ಚಿತ್ರದುರ್ಗ ಮುರಘಾಮಠ:18ರಿಂದ ಶರಣ ಸಂಸ್ಕೃತಿ ಉತ್ಸವ

7

ಚಿತ್ರದುರ್ಗ ಮುರಘಾಮಠ:18ರಿಂದ ಶರಣ ಸಂಸ್ಕೃತಿ ಉತ್ಸವ

Published:
Updated:

ಗುಲ್ಬರ್ಗ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸೇರಿ ಮಾನವ ಕುಲದ ಉಳಿವಿಗಾಗಿ ಭಾವ-ಭಾವ ಬೆಸೆದು ಭಕ್ತಿರಸವ ಬೆರೆಸಿ ನಾದಿ-ನಾದಿ ಕಟ್ಟಿ ಕೊಟ್ಟ ಅನುಭಾವದ ಬುತ್ತಿ ಎಲ್ಲರಿಗೂ ಹಂಚಿ ಹಸಿವನ್ನು ತಣಿಸಲು ಚಿತ್ರದುರ್ಗದ ಮುರಘಾಮಠ ಅ.18ರಿಂದ 26ವರೆಗೆ ಶರಣ ಸಂಸ್ಕೃತಿ ಉತ್ಸವ ಮತ್ತು ಸಹಜ ಶಿವಯೋಗ ಕಾರ್ಯಕ್ರಮ ಆಯೋಜಿಸಿದೆ.ಚಿತ್ರದುರ್ಗದ ಮುರಘಾಮಠ ಬಸವಕೇಂದ್ರದಲ್ಲಿ ಡಾ. ಶಿವಮೂರ್ತಿ ಮುರಘಾ ಶರಣರ ಸರ್ವಾಧ್ಯಕ್ಷತೆಯಲ್ಲಿ ಉತ್ಸವ ಜರುಗಲಿದೆ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿವರ್ಷ ಶರಣ ಸಂಸ್ಕೃತಿ ನಡೆಯುತ್ತಿದ್ದು. ನಾಡ ಹಬ್ಬ ದಸರಾ ಉತ್ಸವ ನಂತರ ಇದೆ ದೊಡ್ಡ ಉತ್ಸವವಾಗಿದೆ.ಅ.18ರಿಂದ 20 ರವರೆಗೆ ಜಮುರಾ ಕ್ರೀಡಾಕೂಟ ನಡೆಯಲಿದೆ. ಅ.21 ರಿಂದ 25 ರವರೆಗೆ ಬೆಳಿಗ್ಗೆ 7.30ಕ್ಕೆ ಡಾ. ಶಿವಮೂರ್ತಿ ಮುರಘಾ ಶರಣರು ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ನಂತರ 21 ರಂದು ಕೃಷಿಮೇಳ ಹಾಗೂ ಬಸವ ತತ್ವ ಸಮಾವೇಶ, 22ರಂದು ಕೈಗಾರಿಕಾ ಮೇಳ ಹಾಗೂ ಮಹಿಳಾ ಸಮಾವೇಶ, 23ರಂದು ಆಹಾರಮೇಳ ಹಾಗೂ ಜನಪದ ಮೇಳ, 24ರಂದು  ಬೆಳಿಗ್ಗೆ 11ಕ್ಕೆ ಜನಪದ ಕಲಾಮೇಳ ಉತ್ಸವ ಜರುಗಲಿದೆ.25ರಂದು ಬೆಳಿಗ್ಗೆ 10ಕ್ಕೆ ಶೂನ್ಯ ಪೀಠಾರೋಹಣ 11ಕ್ಕೆ ವಚನ ಸಾಹಿತ್ಯ ಮೆರವಣಿಗೆ ಸಂಜೆ ಸಂಗೀತ ಸಮಾರಾಧನೆ ಹಾಗೂ ಶರಣ ದಂಪತಿಗಳಿಗೆ ಸನ್ಮಾನ ಮಾಡಲಾಗುವುದು. 26 ರಂದು ಲಿಂಗೈಕ್ಯ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮಿಗಳ ಸ್ಮರಣೋತ್ಸವ ಡೆಯಲಿದೆ. ವಿಶೇಷವಾಗಿ ಆರೋಗ್ಯವಂತ ಮಕ್ಕಳ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನ ಕೂಡ ಏರ್ಪಡಿಸಲಾಗುದೆ.ಉತ್ಸವದಲ್ಲಿ ಮಠಾಧೀಶರು, ಪ್ರಗತಿಪರ ಚಿಂತಕರು, ಸಾಹಿತಿಗಳು, ಕಲಾವಿದರು, ರಾಜಕಿಯ ಧುರಿಣರು ಭಾಗವಹಿಸಲಿದ್ದಾರೆ.ಸಮಾರಂಭದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ವಸತಿ, ಪ್ರಸಾದ ವೆವಸ್ಥೆ ಮಾಡಲಾಗಿದೆ. ಜಿಲ್ಲೆಯಿಂದ ಭಾಗವಹಿಸುವವರು ಜಿಲ್ಲಾ ಯುವ ಬಸವಕೇಂದ್ರದಲ್ಲಿ ಹೆಸರು ನೋಂದಾಯಿಸಲು                   ತಿಳಿಸಿದ್ದಾರೆ.ಹಾವೇರಿ ಹೊಸಮಠ ಶಾಂತಲಿಂಗ ಸ್ವಾಮೀಜಿ, ಶಿರಸಗಿ ಮುರಘಾಮಠ ಮಹಾಂತ ಸ್ವಾಮಿಜಿ, ಜಿಲ್ಲಾ ಯುವ ಬಸವಕೇಂದ್ರದ ಅಧ್ಯಕ್ಷ ಗೌರೀಶ ಎಸ್. ಖಾಶಂಪೂರ, ಕಾರ್ಯದರ್ಶಿ ಆರ್.ಜೆ. ಭೂಸಾರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry