವಂತೆ ಮಾಡಲಾಗುದೆಂದು ಭರವಸೆ ನೀಡಿದ್ದರು. ಆದರೆ ಆಮೆಗತಿಯಲ್ಲಿ ಸಾಗುತ್ತಿರುವ ಈ ದುರಸ್ತಿಕಾರ್ಯ ನೋಡಿದರೆ ಇನ್ನು ನಾಲ್ಕು ವರ್ಷಗಳಾದರೂ ಮುಗಿಯುವುದಿಲ್ಲ ಎಂದು ಆರೋಪಿಸಿದರು.ಮಂಗಳವಾರ ನಡೆಸುವ ಪ್ರತಿಭಟನೆಯಲ್ಲಿ ಬೀದರ್-ಗುಲ್ಬರ್ಗ ಜಿಲ್ಲೆಗಳ ಎಲ್ಲ ಸಂಘಟನೆಗಳು ಬೆಂಬಲಿಸಿ ಹೋರಾಟ ಯಶಸ್ವಿಗೊಳಿಸಲು ಅವರು ತಿಳಿಸಿದರು.ಹರನೂರ: ಹೆಚ್ಚಿನ ಪರಿಹಾರಕ್ಕೆ ದಸಂಸ ಆಗ್ರಹ

ಜೇವರ್ಗಿ:
ತಾಲ್ಲೂಕಿನ ಹರನೂರ ಗ್ರಾಮದ ಹಿಂದುಳಿದ ವರ್ಗಕ್ಕೆ ಸೇರಿದ 13ಜನ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರು ಕಡು ಬಡವರಾಗಿದ್ದು, ಮೃತ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 5ಲಕ್ಷ ಪರಿಹಾರ ನೀಡಬೇಕು. 6ಜನ ಗಾಯಾಳುಗಳು ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಾಳುಗಳು ಗುಣಮುಖರಾಗುವವರೆಗೂ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪುಂಡಲೀಕ ಗಾಯಕವಾಡ, ತಾಲ್ಲೂಕು ಸಂಚಾಲಕ ಸಿದ್ರಾಮ ಕಟ್ಟಿ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry